ನಿತ್ಯವೂ ಆರೋಗ್ಯದಿಂದ (Health) ಇರಲು ವ್ಯಾಯಾಮ (Exercise) ಮಾಡಬೇಕು. ಯೋಗ (Yoga) ಮತ್ತು ವ್ಯಾಯಾಮ ದೈನಂದಿನ ಜೀವನದ ಭಾಗವಾದ್ರೆ ಕಾಯಿಲೆಗಳನ್ನು (Disease) ದೂರವಿಡಲು ಸಾಧ್ಯ. ತುಂಬಾ ಜನರು ಜಿಮ್ ನಲ್ಲಿ ಬೆವರಿಳಿಸುತ್ತಾರೆ. ಕೆಲವರು ಯೋಗ, ಜುಂಬಾ ಕ್ಲಾಸ್ ಗೆ ಹೋಗ್ತಾರೆ. ಇನ್ನು ಕೆಲವರು ಡಯಟ್ ಮಾಡ್ತಾರೆ ಮನೆಯಲ್ಲೇ ಕೆಲವು ವ್ಯಾಯಾಮ ಮಾಡಿ, ಚಟುವಟಿಕೆಯಿಂದ ಇರುತ್ತಾರೆ. ಇದು ವ್ಯಕ್ತಿಯನ್ನು ಚೆನ್ನಾಗಿಡಲು ಮತ್ತು ಆರೋಗ್ಯವಾಗಿರಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಅಂದ ಹಾಗೇ ವ್ಯಾಯಾಮ ಮಾಡುವ ಪ್ರತಿಯೊಬ್ಬರಿಗೂ ವಾರ್ಮಪ್ (Warmup) ಬಗ್ಗೆ ಗೊತ್ತಿರುತ್ತದೆ. ವಾರ್ಮಪ್ ನ್ನು ವ್ಯಾಯಾಮ ಆರಂಭಿಸುವ ಮೊದಲು ಮಾಡಲಾಗುತ್ತದೆ. ವಾರ್ಮಪ್ ದೇಹವನ್ನು ಕ್ರಿಯಾಶೀಲರನ್ನಾಗಿಸುತ್ತದೆ. ವ್ಯಾಯಾಯಕ್ಕೆ ದೇಹವನ್ನು ಹುರಿಗೊಳಿಸುತ್ತದೆ.
ವ್ಯಾಯಾಮಕ್ಕೂ ಮೊದಲು ವಾರ್ಮಪ್ ಯಾಕೆ ಮಾಡ್ಬೇಕು?
ಸ್ನಾಯುವಿನ ಉಷ್ಣತೆ ಹೆಚ್ಚಿಸಲು ಸಹಕಾರಿ
ವ್ಯಾಯಾಮಕ್ಕೂ ಮೊದಲು ವಾರ್ಮಪ್ ಮಾಡಿದ್ರೆ ದೇಹವನ್ನು ವ್ಯಾಯಾಮಕ್ಕೆ ರೆಡಿ ಮಾಡುವ ಕ್ರಮವಾಗಿದೆ. ವಾರ್ಮಪ್ ಮಾಡಿದರೆ ದೇಹ ಮತ್ತು ಸ್ನಾಯುವಿನ ಉಷ್ಣತೆ ಹೆಚ್ಚಿಸಲು ಸಹಕಾರಿ. ವಾರ್ಮಪ್ ಅಭ್ಯಾಸವು ನಿಮ್ಮ ದೇಹದ ಉಷ್ಣತೆ ಹೆಚ್ಚಿಸುತ್ತದೆ. ಇದು ಸ್ನಾಯುಗಳಿಗೆ ವಿಶೇಷವಾಗಿ ಲಾಭದಾಯಕವಾಗಿದೆ.
ಆಮ್ಲಜನಕ ದೇಹದಾದ್ಯಂತ ಪೂರೈಕೆಯಾಗಲು ಸಹಕಾರಿ
ಸ್ನಾಯುವಿನ ಉಷ್ಣತೆ ಹೆಚ್ಚಾದರೆ ಆಮ್ಲಜನಕವು ನಿಮ್ಮ ಸ್ನಾಯುಗಳಿಗೆ ಹೆಚ್ಚು ಪೂರೈಕೆ ಆಗುತ್ತದೆ. ಸ್ನಾಯುಗಳು ಸುಲಭವಾಗಿ ಸಂಕುಚಿತಗೊಳ್ಳಲು ಮತ್ತು ವಿಶ್ರಾಂತಿ ಪಡೆಯಲು ಸಹಕಾರಿ. ವ್ಯಾಯಾಮದ ಸಮಯದಲ್ಲಿ ಅದು ಹೆಚ್ಚು ಒತ್ತಡಕ್ಕೆ ಒಳಗಾಗುವುದಿಲ್ಲ.
ಗಾಯದ ಅಪಾಯ ಕಡಿಮೆ
ವಾರ್ಮಪ್ ವೇಳೆ ಉಂಟಾಗುವ ಗಾಯವನ್ನಯ ಕಡಿಮೆ ಮಾಡಲು ಇದು ಸಹಕಾರಿ. ಗಾಯ ಕಡಿಮೆ ಮಾಡಲು, ಉಷ್ಣತೆ ಹೆಚ್ಚಿಸಲು, ಸ್ನಾಯುವಿನ ಸ್ಥಿತಿಸ್ಥಾಪಕತ್ವ ಸುಧಾರಿಸುತ್ತದೆ.
ಮಾನಸಿಕವಾಗಿ ವ್ಯಾಯಾಮಕ್ಕೆ ತಯಾರು ಮಾಡುತ್ತದೆ
ದೇಹದಲ್ಲಿ ನಮ್ಯತೆ ಹೆಚ್ಚಿಸುತ್ತದೆ. ಸ್ಟ್ರೆಚಿಂಗ್ ಸ್ನಾಯುಗಳಿಗೆ ರಕ್ತದ ಹರಿವು ಹೆಚ್ಚಿಸುತ್ತದೆ. ಹಾಗಾಗಿ ತಾಲೀಮು ಮಾಡುವ ಮೊದಲು ವಾರ್ಮಪ್ ಮಾಡುವುದು ಮುಖ್ಯವಾಗಿದೆ.
ವಾರ್ಮಪ್ ದೇಹದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಸ್ನಾಯುಗಳನ್ನು ಭಾರವಾದ ತಾಲೀಮು ಮಾಡಲು ಸಿದ್ಧಪಡಿಸುತ್ತದೆ. ಸ್ನಾಯು ಸೆಳೆತ ಸೇರಿ ಹಲವು ಸಮಸ್ಯೆ ಕಡಿಮೆ ಮಾಡುತ್ತದೆ.
ವ್ಯಾಯಾಮಕ್ಕೂ ಮೊದಲು ಈ ವಾರ್ಮಪ್ ಮಾಡಿ
ಫಿಟ್ನೆಸ್ ತರಬೇತುದಾರ ಚಾರ್ಲಿ ಅಟ್ಕಿನ್ಸ್ ಅವರು ವ್ಯಾಯಾಮಕ್ಕೂ ಮೊದಲು ಕೆಲವು ವಾರ್ಮಪ್ ಬಗ್ಗೆ ತಿಳಿಸಿದ್ದಾರೆ. ಅವುಗಳು ಯಾವವು ಅಂತಾ ನೋಡೋಣ.
ಆಡ್ಕ್ಟರ್ ರಾಕ್ ವಾರ್ಮಪ್
ಸೊಂಟ ಮತ್ತು ಮೊಣಕಾಲುಗಳ ಸ್ನಾಯುಗಳನ್ನು ಹುರಿಗೊಳಿಸಲು ಆಡ್ಕ್ಟರ್ ರಾಕ್ ವ್ಯಾಯಾಮ ಸಾಕಷ್ಟು ಪ್ರಯೋಜನಕಾರಿ ಆಗಿದೆ. ಗ್ಲುಟ್ ಅಥವಾ ಲೆಗ್ ವರ್ಕೌಟ್ ಮಾಡುತ್ತಿದ್ದರೆ ಆಡ್ಕ್ಟರ್ ರಾಕ್ ವಾರ್ಮಪ್ ವ್ಯಾಯಾಮ ಮಾಡಿ. ಇದು ಸೊಂಟ ಮತ್ತು ಮೊಣಕಾಲು ಬೆಚ್ಚಗಾಗಲು ಸಹಕಾರಿ.
ಸ್ಕ್ಯಾಪುಲಾ ಕಂಟ್ರೋಲ್ಡ್ ಆರ್ಟಿಕುಲರ್ ರೊಟೇಶನ್
ಸ್ಕ್ಯಾಪುಲಾ ಕಂಟ್ರೋಲ್ಡ್ ಆರ್ಟಿಕುಲರ್ ರೊಟೇಶನ್ ಮಾಡಿದ್ರೆ ನಿಮ್ಮ ಭುಜಗಳ ಸ್ಕಪುಲಾ ಮೂಳೆಗಳು ಬೆಚ್ಚಗಾಗಲು ತುಂಬಾ ಪ್ರಯೋಜನಕಾರಿಯಾಗಿದೆ. ಇದು ಬಟರ್ ಫ್ಲೈ, ಶೋಲ್ಡರ್ ಪ್ರೆಸ್ ನಂತಹ ವ್ಯಾಯಾಮಗಳಲ್ಲಿ ಭುಜದ ಗಾಯ ತಪ್ಪಿಸುತ್ತದೆ
ಬೆಕ್ಕು ಮತ್ತು ಹಸುವಿನ ಭಂಗಿ
ಬೆಕ್ಕ ಮತ್ತು ಹಸುವಿನ ಭಂಗಿಯು ಯೋಗಾಸನ. ಇದನ್ನು ಮಾರ್ಜರಿಯಾಸನ ಅಥವಾ ಬಿಟಿಲಾಸನ ಎಂದೂ ಕರೆಯುತ್ತಾರೆ. ಈ ಭಂಗಿಯು ದೇಹದ ಸಮತೋಲನ ಸುಧಾರಿಸುತ್ತದೆ. ಸೊಂಟ ಮತ್ತು ಕತ್ತಿನ ಸ್ನಾಯುಗಳು ದೊಡ್ಡ ಹಿಗ್ಗಿಸುವಿಕೆ ಪಡೆಯುತ್ತವೆ.
ಇದನ್ನೂ ಓದಿ: ಚಳಿಗಾಲದಲ್ಲಿ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಕಡ್ಡಾಯವಾಗಿ ಇವುಗಳನ್ನ ಸೇವಿಸಲೇ ಬೇಕು
ಡೌನ್ ಡಾಗ್ ಫ್ಲೈಂಕ್
ಡೌನ್ ಡಾಗ್ ಫ್ಲೈಂಕ್ ವಾರ್ಮಪ್ ಮಾಡಿದ್ರೆ ಭುಜ, ಸೊಂಟ ಮತ್ತು ಸ್ನಾಯುಗಳು ತೆರೆಯಲ್ಪಡುತ್ತವೆ. ಭುಜದ ತಾಲೀಮು, ಲೆಗ್ ವರ್ಕೌಟ್ ಇತ್ಯಾದಿ ಮಾಡುವ ಮೊದಲು ಇದನ್ನು ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ