Salt Benefits: ವ್ಯಾಯಾಮದ ಮೊದಲು ಚಿಟಿಕೆ ಉಪ್ಪು ತಿನ್ನುವುದು ಯಾವ ಪ್ರಯೋಜನ ನೀಡುತ್ತದೆ? ತಜ್ಞರು ಏನಂತಾರೆ??

ವ್ಯಾಯಾಮದ ಮೊದಲು ಉಪ್ಪು ಸೇವನೆ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ಪೌಷ್ಟಿಕ ತಜ್ಞರು. ತೂಕ ನಷ್ಟವು ಕಷ್ಟಕರವಾದ ಕೆಲಸ. ಇದರಲ್ಲಿ ನೀವು ವ್ಯಾಯಾಮ ಮತ್ತು ಆಹಾರ ಎರಡರ ಬಗ್ಗೆ ಸಮಾನ ಕಾಳಜಿ ವಹಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ (Sugar) ಸೇವನೆ ಮಾಡುವುದು ಆರೋಗ್ಯಕ್ಕೆ (Health) ಎಷ್ಟು ಹಾನಿಕಾರಕವೋ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು (Salt) ಸೇವನೆ ಮಾಡುವುದು ಸಹ ಹಾನಿಕರ (Harmful). ಮಧುಮೇಹಕ್ಕೆ ಪ್ರಮುಖ ಅಪಾಯಕಾರಿ ಅಂಶವೆಂದರೆ ಅದು ಸಕ್ಕರೆ. ಇಷ್ಟು ಮಾತ್ರವಲ್ಲದೆ, ಸಕ್ಕರೆ ಅಥವಾ ಸಿಹಿ ಪದಾರ್ಥಗಳ ಸೇವನೆಯು ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ಅನೇಕ ರೋಗಗಳ ಅಪಾಯಕ್ಕೆ ಕಾರಣವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಸಕ್ಕರೆ ಮಾತ್ರವಲ್ಲದೇ, ಉಪ್ಪಿನ ಅತಿಯಾದ ಸೇವನೆ ವ್ಯಕ್ತಿಯ ಆರೋಗ್ಯಕ್ಕೆ ಗಂಭೀರ ಹಾನಿ ಉಂಟು ಮಾಡುತ್ತದೆ. ಸಾಮಾನ್ಯವಾಗಿ ಸಿಹಿ ಪದಾರ್ಥಗಳನ್ನು ತಿನ್ನುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಮತ್ತು ಹಾನಿಯ ಬಗ್ಗೆ ಹೇಳಲಾಗುತ್ತದೆ.

    ಉಪ್ಪಿನ ಸೇವನೆ

    ಉಪ್ಪು ಸುಮಾರು 40% ಸೋಡಿಯಂ ಮತ್ತು 60% ಕ್ಲೋರೈಡ್ನಿಂದ ಮಾಡಲ್ಪಟ್ಟಿದೆ. ಆಹಾರದ ರುಚಿ ಹೆಚ್ಚಿಸಲು ಇದು ಅವಶ್ಯಕ. ಇದು ಸ್ನಾಯು ಮತ್ತು ನರಗಳ ಕಾರ್ಯಚಟುವಟಿಕೆಗೆ ಅಗತ್ಯವಾದ ಖನಿಜ. ವೈದ್ಯರು ಇದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವಂತೆ ಶಿಫಾರಸು ಮಾಡುತ್ತಾರೆ.

    ಜೊತೆಗೆ ವ್ಯಾಯಾಮದ ಮೊದಲು ಉಪ್ಪು ಸೇವನೆ ದೇಹದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ಪೌಷ್ಟಿಕ ತಜ್ಞರು. ತೂಕ ನಷ್ಟವು ಕಷ್ಟಕರವಾದ ಕೆಲಸ. ಇದರಲ್ಲಿ ನೀವು ವ್ಯಾಯಾಮ ಮತ್ತು ಆಹಾರ ಎರಡರ ಬಗ್ಗೆ ಸಮಾನ ಕಾಳಜಿ ವಹಿಸಬೇಕು. ತೂಕ ಇಳಿಸಿಕೊಳ್ಳಲು ಯಾವುದೇ ವಿಧಾನ ಅಳವಡಿಸಿಕೊಳ್ಳಲು ಸಿದ್ಧರಾಗಿರುವ ಅನೇಕ ಜನರಿದ್ದಾರೆ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ವ್ಯಾಯಾಮದ ಮೊದಲು ಉಪ್ಪು ಸೇವನೆ ಬಗ್ಗೆ ಗಮನಹರಿಸಿ

    ತಜ್ಞರ ಪ್ರಕಾರ, ತೂಕ ನಷ್ಟವನ್ನು ಯಾವಾಗಲೂ ಆರೋಗ್ಯಕರ ರೀತಿಯಲ್ಲಿ ಮಾಡಬೇಕು. ಹೆಚ್ಚುವರಿ ಕೊಬ್ಬು ಸುಡಲು, ನಿಯಮಿತ ವ್ಯಾಯಾಮ ಮಾಡುವುದು ಮತ್ತು ನೀವು ಏನು ತಿನ್ನುತ್ತೀರಿ ಎಂಬುದು ತುಂಬಾ ಮುಖ್ಯವಾಗುತ್ತದೆ. ಕೆಲವು ಆಹಾರಗಳಿವೆ, ಅದನ್ನು ಸೇವಿಸುವುದರಿಂದ ಉತ್ತಮ ವ್ಯಾಯಾಮ ಮಾಡಲು ನಿಮಗೆ ಸಹಾಯ ಮಾಡುತ್ತದೆ.

    ಪೌಷ್ಟಿಕ ತಜ್ಞ ನಿಧಿ ನಿಗಮ್ ಅವರು ಹೇಳುವ ಪ್ರಕಾರ, ಓಟ ಅಥವಾ ಜಿಮ್‌ಗೆ ಹೋಗುವ ಮೊದಲು ಪ್ರೋಟೀನ್ ಭರಿತ ಆಹಾರ ಬಾಳೆಹಣ್ಣು, ನಟ್ಸ್, ಚೀಸ್ ತಿನ್ನುವುದು ಹೆಚ್ಚು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಆದರೆ ತಾಲೀಮು ಮಾಡುವ ಮೊದಲು ಉಪ್ಪಿನಂಶ ಹೊಂದಿರುವ ಪದಾರ್ಥ ಸೇವನೆ ಮಾಡುವುದು ವ್ಯಾಯಾಮ ಮಾಡಲು ನಿಮಗೆ ಸಹಾಯ ಮಾಡುತ್ತದೆ ಎಂದು ಹೇಳುತ್ತಾರೆ.

    ಆರೋಗ್ಯಕರ ಮಾರ್ಗವು ಇಡೀ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವ್ಯಾಯಾಮ ಮಾಡುವ ಮೊದಲು ಒಂದು ಚಿಟಿಕೆ ಉಪ್ಪು ತಿನ್ನುವುದು ನಿಮ್ಮ ವ್ಯಾಯಾಮಕ್ಕೆ ಶಕ್ತಿ ಒದಗಿಸುತ್ತದೆ. ಹಾಗಾದರೆ ತಾಲೀಮಿಗೆ ಮೊದಲು ಉಪ್ಪು ಸೇವನೆ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

    ಜಲಸಂಚಯನ ಸುಧಾರಿಸುತ್ತದೆ

    ಉಪ್ಪು ದೇಹದಲ್ಲಿ ನೀರು ಸಂಪೂರ್ಣವಾಗಿ ಹೀರುವುದನ್ನು ತಡೆಯಲು ಸಹಾಯ ಮಾಡುತ್ತದೆ. ವ್ಯಾಯಾಮದ ಮೊದಲು ಒಂದು ಚಿಟಿಕೆ ಉಪ್ಪು ತಿನ್ನುವುದು ವ್ಯಾಯಾಮದ ಸಮಯದಲ್ಲಿ ನಿರ್ಜಲೀಕರಣ ತಪ್ಪಿಸಲು ಸಹಾಯ ಮಾಡುತ್ತದೆ.

    ಅಧಿಕ ಹೃದಯ ಬಡಿತ ಕಡಿಮೆ ಮಾಡುತ್ತದೆ

    ಉಪ್ಪು ದೇಹದಲ್ಲಿ ರಕ್ತದ ಹರಿವನ್ನು ಸುಧಾರಿಸುತ್ತದೆ. ನಿಸ್ಸಂಶಯವಾಗಿ ಜಿಮ್ ಮಾಡುವಾಗ ಸರಿಯಾದ ರಕ್ತದ ಹರಿವು ಹೊಂದುವುದು ತುಂಬಾ ಮುಖ್ಯ. ವ್ಯಾಯಾಮದ ಸಮಯದಲ್ಲಿ ಉಪ್ಪು ರಕ್ತದ ಹರಿವನ್ನು ಸರಾಗವಾಗುವಂತೆ ಮಾಡುತ್ತದೆ.

    ವ್ಯಾಯಾಮದ ಮೊದಲು ಉಪ್ಪು ತಿನ್ನುವುದರಿಂದ ಸಿಗುವ ಪ್ರಯೋಜನಗಳು

    - ಸ್ನಾಯು ಸೆಳೆತ ತಡೆಯಲು ಸಹಾಯ ಮಾಡುತ್ತದೆ.

    - ಉಪ್ಪು ಸೇವನೆಯು ರಕ್ತದ ಹರಿವನ್ನು ಸುಧಾರಿಸುತ್ತದೆ. ಮತ್ತು ಹೀಗಾಗಿ ವ್ಯಾಯಾಮದ ಸಮಯದಲ್ಲಿ ಮತ್ತು ನಂತರ ಸ್ನಾಯು ಸೆಳೆತ ಮತ್ತು ಕೀಲು ನೋವಿನ ಸಾಧ್ಯತೆ ಇದು ಕಡಿಮೆ ಮಾಡುತ್ತದೆ.

    ದೇಹದಲ್ಲಿ ಶಕ್ತಿಯ ಉತ್ಪಾದನೆ ಹೆಚ್ಚು ಮಾಡುತ್ತದೆ

    ಉಪ್ಪು ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ. ವ್ಯಾಯಾಮ ಮಾಡುವಾಗ ಬೆವರಿನಿಂದ ಕಳೆದುಹೋದ ಎಲೆಕ್ಟ್ರೋಲೈಟ್‌ಗಳನ್ನು ಪುನಃಸ್ಥಾಪಿಸುತ್ತದೆ.

    ಇದನ್ನೂ ಓದಿ: ಮಹಿಳೆಯರಲ್ಲಿ ಗರ್ಭಾಶಯದಲ್ಲಿನ ಗಡ್ಡೆ ಆದಾಗ ಯಾವ ಲಕ್ಷಣಗಳು ಕಂಡು ಬರುತ್ತವೆ? ಆಯುರ್ವೇದ ಪರಿಹಾರವೇನು?

    ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ

    ವ್ಯಾಯಾಮ ಮಾಡುವಾಗ ಉಂಟಾಗುವ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಹೃದಯ ಬಡಿತವನ್ನೂ ಸರಿಯಾಗಿರಿಸುತ್ತದೆ. ತ್ರಾಣವನ್ನು ಹೆಚ್ಚಿಸುತ್ತದೆ.
    Published by:renukadariyannavar
    First published: