• Home
  • »
  • News
  • »
  • lifestyle
  • »
  • Yoga Mistakes: ಯೋಗ ಮಾಡುತ್ತೀರಾ? ಹಾಗಾದರೆ ಈ ತಪ್ಪುಗಳನ್ನು ಮಾಡಲೇಬೇಡಿ

Yoga Mistakes: ಯೋಗ ಮಾಡುತ್ತೀರಾ? ಹಾಗಾದರೆ ಈ ತಪ್ಪುಗಳನ್ನು ಮಾಡಲೇಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಂದಿನ ದಿನಗಳಲ್ಲಿ ತುಂಬಾ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅದರಲ್ಲೂ ತೂಕ ಇಳಿಕೆ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಕೆಲವರು ಮನೆಯಲ್ಲೇ ಯೋಗ ಮಾಡ್ತಾರೆ. ಮನೆಯಲ್ಲೇ ಯೋಗ ಮತ್ತು ವ್ಯಾಯಾಮ ಮಾಡಿ. ಆದರೆ ತಜ್ಞರಿಂದ ಸೂಕ್ತ ಸಲಹೆ ಪಡೆಯುವುದು ಮರೆಯಬೇಡಿ.

ಮುಂದೆ ಓದಿ ...
  • Share this:

    ದಿನವೂ ಬೆಳಗ್ಗೆ (Daily Morning) ಸೂರ್ಯೋದಯಕ್ಕೂ (Sun Rise) ಮೊದಲು ಏಳುವುದು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ (Physical And Mental Health) ತುಂಬಾ ಒಳ್ಳೆಯದು ಅನ್ನುತ್ತೆ ಆಯುರ್ವೇದ (Ayurveda). ಪ್ರತಿನಿತ್ಯ ಸೂರ್ಯೋದಯಕ್ಕೂ ಮೊದಲೇ ಏಳುವುದು ಆರೋಗ್ಯ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ವಯಸ್ಸಾಗುತ್ತಿದ್ದಂತೆ ಕೆಲವು ಕಾಯಿಲೆಗಳು (Disease) ಫ್ರೀ ಎಂಬಂತೆ ಬರುತ್ತವೆ. ಅಂತಹ ಕಾಯಿಲೆಗಳನ್ನ ದೂರವಿಡಲು ದೈಹಿಕ ಚಟುವಟಿಕೆ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ದಿನವೂ ಬೆಳಗ್ಗೆ ಯೋಗ ಮಾಡುವುದು, ಧ್ಯಾನ ಮಾಡುವುದು ಮಾನಸಿಕ ಆರೋಗ್ಯ ವೃದ್ಧಿಸಲು ಸಹಕಾರಿ. ಜೊತೆಗೆ ತೂಕ ನಿಯಂತ್ರಣ ಮತ್ತ ತೂಕ ಇಳಿಕೆಗೂ ಇದು ಪ್ರಯೋಜನ ತಂದು ಕೊಡುತ್ತದೆ.


    ಯೋಗ ಮಾಡುವ ಮೊದಲು ಈ ತಪ್ಪು ಮಾಡದಿರಿ!


    ಅದಾಗ್ಯೂ ಇಂದಿನ ದಿನಗಳಲ್ಲಿ ತುಂಬಾ ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅದರಲ್ಲೂ ತೂಕ ಇಳಿಕೆ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಬಯಸುತ್ತಾರೆ. ಅದಕ್ಕಾಗಿ ಕೆಲವರು ಮನೆಯಲ್ಲೇ ಯೋಗ ಮಾಡ್ತಾರೆ. ಇನ್ನು ಕೆಲವರು ಡಯಟ್ ಮತ್ತು ಜಿಮ್ ಹೋಗ್ತಾರೆ.


    ಏನೇ ಮಾಡಿದ್ರೂ ಸರಿಯಾದ ಕ್ರಮದಲ್ಲಿ ಮಾಡುವುದು ಮಾತ್ರ ಉತ್ತಮ ಫಲಿತಾಂಶ ನೀಡುತ್ತದೆ. ಇದು ಆರೋಗ್ಯ ಸುಧಾರಿಸಲು ಸಹ ಸಹಾಯ ಮಾಡುತ್ತದ. ಮನೆಯಲ್ಲೇ ಯೋಗ ಮತ್ತು ವ್ಯಾಯಾಮ ಮಾಡಿ. ಆದರೆ ತಜ್ಞರಿಂದ ಸೂಕ್ತ ಸಲಹೆ ಪಡೆಯುವುದು ಮರೆಯಬೇಡಿ.




    ಯಾಕಂದ್ರೆ ಯೋಗ ಮಾಡುವುದರ ಜೊತೆಗೆ ನೀವು ನಿಮ್ಮ ದಿನಚರಿಯ ಬಗ್ಗೆಯೂ ಸೂಕ್ತ ಗಮನ ಹರಿಸಬೇಕಾಗುತ್ತದೆ. ಇಲ್ಲದೇ ಹೋದ್ರೆ ನಿಮ್ಮ  ಆರೋಗ್ಯದ ಮೇಲೆ ಇದು ಅಡ್ಡ ಪರಿಣಾಮ ಬೀರಬಹುದು. ಆರೋಗ್ಯ ಕೆಡಬಹುದು. ಜೊತೆಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡಬಹುದು.


    ಯೋಗದ ಜೊತೆಗೆ ದಿನಚರಿಯ ಬಗ್ಗೆಯೂ ಗಮನಹರಿಸಿ


    ಹಾಗಾಗಿ ಯೋಗ ಮಾಡುವುದರ ಜೊತೆಗೆ ದಿನಚರಿಯ ಬಗ್ಗೆಯೂ ಗಮನಹರಿಸುವುದು ತುಂಬಾ ಮುಖ್ಯವಾಗಿದೆ. ಯೋಗ ಮಾಡುವುದಕ್ಕಿಂತ ಮೊದಲು ಏನು ಮಾಡಬಾರದು ಎಂಬುದು ನಿಮಗೆ ಗೊತ್ತಿರಬೇಕು. ಈ ಬಗ್ಗೆ ಪೌಷ್ಟಿಕತಜ್ಞ ಕಿರಣ್ ಕುಕ್ರೇಜಾ ಏನ್ ಹೇಳಿದ್ದಾರೆ ಇಲ್ಲಿ ನೋಡೋಣ.


    ಪೌಷ್ಟಿಕತಜ್ಞ ಕಿರಣ್ ಕುಕ್ರೇಜಾ ಅವರು, ಯೋಗ ಮಾಡುವ ಮೊದಲು ಏನೆಲ್ಲಾ ಮಾಡಬಾರದು ಎಂಬ ವಿಷಯಗಳ ಬಗ್ಗೆ ಹೇಳಿದ್ದಾರೆ.


    ಬೆಳಗ್ಗೆ ಎದ್ದ ತಕ್ಷಣ ಭಾರವಾದ ಉಪಹಾರ ಸೇವನೆ


    ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಒಂದೇ ಬಾರಿಗೆ ಹೆಚ್ಚು ತಿಂಡಿ ತಿನ್ನುವ ಅಭ್ಯಾಸವಿರುತ್ತದೆ. ಅವರು ತಿಂಡಿ ತಿಂದ ನಂತರವೇ ಮುಂದಿನ ಕೆಲಸಗಳನ್ನು ಮಾಡ್ತಾರೆ. ಆದರೆ ಯೋಗ ಮಾಡುವ ಕನಿಷ್ಠ 2 ಗಂಟೆ ಮೊದಲು ಭಾರವಾದ ಆಹಾರ ಸೇವನೆ ತಪ್ಪಿಸಬೇಕು ಅಂತಾರೆ ತಜ್ಞರು.


    ಸಾಂದರ್ಭಿಕ ಚಿತ್ರ


    ಇಲ್ಲದೇ ಹೋದರೆ ನಿಮ್ಮ ಯೋಗ ಮತ್ತು ಆಸನ ಹಾಕವು ಇದು ಕಷ್ಟವಾಗಿಸುತ್ತದೆ. ಜೊತೆಗೆ ವಾಕರಿಕೆ, ವಾಂತಿ, ಹೊಟ್ಟೆ ನೋವು, ಗ್ಯಾಸ್ ಅಥವಾ ವಾಯು ಸೇರಿದಂತೆ ಕೆಲವು ಸಮಸ್ಯೆಗಳು ಕಾಡುತ್ತವೆ.


    ಬಿಸಿ ನೀರಿನ ಸ್ನಾನ


    ಬಹುತೇಕ ಜನರು ಬಿಸಿ ನೀರಿನ ಸ್ನಾನ ಮಾಡ್ತಾರೆ. ಆದರೆ ಯೋಗ ಮಾಡುವ ಮೊದಲು ಬಿಸಿ ನೀರಿನ ಸ್ನಾನ ಮಾಡಬಾರದು ಅಂತಾರೆ ತಜ್ಞರು. ಯಾಕಂದ್ರೆ ಯೋಗಕ್ಕೂ ಮೊದಲು ಬಿಸಿ ನೀರಿನಿಂದ ಸ್ನಾನ ಮಾಡಿದರೆ ದೇಹ ಮತ್ತು ಸ್ನಾಯುಗಳಲ್ಲಿ ಠೀವಿ ಕಡಿಮೆ ಆಗುತ್ತದೆ. ಯೋಗದಲ್ಲಿ ಉತ್ತಮ ಹಿಗ್ಗುವಿಕೆ ಇರಲ್ಲ. ಆದರೆ ನೀವು ಸ್ನಾನ ಮಾಡಲು ಬಯಸಿದರೆ ಯೋಗದ ಮೊದಲು ತಣ್ಣೀರಿನ ಸ್ನಾನ ಮಾಡಬಹುದು.


    ಕಾಫಿ ಕುಡಿಯುವ ಅಭ್ಯಾಸ


    ಬೆಳಗ್ಗೆ ಎದ್ದ ತಕ್ಷಣ ತುಂಬಾ ಜನರು ಕಾಫಿ ಕುಡಿಯುತ್ತಾರೆ. ಈ ಅಭ್ಯಾಸವನ್ನು ಮೊದಲು ಬದಲಿಸಿ ಅಂತಾರೆ ತಜ್ಞರು. ಇದು ದೇಹದಲ್ಲಿ ಒತ್ತಡದ ಪ್ರತಿಕ್ರಿಯೆ ಹೆಚ್ಚಿಸುತ್ತದೆ. ಇದರಿಂದಾಗಿ ಸ್ನಾಯುಗಳ ಮೇಲೆ ಒತ್ತಡ ಹೆಚ್ಚುತ್ತದೆ.


    ಯೋಗಕ್ಕೂ ಮೊದಲು ಕಾಫಿ ಸೇವಿಸಿದರೆ ಏಕಾಗ್ರತೆಗೆ ತೊಂದರೆ ಉಂಟಾಗುತ್ತದೆ. ನಿರ್ಜಲೀಕರಣ ಮತ್ತು ಆಮ್ಲೀಯತೆ ಹೆಚ್ಚುತ್ತದೆ. ಬಹಳಷ್ಟು ತೊಂದರೆ ಉಂಟು ಮಾಡುತ್ತದೆ.


    ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!


    ಮೇಲೆ ಹೇಳಿದ ಯಾವುದೇ ತಪ್ಪನ್ನು ಮಾಡಬೇಡಿ. ಅದರಲ್ಲೂ ಪ್ರಾಣಾಯಾಮಕ್ಕೂ ಮೊದಲು ಆ ತಪ್ಪು ಮಾಡಬೇಡಿ. ಇದು ಪ್ರಾಣಾಯಾಮಕ್ಕೆ ಅಡಚಣೆ ಉಂಟು ಮಾಡುತ್ತದೆ ಅಂತಾರೆ ತಜ್ಞರು.

    Published by:renukadariyannavar
    First published: