Skin Care Tips: ಸ್ಕಿನ್ ಕೇರ್ ಉತ್ಪನ್ನಗಳನ್ನು ಕೊಳ್ಳುವ ಮುನ್ನ ಈ 5 ವಿಷಯಗಳು ನಿಮಗೆ ತಿಳಿದಿರಲಿ

ಚರ್ಮದ ಆರೈಕೆಗೆ ಮತ್ತು ಸೌಂದರ್ಯ ವರ್ಧನೆಗಾಗಿ ಬಾಹ್ಯವಾಗಿ ಕೆಲವೊಂದು ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸಬೇಕಾಗುತ್ತದೆ. ಹಾಗಂತ ಕೈ ಸಿಕ್ಕ, ಕಣ್ಣಿಗೆ ಚೆಂದ ಕಂಡ ಉತ್ಪನ್ನಗಳನ್ನೆಲ್ಲಾ ಬಳಸುವಂತಿಲ್ಲ. ನಮ್ಮ ತ್ವಚೆಗೆ ಸರಿ ಹೊಂದುವಂತಹ ಉತ್ಪನ್ನಗಳು ಯಾವುವೆಂದು ಕಂಡುಕೊಂಡು , ಆ ನಂತರ ಅವುಗಳನ್ನು ಬಳಸಲು ಪ್ರಾರಂಭಿಸುವುದು ಸರಿಯಾದ ಕ್ರಮ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:

ಆರೋಗ್ಯಕರವಾದ, ಸುಂದರ (Beautiful) , ರೇಶ್ಮೆಯಂತೆ ಮೃದುವಾದ ಮತ್ತು ಹೊಳಪುಳ್ಳ ಚರ್ಮ (Skin) ತಮ್ಮದಾಗಿರಬೇಕು ಎಂಬ ಬಯಕೆ ಯಾರಿಗೆ ಇರುವುದಿಲ್ಲ ಹೇಳಿ? ಆದರೆ, ಎಲ್ಲರಿಗೂ ಅಂತಹ ಚರ್ಮ ಇರುವುದಿಲ್ಲ. ಏಕೆಂದರೆ ಆರೋಗ್ಯಕರ ಮತ್ತು ಕೋಮಲವಾದ ಚರ್ಮ ನಮ್ಮದಾಗಬೇಕೆಂದರೆ, ಸೂಕ್ತ ರೀತಿಯಲ್ಲಿ ಅದರ ಆರೈಕೆ ಮಾಡುವುದು ಮುಖ್ಯವಾಗುತ್ತದೆ. ನಾವು ಸೇವಿಸುವ ಪೌಷ್ಟಿಕಾಂಶಯುಕ್ತ ಆಹಾರ (Nutritious food) ನಮ್ಮ ಚರ್ಮಕ್ಕೆ ಆಂತರಿಕ ಪೋಷಣೆಯನ್ನು ನೀಡುತ್ತದೆ. ಅದೇ ರೀತಿ ಚರ್ಮದ ಆರೈಕೆಗೆ ಮತ್ತು ಸೌಂದರ್ಯ ವರ್ಧನೆಗಾಗಿ ಬಾಹ್ಯವಾಗಿ ಕೆಲವೊಂದು ಸ್ಕಿನ್ ಕೇರ್ ಉತ್ಪನ್ನಗಳನ್ನು (Skin care product) ಬಳಸಬೇಕಾಗುತ್ತದೆ. ಹಾಗಂತ ಕೈ ಸಿಕ್ಕ, ಕಣ್ಣಿಗೆ ಚೆಂದ ಕಂಡ ಉತ್ಪನ್ನಗಳನ್ನೆಲ್ಲಾ ಬಳಸುವಂತಿಲ್ಲ. ನಮ್ಮ ತ್ವಚೆಗೆ ಸರಿ ಹೊಂದುವಂತಹ ಉತ್ಪನ್ನಗಳು ಯಾವುವೆಂದು ಕಂಡುಕೊಂಡು , ಆ ನಂತರ ಅವುಗಳನ್ನು ಬಳಸಲು ಪ್ರಾರಂಭಿಸುವುದು ಸರಿಯಾದ ಕ್ರಮ.


ಆದರೆ, ಹೆಚ್ಚಿನವರು ಈ ರೀತಿ ಮಾಡುವುದಿಲ್ಲ. ಬದಲಿಗೆ ಜಾಹೀರಾತುಗಳ ಮೋಡಿಗೆ ಒಳಗಾಗಿ ಅಥವಾ ಎಲ್ಲರೂ ಬಳಸುವ ಜನಪ್ರಿಯ ಉತ್ಪನ್ನಗಳನ್ನು ಕಣ್ಣು ಮುಚ್ಚಿ ಬಳಸುವುದೇ ಹೆಚ್ಚು. ಆ ಉತ್ಪನ್ನಗಳ ಕುರಿತು ಕೂಲಂಕುಶ ತನಿಖೆ ಮಾಡಲು ನಾವು ಹೋಗುವುದಿಲ್ಲ. ಆದರೆ, ಹೀಗೆ ಮಾಡುವುದು ಖಂಡಿತಾ ತಪ್ಪು. ಎಲ್ಲಾ ರೀತಿಯ ಚರ್ಮಕ್ಕೂ ಸರಿ ಹೊಂದುವಂತ ಏಕೈಕ ಉತ್ಪನ್ನವೆಂಬುವುದು ಇರುವುದಿಲ್ಲ. ಪ್ರತಿಯೊಬ್ಬರ ತ್ವಚೆಯು ಭಿನ್ನವಾಗಿರುತ್ತದೆ ಮತ್ತು ಅದಕ್ಕೆ ಹೊಂದದೆ ಇರುವ ಉತ್ಪನ್ನಗಳನ್ನು ಕೊಂಡು ಬಳಸಿದರೆ, ಅವು ನಿಮ್ಮ ಚರ್ಮದ ಆರೈಕೆ ಮಾಡುವ ಬದಲು ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ.


ಇದನ್ನೂ ಓದಿ: Papaya Benefits: ದಿನಕ್ಕೆ ಒಂದು ಕಪ್​ ಪಪ್ಪಾಯ ಹಣ್ಣು ತಿಂದ್ರೆ ಈ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ

ಹಾಗಾದರೆ, ಈ ವಿಷಯದಲ್ಲಿ ಏನು ಮಾಡಬೇಕು? ಚಿಂತಿಸಬೇಡಿ, ನಿಮ್ಮ ತ್ಚಚೆಗೆ ಹೊಂದುವಂತಹ ಚರ್ಮದ ಆರೈಕೆ ಉತ್ಪನ್ನಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬ ಕುರಿತು ಒಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಿದ್ದೇವೆ.


1) ನಿಮ್ಮ ಚರ್ಮದ ಪ್ರಕಾರವನ್ನು ತಿಳಿದುಕೊಳ್ಳಿ:
ತ್ವಚೆಯ ಆರೈಕೆಯ ದಿನಚರಿಯನ್ನು ಆರಂಭಿಸುವ ಮುನ್ನ, ನಿಮ್ಮದು ಯಾವ ರೀತಿಯ ಚರ್ಮ ಎಂಬುವುದನ್ನು ತಿಳಿದುಕೊಳ್ಳುವುದು ಅಗತ್ಯ. ನಿಮ್ಮದು ಎಣ್ಣೆ ಚರ್ಮವೇ, ಸೂಕ್ಷ್ಮ ಚರ್ಮವೇ, ಶುಷ್ಕ ಚರ್ಮವೇ ಅಥವಾ ಮಿಶ್ರ ಚರ್ಮವೇ? ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಆಗ ನೀವು ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಸ್ಕಿನ್ ಕೇರ್ ಉತ್ಪನ್ನವನ್ನು ಆಯ್ಕೆ ಮಾಡಿಕೊಂಡು, ತ್ವಚೆಯ ಆರೈಕೆಯ ದಿನಚರಿಯನ್ನು ಪ್ರಾರಂಭಿಸಬಹುದು.


2) ಜನಪ್ರಿಯತೆ ಆಧಾರದ ಮೇಲೆ ಹೂಡಿಕೆ ಬೇಡ:
ನೀವು ಇನ್‍ಫ್ಲುಯೆನ್ಸರ್ ಸಲಹೆಯ ಆಧಾರದ ಮೇಲೆ ಸ್ಕಿನ್ ಕೇರ್ ಉತ್ಪನ್ನವನ್ನು ಬಳಸಲು ಹೊರಟಿದ್ದೀರಿ ಎಂದಾದಲ್ಲಿ, ಅವರು ಈಗ ಎಷ್ಟೇ ಸುಂದರವಾಗಿ ಕಾಣಿಸುತ್ತಿದ್ದರೂ ಕೂಡ, ಆ ಉತ್ಪನ್ನವನ್ನು ಬಳಸುವ ಮುನ್ನ ಯಾವ ರೀತಿಯ ಚರ್ಮವನ್ನು ಹೊಂದಿದ್ದರು ಎಂಬುದರ ಬಗ್ಗೆ ನೀವು ಗಮನ ಹರಿಸುವುದು ಬಹಳ ಮುಖ್ಯ.


ಇದನ್ನೂ ಓದಿ: Benefits of Onion: ಕಣ್ಣೀರು ತರಿಸುವ ಈರುಳ್ಳಿಯಲ್ಲಿ ಮುಖದ ಕಾಂತಿ ಹೆಚ್ಚಿಸುವ ಗುಣ ಕೂಡ ಇದೆ ಗೊತ್ತಾ?

ಆನ್‍ಲೈನ್‍ನಲ್ಲಿ ಒಂದು ಉತ್ಪನ್ನದ ಕುರಿತು ಎಷ್ಟೇ ಒಳ್ಳೆಯ ವಿಮರ್ಶೆ ಬರಲಿ ಅಥವಾ ಗರಿಷ್ಟ ರೇಟಿಂಗ್ ಸಿಕ್ಕಿರಲಿ, ನೀವು ಆ ಉತ್ಪನ್ನಗಳಲ್ಲಿ ಯಾವೆಲ್ಲಾ ಸಾಮಾಗ್ರಿಗಳನ್ನು ಬಳಸಲಾಗಿದೆ ಎಂಬುವುದನ್ನು ಪರಿಶೀಲಿಸಿ, ಅವು ನಿಮಗೆ ಸರಿ ಹೊಂದುತ್ತವೆ ಎಂದಾದಲ್ಲಿ ಮಾತ್ರ ಖರೀದಿಸಿ.


3) ಮೂಲಭೂತ ಅಂಶಗಳನ್ನು ತಿಳಿಯಿರಿ:
ಸ್ವಚ್ಚತೆ, ಹೈಡ್ರೇಟ್, ಸೂರ್ಯನಿಂದ ರಕ್ಷಣೆ, ಟ್ರೀಟ್ – ಇವು ಎಲ್ಲಾ ಪ್ರಕಾರದ ಚರ್ಮದವರು ಅನುಸರಿಸಬೇಕಾದ ತ್ವಚೆಯ ನಿಯಮದ ಅಡಿಪಾಯಗಳು.


4) ಪ್ಯಾಚ್ ಟೆಸ್ಟ್ ಮಾಡಿ:
ಯಾವುದೇ ಹೊಸ ಉತ್ಪನ್ನವನ್ನು ಬಳಸುವ ಮುನ್ನ ಪ್ಯಾಚ್ ಟೆಸ್ಟ್ ಮಾಡಿ. ಅಂದರೆ, ನಿಮ್ಮ ಮುಂದೋಳಿನ ಚರ್ಮದ ಸಣ್ಣ ಭಾಗದ ಮೇಲೆ ಉತ್ಪನ್ನವನ್ನು ಹಚ್ಚಿ ನೋಡಿ. ಅದರಿಂದ, ಆ ಉತ್ಪನ್ನ ನಿಮಗೆ ಅಲರ್ಜಿ ಉಂಟು ಮಾಡುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.


ಇದನ್ನೂ ಓದಿ:  Ginger: ಕಾಯಿಲೆಗಳನ್ನು ಗುಣಪಡಿಸುವ ಶುಂಠಿಯಲ್ಲೂ ಇದೆ ಈ ಐದು ಅಡ್ಡ ಪರಿಣಾಮಗಳು

5) ಚರ್ಮ ರೋಗ ತಜ್ಞರನ್ನು ಭೇಟಿಯಾಗ:
ಉತ್ತಮ ಚರ್ಮ ಹೊಂದಲೇಬೇಕು ಎಂಬ ಗಂಭೀರ ನಿರ್ಧಾರ ಮಾಡಿದ್ದೀರಿ ಎಂದಾದಲ್ಲಿ, ಚರ್ಮ ರೋಗ ತಜ್ಞರನ್ನು ಭೇಟಿಯಾಗಿ. ಅವರು ನಿಮ್ಮ ಚರ್ಮವನ್ನು ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ, ಅದಕ್ಕೆ ಸರಿ ಹೊಂದುವ ಉತ್ಪನ್ನಗಳ ಕುರಿತು ಜ್ಞಾನವನ್ನು ಕೂಡ ಹೊಂದಿರುತ್ತಾರೆ. ಅವರ ಸಲಹೆಗೆ ತಕ್ಕಂತೆ ತ್ವಚೆಯ ಆರೈಕೆ ಆರಂಭಿಸಿ.

Published by:Ashwini Prabhu
First published: