ಮನೆಯಲ್ಲಿ (Home) ಶಿಶುಗಳು ಹಾಗೂ ಮಕ್ಕಳಿಗೆ (Children’s) ಪ್ರತಿದಿನ ಕೊಬ್ಬರಿ ಎಣ್ಣೆ ಹಾಕಿ ಮಸಾಜ್ (Coconut Oil Massage) ಮಾಡಿ, ಬಿಸಿ ನೀರಿನ ಸ್ನಾನ (Hot Water Bath) ಮಾಡಿಸುವುದನ್ನು ನೀವು ನೋಡಿರಬಹುದು. ನೀವು ಸಹ ಚಿಕ್ಕ ಮಕ್ಕಳಿರುವಾಗ ಮನೆಯಲ್ಲಿ ತಾಯಂದಿರುವ ಮತ್ತು ಅಜ್ಜಿ ಎಣ್ಣೆ ಹಾಕಿ, ತಲೆ ಸ್ನಾನ ಮಾಡಿಸುತ್ತಿದ್ದರು. ಸ್ನಾನಕ್ಕೆ ಮೊದಲು ಮೈಯನ್ನು ಎಣ್ಣೆಯಿಂದ ಮಸಾಜ್ ಮಾಡಿದ್ರೆ ಇಡೀ ದೇಹ ರಿಲ್ಯಾಕ್ಸ್ ಆಗುತ್ತದೆ. ಜಿಡ್ಡುಗಟ್ಟಿದ ದೇಹಕ್ಕೆ ತಿಂಗಳಿಗೆ ಒಮ್ಮೆಯಾದ್ರೂ ಎಣ್ಣೆ ಮಸಾಜ್ ಮಾಡಿ, ಬಿಸಿ ನೀರಿನ ಸ್ನಾನ ಮಾಡಿದ್ರೆ ಒಳ್ಳೆಯ ನಿದ್ರೆ ಬರುತ್ತೆ. ಈ ಅನುಭವ ನಿಮಗೂ ಆಗಿರಬಹುದು.
ಸ್ನಾನಕ್ಕೂ ಮೊದಲು ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದು ಯಾಕೆ?
ಸ್ನಾನ ಮಾಡುವ ಮೊದಲು ಇಡೀ ದೇಹಕ್ಕೆ ತಿಂಗಳಿಗೊಮ್ಮೆ ಎಣ್ಣೆಯಿಂದ ಚೆನ್ನಾಗಿ ಮಸಾಜ್ ಮಾಡಿಕೊಳ್ಳುವಂತೆ ಹಿರಿಯರು ಸಲಹೆ ನೀಡ್ತಾರೆ. ಕೆಲವರು ಎಣ್ಣೆ ಮಸಾಜ್ ಬೇಡ್ವೇ ಬೇಡ ಅಂತಾ ಮುಖ ತಿರುಗಿಸ್ತಾರೆ. ಇನ್ನು ಕೆಲವರು ಮೈಯೆಲ್ಲಾ ಎಣ್ಣೆ ಆಗುತ್ತೆ ಜಿಡ್ಡು ಅಂತಾ ದೂರ ಹೋಗ್ತಾರೆ. ಆದ್ರೆ ಹೀಗೆ ಸ್ನಾನ ಮಾಡೋ ಮೊದಲು ಎಣ್ಣೆಯಿಂದ ದೇಹಕ್ಕೆ ಮಸಾಜ್ ಯಾಕೆ ಮಾಡ್ಬೇಕು ಅನ್ನೋದ್ರ ಬಗ್ಗೆ ಸ್ವಲ್ಪ ತಿಳಿದುಕೊಳ್ಳುವುದು ಅವಶ್ಯಕ.
ಸ್ನಾನಕ್ಕೂ ಮೊದಲು ದೇಹಕ್ಕೆ ಎಣ್ಣೆಯಿಂದ ಮಸಾಜ್ ಮಾಡುವುದರ ಹಿಂದೆ ವೈಜ್ಞಾನಿಕ ಕಾರಣವಿದೆ. ಇಂದು ನಾವು ಇಲ್ಲಿ ಇಡೀ ದೇಹಕ್ಕೆ ಎಣ್ಣೆಯಿಂದ ಯಾಕೆ ಮಸಾಜ್ ಮಾಡ್ಬೇಕು, ಹೇಗೆ ಮಸಾಜ್ ಮಾಡ್ಬೇಕು ಅನ್ನೋದನ್ನ ತಿಳಿಯೋಣ. ಆರೋಗ್ಯ ಹಾಗೂ ಸದೃಢ ದೇಹಕ್ಕೆ ನಿರೋಗಿಯಾಗಿರುವುದು ತುಂಬಾ ಅವಶ್ಯಕ. ದಿನವೂ ದುಡಿದು ದಣಿದು ಬರುವ ದೇಹಕ್ಕೆ ಮಸಾಜ್ ಮಾಡಿದ್ರೆ ಫುಲ್ ರಿಲ್ಯಾಕ್ಸ್ ಆಗುತ್ತೆ.
ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುವುದು ಹೇಗೆ?
ನೀವು ಸ್ನಾನಕ್ಕೆ ಹೋಗುವ ಕನಿಷ್ಠ ಅರ್ಧ ಇಲ್ಲವೇ ಒಂದು ಗಂಟೆ ಮೊದಲು ಎಣ್ಣೆಯಿಂದ ಸಂಪೂರ್ಣ ದೇಹವನ್ನು ಚೆನ್ನಾಗಿ ಮಸಾಜ್ ಮಾಡಿ. ಇದು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ದೇಹದ ಅಂಗಾಂಗಳಿಗೆ ಆರೈಕೆ ನೀಡುತ್ತದೆ. ಅಂದ ಹಾಗೇ ಮಸಾಜ್ ಮಾಡುವಾಗ ಹೇಗ್ಹೇಗೋ ಮಾಡಬೇಡಿ.
ಮಸಾಜ್ ಅನ್ನು ಯಾವಾಗಲೂ ತಲೆಯಿಂದ ಪಾದದವರೆಗೆ ಪ್ರಾರಂಭ ಮಾಡ್ಬೇಕು. ಜೊತೆಗೆ ಎಣ್ಣೆಯನ್ನು ಬಿಸಿ ಮಾಡಿ ಮಸಾಜ್ ಮಾಡ್ಬೇಕು. ಯಾವತ್ತಿಗೂ ಪಾದಗಳಿಂದ, ಮಸಾಜ್ ಮಾಡಬಾರದು.
ಸ್ನಾನಕ್ಕೂ ಮೊದಲು ದೇಹಕ್ಕೆ ಎಣ್ಣೆ ಮಸಾಜ್ ಮಾಡಿದ್ರೆ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ?
ಎಣ್ಣೆಯಿಂದ ಸಂಪೂರ್ಣ ದೇಹವನ್ನು ಚೆನ್ನಾಗಿ ಮಸಾಜ್ ಮಾಡಿದಾಗ ಚರ್ಮದ ರಂಧ್ರಗಳಿಗೆ ಉತ್ತಮ ಪೋಷಣೆ ದೊರೆಯುತ್ತದೆ. ರಕ್ತ ಪರಿಚಲನೆ ಅಡಚಣೆ ತೆಗೆದು ಹಾಕುತ್ತದೆ. ಎಣ್ಣೆಯಿಂದ ಸಂಪೂರ್ಣ ದೇಹವನ್ನು ಚೆನ್ನಾಗಿ ಮಸಾಜ್ ಮಾಡಿದಾಗ ದೇಹದಲ್ಲಿ ನಮ್ಯತೆ ಬರುತ್ತೆ. ಚಯಾಪಚಯವು ಬಲಗೊಳ್ಳುತ್ತದೆ.
ಎಣ್ಣೆಯಿಂದ ಸಂಪೂರ್ಣ ದೇಹವನ್ನು ಸ್ನಾನಕ್ಕೂ ಮೊದಲು ಚೆನ್ನಾಗಿ ಮಸಾಜ್ ಮಾಡಿದ್ರೆ ಇದು ಆಂಟಿ ಏಜಿಂಗ್ ಆಗಿ ಕೆಲಸ ಮಾಡುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನವಾಗುತ್ತದೆ. ಆಯಾಸ ಹೋಗಲಾಡಿಸುತ್ತದೆ, ಮುಖದ ಕಾಂತಿ ಹೆಚ್ಚುತ್ತದೆ. ಸ್ನಾಯುಗಳು ಬಲವಾಗುತ್ತವೆ.
ಯಾವ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮ?
ದೇಹಕ್ಕೆ ಮಸಾಜ್ ಮಾಡಲು ಸಾಸಿವೆ ಎಣ್ಣೆ ಬೆಸ್ಟ್ ಆಯ್ಕೆ ಆಗಿದೆ. ಜೊತೆಗೆ ಕೊಬ್ಬರಿ ಎಣ್ಣೆಯನ್ನೂ ಸಹ ಮಸಾಜ್ ಗೆ ಬಳಕೆ ಮಾಡಬಹುದು. ಸಾಸಿವೆ ಎಣ್ಣೆ ಆಂಟಿ-ಆಕ್ಸಿಡೆಂಟ್, ಒಮೆಗಾ 3 ಕೊಬ್ಬಿನಾಮ್ಲ, ವಿಟಮಿನ್ ಇ ಯಿಂದ ಸಮೃದ್ಧವಾಗಿದೆ.
ಇದನ್ನೂ ಓದಿ: ಕರಿಬೇವಿನ ಎಲೆಗಳು ಎಷ್ಟು ಪ್ರಯೋಜನಕಾರಿ ಗೊತ್ತಾ?
ಎಣ್ಣೆಯನ್ನು ತುಂಬಾ ಬಿಸಿ ಮಾಡಿ ಅನ್ವಯಿಸಬೇಡಿ. ಮಸಾಜ್ ಮಾಡಲು ಎಣ್ಣೆ ಉಗುರು ಬೆಚ್ಚಗೆ ಬಿಸಿಯಾದ್ರೆ ಸಾಕು. ಹೆಚ್ಚು ಬಿಸಿ ಮಾಡಿದ ಎಣ್ಣೆ ಚರ್ಮದ ರಂಧ್ರಗಳನ್ನು ಕುಗ್ಗಿಸುತ್ತದೆ ಎಂಬುದನ್ನು ನೆನಪಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ