ದೇಹದ (Body) ಸದೃಢ ಆರೋಗ್ಯಕ್ಕೆ (Health) ಕೆಲವು ಪೋಷಕಾಂಶಗಳು (Nutrients) ಮುಖ್ಯವಾಗಿ ಬೇಕು. ಅವುಗಳನ್ನು ನಾವು ತರಕಾರಿ ಮತ್ತು ಹಣ್ಣುಗಳ (Vegetables And Fruits) ಸೇವನೆಯಿಂದ ಪಡೆಯುತ್ತೇವೆ ಎಂಬುದು ಎಲ್ಲರಿಗೂ ಗೊತ್ತಿದೆ. ನಿಮ್ಮ ತಟ್ಟೆಯಲ್ಲಿ ಯಾವಾಗಲೂ ಕಾಲೋಚಿತ ತರಕಾರಿ ಮತ್ತು ಹಣ್ಣು ಸೇರಿಸಿದರೆ ಅದು ಆರೋಗ್ಯ ವೃದ್ಧಿಸಲು ಸಹಾಯ ಮಾಡುತ್ತದೆ. ಹಾಗಾಗಿ ನಿಮ್ಮ ಡಯಟ್ ನಲ್ಲಿ ಕೆಲವು ತರಕಾರಿಗಳನ್ನು ತಪ್ಪದೇ ಸೇರಿಸಿ ಅಂತಾರೆ ತಜ್ಞರು. ದೇಹಕ್ಕೆ ಶಕ್ತಿ ಬೇಕು. ಜೊತೆಗೆ ಹಿಮೋಗ್ಲೋಬಿನ್ ಕೂಡ ಮುಖ್ಯ. ರೋಗ ನಿರೋಧಕ ಶಕ್ತಿ ಬಲವಾಗಿರುವುದು ಮುಖ್ಯ. ಇದು ರೋಗಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಬೀಟ್ರೂಟ್ ತರಕಾರಿ ನಿಯಮಿತವಾಗಿ ಸೇವಿಸಿ
ಅನೇಕ ತರಕಾರಿಗಳಿವೆ. ಕ್ಯಾರೆಟ್, ಸೌತೆಕಾಯಿ, ಬೀನ್ಸ್ ಹೀಗೆ ಹಲವು ತರಕಾರಿಗಳಲ್ಲಿ ಬೀಟ್ರೂಟ್ ಕೂಡ ಪೋಷಕಾಂಶ ಸಮೃದ್ಧ ತರಕಾರಿಯಾಗಿದೆ. ಬೀಟ್ರೂಟ್ ಇದು ಒಂದು ಆಳವಾದ ಕೆಂಪು ಬಣ್ಣದ ತರಕಾರಿ ಆಗಿದೆ. ಅದು ನೆಲದೊಳಗೆ ಗೆಡ್ಡೆ ರೂಪದಲ್ಲಿ ಸಿಗುತ್ತದೆ.
ಬೀಟ್ರೂಟ್ ತರಕಾರಿ ಕೆಂಪು ಬಣ್ಣ. ಹಾಗಾಗಿ ಕೆಲವರು ಇದನ್ನು ಸೇವಿಸಲು ಹಿಂದೆ ಮುಂದೆ ನೋಡ್ತಾರೆ. ಆದರೆ ಬೀಟ್ರೂಟ್ ನ್ನು ನೀವು ತಪ್ಪದೇ ಸೇವಿಸಬೇಕು. ಇದು ಪೋಷಕಾಂಶಗಳ ಗಣಿ ಆಗಿದೆ. ಬೀಟ್ರೂಟ್ ರಕ್ತದ ಕಡಿಮೆ ಇರುವ ಸಮಸ್ಯೆ ಅಂದರೆ ಅನಿಮಿಯಾವನ್ನ ದೂರ ಮಾಡಲು ಪ್ರಯೋಜನಕಾರಿ ಆಗಿದೆ.
ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ ಬೀಟ್ರೂಟ್
ಬೀಟ್ರೂಟ್ ನಲ್ಲಿ ಹಲವು ವಿಟಮಿನ್, ಖನಿಜ ಮತ್ತು ಔಷಧೀಯ ಗುಣಗಳಿವೆ. ಬೀಟ್ರೂಟ್ ತರಕಾರಿ ಸೇವನೆಯು ಕೆಲವು ರೀತಿಯ ಆರೋಗ್ಯ ಸಮಸ್ಯೆ ನಿವಾರಣೆಗೆ ತುಂಬಾ ಲಾಭಕಾರಿ ಆಗಿದೆ. ಬೀಟ್ರೂಟ್ ಬಿಸಿ ಪರಿಣಾಮ ಹೊಂದಿದೆ. ಹಾಗಾಗಿ ಚಳಿಗಾಲದಲ್ಲಿ ಬೀಟ್ರೂಟ್ ಸೇವನೆ ಶೀತ ನಿವಾರಣೆ, ಸೋಂಕುಗಳಿಂದ ನಿಮ್ಮನ್ನು ದೂರವಿಡಲು ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಬೀಟ್ರೂಟ್ ತರಕಾರಿಯು ಎಲ್ಲಾ ಋತುಮಾನಗಳಲ್ಲಿಯೂ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಆದರೆ ಕ್ಯಾರೆಟ್, ಮೂಲಂಗಿ, ಸಿಹಿ ಗೆಣಸು ಮುಂತಾದ ಬೇರು ತರಕಾರಿಗಳಂತೆ ಬೀಟ್ರೂಟ್ ಸಹ ಚಳಿಗಾಲದ ತರಕಾರಿ ಸಹ ಆಗಿದೆ.
ಬೀಟ್ರೂಟ್ ಬಣ್ಣ ಹಾಗೂ ದೇಹಕ್ಕೆ ಉತ್ತಮ ಪೋಷಕಾಂಶ ಸಹ ನೀಡುತ್ತದೆ. ಬೀಟ್ರೂಟ್ ಸೇವನೆ ಸಾಕಷ್ಟು ಆರೋಗ್ಯ ಸಮಸ್ಯೆ ನಿವಾರಣೆಗೆ ಸಹಕಾರಿ ಅಂತಾರೆ ಪೌಷ್ಟಿಕತಜ್ಞ ಲವ್ನೀತ್ ಬಾತ್ರಾ. ಬೀಟ್ರೂಟ್ ಗೆಡ್ಡೆಗಳು ತುಂಬಾ ಪೌಷ್ಟಿಕಾಂಶ ಹೊಂದಿದೆ. ಇದು ಆರೋಗ್ಯ ಉತ್ತೇಜಿಸುವ ಗುಣ ಹೊಂದಿದ್ದು, ನೀವು ಬೀಟ್ರೂಟ್ ನ್ನು ಸಲಾಡ್, ಜ್ಯೂಸ್, ಚಿಪ್ಸ್ ರೂಪದಲ್ಲಿ ಸೇವನೆ ಮಾಡಬಹುದು.
ರಕ್ತದೊತ್ತಡ ಸಮಸ್ಯೆ ನಿವಾರಿಸಲು ಬೀಟ್ರೂಟ್ ಸೇವಿಸಿ
ಬೀಟ್ರೂಟ್ ನೈಸರ್ಗಿಕವಾಗಿ ದೊಡ್ಡ ಪ್ರಮಾಣದ ನೈಟ್ರೇಟ್ ಹೊಂದಿದೆ. ಇದನ್ನು ದೇಹವು ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುತ್ತದೆ. ಈ ಸಂಯುಕ್ತವು ರಕ್ತನಾಳಗಳ ಹಿಗ್ಗುವಿಕೆಗೆ ಕಾರಣವಾಗುತ್ತದೆ. ರಕ್ತದ ಹರಿವು ಸುಧಾರಿಸುತ್ತದೆ. ರಕ್ತದೊತ್ತಡದ ಮಟ್ಟ ಸಮತೋಲನಗೊಳಿಸುತ್ತದೆ.
ಉರಿಯೂತ ಸಮಸ್ಯೆ ಕಡಿಮೆ ಮಾಡುತ್ತದೆ
ಶೀತ ಮತ್ತು ಚಳಿಗಾಲದಲ್ಲಿ ಕೀಲು ಊತ, ನೋವಿನ ಸಮಸ್ಯೆ ಹೆಚ್ಚಾಗುತ್ತದೆ. ಅಂತಹ ಸ್ಥಿತಿಯಲ್ಲಿ ಬೀಟ್ರೂಟ್ ಸೇವನೆ ಪ್ರಯೋಜನಕಾರಿ. ಬೀಟ್ರೂಟ್ ಬೆಟಾಲೈನ್ ಎಂಬ ಉರಿಯೂತದ ಸಂಯುಕ್ತ ಹೊಂದಿದೆ.ಇದು ಸಿಗ್ನಲಿಂಗ್ ಮಾರ್ಗಗಳನ್ನು ಪ್ರತಿಬಂಧಿಸುವ ಮೂಲಕ ಉರಿಯೂತದ ಕಾಯಿಲೆ ತಡೆಯುತ್ತದೆ.
ಮಧುಮೇಹ ಸಮಸ್ಯೆ ತೊಡೆದು ಹಾಕಲು ಸಹಕಾರಿ
ಬೀಟ್ರೂಟ್ ಆಲ್ಫಾ-ಲಿಪೊಯಿಕ್ ಆಮ್ಲ ಎಂಬ ಉತ್ಕರ್ಷಣ ನಿರೋಧಕ ಹೊಂದಿದೆ. ಮಧುಮೇಹ ರೋಗಿಗಳು ನಿಯಮಿತವಾಗಿ ಸೇವನೆ ಮಾಡಬೇಕು. ಬೀಟ್ರೂಟ್ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!
ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ
ಬೀಟ್ರೂಟ್ ಫೈಬರ್ ಹೊಂದಿದೆ. ಫೈಬರ್ ಸಮೃದ್ಧ ನಿಮ್ಮ ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾ ಬೆಳವಣಿಗೆ ಹೆಚ್ಚಿಸುತ್ತದೆ. ಆರೋಗ್ಯಕರ ಬ್ಯಾಕ್ಟೀರಿಯಾಗಳು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ, ಮಲಬದ್ಧತೆಯ ಅಪಾಯ ಕಡಿಮೆ ಮಾಡುತ್ತದೆ. ಬೀಟ್ರೂಟ್ ನೈಸರ್ಗಿಕ ರೋಗ ನಿರೋಧಕ ಬೂಸ್ಟರ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ