HOME » NEWS » Lifestyle » BEAUTY TIPS DONT MISS TO HAVE THESE 5 BEAUTY PRODUCTS IN EVERY GIRLS MAKEUP KIT STG SCT

Beauty Tips: ಎಲ್ಲ ಮಹಿಳೆಯರ ಬ್ಯಾಗ್​ನಲ್ಲೂ ಇರಲೇಬೇಕಾದ 5 ಮುಖ್ಯವಾದ ಮೇಕಪ್ ಪ್ರಾಡಕ್ಟ್​ಗಳಿವು!

Beauty Tips: ಮಹಿಳೆಯರು ತಕ್ಷಣವೇ ತಯಾರಾಗಬೇಕಾದರೆ ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಕಾದ ಐದು ಸೌಂದರ್ಯ ಉತ್ಪನ್ನಗಳು ಯಾವುದು?

Trending Desk
Updated:June 25, 2021, 3:10 PM IST
Beauty Tips: ಎಲ್ಲ ಮಹಿಳೆಯರ ಬ್ಯಾಗ್​ನಲ್ಲೂ ಇರಲೇಬೇಕಾದ 5 ಮುಖ್ಯವಾದ ಮೇಕಪ್ ಪ್ರಾಡಕ್ಟ್​ಗಳಿವು!
ಮೇಕಪ್ ಕಿಟ್
  • Share this:

ಮೇಕಪ್ ಎಂದರೆ ದಿನಗಟ್ಟಲೇ ಮಾಡುವ ಕಾರ್ಯವಲ್ಲ. ಕೆಲವೊಮ್ಮೆ ಮೇಕಪ್‍ಗೂ ಸಮಯ ಹೊಂದಾಣಿಕೆ ಮಾಡಿಕೊಳ್ಳಬೇಕು. ನಿಜ ಹೇಳಬೇಕೆಂದರೆ ಮೇಕಪ್ ಮಾಡಿಕೊಳ್ಳುವುದು ತುಂಬಾ ಸುಲಭ. ಆದರೂ ಕಡಿಮೆ ಎಂದರೂ 15 ರಿಂದ 20 ನಿಮಿಷ ಬೇಕಾಗುತ್ತದೆ. ಕೆಲವೊಮ್ಮೆ ಜೂಮ್ ಮೀಟಿಂಗ್ ಅಥವಾ ತುರ್ತು ಕ್ಲೈಂಟ್ ಕರೆಗಳು ಅಥವಾ ಡೇಟಿಂಗ್ ಇವುಗಳಿಗೆ ತಕ್ಷಣವೇ ತಯಾರಾಗಬೇಕಾಗುತ್ತದೆ. ಆದರೆ ನಿಮ್ಮ ಜೊತೆ ಸರಳವಾದ ಲಿಪ್‍ಸ್ಟಿಕ್, ಕಣ್ಣಿನ ಮೇಕಪ್, ಇವುಗಳನ್ನು ಬಳಸಿದರೆ ನಿಮ್ಮ ಮೊಗದಲ್ಲಿ ಹೊಸತನ ಕಾಣುತ್ತದೆ. ಮಹಿಳೆಯರು ತಕ್ಷಣವೇ ತಯಾರಾಗಬೇಕಾದರೆ ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಕಾದ ಐದು ಸೌಂದರ್ಯ ಉತ್ಪನ್ನಗಳು ಯಾವುದು ಎಂದು ವಿವರಿಸಲಿದ್ದೇವೆ.


1. ಸನ್‍ಸ್ಕ್ರೀನ್ ಸ್ಪ್ರೇ


ಮುಖಕ್ಕೆ ಮೊದಲು ಸನ್‍ಸ್ಕ್ರೀನ್ ಮುಖ್ಯ. ನೀವು ಮಧ್ಯವಯಸ್ಕರು ಅಥವಾ ಅದಕ್ಕಿಂತ ಮೊದಲಿನವರಾದರೆ ಸನ್‍ಸ್ಕ್ರೀನ್ ಮರೆಯಬಾರದು. ನಾವು ಇದನ್ನು ಸಮರ್ಪಕವಾಗಿ ಹಚ್ಚದಿದ್ದರೆ ಇದು ಮುಖದ ಮೇಲೆ ಕೆನೆಯ ರೂಪದ ಲೇಪನವನ್ನು ಸೃಷ್ಟಿ ಮಾಡುತ್ತದೆ. ಆದ್ದರಿಂದ ಕ್ರೀಮ್ ಬದಲು ಸನ್‍ಸ್ಟ್ರೀನ್ ಸ್ಪ್ರೇ ಬಳಸಿದರೆ ಉತ್ತಮ. ಆದ್ದರಿಂದ ವಾಟರ್‌ ರೆಸಿಸ್ಟೆಂಟ್‌ ಮತ್ತು ವಿಶಾಲ-ಸ್ಪೆಕ್ಟ್ರಮ್ ಎಸ್‍ಪಿಎಫ್ 30 ರಕ್ಷಣೆ ಹೊಂದಿರುವ ಸನ್‍ಸ್ಕ್ರೀನ್ ಸ್ಪ್ರೇ ಬಳಸಿ ಮುಖ ವಯಸ್ಸಾದಂತೆ ಕಾಣುವುದನ್ನು ನಿಯಂತ್ರಿಸಬಹುದು.


2. ಐ ಪೆನ್ಸಿಲ್
ಸೌಂದರ್ಯ ಕಣ್ಣಿನಲ್ಲಿ ಅಡಗಿದೆ. ಕಣ್ಣು ಸುಂದರವಾಗಿ ಕಂಡಷ್ಟು ಸೌಂದರ್ಯ ವೃದ್ಧಿಯಾಗುತ್ತದೆ. ಕಣ್ಣುಗಳಿಗೆ ಕಣ್ಣಿನ ಪೆನ್ಸಿಲ್ ಹಚ್ಚಿಕೊಂಡರೆ ಕಣ್ಣಿನ ಸೌಂದರ್ಯಕ್ಕೆ ಮತ್ತಷ್ಟು ಇಂಬು ಕೊಡುತ್ತದೆ. ಇದನ್ನು ಬಳಸಿ ನಿಮ್ಮ ಮೊಗದಲ್ಲಾಗುವ ಬದಲಾವಣೆ ಗಮನಿಸಿ.


3. ಮ್ಯಾಟ್ ಲಿಪ್‍ಸ್ಟಿಕ್
ಯಾವುದೋ ಉತ್ಪನ್ನಗಳನ್ನು ಬಳಸುವುದಕ್ಕಿಂತ ಮ್ಯಾಟ್ ಲಿಪ್‍ಸ್ಟಿಕ್ ತುಟಿಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದು ಅತಿರೇಕವಾಗಿ ಕಾಣುವುದಿಲ್ಲ. ತುಟಿಗಳಿಗೆ ನಾವೀನ್ಯತೆ ಮತ್ತು ಫಿನಿಶಿಂಗ್ ಕೊಡುತ್ತದೆ. ಆದರೆ ಲಿಪ್‍ಸ್ಟಿಕ್ ಹಚ್ಚುವ ಮೊದಲು ಪ್ರೈಮರ್ ಬಳಸುವುದನ್ನು ಮರೆಯಬೇಡಿ.

ಇದನ್ನೂ ಓದಿ: ನೀವು ಕೊರಿಯನ್ ಹುಡುಗಿಯರಂತೆ ಕಾಣಬೇಕಾ? ಹಾಗಿದ್ದರೆ, ಮುಖಕ್ಕೆ ಜಮ್ಸು ಹ್ಯಾಕ್ ಟ್ರೈ ಮಾಡಿ!

4. ಸೆಲ್ಫ್ ಟ್ಯಾನಿಂಗ್ ಮಿಲ್ಕಿ ಲೋಶನ್
ಈ ಸ್ವಯಂ-ಟ್ಯಾನಿಂಗ್ ಲೋಷನ್ ಹೊಳಪನ್ನು ನೀಡುತ್ತದೆ. ಇದು ನಿಮ್ಮ ಮುಖ ಮತ್ತು ದೇಹದ ಮೇಲೆ ಚಿನ್ನದ, ನೈಸರ್ಗಿಕವಾಗಿ ಕಾಣುವ ಕಂದುಬಣ್ಣವನ್ನು ಸೃಷ್ಟಿಸುತ್ತದೆ.


5. ಮರದ ಹೇರ್ ಬ್ರಶ್
ಹೇರ್ ಬ್ರಶ್ ಅನ್ನು ಯಾವಾಗಲೂ ನಿಮ್ಮೊಂದಿಗೆ ಕೊಂಡೊಯ್ಯಿರಿ. ಏಕೆಂದರೆ ಅದು ಅನೇಕ ರೀತಿಯಲ್ಲಿ ನಮಗೆ ಬಳಕೆಗೆ ಬರುತ್ತದೆ. ನಿಮ್ಮ ಕೂದಲನ್ನು ಬಾಚಿಕೊಳ್ಳುವುದರಿಂದ ಕೂದಲ ಆರೈಕೆಯ ಜೊತೆಗೆ ನೆತ್ತಿಯ ಮೇಲೆ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಆ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ವಿಸ್ತೃತ ಬಿರುಗೂದಲುಗಳನ್ನು ಹೊಂದಿರುವವರು ಈ ಮರದ ಪ್ಯಾಡಲ್ ಬ್ರಷ್ ಬಳಸಬೇಕಾಗುತ್ತದೆ.



Youtube Video

ಈ ಐದು ವಸ್ತುಗಳನ್ನು ಬಳಸಿ ಮಹಿಳೆಯರು ತಕ್ಷಣವೇ ತಯಾರಾಗಬಹುದು. ಮುಖ್ಯವಾಗಿ ಬೇಕಾಗುವ ಈ ಐದು ವಸ್ತುಗಳನ್ನು ನಿಮ್ಮ ಬಳಿ ಇರಿಸಿಕೊಂಡರೆ ಸಾಕು, ಸೌಂದರ್ಯವೇ ನಿಮ್ಮ ಬಳಿ ಇದ್ದಂತಾಗುತ್ತದೆ. ಹಾಗಾಗಿ ಇವುಗಳು ಸದಾ ನಿಮ್ಮ ಬ್ಯಾಗ್‍ನಲ್ಲಿರಲಿ.


Published by: Sushma Chakre
First published: June 25, 2021, 3:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories