ಸೌಂದರ್ಯವನ್ನು ಕಾಪಾಡಿಕೊಳ್ಳುವ ವಿಷಯ ಬಂದಾಗ ನಮ್ಮಲ್ಲಿ ಹೆಚ್ಚಿನವರು ತಮ್ಮ ನೆಚ್ಚಿನ ತಾರೆಯರಿಂದ ಪ್ರೇರಣೆ ಪಡೆಯುವುದನ್ನು ಅಲ್ಲಗಳೆಯುವಂತಿಲ್ಲ. ತಾರೆಯರು ತಮ್ಮ ಸೌಂದರ್ಯ ರಕ್ಷಣೆಗೆ ಹಲವಾರು ವಿಧಾನಗಳನ್ನು ಬಳಸುತ್ತಾರೆ. ಅಂತವುಗಳಲ್ಲಿ ಮಂಜುಗಡ್ಡೆ ಅಂದರೆ ಐಸ್ ಕ್ಯೂಬ್ ಬಳಕೆಯೂ ಒಂದು. ಐಸ್ ಕ್ಯೂಬ್ಗಳನ್ನು ಫೇಶಿಯಲ್‍ಗೆ ಬಳಸುವುದರಿಂದ ಹಿಡಿದು ಐಸ್ ನೀರನ್ನು ಬಳಸುವವರೆಗೆ ಬೇರೆ ಬೇರೆ ರೀತಿಯಲ್ಲಿ ಸೌಂದರ್ಯ ಚಿಕಿತ್ಸೆಗೆ ಸೆಲೆಬ್ರಿಟಿಗಳು ಐಸ್ ಅನ್ನು ಉಪಯೋಗಿಸುತ್ತಾರೆ. ಮುಖದ ಮೇಲಿನ ಊತ ಕಡಿಮೆ ಮಾಡಲು, ರಂಧ್ರಗಳ ಗಾತ್ರ ಕುಗ್ಗಿಸಲು ಮತ್ತು ಮುಖಕ್ಕೆ ತಾಜಾ ನೋಟ ನೀಡಲು ಐಸ್ ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.
ಒಬ್ಬೊಬ್ಬ ತಾರೆಯರು ಒಂದೊಂದು ರೀತಿಯಲ್ಲಿ ಐಸ್ ಕ್ಯೂಬ್ಗಳನ್ನು ತಮ್ಮ ಸೌಂದರ್ಯದ ಆರೈಕೆಯಲ್ಲಿ ಬಳಸುತ್ತಾರೆ. ಅದು ಹೇಗೆ? ಇಲ್ಲಿದೆ ಮಾಹಿತಿ:
ಜಾಕ್ವೆಲಿನ್ ಫರ್ನಾಂಡಿಸ್: ಈ ಶ್ರೀಲಂಕಾದ ಚೆಲುವೆ ಐಸ್ ಪ್ಯಾಕನ್ನು ತನ್ನ ಮುಖ ಮತ್ತು ಕಣ್ಣುಗಳಿಗೆ ಲವಲವಿಕೆ ನೀಡಲು ಬಳಸುತ್ತಾರೆ. ಸಾಮಾನ್ಯವಾಗಿ ನನ್ನ ಮುಖವನ್ನು ತಂಪಾಗಿ ಇಡಲು ಮೊಸರು, ಜೇನು ತುಪ್ಪವನ್ನು ಬಳಸುತ್ತೇನೆ. ನಾನು ಮುಖ ಮತ್ತು ಕಣ್ಣುಗಳಿಗೆ ಐಸ್‍ಪ್ಯಾಕ್ ಕೂಡ ಬಳಸುತ್ತೇನೆ, ಆದರೆ ನೇರವಾಗಿ ಅಲ್ಲ. ಐಸ್ ತುಂಡುಗಳನ್ನು ಮಸ್ಲಿನ್ ಬಟ್ಟೆ ಅಥವಾ ಟಿಶ್ಯೂನಲ್ಲಿ ಸುತ್ತಿ, ಅದನ್ನು ಕೆನ್ನೆ ಮತ್ತು ಕಣ್ಣುಗಳ ಮೇಲೆ ನಿಧಾನವಾಗಿ ಇಡುತ್ತೇನೆ ಎನ್ನುತ್ತಾರೆ ಅವರು.
ಆಲಿಯಾ ಭಟ್: ಆಲಿಯಾ ಭಟ್‍ಗೆ ಐಸ್ ಚಿಕಿತ್ಸೆಯ ಮೇಲೆ ಎಲ್ಲಿಲ್ಲದ ನಂಬಿಕೆ. ವೋಗ್ ಪತ್ರಿಕೆಯ ಸಂದರ್ಶನವೊಂದರಲ್ಲಿ, ತಾನು ನಿತ್ಯವೂ ಐಸ್‍ನಿಂದ ಚರ್ಮದ ಆರೈಕೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದರು. ಮುಂಜಾನೆ ಮುಖ ಊದಿಕೊಳ್ಳುವ ಸಮಸ್ಯೆಯಿಂದ ಮುಕ್ತಿ ಪಡೆಯಲು ನಿತ್ಯವೂ ಐಸ್ ಬಳಸುತ್ತೇನೆ ಎಂದಿದ್ದರು ಆಲಿಯಾ.
ಇದನ್ನೂ ಓದಿ: ಒಟಿಟಿ ವೇದಿಕೆಯಲ್ಲಿ ಲಾಂಚ್ ಆಗಲಿದೆ ಹಿಂದಿ ಬಿಗ್ ಬಾಸ್ ಸೀಸ್ನ್ 15: ನಿರೂಪಣೆ ಮಾಡಲಿದ್ದಾರೆ ಕರಣ್ ಜೋಹರ್
ಕತ್ರಿನಾ ಕೈಫ್
ಕತ್ರಿನಾ ಕೈಫ್‍ಗೆ ಫಿಟ್‍ನೆಟ್ ಮಾತ್ರವಲ್ಲ, ಚರ್ಮದ ಆರೈಕೆಯ ಬಗ್ಗೆ ವಿಪರೀತ ಆಸಕ್ತಿ ಇದೆ. ಅವರಿಗೆ ಐಸ್ ಫೇಶಿಯಲ್ ಮೇಲೆ ಅಪಾರ ನಂಬಿಕೆ. 2017ರಲ್ಲಿ ಶೇರ್ ಮಾಡಿದ್ದ ವಿಡಿಯೋವೊಂದರಲ್ಲಿ, ಐಸ್ ತುಂಬಿರುವ ಪಾತ್ರೆಗೆ ತಮ್ಮ ಮುಖವನ್ನು ಮುಳುಗಿಸುವ ದೃಶ್ಯವನ್ನು ಕಾಣಬಹುದು. ವಿಡಿಯೋ ಜೊತೆಗೆ ಕೆಲಸವಿರುವ ಭಾನುವಾರಗಳಲ್ಲಿ ನಿಮ್ಮನ್ನು ಎಚ್ಚರಗೊಳಿಸಲು ಒಳ್ಳೆಯ ಉಪಾಯ ಎಂದು ಬರೆದುಕೊಂಡಿದ್ದರು.
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ