ಈರುಳ್ಳಿ ಸಿಪ್ಪೆಯಿಂದ ಚಹಾ ಮಾಡಬಹುದು, ಗಿಡಗಳಿಗೆ ಗೊಬ್ಬರ ಮಾಡಬಹುದು, ಕೂದಲಿಗೆ ಹಚ್ಚುವ ಬಣ್ಣ ಅಥವಾ ಟಾನಿಕ್ ತಯಾರಿಸಬಹುದು. ಈರುಳ್ಳಿ ಸಿಪ್ಪೆಯಲ್ಲಿ ಎ, ಸಿ, ಈ, ಆ್ಯಂಟಿಆ್ಯಕ್ಸಿಡೆಂಟ್ ಮತ್ತು ಆ್ಯಂಟಿ ಇನ್ಫ್ಲಮೇಟರಿ ಮುಂತಾದ ಅಗತ್ಯ ಪೋಷಕಾಂಶಗಳು. ಕೂದಲ ಆರೋಗ್ಯಕ್ಕಂತೂ ಈರುಳ್ಳಿ ಸಿಪ್ಪೆ ಅತ್ಯಂತ ಉಪಯೋಗಕಾರಿ.
ಹೇರ್ ಡೈ ಆಗಿ ಬಳಸಿ
ಈರುಳ್ಳಿ ಸಿಪ್ಪೆ , ನಿಮ್ಮನ್ನು ಕೂದಲು ಉದುರುವಿಕೆ ಮತ್ತು ಕೂದಲು ಬಿಳಿಯಾಗುವ ಸಮಸ್ಯೆಯಿಂದ ರಕ್ಷಿಸಬಹುದು. ಇದಕ್ಕಾಗಿ ನೀವು ಮಾಡಬೇಕಾದದ್ದು ಏನೆಂದರೆ, 4 ರಿಂದ 5 ಈರುಳ್ಳಿ ಸಿಪ್ಪೆಗಳನ್ನು ಒಂದು ಪಾತ್ರೆಯಲ್ಲಿ ಹಾಕಿ, ಬಳಿಕ ಎರಡು ಕಪ್ ನೀರು ಸೇರಿಸಿ , ಅದನ್ನು ಕುದಿಸಿ. ಬಳಿಕ ಆ ನೀರನ್ನು ಸೋಸಿ, ಕೂದಲಿನ ಬುಡಕ್ಕೆ ಹಚ್ಚಿ. ಅದಾದ 1 ರಿಂದ 2 ಗಂಟೆಗಳ ನಂತರ ಕೂದಲನ್ನು ಶಾಂಪೂ ಹಾಕಿ ತೊಳೆಯಿರಿ. ಈರುಳ್ಳಿ ಸಿಪ್ಪೆಯ ನೀರು ವಾಸನೆ ಇರುವುದರಿಂದ ಶಾಂಪೂ ಹಾಕಿ ತೊಳೆಯುವುದು ಉತ್ತಮ. ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಬಳಸಬಹುದು. ಹೀಗೆ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮಾತ್ರವಲ್ಲ, ಹೊಟ್ಟಿನ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.
ನೈಸರ್ಗಿಕ ಕೂದಲ ಬಣ್ಣ
ಯಾವುದೇ ರಾಸಾಯನಿಕಯುಕ್ತ ಬಣ್ಣ ಉಪಯೋಗಿಸದೇ, ನೈಸರ್ಗಿಕವಾಗಿ ನಿಮ್ಮ ಕೂದಲಿಗೆ ಬಣ್ಣ ಹಚ್ಚಬೇಕಿದೆಯೇ? ಹಾಗಾದರೆ ಈರುಳ್ಳಿ ಸಿಪ್ಪೆಯಿಂದ ನಿಮಗೆ ಖಂಡಿತಾ ಸಹಾಯ ಆಗಬಹುದು. ಒಂದು ಪಾತ್ರೆಯಲ್ಲಿ ಉಪ್ಪು ಮತ್ತು ನೀರನ್ನು ಹಾಕಿ, ಅದಕ್ಕೆ ಈರುಳ್ಳಿ ಸಿಪ್ಪೆ ಹಾಕಿ ಒಂದು ಗಂಟೆಯವರಗೆ ಕುದಿಸಿ. ಬಳಿಕ ರಾತ್ರಿಯಿಡೀ ತಣ್ಣಗಾಗಲು ಬಿಡಿ. ಮುಂಜಾನೆ ಈ ಮಿಶ್ರಣವನ್ನು , ನಿಮ್ಮ ಕೂದಲಿನ ಪ್ರತೀ ಪದರಕ್ಕೂ ಕೂದಲ ಬಣ್ಣದಂತೆ ಹಚ್ಚಿ. 30 ನಿಮಿಷಗಳ ಬಳಿಕ ಒಳ್ಳೆಯ ಶಾಂಪೂ ಹಾಕಿ ಕೂದಲನ್ನು ತೊಳೆಯಿರಿ.
ಗಂಟಲು ಕೆರೆತದಿಂದ ಮುಕ್ತಿ
ಶೀತದಿಂದಾಗಿ ನಿಮ್ಮ ಗಂಟಲು ಕೆರೆತ ಉಂಟಾಗಿದ್ದರೆ, ಈರುಳ್ಳಿ ಸಿಪ್ಪೆಂಯಿಂದ ಪ್ರಯೋಜವಾಗಬಹುದು. ಈರುಳ್ಳಿ ಸಿಪ್ಪೆಗೆ ನೀರು ಹಾಕಿ ಕುದಿಸಿ. ಬಳಿಕ ಆರಲು ಬಿಡಿ. ಆದರೆ ತಣ್ಣಗಾಗುವ ಮೊದಲೇ, ಅಂದರೆ ಕೊಂಚ ಬಿಸಿ ಇರುವಾಗ, ಅದರಿಂದ ಬಾಯಿ ಮುಕ್ಕಳಿಸಿ. ಈರುಳ್ಳಿ ಸಿಪ್ಪೆಯಿಂದ ಚಹಾ ಮಾಡಿ ಕೂಡ ಕುಡಿಯಬಹುದು. ಅದರಿಂದ ಗಂಟಲು ನೋವು ಮತ್ತು ಗಂಟಲ ಕೆರೆತ ಶಮನವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ