Benefits of Onion: ಕಣ್ಣೀರು ತರಿಸುವ ಈರುಳ್ಳಿಯಲ್ಲಿ ಮುಖದ ಕಾಂತಿ ಹೆಚ್ಚಿಸುವ ಗುಣ ಕೂಡ ಇದೆ ಗೊತ್ತಾ?

ಈರುಳ್ಳಿ ದೇಹಾರೋಗ್ಯದ ಜತೆಗೆ ಸೌಂದರ್ಯದ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಅದೇ ರೀತಿಯಾಗಿ ತ್ವಚೆಯ ಸೌಂದರ್ಯ ವೃದ್ಧಿಸಲು ಈರುಳ್ಳಿ ಬಳಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇಸಿಗೆ(Summer)ಯಲ್ಲಿ ಹಸಿ ಈರುಳ್ಳಿ (Onion) ಸೇವನೆಯಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುವುದು ಎಂಬ ಸಂಗತಿ ನಮಗೆಲ್ಲರಿಗೂ ತಿಳಿದಿದೆ.  ದೇಹಾರೋಗ್ಯದ ಜತೆಗೆ ಇದು ಸೌಂದರ್ಯ (Beauty)ದ ಆರೈಕೆಯಲ್ಲೂ ಪ್ರಮುಖ ಪಾತ್ರ ವಹಿಸುವುದು. ಅದೇ ರೀತಿಯಾಗಿ ತ್ವಚೆಯ ಸೌಂದರ್ಯ ವೃದ್ಧಿಸಲು ಈರುಳ್ಳಿ ಬಳಸಬಹುದು. ಇದು ಚರ್ಮ(Skin)ಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆ ಚರ್ಮ ಸುಕ್ಕು, ತುರಿಕೆ ಮತ್ತು ದದ್ದು ಮುಂತಾದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ತ್ವಚೆಯ ಮೇಲೆ ಬಳಸುವುದರಿಂದ  ಆಗುವ ಪ್ರಯೋಜನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

    ಮೊಡವೆ ನಿವಾರಣೆ ಮಾಡುವಂತಹ ಫೇಸ್ ಪ್ಯಾಕ್‌ನ್ನು ತಯಾರಿಸಬಹುದು

    ಈರುಳ್ಳಿ ರಸದಿಂದ ಮುಖಕ್ಕೆ ಮಸಾಜ್ ಮಾಡಿ ಮತ್ತು ಮೊಡವೆ ನಿವಾರಣೆ ಮಾಡುವಂತಹ ಫೇಸ್ ಪ್ಯಾಕ್‌ನ್ನು ಇದರಿಂದ ತಯಾರಿಸಬಹುದು. ಒಂದು ಚಮಚ ಈರುಳ್ಳಿ ರಸ ಮತ್ತು ಒಂದು ಚಮಚ ಆಲಿವ್ ತೈಲ ಅಥವಾ ಬಾದಾಮಿ ತೈಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಚರ್ಮಕ್ಕೆ ಹಚ್ಚಬೇಕು. 15 ನಿಮಿಷ ಬಳಿಕ ತಣ್ಣೀರಿನಿಂದ ತ್ವಚೆಯನ್ನು ಸರಿಯಾಗಿ ತೊಳೆಯಿರಿ.

    ಇದನ್ನೂ ಓದಿ: Diabetes Skin Problem: ಚರ್ಮದಲ್ಲಿ ಕಪ್ಪು ಕಲೆ, ಕಣ್ಣುಗಳ ಊತ ಮಧುಮೇಹ ರೋಗದ ಲಕ್ಷಣ ಆಗಿರಬಹುದು ಎಚ್ಚರಿಕೆ!

    ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ

    ನಿಮಗೆ ಸನ್‌ಬರ್ನ್ ಸಮಸ್ಯೆ ಇದ್ದರೆ, ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಚರ್ಮಕ್ಕೆ ಹಸಿ ಈರುಳ್ಳಿಯನ್ನು ಉಜ್ಜಿ. ಇದರಿಂದ ನಿಮಗೆ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ. ಈರುಳ್ಳಿ ಉತ್ಕರ್ಷಣ ನಿರೋಧಕ ಗುಣಗಳು, ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿದೆ. ಇದಲ್ಲದೆ ಹೆಚ್ಚಿನ ಪ್ರಮಾಣದ ಖನಿಜಗಳು ಸಹ ಏರುಳ್ಳಿಯಲ್ಲಿವೆ. ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

     ಚರ್ಮಕ್ಕೆ ಸಂಬಂಧಿಸಿದ ಕಪ್ಪು ಕಲೆಗಳ ಸಮಸ್ಯೆಯನ್ನು ನಿವಾರಿಸಬಹುದು

    ಈರುಳ್ಳಿ ರಸವು ಚರ್ಮವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಪ್ರಮಾಣದ ಆಂಟಿಆಕ್ಸಿಡೆಂಟ್ಸ್ ಗಳನ್ನು ಹೊಂದಿದೆ. ಇದರಿಂದಾಗಿ ಚರ್ಮಕ್ಕೆ ಸಂಬಂಧಿಸಿದ ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಸಮಸ್ಯೆಯನ್ನು ನಿವಾರಿಸಬಹುದು. ಚರ್ಮದ ಆರೋಗ್ಯ ಸುಧಾರಿಸಲು, ನೀವು ಅರಿಶಿನದೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಮುಖಕ್ಕೆ ಅನ್ವಯಿಸಿ. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ಮುಖ ಹೊಳಪನ್ನು ಪಡೆಯುತ್ತದೆ. ಇದಲ್ಲದೆ, ಉತ್ತಮ ಪರಿಣಾಮಕ್ಕಾಗಿ ನಿಂಬೆ ರಸವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಅನ್ವಯಿಸಬಹುದು . ಇದನ್ನು ಹತ್ತಿಯ ಸಹಾಯದಿಂದ ಮುಖದ ಮೇಲೆ ಹಚ್ಚಿ ನಂತರ 10 ನಿಮಿಷಗಳ ಕಾಲ ಒಣಗಲು ಬಿಟ್ಟು, ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.

    ನೆರಿಗೆ ನಿವಾರಣೆ ಆಗುವುದು ಮತ್ತು ಚರ್ಮವು ಬಿಗಿಯಾಗುವುದು

    ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಮತ್ತು ಅದರ ರಸ ತೆಗೆಯಿರಿ. ಇದರಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಇದರನ್ನು ಸರಿಯಾಗಿ ಮುಖಕ್ಕೆ ಹಚ್ಚಿಕೊಂಡರೆ ಆಗ ನೆರಿಗೆ ನಿವಾರಣೆ ಆಗುವುದು ಮತ್ತು ಚರ್ಮವು ಬಿಗಿಯಾಗುವುದು ಹಾಗೂ ಕಾಂತಿ ಪಡೆಯುವುದು.

    ಇದನ್ನೂ ಓದಿ: Health Tips: ಅನೇಕ ಆರೋಗ್ಯ ಸಮಸ್ಯೆಗಳಿಗೆ ಈ ಕರ್ಬೂಜ ಹಣ್ಣೇ ಮದ್ದು; ಇದರ ಪ್ರಯೋಜನ ಪಡೆದುಕೊಳ್ಳಿ

    ಈರುಳ್ಳಿಯು ಚರ್ಮದ ಬಣ್ಣವನ್ನು ಉತ್ತಮಪಡಿಸುವುದು

    ಈರುಳ್ಳಿಯು ಚರ್ಮವನ್ನು ಶುದ್ಧೀಕರಿಸಿ ಅದರಿಂದ ಚರ್ಮದ ಬಣ್ಣವನ್ನು ಉತ್ತಮಪಡಿಸುವುದು. ಇದಕ್ಕಾಗಿ ಎರಡು ಚಮಚ ಈರುಳ್ಳಿ ರಸ, ಒಂದು ಚಮಚ ಕಡಲೆ ಹಿಟ್ಟು, ಒಂದು ಚಮಚ ಹಾಲು ಮತ್ತು ಒಂದು ಚಮಚ ಜಾಯಿಕಾಯಿ ಹಾಕಿ. ಇದರ ಪೇಸ್ಟ್ ಮಾಡಿಕೊಂಡು ಸರಿಯಾಗಿ ಮುಖಕ್ಕೆ ಹಚ್ಚಿಕೊಳ್ಳಿ. ಇದರ ಬಳಿಕ 15 ನಿಮಿಷ ಬಿಟ್ಟು ತೊಳೆಯಿರಿ. ಉತ್ತಮ ಪರಿಣಾಮಕ್ಕಾಗಿ ನಿಂಬೆ ರಸವನ್ನು ಈರುಳ್ಳಿ ರಸದೊಂದಿಗೆ ಬೆರೆಸಿ ಇದನ್ನು ಹತ್ತಿಯ ಸಹಾಯದಿಂದ ಮುಖದ ಮೇಲೆ ಹಚ್ಚಿ ನಂತರ 10 ನಿಮಿಷಗಳ ಕಾಲ ಒಣಗಲು ಬಿಟ್ಟು, ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ.
    Published by:Swathi Nayak
    First published: