ಸುಂದರ ತ್ವಚೆ(Beautiful Skin)ಹಾಗೂ ಹೊಳೆಯುವ ಮೈಕಾಂತಿ ಸೌಂದರ್ಯದ(Beauty)ಪ್ರತೀಕ ಎಂದು ಬಹಳಷ್ಟು ಜನರು ಭಾವಿಸಿದ್ದಾರೆ. ಚರ್ಮದ ಕಾಂತಿ ಮಾನಸಿಕ(Mental)ಮತ್ತು ದೈಹಿಕ ಆರೋಗ್ಯದ (Physical Health)ಸೂಚಕವೂ ಹೌದು. ಸಾಮಾನ್ಯವಾಗಿ ಕಪ್ಪುಗಿರುವವರು(Black)ಬಿಳಿ ಚರ್ಮ ಪಡೆಯಲು ಕೈಗೆ ಸಿಕ್ಕ ಸಿಕ್ಕ ಕ್ರೀಮ್ಗಳಿಗಾಗಿ(Cream) ದುಡ್ಡು ಖರ್ಚು ಮಾಡುತ್ತಾರೆ. ಕಪ್ಪು ಚರ್ಮ ಇರುವವರು ಬಿಳಿ ತ್ವಚೆ ಪಡೆಯುವುದು ಕಷ್ಟದ ಕೆಲಸವೇನಲ್ಲ, ಇದಕ್ಕಾಗಿ ಚಿಂತಿಸಬೇಕಾಗಿಲ್ಲ. ಸೂರ್ಯನ ಕಿರಣಕ್ಕೆ ಮುಖ ಕಪ್ಪಗಾಗುವುದು ಸಾಮಾನ್ಯ..ಜೊತೆಗೆ ಸರಿಯಾಗಿ ಕಾಳಜಿ ಮಾಡದೇ ಇರುವುದರಿಂದ ಮುಖದ ಕಾಂತಿ ಹಾಳಾಗಲು ಸಾಧ್ಯವಿರುತ್ತದೆ.. ಹೀಗಾಗಿ ಸಿಕ್ಕಸಿಕ್ಕ ಕ್ರೀಮ್ಗಳನ್ನು ಬಳಸುವ ಬದಲು, ಮನೆಯಲ್ಲಿಯೇ ನೈಸರ್ಗಿಕವಾಗಿ ಮುಖದ ಬಣ್ಣ ಬದಲಾಯಿಸಲು ಹಲವಾರು ಮನೆಮದ್ದುಗಳು ಇವೆ..ಆದರೂ ಪ್ರತಿನಿತ್ಯ ನಾವು ಅನ್ನಕೆಂದು ಬೆಳೆಸುವ ಅಕ್ಕಿ ತೊಳೆದ ನೀರಿನಲ್ಲಿ ಸೌಂದರ್ಯದ ಗುಟ್ಟು ಅಡಗಿದೆ..
ಪ್ರತಿ ದಿನ ಅನ್ನ ಮಾಡುವಾಗ ಅಕ್ಕಿ ತೊಳೆದೇ ತೊಳಿತೀವಿ, ಆದ್ರೆ ಆ ನೀರನ್ನು ಸುಮ್ಮನೆ ಎಸೆದು ಬಿಡ್ತೀವಿ. ಬಟ್ ಇನ್ಮುಂದೆ ಹಾಗೆ ಮಾಡದೇ ಶೇಖರಿಸಿ ಇಟ್ಟುಕೊಂಡು ಸೌಂದರ್ಯವನ್ನ ಒಂದು ರೂಪಾಯಿ ಕೂಡ ಖರ್ಚುಮಾಡದೆ ಹೆಚ್ಚಿಸಿಕೊಳ್ಳಬಹುದಾಗಿದೆ.
1) ಚರ್ಮದ ಆರೋಗ್ಯಕ್ಕೆ ಉಪಯೋಗ: ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಆಗಿ ಕೆಲಸ ಮಾಡುತ್ತೆ. ಅತ್ಯಂತ ಕಡಿಮೆ ಬಜೆಟ್ನಲ್ಲಿ ನೀವು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದಾದ ಸುಲಭ ವಿಧಾನ ಇದು. ಅಕ್ಕಿ ತೊಳೆದ ನೀರಿಗೆ ಕಿತ್ತಲೆ ಸಿಪ್ಪೆ, ಲಿಂಬೆಯ ಸಿಪ್ಪೆ, ಗ್ರೀನ್ ಟೀ, ತುಳಸಿ ದಳಗಳು, ಬೇವಿನ ಎಲೆ, ಇವುಗಳಲ್ಲಿ ಯಾವುದಾದ್ರೂ ಒಂದನ್ನು ಮಿಕ್ಸ್ ಮಾಡಿಕೊಂಡು ಬಳಸಿದ್ರೂ ಕೂಡ ನಿಮ್ಮ ಚರ್ಮದ ಆರೋಗ್ಯ ವೃದ್ಧಿಯಾಗಲಿದೆ. ಟ್ರೈ ಮಾಡಿ ನೋಡಿ.
ಇದನ್ನೂ ಓದಿ: ಚಳಿಗಾಲದಲ್ಲಿ ಚರ್ಮ ಒರಟಾಗ್ಬಾರ್ದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
2) ಮುಖದ ಮೇಲಿನ ರಂಧ್ರ ಹೋಗಲಾಡಿಸಲು: ಮುಖದ ಮೇಲೆ ತೆರೆದ ರಂಧ್ರಗಳಿದ್ದರೆ ಅದನ್ನು ಮುಚ್ಚಲು ಸಹ ನೀವು ಅಕ್ಕಿ ನೀರನ್ನು ಬಳಸಬಹುದು. ನೀವು ಅಕ್ಕಿ ನೀರನ್ನು ರೆಫ್ರಿಜರೇಟ್ ನಲ್ಲಿ ಇಟ್ಟು ನಂತರ ಅದನ್ನು ಫೇಶಿಯಲ್ ಟಿಶ್ಯೂ ಅಥವಾ ಹತ್ತಿ ಅಥವಾ ಕಾಟನ್ ಬಟ್ಟೆ ಬಳಸಿ ಮುಖಕ್ಕೆ ಹಚ್ಚಿ. ಸುಮಾರು 10 ನಿಮಿಷಗಳ ಕಾಲ ಬಿಡಿ. ನಂತರ ಸ್ವಚ್ಛವಾದ ನೀರಿನಿಂದ ತೊಳೆಯಿರಿ.
3)ಮುಖದ ಸುಕ್ಕು ತೆಗೆಯಲು: ಅಕ್ಕಿ ನೀರಿನಲ್ಲಿ ಇರುವ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಸುಕ್ಕುಗಳು, ನಸುಕಂದು ಮುಂತಾದ ವಯಸ್ಸಾದ ಸುಕ್ಕು ತೆಗೆದುಹಾಕಲು ಸಹಾಯ ಮಾಡುತ್ತದೆ.
4)ಕೂದಲಿನ ಆರೋಗ್ಯ: ಅಕ್ಕಿ ತೊಳೆದ ನೀರಿನಲ್ಲಿ ಕೂದಲು ತೊಳೆಯುವುದರಿಂದಾಗಿ ಭವಿಷ್ಯದಲ್ಲಾಗುವ ಕೂದಲುದುರುವಿಕೆಯನ್ನು ನಿಯಂತ್ರಿಸಿಕೊಳ್ಳಬಹುದು. ಅಷ್ಟೇ ಅಲ್ಲ ಅಕ್ಕಿ ತೊಳೆದ ನೀರಿನಲ್ಲಿರುವ ಅಮೈನೋ ಆಸಿಡ್ ಅಂಶಗಳುನ ಕೂದಲಿನ ಬೇರನ್ನು ಗಟ್ಟಿಗೊಳಿಸುತ್ತೆ ಮತ್ತು ಕೂದಲು ದಪ್ಪವಾಗಿ, ಸಿಲ್ಕಿಯಾಗಿ ಬೆಳೆಯಲು ನೆರವಾಗುತ್ತೆ.
5)ಮೊಡವೆ ನಿವಾರಣೆ: ಆಂಟಿಯೋಕ್ಸಿಡೆಂಟ್ಗಳಿದ್ದು ಆಂಟಿಸೆಪ್ಟಿಕ್ ಅಂಶಗಳು ಮೊಡವೆಯನ್ನು ಸಂಪೂರ್ಣವಾಗಿ ನಿವಾರಿಸಲಿದೆ. ಒಂದು ರಾತ್ರಿಯಲ್ಲಿ ಈ ಸಮಸ್ಯೆಯನ್ನು ಹೋಗಲಾಡಿಸದೇ ಇದ್ದರೂ ನಿಧಾನಕ್ಕೆ ಮೊಡವೆಗಳನ್ನು ಅದರ ಕಲೆಗಳನ್ನು ಮಾಯವಾಗಿಸುತ್ತದೆ.
6)ಉರಿಯೂತ ಕಡಿಮೆ ಮಾಡಲು: ದದ್ದು ಮತ್ತು ಚರ್ಮದ ಉರಿಯೂತವನ್ನು ಗುಣಪಡಿಸಲು ಅಕ್ಕಿನೀರು ಸಹಾಯ ಮಾಡುತ್ತದೆ. ಹತ್ತಿ ಚೆಂಡನ್ನು ಬಳಸಿ ಸಮಸ್ಯೆಯಿರುವ ಜಾಗದಲ್ಲಿ ಹಚ್ಚಿ ಒಣಗಲು ಬಿಡಿ. ನಂತರ ಅದನ್ನು ನೀರಿನಿಂದ ತೊಳೆಯಿರಿ.
ಇದನ್ನೂ ಓದಿ: ಚಳಿಗಾಲದಲ್ಲಿ ಚರ್ಮದ ಅಂದ ಕಾಪಾಡಲು ಇಲ್ಲಿದೆ ಬೆಸ್ಟ್ ಟಿಪ್ಸ್
7)ಶಾಂಪೂ ಆಗಿ ಬಳಕೆ: ನೀವು ಹರ್ಬಲ್ ಶಾಂಪೂ ಬೇಕೆಂದು ಹುಡುಕುತ್ತಿದ್ದರೆ, ಅಕ್ಕಿ ನೀರನ್ನು ನಿಮ್ಮ ಕೂದಲಿಗೆ ಕ್ಲೆನ್ಸರ್ ಆಗಿ ಬಳಸಬಹುದು. ಇದರಲ್ಲಿ ಅಮೈನೋ ಆಮ್ಲಗಳು ಸಮೃದ್ಧವಾಗಿದ್ದು, ಕೂದಲನ್ನು ಬಲಗೊಳಿಸುತ್ತದೆ.
8)ಕೂದಲು ಬೆಳ್ಳಗಾಗದಂತೆ ತಡೆಯಲು: ಬೂದು ಕೂದಲಿನ ತಡೆಗಟ್ಟುವಿಕೆ- ಕೂದಲನ್ನು ಸ್ವಚ್ಛಗೊಳಿಸಲು ರಾಸಾಯನಿಕ ಭರಿತ ಉತ್ಪನ್ನಗಳನ್ನು ಬಳಸುವುದು ಕೂದಲಿನ ಬೇರುಗಳನ್ನು ಹಾನಿಗೊಳಿಸುತ್ತದೆ. ಇದರಿಂದ ಕೂದಲು ಬೆಳ್ಳಗಾಗಲು ಪ್ರಾರಂಭವಾಗುತ್ತದೆ. ಆದರೆ ಅಕ್ಕಿ ನೀರು ನೈಸರ್ಗಿಕ ರೀತಿಯಲ್ಲಿ ನೆತ್ತಿಯನ್ನು ಸ್ವಚ್ಛಗೊಳಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ