ಅದೆಷ್ಟೋ ಜನರಿಗೆ ಉಗುರು ಅಂದ್ರೆ ಪಂಚ ಪ್ರಾಣವಿರುತ್ತದೆ. ಕೇವಲ ಹುಡುಗಿಯರಿಗೆ ಮಾತ್ರವಲ್ಲ. ಹುಡುಗರಿಗೂ ಕೂಡ ತಮ್ಮ ಉಗುರುಗಳ ಮೇಲೆ ಅಪಾರ ಕಾಳಜಿ ಇರುತ್ತದೆ. ಇದನ್ನು ಯಾವ ರೀತಿಯಾಗಿ ಎಲ್ಲಾ ಕೇರ್ ಮಾಡಿಕೊಳ್ಳಬಹುದು ಎಂದು ನೋಡೋಣ ಬನ್ನಿ.
ಮ್ಯಾನಿಕ್ಯೂರ್ ಮಾಡಿಸೋದು ಮಾತ್ರ ಉಗುರುಗಳನ್ನು ಕೇರ್ ಮಾಡುವ ಮಾರ್ಗವಲ್ಲ. ಅದಕ್ಕಿಂತ ಹೆಚ್ಚಾಗಿ ಸರಳವಾಗಿ ಮನೆಯಲ್ಲಿಯೇ ಉಗುರಿನ ಆರೈಕೆ ಹೇಗೆ ಮಾಡಬಹುದು.
ಹಲವಾರು ಜನರಿಗೆ ಕೈ ಉಗುರುಗಳನ್ನು ಕಚ್ಚುವಂತಹ ಅಭ್ಯಾಸವಿರುತ್ತದೆ. ಇದನ್ನು ಆದಷ್ಟು ತಪ್ಪಿಸಬೇಕು. ಹೊಟ್ಟೆಗೆ ಕೂಡ ಹಾನಿಕಾರಕ. ಬೆರಳುಗಳಿಂದ ಕೊಳೆ ಮತ್ತು ಸೂಕ್ಷ್ಮಾಣುಗಳನ್ನು ನಿಮ್ಮ ಬಾಯಿಗೆ ತರಿಸುತ್ತದೆ.
ನೀವು ಔಟಿಂಗ್ ಹೋಗಿ ಬಂದಾದ ಕೂಡಲೇ ಉಗುರು ಬೆಚ್ಚಗಿನ ನೀರಿನಿಂದ ಚೆನ್ನಾಗಿ ವಾಶ್ ಮಾಡಬೇಕು. ಅದ್ರಲ್ಲಿ ಕುಳಿತಿರುವ ಕೊಳೆಯನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ತೆಗೆದು ಹಾಕುತ್ತದೆ.
ಸೌಂದರ್ಯಕ್ಕಾಗಿ ನೀವು ಉದ್ದ ಉಗುರುಗಳನ್ನು ಜಾಸ್ತಿ ದಿನಗಳವರೆಗೆ ಉದ್ದ ಬಿಡಬೇಡಿ. ಇದು ನಿಮ್ಮ ಆರೋಗ್ಯಕ್ಕೆ ಕೆಟ್ಟದು. ಹೀಗಾಗಿ ಆಗಾಗ ಉಗುರುಗಳನ್ನು ಕಟ್ ಮಾಡಿಕೊಳ್ತಾ ಇರಿ.
ಕೇವಲ ನಿಮ್ಮ ತ್ವಚೆಗೆ ಮಾತ್ರವಲ್ಲ ಉಗುರಿನ ಸೌಂದರ್ಯಕ್ಕೂ ಬಳಸಿ ಕ್ರೀಮ್. ಹೌದು, ನಿಮ್ಮ ಉಗುರು ಕೂಡು ಹೈಡ್ರೇಟ್ ಆಗಿರಬೇಕು. ಇಲ್ಲಾಂದ್ರೆ ಉಗುರುಗಳು ಬೇಗ ಹಾಳು ಆಗುತ್ತೆ. ಹೀಗಾಗಿ ನೀವು ಕ್ರೀಮ್ಗಳನ್ನು ಉಗುರುಗಳಿಗೆ ಹಚ್ಚಿಕೊಂಡ್ರೆ ತುಂಬಾ ಸೂಕ್ತ.
ಹೆಣ್ಣುಮಕ್ಕಳು ಎಂದಿಗೂ ನೀವು ನೈಲ್ಪಾಲೀಶ್ಗಳನ್ನು ಬದಲಾಯಿಸುತ್ತಾ ಇರಬೇಡಿ. ಯಾಕಂದ್ರೆ ಇದು ನಿಮ್ಮ ಉಗುರುಗಳ ಮೇಲೆಯೇ ಪರಿಣಾಮ ಬೀರುವುದು. ಹೀಗಾಗಿ ಕಾಲಿ ಉಗುರುಗಳನ್ನು ಬಿಡಲು ಟ್ರೈ ಮಾಡಿ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ