Home Gardening: ಮನೆಯ ಒಳಗೆ ಯಾವ ಗಿಡಗಳನ್ನು ಬೆಳೆಸುವುದು ಎನ್ನುವ ಗೊಂದಲವಿದ್ದರೆ ಇದನ್ನು ಓದಿ

Home Decor Plants: ಮನೆಯ ಒಳ ಭಾಗದಲ್ಲಿ ಸಣ್ಣ ಸುಂದರ ಗಿಡಗಳು ಮನೆಯ ಅಂದವನ್ನು ಹೆಚ್ಚಿಸುತ್ತದೆ. ಮನೆಯ ಒಳಗೆ ಗಿಡಗಳನ್ನು ಬೆಳೆಸಬೇಕಾದರೆ ಯಾವ ಗಿಡಗಳನ್ನು ಬೆಳೆಸಬೇಕು ಎಂಬುದು ಸಹ ಮುಖ್ಯವಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮನೆಯ ಒಳಗೆ  ಗಿಡಗಳನ್ನು ಹಾಕುವುದರಿಂದ ಮನೆಯ  ಸೌಂದರ್ಯ ಹೆಚ್ಚುತ್ತದೆ. ಮನೆಯ ಮೂಲೆಗಳನ್ನು ಸುಂದರಗೊಳಿಸಲು ಅಥವಾ ಮನೆಯೊಳಗೆ ಪ್ರಕೃತಿಯ ತಾಜಾತನವಿರಲು ನಾವೆಲ್ಲರೂ  ಮನೆಯ ಒಳಗೆ ಸಸ್ಯಗಳನ್ನು ಬೆಳೆಸಲು ಇಷ್ಟಪಡುತ್ತೇವೆ. ಈ ಸಸ್ಯಗಳು ಕೇವಲ ಮನೆಯ ಸೌಂದರ್ಯವನ್ನು ಮಾತ್ರವಲ್ಲದೇ ನಮ್ಮ ಆರೋಗ್ಯವನ್ನು ಸಹ ವೃದ್ಧಿಸಲು ಸಹಾಯ ಮಾಡುತ್ತದೆ. ಇನ್ನು ಮನೆಯ ಒಳಗೆ ಯಾವ ಸಸ್ಯಗಳನ್ನು ಬೆಳೆಸಬೇಕು ಎಂಬ ಗೊಂದಲ ಹೆಚ್ಚಿನ ಜನರನ್ನು ಕಾಡುತ್ತದೆ. ಈ ಗೊಂದಲವನ್ನು ಬಗೆಹರಿಸುವ ಪ್ರಯತ್ನ ನಮ್ಮದು. ಹಾಗಾದ್ರೆ ನಿಮ್ಮ ಮನೆಯಲ್ಲಿ ಯಾವ ಸಸ್ಯಗಳನ್ನು ಬೆಳೆಸಬೇಕು ಎಂಬುದು ಇಲ್ಲಿದೆ. 

ಜೇಡ್ ಸಸ್ಯಗಳು

ಇವುಗಳು ಬುಷ್ ತರಹದ ಸಸ್ಯಗಳು, ಇವುಗಳನ್ನು ಟ್ರಿಮ್ ಮಾಡುವುದು ಸುಲಭ.  ಈ ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ, ಜೊತೆಗೆ ಕೆಲವೊಂದು ಸಂದರ್ಭದಲ್ಲಿ ಈ ಸಸ್ಯಗಳು ಪಿಂಕ್ ಬಣ್ಣದ ಹೂವನ್ನು ನೀಡುತ್ತವೆ ಮತ್ತು ಸೂರ್ಯನ ಬೆಳಕಿನಲ್ಲಿ ಕೆಂಪು ಅಥವಾ ಹಳದಿ ಬಣ್ಣಗಳ ಹೂವನ್ನು ಸಹ ಬೆಳೆಯಬಹುದು. ಇನ್ನು ಇದನ್ನು ಬೆಳೆಸುವುದು ಸಹ ಸುಲಭ, ಹೆಚ್ಚು ಸಮಯವಾಗಲಿ ಅಥವಾ ಹಣವಾಗಲಿ ಬೇಕಾಗುವುದಿಲ್ಲ. ಈ ಸಸ್ಯಗಳಿಗೆ ಬೇಸಿಗೆಯಲ್ಲಿ ಕಡಿಮೆ ನೀರು ಬೇಕಾಗುತ್ತದೆ ಹಾಗೂ  ಚಳಿಗಾಲದಲ್ಲಿ ಇನ್ನು ಕಡಿಮೆ ನೀರು ಬೇಕಾಗುತ್ತದೆ.

ಸ್ನೇಕ್ ಗಿಡಗಳು

ಈ ಗಿಡಗಳು ಮನೆಯ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಇದರ ಆರೈಕೆ ಕೂಡ ಬಹಳ ಸುಲಭ. ಈ ಗಿಡಗಳು ಗಾಳಿಯನ್ನು ಶುದ್ಧ ಮಾಡುತ್ತದೆ. ಗಾಳಿಯಲ್ಲಿರುವ ವಿಷವನ್ನು ಹೊರಹಾಕುತ್ತದೆ. ಅಲ್ಲದೇ, ಇದು ರಾತ್ರಿಯಲ್ಲಿ ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಹಾಕುವ ಕೆಲವು ಸಸ್ಯಗಳಲ್ಲಿ ಒಂದು. ಈ ಗಿಡಗಳಿಗೆ ಹೆಚ್ಚು ಬೆಳಗಿನ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಮಣ್ಣು ಸಹ ನಿರ್ದಿಷ್ಟವಾಗಿ ಯಾವುದೇ ಮಣ್ಣು ಬೇಡ, ಯಾವ ಮಣ್ಣು  ಸಿಗುತ್ತದೆಯೋ ಅದರಲ್ಲಿ ಈ ಗಿಡಗಳನ್ನು ಬೆಳೆಸಬಹುದು. ಇದನ್ನು ಸರಿಯಾಗಿ ಬೆಳೆಸಲು ಬೇಕಾಗಿರುವ ಮುಖ್ಯ ಅಂಶವೆಂದರೆ ಹೆಚ್ಚು ನೀರು ಹಾಕುವ ಅವಶ್ಯಕತೆ ಇಲ್ಲ.

ಇದನ್ನೂ ಓದಿ: ಚರ್ಮದ ಕಾಂತಿ ಹೆಚ್ಚಿಸಲು ಕಾಫಿ ಪುಡಿ ಎಷ್ಟು ಪರಿಣಾಮಕಾರಿ ಗೊತ್ತಾ?

ಲೋಳೆಸರ

ಅಲೋವೆರಾ ಗಿಡಗಳು ಮಾನವ ದೇಹವನ್ನು ಶಮನಗೊಳಿಸುವ ಮತ್ತು ಹಲವಾರು ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳಿಗಾಗಿ ಹೆಚ್ಚು ಪ್ರಸಿದ್ಧವಾಗಿದೆ. ಇದರಲ್ಲಿ ಹೆಚ್ಚು ನೀರಿನ ಅಂಶಗಳಿದ್ದು, ಮನೆಯ ಒಳಗೆ ಮಡಕೆಯಲ್ಲಿ ಚನ್ನಾಗಿ ಬೆಳೆಯುತ್ತದೆ. ಇದು ಯಾವುದೇ ರೀತಿಯಲ್ಲಿ  ಹೆಚ್ಚು ಕಾಳಜಿವಹಿಸುವ ಅಗತ್ಯವಿಲ್ಲ.  ಇನ್ನು ಇದಕ್ಕೆ ಹೆಚ್ಚು ಸೂರ್ಯನ ಬೆಳಕು ಬಿದ್ದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಅಲ್ಲದೇ ಕಳ್ಳಿ ಗಿಡದಂತೆ ಅಲೋವೆರಾಗೆ ಸಹ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ.

ಮನಿ ಪ್ಲಾಂಟ್

ಮನಿ ಪ್ಲಾಂಟ್ ಎಲೆಗಳು ವಿಭಿನ್ನವಾಗಿದ್ದು, ಅದು ಕೆಲವೊಮ್ಮೆ ನಾಣ್ಯಗಳಂತೆ ಕಾಣುತ್ತದೆ. ಈ ಸಸ್ಯವು ಆಕರ್ಷಕವಾಗಿ ಕಾಣುತ್ತದೆ. ಆದರೆ ಮನೆಗೆ ಸಮೃದ್ಧಿಯನ್ನು ತರುತ್ತದೆ. ಈ ಸಸ್ಯಗಳನ್ನು ಕಡಿಮೆ ಬೆಳಕು ಮತ್ತು ಮರಳಲ್ಲಿ ಇರಿಸಿ ಮತ್ತು ವಾರಕ್ಕೊಮ್ಮೆ ನೀರು ಹಾಕಿದರೆ ಚನ್ನಾಗಿ ಬೆಳೆಯುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Sandhya M
First published: