ಸುಂದರ (Beautiful), ಉದ್ದ, ಕಪ್ಪು, ದಪ್ಪ ಕೂದಲು (Thick Hair) ಎಲ್ಲರಿಗೂ ಬೇಕು ಅನ್ನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಸುಂದರ ಕೂದಲು ಹೊಂದಲು ಹಲವು ರಾಸಾಯನಿಕ ಉತ್ಪನ್ನಗಳ ಬಳಕೆ ಮಾಡಲಾಗುತ್ತದೆ. ಇದನ್ನು ಬಿಟ್ಟು ಮನೆಯಲ್ಲೇ ಕೂದಲಿನ ಆರೈಕೆ (Hair Care) ಮಾಡುವುದು ತುಂಬಾ ಉತ್ತಮ. ಇದು ಖಂಡಿತವಾಗಿ ಕೂದಲನ್ನು ದೀರ್ಘ ಕಾಲ ಸುಂದರವಾಗಿ ಮತ್ತು ಹೆಲ್ದೀ (Healthy) ಆಗಿ ಕಾಣುವಂತೆ ಮಾಡುತ್ತದೆ. ಅದಾಗ್ಯೂ ನೀವು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳ ಬಳಕೆ ಮಾಡಿದ್ರೆ ಹಲವು ಅಡ್ಡ ಪರಿಣಾಮ ಅನುಭವಿಸಬಹುದು. ಕೂದಲು ತುದಿ ಸೀಳುವುದು, ಕೂದಲು ಬಿರುಸಾಗುವುದು, ಕೂದಲು ಒಣಗುವುದು, ಬಿಳಿ ಆಗುವುದು ಸೇರಿದಂತೆ ಹಲವು ಸಮಸ್ಯೆ ಉಂಟಾಗುತ್ತದೆ.
ಕೂದಲ ಆರೈಕೆಗೆ ಮನೆಮದ್ದೇ ಬೆಸ್ಟ್
ಇದನ್ನು ತಡೆಯಲು ನೀವು ಕೂದಲ ವಿನ್ಯಾಸಗೊಳಿಸಲು ಶಾಖ, ಹೇರ್ ಸ್ಪ್ರೇ, ಬಣ್ಣ ಹಾಕುವುದನ್ನು ಮಾಡಿದರೆ ಇನ್ನಷ್ಟು ಬೇಗ ಕೂದಲು ಹಾಳಾಗುತ್ತದೆ. ಇದರ ಜೊತೆಗೆ ಕೂದಲು ಹಾಳಾಗಲು ಅನೇಕ ಅಂಶಗಳು ಕಾರಣವಾಗಿವೆ.
ಅವುಗಳಲ್ಲಿ ಮಾಲಿನ್ಯ, ಧೂಳು, ಬಿಸಿಲು ಮತ್ತು ನೀರು ಮುಖ್ಯ ಕಾರಣವಾಗಿವೆ. ಇವುಗಳು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಕೂದಲು ನಿರ್ಜೀವವಾಗಿ ಕಾಣಲು ಕಾರಣವಾಗುತ್ತವೆ.
ಸುಂದರ ಕೂದಲಿಗಾಗಿ ಮನೆಮದ್ದು
ಮಹಿಳೆಯರು ಸುಂದರವಾಗಿ ಕಾಣಲು ತಮ್ಮ ಕೂದಲಿಗೆ ಸಾಕಷ್ಟು ಹಣ ಖರ್ಚು ಮಾಡ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಉತ್ಪನ್ನಗಳು ರಾಸಾಯನಿಕ ಹೊಂದಿರುತ್ತದೆ. ಇದು ಕೂದಲನ್ನು ದೀರ್ಘಕಾಲ ಕಾಪಾಡಲು ಆಗಲ್ಲ. ಇದರಿಂದ ಬೇಗ ಕೂದಲು ಹಾಳಾಗುತ್ತದೆ.
ಹಾಗಾಗಿ ಇಲ್ಲಿ ನಾವು ಹೇರ್ ಮಾಸ್ಕ್ ಮನೆಯಲ್ಲೇ ಮಾಡುವುದು ಹೇಗೆ ಅಂತಾ ನೋಡೋಣ. ನೀವು ಸುಲಭವಾಗಿ ಗೃಹೋಪಯೋಗಿ ವಸ್ತುಗಳನ್ನು ಬಳಸಿ ಹೇರ್ ಮಾಸ್ಕ್ ತಯಾರಿಸಬಹುದು. ಈ ಹೇರ್ ಮಾಸ್ಕ್ಗಳಿಂದ ಯಾವುದೇ ಅಡ್ಡ ಪರಿಣಾಮದ ಭಯವಿಲ್ಲ. ಕೂದಲು ಕೂಡ ಹೊಳೆಯುತ್ತದೆ ಮತ್ತು ಬಲಿಷ್ಠವಾಗುತ್ತದೆ.
ಆವಕಾಡೊ ಮತ್ತು ತೆಂಗಿನ ಎಣ್ಣೆ ಹೇರ್ ಮಾಸ್ಕ್
1 ಆವಕಾಡೊ, 3 ಚಮಚ ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಒಂದು ಬಟ್ಟಲಿನಲ್ಲಿ ಸಂಪೂರ್ಣ ಆವಕಾಡೊವನ್ನು ಸ್ಮ್ಯಾಶ್ ಮಾಡಿ. ಅದಕ್ಕೆ 2 ಚಮಚ ತೆಂಗಿನ ಎಣ್ಣೆ ಸೇರಿಸಿ , ಮಿಶ್ರಣ ಮಾಡಿ. ಈಗ ಕೈ ಅಥವಾ ಬ್ರಷ್ ಸಹಾಯದಿಂದ ಕೂದಲಿಗೆ ಅನ್ವಯಿಸಿ.
ಆವಕಾಡೊ ಏಕೆ ವಿಶೇಷವಾಗಿದೆ?
ಅವಕಾಡೊದಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಆರ್ಧ್ರಕ ಗುಣ ಹೊಂದಿದೆ. ಆವಕಾಡೊ ನೈಸರ್ಗಿಕ ತೈಲ ಹಾಗೂ ಬಹುಅಪರ್ಯಾಪ್ತ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲ ಹೊಂದಿದೆ. ಇದು ನೈಸರ್ಗಿಕ ಎಣ್ಣೆ ಕೂದಲಿಗೆ ಪ್ರಯೋಜನ ನೀಡುತ್ತದೆ.
ಆವಕಾಡೊ ವಿಟಮಿನ್ ಹೊಂದಿದೆ. ಇದು ನೆತ್ತಿಯನ್ನು ಪೋಷಿಸುತ್ತದೆ. ಕೂದಲು ಆರೋಗ್ಯಕರ, ಹೊಳೆಯುವ ಮತ್ತು ಹೈಡ್ರೇಟೆಡ್ ಆಗುತ್ತದೆ. ಆವಕಾಡೊ ದೇಹದ ಬಯೋಟಿನ್ ಕೊರತೆ ನಿವಾರಿಸಿ ಕೂದಲು ಬೆಳವಣಿಗೆಗೆ ಸಹಕಾರಿ.
ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ಕೂದಲಿಗೆ ಉತ್ತಮ ನೈಸರ್ಗಿಕ ಪೋಷಣೆ ನೀಡುತ್ತದೆ. ಪೋಷಕಾಂಶ ಸಮೃದ್ಧ ತೆಂಗಿನೆಣ್ಣೆಯು ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಮೊಟ್ಟೆ, ಬಾಳೆಹಣ್ಣು ಮತ್ತು ಆಲಿವ್ ಎಣ್ಣೆ ಹೇರ್ ಮಾಸ್ಕ್
ಒಂದು ಒಡೆದ ಮೊಟ್ಟೆ, ಒಂದು ಹಿಸುಕಿದ ಬಾಳೆಹಣ್ಣು, 4 ಚಮಚ ಹಾಲು, 2 ಟೀ ಸ್ಪೂನ್ ಜೇನುತುಪ್ಪ, ಐದು ಟೀ ಸ್ಪೂನ್ ಆಲಿವ್ ಎಣ್ಣೆ ಬೇಕು. ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ ಮಿಶ್ರಣ ಮಾಡಿ. ಪೇಸ್ಟ್ ಅನ್ನು ನೆತ್ತಿ ಹಾಗೂ ಸಂಪೂರ್ಣ ಕೂದಲಿಗೆ ಅನ್ವಯಿಸಿ. 40 ನಿಮಿಷ ಬಿಟ್ಟು, ಶಾಂಪೂ ಬಳಸಿ ತೊಳೆಯಿರಿ.
ಮೊಟ್ಟೆ
ಬಯೋಟಿನ್ ಕೂದಲಿನ ವಿನ್ಯಾಸ ಕಾಪಾಡುತ್ತದೆ. ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಸುತ್ತದೆ. ಮೊಟ್ಟೆಗಳು ಬಯೋಟಿನ್ನ ಉತ್ತಮ ಮೂಲ, ಕೂದಲನ್ನು ಹೈಡ್ರೀಕರಿಸುತ್ತದೆ.
ಇದನ್ನೂ ಓದಿ: 30 ವಯಸ್ಸಿನ ನಂತರ ಈ ಆಹಾರಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ!
ಬಾಳೆಹಣ್ಣು
ಬಾಳೆಹಣ್ಣು ಕೂದಲನ್ನು ಬಲವಾಗಿ ಮತ್ತು ದಪ್ಪವಾಗಿಸುತ್ತದೆ. ಆ್ಯಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣವು ತಲೆಹೊಟ್ಟು ರೋಗಲಕ್ಷಣಗಳಿಂದ ಪರಿಹಾರ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ