ಬಿಸಿಲಿನ ಬೇಗೆಯಿಂದ ತ್ವಚೆಯನ್ನು ಕಾಪಾಡಲು ಸೌತೆಕಾಯಿ ಉತ್ತಮ ಮನೆಮದ್ದು

ನಿಮ್ಮ ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದಲ್ಲಿ ಸೌತೆಕಾಯಿ ಈ ಕಲೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ದಿನ 8 ರಿಂದ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಸೌತೆಕಾಯಿ ತುಂಡನ್ನು ಇಡಿ. ಇದು ಕಣ್ಣಿನ ಸುತ್ತ ಮೂಡಿರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ.

news18-kannada
Updated:December 23, 2019, 8:21 PM IST
ಬಿಸಿಲಿನ ಬೇಗೆಯಿಂದ ತ್ವಚೆಯನ್ನು ಕಾಪಾಡಲು ಸೌತೆಕಾಯಿ ಉತ್ತಮ ಮನೆಮದ್ದು
ಪ್ರತಿಯೊಬ್ಬರ ಮನೆಯಲ್ಲೂ ಸೌತೆಕಾಯಿ ಇದ್ದೇ ಇರುತ್ತದೆ. ಆ ಸೌತೆಕಾಯಿಯನ್ನು ನುಣ್ಣಗೆ ರುಬ್ಬಿ ಮುಖಕ್ಕೆ ಫೇಸ್​ಪ್ಯಾಕ್​ನಂತೆ ಹಾಕಿಕೊಳ್ಳಬಹುದು.
  • Share this:
ಬೇಸಿಗೆ ಕಾಲದಲ್ಲಿ ಬಿಸಿಲ ಧಗೆಯಿಂದ ಪಾರಾಗಲು ನಾನಾ ರೀತಿಯ ಕಷ್ಟ ಅನುಭವಿಸುತ್ತೇವೆ. ಈ ಕಾಲದಲ್ಲಿ ಹೊರಗೆ ಹೋಗುವುದೆಂದರೆ ಬೆಂಕಿಯ ಜ್ವಾಲೆಯ ಮಧ್ಯೆ ನಡೆದಾಡಿದಂತೆ. ಆದರೂ ಅನಿವಾರ್ಯವಾಗಿ ನಾವು ಹೊರ ಹೋಗಲೇ ಬೇಕಾಗುತ್ತದೆ. ಇದರಿಂದಾಗಿ ಚರ್ಮದಲ್ಲಿ ಕಪ್ಪು ಕಲೆಗಳು ಅಥವಾ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತವೆ. 

ಹೀಗಾದಾಗ ನಮ್ಮ ತ್ವಚೆಯ ಆರೈಕೆಗೆ ಮತ್ತು ಆರೋಗ್ಯದ ಕಾಳಜಿಗೆ, ಅದರಲ್ಲು ಮುಖ್ಯವಾಗಿ ಬೇಸಿಗೆ ಕಾಲಕ್ಕೆ ಸೌತೆಕಾಯಿ ರಾಮಬಾಣ ಎಂದೇ ಹೇಳಬಹುದು.

ಇದು ಚರ್ಮಕ್ಕೆ ಹಿತ ನೀಡುವುದಲ್ಲದೆ ನಮ್ಮನ್ನು ಆರೋಗ್ಯಕರವಾಗಿರಿಸುತ್ತದೆ. ಇದರಲ್ಲಿ ಶೇ. 95ರಷ್ಟು ಪ್ರಮಾಣ ನೀರಿನಾಂಶವಿದ್ದು, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಮತ್ತು ನಿಮ್ಮನ್ನು ಕ್ರಿಯಾಶೀಲರಾಗಿ ಇರಿಸಲು ಅನೇಕ ರೀತಿಯಲ್ಲಿ ಸಹಾಯ ಮಾಡುತ್ತದೆ.

ಸೌತೆಕಾಯಿಯಲ್ಲಿ ಅಧಿಕ ಪ್ರಮಾಣದ ಪೊಟ್ಯಾಷಿಯಂ ಹಾಗೂ ಮೆಗ್ನೀಷಿಯಂ ಅಂಶಗಳಿದ್ದು, ಇವು ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ. ಜತೆಗೆ ಇದರಲ್ಲಿರುವ ಹೆಚ್ಚಿನ ನೀರಿನಾಂಶ, ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುವುದಕ್ಕೆ ಸಹಾಯ ಮಾಡುತ್ತದೆ.

ಸೌತೆಕಾಯಿ ಜ್ಯೂಸ್​ ತಯಾರಿಸಿ ನಿಮ್ಮ ಚರ್ಮದ ಮೇಲೆ ಲೇಪಿಸಿ. ಇದರಲ್ಲಿರುವ ಪೊಟ್ಯಾಷಿಯಂ ಅಂಶ ಚರ್ಮವನ್ನು ಶುದ್ಧಗೊಳಿಸಿ, ಒಣ ಚರ್ಮವನ್ನು ಒದಗಿಸುತ್ತದೆ. ಜತೆಗೆ ಯೌವ್ವನ ಭರಿತ ತ್ವಚೆ ನಿಮ್ಮದಾಗಿಸುತ್ತದೆ.

ನಿಮ್ಮ ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದಲ್ಲಿ ಸೌತೆಕಾಯಿ ಈ ಕಲೆಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಪ್ರತಿ ದಿನ 8 ರಿಂದ 10 ನಿಮಿಷಗಳ ಕಾಲ ಕಣ್ಣಿನ ಮೇಲೆ ಸೌತೆಕಾಯಿ ತುಂಡನ್ನು ಇಡಿ. ಇದು ಕಣ್ಣಿನ ಸುತ್ತ ಮೂಡಿರುವ ಕಪ್ಪು ಕಲೆಗಳನ್ನು ನಿವಾರಣೆ ಮಾಡುತ್ತದೆ.

ಸೌತೆಕಾಯಿ ಜ್ಯೂಸ್ ಅ​ನ್ನು ಲಿಂಬೆ ಹಣ್ಣಿನ ಜ್ಯೂಸ್​​​ನೊಂದಿಗೆ ಬೆರೆಸಿ ಚರ್ಮದ ಮೇಲೆ ಲೇಪಿಸಿ. ಸುಮಾರು 10 ರಿಂದ 15 ನಿಮಿಷಗಳ ಕಾಲ ಹಾಗೆ ಬಿಟ್ಟು, ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ಇದು ಸೂರ್ಯನ ಕಿರಣದಿಂದ ಆಗಬಹುದಾದ ಕಪ್ಪು ಕಲೆಗಳಿಂದ ತ್ವಚೆಯನ್ನು ರಕ್ಷಿಸುತ್ತದೆ.ಸೌತೆಕಾಯಿಯ ಮತ್ತೊಂದು ಉತ್ತಮ ಅಂಶವೆಂದರೆ ಹೊಟ್ಟೆಯನ್ನು ತಂಪಾಗಿರುವಂತೆ ನೋಡಿಕೊಳ್ಳುತ್ತದೆ. ಜತೆಗೆ ಉತ್ತಮ ಉಸಿರಾಟಕ್ಕೆ ಸಹಾಯ ಮಾಡುತ್ತದೆ . ಸುಮಾರು 30 ಸೆಕೆಂಡ್​ಗಳ ಕಾಲ ಸೌತೆಕಾಯಿ ತುಂಡನ್ನು  ನಾಲಿಗೆಯ ಮೇಲಿಡಿ. ಇದು ಉಸಿರಾಟದಲ್ಲಿ ಬೆರೆತಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಶುದ್ಧ ಉಸಿರಾಟಕ್ಕೆ ಎಡೆ ಮಾಡಿಕೊಡುತ್ತದೆ.

ಇದನ್ನೂ ಓದಿ: ರಾಬರ್ಟ್​ ಚಿತ್ರದ ದರ್ಶನ್ ಲುಕ್ ಲೀಕ್..!

ಸೌತೆಕಾಯಿ ಬೀಜಗಳಲ್ಲಿ ಪೊಟ್ಯಾಷಿಯಂ, ವಿಟಮಿನ್ ಇ ಅಂಶ ಹೇರಳವಾಗಿದ್ದು, ಸುಕ್ಕುಗಳ ಅಥವಾ ಕಲೆಗಳ ನಿವಾರಣೆ ಮಾಡುತ್ತದೆ. ಇನ್ನು ನೀರಿಗೆ ಸೌತೆಕಾಯಿ ಬೀಜಗಳನ್ನು ಮಿಶ್ರಣ ಮಾಡಿ ನಿಯಮಿತವಾಗಿ ಸೇವಿಸುತ್ತಿದ್ದರೆ ಆರೋಗ್ಯಕ್ಕೆ ಒಳ್ಳೆಯದು. ಜತೆಗೆ ನಿಮ್ಮ ಚರ್ಮವನ್ನು ಸುಂದರವಾಗಿಡಲು ಇದು ಉತ್ತಮ ವಿಧಾನವಾಗಿದೆ.

ಇದನ್ನೂ ಓದಿ: ಮುಗಿಲ್​​ಪೇಟೆಯ ಮೂಗುತಿ ಸುಂದರಿ ಇವರೇ ನೋಡಿ

Published by: zahir
First published: December 23, 2019, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading