• Home
  • »
  • News
  • »
  • lifestyle
  • »
  • Holiday Plan: ರಜೆ ಕಳೆಯಲು ಕರ್ನಾಟಕದ ಈ ಸುಂದರ ಬೀಚ್​ಗಳು ಬೆಸ್ಟ್ ಅಂತೆ

Holiday Plan: ರಜೆ ಕಳೆಯಲು ಕರ್ನಾಟಕದ ಈ ಸುಂದರ ಬೀಚ್​ಗಳು ಬೆಸ್ಟ್ ಅಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Beach Destinations of Karnataka: ಕರ್ನಾಟಕದಲ್ಲಿ ವಿಶ್ವದ ಅತ್ಯಂತ ಆಕರ್ಷಕವಾದ ಕಡಲತೀರಗಳಿವೆ. ಅವುಗಳಿಗೆ ಒಮ್ಮೆಯಾದರೂ ನೀವು ವಿಸಿಟ್​ ಮಾಡಲೇಬೇಕು.

  • Share this:

ಸಂತೋಷದ ಕೀಲಿಕೈ (Happiness Key) ನಮ್ಮ ಕೈನಲ್ಲಿಯೇ ಇರುತ್ತದೆ. ಅದರಲ್ಲೂ ಸುಂದರ ಕಡಲ ತೀರದಲ್ಲಿ (Beach) ಕುಳಿತು ಪ್ರಕೃತ್ತಿಯನ್ನು (Nature)  ಅನುಭವಿಸುವುದಕ್ಕಿಂತ ಬೇರೆ ಸಂತೋಷ ಎಲ್ಲಿದೆ ಹೇಳಿ. ಕಡಲತೀರದ ವಿಹಾರವು ನಿಮಗೆ ಸಂತೋಷವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೆಯೇ, ಕರ್ನಾಟಕದಲ್ಲಿ (Karnataka) ವಿಶ್ವದ ಅತ್ಯಂತ ಆಕರ್ಷಕವಾದ ಕಡಲತೀರಗಳಿವೆ. ಅವುಗಳಿಗೆ ಒಮ್ಮೆಯಾದರೂ ನೀವು ವಿಸಿಟ್​ ಮಾಡಲೇಬೇಕು. ಹಾಗಾದ್ರೆ ಈ ರಜೆಯಲ್ಲಿ ಯಾವೆಲ್ಲಾ ಬೀಚ್​ಗಳಿಗೆ ಟ್ರಿಪ್​ (Trip) ಹೋಗಬಹುದು ಎಂದು ಯೋಚನೆ ಮಾಡ್ತಿದ್ರೆ ಕೆಲ ಸಲಹೆ ಇಲ್ಲಿದೆ. 


ಓಂ ಬೀಚ್‌


ಸಂಸ್ಕೃತದಲ್ಲಿ ಓಂ ಪದವನ್ನು ಹೋಲುವ ಅರ್ಧಚಂದ್ರಾಕೃತಿಯ ರೀತಿ ಈ ಬೀಚ್​ ಇರುವುದರಿಂದ ಈ ಬೀಚ್‌ಗೆ ಈ ಹೆಸರು ಬಂದಿದೆ.  ಸಮುದ್ರ ಮತ್ತು ಆಕಾಶದ ಅದ್ಭುತ ನೋಟವನ್ನು ನೀಡುವ ಕಡಲತೀರದ ವಕ್ರರೇಖೆಯನ್ನು ನೀವು ಮರೆಯುವುದಿಲ್ಲ. ಈ ಕಡಲತೀರದಲ್ಲಿ ನಿಮ್ಮ ಎಲ್ಲಾ ಒತ್ತಡವನ್ನು ಮರೆತು ನೀವು ವಿಹರಿಸಬಹುದು.


ಪಣಂಬೂರು ಬೀಚ್


ಕರ್ನಾಟಕದ ಸ್ವಚ್ಛ ನಗರವಾದ ಮಂಗಳೂರಿನ ಹೃದಯಭಾಗದಲ್ಲಿರುವ ಪಣಂಬೂರು ಬೀಚ್ ರಾಜ್ಯದಲ್ಲಿಯೇ ಬೆಸ್ಟ್​ ಬೀಚ್ ಎಂದು ಹೆಸರು ಪಡೆದಿದೆ. ಇಲ್ಲಿನ ಸೌಂದರ್ಯದಿಂದ ನೀವು ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ರಜಾದಿನಗಳಿಗೆ ಸೂಕ್ತವಾದ ಸ್ಥಳವಾಗಿದೆ ಏಕೆಂದರೆ ನೀವು ಇಲ್ಲಿ ಕುದುರೆ ಸವಾರಿ ಮತ್ತು ರೋಡ್​ ಸೈಡ್​ ಆಹಾರವನ್ನು ಆನಂದಿಸಬಹುದು. ಗಾಳಿಪಟ ಉತ್ಸವದ ಸಮಯದಲ್ಲಿ ಈ ಬೀಚ್‌ಗೆ ಹೋಗುವುದು ಒಂದು ಸುಂದರ ಅನುಭವ ನೀಡುತ್ತದೆ.


ಕುಡ್ಲೆ ಬೀಚ್


ಕರ್ನಾಟಕದಲ್ಲಿ ಪ್ರವಾಸಿಗರು ರಸ್ತೆ ಪ್ರವಾಸದ ಸಮಯದಲ್ಲಿ ಹೆಚ್ಚಾಗಿ ಭೇಟಿ ನೀಡುವ ಸ್ಥಳವೆಂದರೆ ಕುಡ್ಲೆ ಬೀಚ್. ಇದು ನಗರದ ಜೀವನದ ಜಂಜಾಟದಿಂದ ದೂರವಿರುವ ಸಂಪೂರ್ಣ ಶಾಂತಿಯುತ ಸ್ಥಳವಾಗಿದೆ.
 ಗೋಕರ್ಣ ಬೀಚ್


ನೀವು ಇದನ್ನು ಕರ್ನಾಟಕದ ಪ್ರಸಿದ್ಧ ಕಡಲತೀರಗಳಲ್ಲಿ ಒಂದೆಂದು ಕರೆಯಬಹುದು. ಸಮುದ್ರತೀರದಲ್ಲಿ ವಿಶ್ರಾಂತಿ ಪಡೆಯಲು ಅತ್ಯುತ್ತಮವಾದ ಸಮಯವನ್ನು ಕಳೆಯಲು ಇಲ್ಲಿಗೆ ಭೇಟಿ ನೀಡಬಹುದು. ಈ ಸ್ಥಳದಲ್ಲಿ ಇರುವ ಪ್ರಾಚೀನ ಸೌಂದರ್ಯ ನಿಮ್ಮನ್ನ ಮೆರಗುಗೊಳಿಸುತ್ತದೆ.


ಪ್ಯಾರಡೈಸ್ ಬೀಚ್


ನಿಜವಾಗಿಯೂ ಸ್ವರ್ಗವನ್ನು ನೋಡಲು ಬಯಸಿದರೆ, ಪ್ಯಾರಡೈಸ್ ಬೀಚ್ ಕಡೆಗೆ ಹೋಗಿ. ಇದು ವಿಶಿಷ್ಟವಾದ ನೀರು ಮತ್ತು ಬಿಳಿ ಮರಳನ್ನು ಹೊಂದಿದ್ದು ಅದು ನಿಮ್ಮ ಕಣ್ಣುಗಳಿಗೆ ಔತಣ ನೀಡುತ್ತದೆ. ಈ ಕಡಲತೀರದಲ್ಲಿ ನಿಮ್ಮ ಜೀವನದ ಅತ್ಯಂತ ಶಾಂತಿಯುತ ಸಮಯವನ್ನು ಕಳೆಯಬಹುದು.


ಇದನ್ನೂ ಓದಿ: ಐಸ್​ ಕ್ರೀಂ ತಿನ್ನೋಕೂ ಒಂದು ರೂಲ್ಸ್ ಇದೆ ಕಣ್ರೀ, ಹೀಗೇ ಸವಿಯಬೇಕಂತೆ


ತಣ್ಣೀರಬಾವಿ ಬೀಚ್‌


ಇದು ಕರ್ನಾಟಕದ ಮಂಗಳೂರಿನ ಹತ್ತಿರದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ಮತ್ತು ಸ್ವಲ್ಪ ಸಮಯದವರೆಗೆ ನಗರದ ಜೀವನದಿಂದ ದೂರವಿರಲು ಇದು ಸೂಕ್ತವಾದ ಸ್ಥಳವಾಗಿದೆ. ಈ ತಣ್ಣೀರಬಾವಿ ಬೀಚ್‌ನಲ್ಲಿ ಚಲಿಸುವ ಸುಂದರವಾದ ಹಡಗುಗಳು, ಸಮುದ್ರದಲ್ಲಿ ಈಜುವ ಸಣ್ಣ ಮೀನುಗಳನ್ನು ನೋಡುವುಸು ನಿಜಕ್ಕೂ ಒಂದು ಸುಂದರ ಅನುಭವ ಎನ್ನಬಹುದು.


ನಿರ್ವಾಣ ಬೀಚ್


​ಕರ್ನಾಟಕದ ಗೋಕರ್ಣದಲ್ಲಿರುವ ನಿರ್ವಾಣ ಬೀಚ್​ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ, ಏಕೆಂದರೆ ಇಲ್ಲಿ ಬಯೋಲ್ಯುಮಿನೆಸೆಂಟ್ ಫೈಟೊಪ್ಲಾಂಕ್ಟನ್‌ನ ಜೀವಿತಾವಧಿಯಲ್ಲಿ ಒಮ್ಮೆ ನೋಡಬಹುದು.


ಹಾಫ್ ಮೂನ್ ಬೀಚ್


ಓಂ ಬೀಚ್‌ನಿಂದ ಕೆಲವು ನಿಮಿಷಗಳ ದೂರದಲ್ಲಿರುವ ಹಾಫ್ ಮೂನ್ ಬೀಚ್ ಒಂದು ಸುಂದರ ತಾಣವಾಗಿದೆ. ಈ ಅರ್ಧವೃತ್ತದ ಆಕಾರದ ಕಡಲತೀರದ ಸುತ್ತಮುತ್ತಲಿನ ಕಾಡುಗಳು ಮತ್ತು ಆಹ್ಲಾದಕರವಾದ ನೈಸರ್ಗಿಕ ಸೌಂದರ್ಯವು ನಿಜವಾಗಿಯೂ ನೋಡಲು ಯೋಗ್ಯವಾಗಿದೆ.


ಮುರುಡೇಶ್ವರ ಬೀಚ್


ಮುರುಡೇಶ್ವರ ಬೀಚ್​ನಲ್ಲಿ ವರ್ಷವಿಡೀ ಪ್ರವಾಸಿಗರನ್ನು ಕಾಣಬಹುದು. ಈ ಕಡಲತೀರಗಳಲ್ಲಿನ ಜಲಕ್ರೀಡೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಪಕ್ಷಿ ವೀಕ್ಷಣೆ ಮತ್ತು ಇಲ್ಲಿನ ಆಹಾರಗಳನ್ನು ಸವಿಯುವುದು ನಿಜಕ್ಕೂ ಒಂದು ಸುಂದರ ಅನುಭವ.


ಇದನ್ನೂ ಓದಿ: ನಿಮ್ಮ ಡ್ರೆಸ್​ಗೆ ತಕ್ಕಂತೆ ಮದುವೆಯ ಆಭರಣ ಹೀಗಿರಬೇಕಂತೆ


ಕರ್ನಾಟಕದ ಕಡಲತೀರಗಳಿಗೆ ಭೇಟಿ ನೀಡಲು ಉತ್ತಮ ಸಮಯ ಯಾವುದು?


ಇಲ್ಲಿನ ಕಡಲತೀರಗಳು ನಿಮ್ಮನ್ನ ಯಾವಾಗಲೂ ಕೈ ಬೀಸಿ ಕರೆಯುತ್ತದೆ. ಆದರೆ, ಸಮುದ್ರ ಮತ್ತು ಮರಳಿನ ಆನಂದ ಸವಿಯಲು  ಉತ್ತಮ ಸಮಯವೆಂದರೆ ಚಳಿಗಾಲದ ತಿಂಗಳು.

Published by:Sandhya M
First published: