Health Care: ಏಕಾಏಕಿ ತೂಕ ಇಳಿಕೆ, ತುರಿಕೆ ಅಪರೂಪದ ಬ್ಲಡ್ ಕ್ಯಾನ್ಸರ್ ನ ಲಕ್ಷಣಗಳಾಗಿರಬಹುದು ಎಚ್ಚರಿಕೆ ವಹಿಸಿ

ಕ್ಯಾನ್ಸರ್ ರೋಗಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ತುಂಬಾ ಕಷ್ಟ. ಇತ್ತೀಚೆಗಷ್ಟೇ 14 ವರ್ಷದ ಬಾಲಕನೊಬ್ಬನಿಗೆ ಅಪರೂಪದ ರಕ್ತದ ಕ್ಯಾನ್ಸರ್‌ನ ಲಕ್ಷಣಗಳು ಕಂಡು ಬಂದಿರುವ ಪ್ರಕರಣ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ (Children's) ಉಂಟಾಗಿರುವ ರೋಗವನ್ನು (Disease) ಕಂಡು ಹಿಡಿಯುವುದು ತುಂಬಾ ಕಷ್ಟ. ತಮ್ಮ ದೇಹದಲ್ಲಿ (Body) ಆಗುತ್ತಿರುವ ಬದಲಾವಣೆಗಳ (Changes) ಬಗ್ಗೆ ಮಕ್ಕಳಿಗೆ ತಿಳಿದಿರುವುದಿಲ್ಲ. ಇಂಥದ್ದೊಂದು ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿದೆ. ಒಬ್ಬ ಮಹಿಳೆ (Women) ತನ್ನ ಮಗನಿಗೆ (Son) ಚರ್ಮದ (Skin) ಮೇಲೆ ಸಾಕಷ್ಟು ತುರಿಕೆ (Itching) ಇದೆ ಎಂದು ಹೇಳಿದ್ದರು. ಇದಕ್ಕಾಗಿ ವೈದ್ಯರ ಬಳಿ ಕರೆದೊಯ್ದಾಗ ಇಂಥದ್ದೊಂದು ಖಾಯಿಲೆ ಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇಂದಿನ ಕಾಲದಲ್ಲಿ ಕ್ಯಾನ್ಸರ್‌ನಂತಹ ದೊಡ್ಡ ಕಾಯಿಲೆ ಕೂಡ ತುಂಬಾ ಸಾಮಾನ್ಯವಾಗಿದೆ. ಕ್ಯಾನ್ಸರ್ (Cancer) ರೋಗಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ತುಂಬಾ ಕಷ್ಟ. ಇತ್ತೀಚೆಗಷ್ಟೇ 14 ವರ್ಷದ ಬಾಲಕನೊಬ್ಬನಿಗೆ ಅಪರೂಪದ ರಕ್ತದ ಕ್ಯಾನ್ಸರ್‌ನ (Blood Cancer) ಲಕ್ಷಣಗಳು ಕಂಡು ಬಂದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

  ಸ್ಕಾಟ್ಲೆಂಡ್‌ಫಾಲ್ಕಿರ್ಕ್‌ನಲ್ಲಿ ಘಟನೆ

  ಒಂದು ದಿನ ಸ್ಥಳೀಯ ಕ್ಲಬ್‌ ನಲ್ಲಿ ಫುಟ್ ‌ಬಾಲ್ ಆಡುತ್ತಿದ್ದಾಗ, ರಿಯಾನ್ ಥಾಮ್ಸನ್ ಎಂಬ ಹುಡುಗ ಪಿಚ್‌ನಲ್ಲಿ ತುಂಬಾ  ಅಚೇತನನಂತೆ ಕಾಣುತ್ತಿದ್ದ. ರಿಯಾನ್‌ ನ ತಾಯಿ ಆಡ್ರೆ ಇದೇನೂ ಅಲ್ಲ, ಮಗ ಸೋಮಾರಿಯಾಗಿದ್ದಾನಾ ಎಂದು ತಿಳಿದಿದ್ದಳು.

  ಆದರೆ ರಿಯಾನ್ ‌ನ ದೇಹದಲ್ಲಿ ಉಂಟಾಗುತ್ತಿದ್ದ ರೋಗ ಲಕ್ಷಣಗಳಿಂದ ಕಾಣಿಸಿಕೊಳ್ಳಲು ಆರಂಭಿಸಿದ ಕೂಡಲೇ ಅವಳು ಆಘಾತಕ್ಕೊಳಗಾಗಿದ್ದಳು. ಸ್ಕಾಟ್ಲೆಂಡ್‌ ನ ಫಾಲ್ಕಿರ್ಕ್ ‌ನಲ್ಲಿ ವಾಸಿಸುವ ರಿಯಾನ್ ಇದ್ದಕ್ಕಿದ್ದಂತೆ ಸಾಕಷ್ಟು ತೂಕವನ್ನು ಕಳೆದುಕೊಂಡು, ತುಂಬಾ ತೆಳ್ಳಗಾಗಿ ವೀಕ್ ಆಗಿ ಬಿಟ್ಟರು.

  ಇದನ್ನೂ ಓದಿ: ಬಿಕ್ಕಳಿಕೆಯನ್ನು ಕ್ಷಣಾರ್ಧದಲ್ಲಿ ಮಾಯ ಮಾಡಲು ಈ ಸರಳ ಟ್ರಿಕ್ಸ್ ಪಾಲಿಸಿ

  ಇದರೊಂದಿಗೆ ತುರಿಕೆ ಸಮಸ್ಯೆ ಕೂಡ ರಿಯಾನ್ ನನ್ನು ಬಾಧಿಸುತ್ತಿತ್ತು. ಕ್ರಮೇಣ ಈ ತುರಿಕೆ ದೇಹದಾದ್ಯಂತ ವ್ಯಾಪಿಸಿತು. ರಿಯಾನ್‌ ಗೆ ಏನಾದರೂ ಅಲರ್ಜಿ ಇರಬಹುದೆಂದು ತಾಯಿ ಆಡ್ರೆ ಮೊದಲು ಯೋಚಿಸಿದ್ದಳು. ಮೊದಲು ತನಗೆ ತಿಳಿದಂಣತೆ ಪರಿಹಾರ ಕ್ರಮ ಅನುಸರಿಸಿದಳು. ಆದರೂ ಸಹ ಮಗನ ಅಲರ್ಜಿ ವಾಸಿಯಾಗಲಿಲ್ಲ.

  ರಿಯಾನ್ ಚರ್ಮದ ರೋಗ ಲಕ್ಷಣಗಳಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ. ಮತ್ತು ನಂತರ ಅವರ ಗ್ರಂಥಿಗಳು (ದುಗ್ಧರಸ ಗ್ರಂಥಿಗಳು) ಸಹ ಊದಿಕೊಳ್ಳಲು ಪ್ರಾರಂಭಿಸಿದವು. ರಿಯಾನ್‌ನಲ್ಲಿ ಈ ರೋಗ ಲಕ್ಷಣವನ್ನು ನೋಡಿದ ನಂತರ, ಆಡ್ರೆ ಅವರನ್ನು ತಕ್ಷಣ ವೈದ್ಯರ ಬಳಿಗೆ ಕರೆದೊಯ್ದರು. ಅಲ್ಲಿ ವೈದ್ಯರು ಆತನನ್ನು ಪರೀಕ್ಷಿಸಿ, ರಕ್ತ ಪರೀಕ್ಷೆ ಮತ್ತು ಸ್ಕ್ಯಾನ್‌ಗಳನ್ನು ಸಹ ಮಾಡಿದರು.

  ಹಾಡ್ಗ್‌ಕಿನ್ಸ್ ಲಿಂಫೋಮಾ (Hodgkin Lymphoma) ಎಂಬ ಅಪರೂಪದ ರಕ್ತದ ಕ್ಯಾನ್ಸರ್

  ನಂತರ ರಿಯಾನ್ ಅನ್ನು ಆಂಬ್ಯುಲೆನ್ಸ್‌ನಲ್ಲಿ ಗ್ಲಾಸ್ಗೋದ ಕ್ವೀನ್ ಎಲಿಜಬೆತ್ ಯೂನಿವರ್ಸಿಟಿ ಆಸ್ಪತ್ರೆಗೆ ಕೆಲವು ಪರೀಕ್ಷೆಗಳಿಗಾಗಿ ಕರೆದೊಯ್ಯಲಾಯಿತು. ರಿಯಾನ್ ಅವರನ್ನು ಕ್ಯಾನ್ಸರ್ ವಾರ್ಡ್ ‌ಗೆ ಕರೆದೊಯ್ಯುತ್ತಿದ್ದಂತೆ  ವೈದ್ಯರು 54 ವರ್ಷದ ಆಡ್ರೆಗೆ ಚಿಂತಿಸಬೇಡಿ ಎಂದು ಹೇಳಿದರು. ನಿಖರವಾಗಿ ಒಂದು ವಾರದ ನಂತರ, ರಿಯಾನ್‌ಗೆ ಹಾಡ್ಗ್‌ ಕಿನ್ಸ್ ಲಿಂಫೋಮಾ (Hodgkin Lymphoma) ಎಂಬ ಅಪರೂಪದ ರಕ್ತದ ಕ್ಯಾನ್ಸರ್ ಇದೆ ಎಂದು ಹೇಳಲಾಯಿತು.

  ಈ ಕಾಯಿಲೆಯಿಂದ ಬಳಲುತ್ತಿರುವ ಮೂವರಲ್ಲಿ ಒಬ್ಬರಿಗೆ ಚರ್ಮದ ತುರಿಕೆ ಇರುತ್ತದೆ. ಇದರ ಹೊರತಾಗಿ, ವಿವರಿಸಲಾಗದ ತೂಕ ನಷ್ಟ, ಊದಿಕೊಂಡ ದುಗ್ಧರಸ ಗ್ರಂಥಿಗಳು ಮತ್ತು ರಾತ್ರಿ ಬೆವರುವಿಕೆ ಸಹ ಸಾಮಾನ್ಯ ಲಕ್ಷಣಗಳಾಗಿವೆ. ಲಿಂಫೋಮಾದಲ್ಲಿ ಎರಡು ಮುಖ್ಯ ವಿಧಗಳಿವೆ - ಹಾಡ್ಗ್ಕಿನ್ ಲಿಂಫೋಮಾ (Hodgkin Lymphoma) ಮತ್ತು ಹಾಡ್ಗ್ಕಿನ್ ಅಲ್ಲದ ಲಿಂಫೋಮಾ (Non-Hodgkin Lymphoma).

  ಲಿಂಫೋಮಾವು ಯಾವ ರೀತಿಯ ಲಿಂಫೋಮಾ ಮತ್ತು ದೇಹದ ಯಾವ ಭಾಗದಲ್ಲಿ ಬೆಳವಣಿಗೆಯಾಗುತ್ತಿದೆ ಎಂಬುದರ ಆಧಾರದ ಮೇಲೆ ವಿವಿಧ ರೋಗ ಲಕ್ಷಣಗಳನ್ನು ಆಧರಿಸಿ ಕಂಡು ಹಿಡಿಯಲಾಗುತ್ತದೆ. ರಿಯಾನ್ ಕುತ್ತಿಗೆ ಮತ್ತು ಎದೆಯಲ್ಲಿ ಈ ಕ್ಯಾನ್ಸರ್ ಕಂಡು ಬಂದಿದೆ. ಮತ್ತು ಎರಡನೇ ಹಂತವನ್ನು ತಲುಪಿದೆ ಎಂದು ತಾಯಿ ಆಡ್ರೆ ಹೇಳಿದ್ದಾರೆ.

  ಹಾಡ್ಗ್ಕಿನ್ ಲಿಂಫೋಮಾ (Hodgkin Lymphoma) ಬಗ್ಗೆ ಅರಿವು

  ಡೈಲಿ ರೆಕಾರ್ಡ್‌ ನೊಂದಿಗೆ ಮಾತನಾಡಿದ ಆಡ್ರೆ, ಉತ್ತಮ ವಿಷಯವೆಂದರೆ ಈ ಕ್ಯಾನ್ಸರ್ ಕೇವಲ ಎರಡನೇ ಹಂತದಲ್ಲಿದೆ ಎಂದು ಹೇಳಿದ್ದಾರೆ. ರಿಯಾನ್‌ಗೆ ಇನ್ನೂ ಹೆಚ್ಚಿನ ಕೀಮೋಥೆರಪಿ ಅಥವಾ ರೇಡಿಯೊಥೆರಪಿ ಅಗತ್ಯವಿಲ್ಲ. ಆಗಸ್ಟ್ ವೇಳೆಗೆ ಚಿಕಿತ್ಸೆ ಪೂರ್ಣಗೊಳ್ಳಲಿದ್ದು, ರಿಯಾನ್ ತನ್ನ ಸ್ನೇಹಿತರೊಂದಿಗೆ ಹೊರಗೆ ಹೋಗಬಹುದು ಎಂದು ಕುಟುಂಬ ಆಶಿಸುತ್ತಿದೆ.

  ಆಡ್ರೆ ಹಾಡ್ಗ್ಕಿನ್ ಲಿಂಫೋಮಾ (Hodgkin Lymphoma) ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. 'ತೂಕ ನಷ್ಟ ಮತ್ತು ಚರ್ಮದ ತುರಿಕೆ ಕ್ಯಾನ್ಸರ್‌ನ ಲಕ್ಷಣಗಳಾಗಿರಬಹುದು ಎಂದು ನಾನು ಎಂದಿಗೂ ಯೋಚಿಸಿರಲಿಲ್ಲ. ಇತರ ಪೋಷಕರು ಸಹ ಈ ಚಿಹ್ನೆಗಳನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ.

  ಇದನ್ನೂ ಓದಿ: ಹೆದರಬೇಡಿ! ತೆಂಗಿನಕಾಯಿ ರಸದ ಸಕ್ಕರೆ Type 2 Diabetes ಇರುವವರಿಗೆ ತುಂಬಾ ಸಹಕಾರಿ

  ರಿಯಾನ್ ಅವರ ಅನಾರೋಗ್ಯವು ಸಮಯಕ್ಕಿಂತ ಮುಂಚಿತವಾಗಿ ಪತ್ತೆಯಾಗಿದೆ. ಆದರೆ ಅದರ ಬಗ್ಗೆ ತಡವಾಗಿ ತಿಳಿದಿದ್ದರೆ, ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು. ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಯೌವನದಲ್ಲಿ ಮಕ್ಕಳ ಸಮಸ್ಯೆಗಳನ್ನು ಕಂಡು ಹಿಡಿಯುವುದು ತುಂಬಾ ಕಷ್ಟ ಎಂದು ಹೇಳಿಕೊಂಡಿದ್ದಾರೆ.
  Published by:renukadariyannavar
  First published: