Children and Pets: ಮನೆಯಲ್ಲಿ ಮಗು ಜೊತೆ ಸಾಕು ಪ್ರಾಣಿಗಳೂ ಇವೆಯಾ? ಹಾಗಾದರೆ ಇರಲಿ ಎಚ್ಚರ!

ಕೆಲವರು ನಾಯಿಗಳನ್ನು ಕೂಡ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದಾಗ್ಯೂ ನಿಮ್ಮ ಮನೆಯಲ್ಲಿ ನಾಯಿ ಮತ್ತು ಚಿಕ್ಕ ಮಕ್ಕಳು ಇಬ್ಬರೂ ಇದ್ದರೆ ಕೆಲವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸಾಕುಪ್ರಾಣಿಗಳ ಮೇಲಿನ ಪ್ರೀತಿ ಜೊತೆಗೆ ಮಕ್ಕಳ ಮೇಲೆ ಸಹ ಕಾಳಜಿವಹಿಸಬೇಕಾಗುತ್ತದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಈ ನಾಯಿ (Dog), ಬೆಕ್ಕುಗಳಂತಹ (Cat) ಸಾಕು ಪ್ರಾಣಿಗಳು ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ವಿಶೇಷವಾಗಿ ಚಿಕ್ಕಮಕ್ಕಳಿಗೆ ನಾಯಿ ಜೊತೆ ಅದೆನೋ ಬೇರೆಯದ್ದೇ ನಂಟು. ಈ ನಾಯಿಗಳೂ ಅಷ್ಟೇ ಚಿಕ್ಕ ಮಕ್ಕಳನ್ನು ತಾಯಿಯಂತೆ (Mother) ಮುದ್ದಿಸುತ್ತವೆ. ಇವರಿಬ್ಬರ ನಡುವಿನ ಬಂಧದ ವಿಡಿಯೋವನ್ನು ನಾವು, ನೀವು ಸಾಕಷ್ಟು ಭಾರಿ ಜಾಲತಾಣಗಳಲ್ಲಿ ವಿಡಿಯೋಗಳ (Video) ಮೂಲಕ ನೋಡುತ್ತಿರುತ್ತೇವೆ. ಕೆಲವರು ನಾಯಿಗಳನ್ನು ಕೂಡ ಮನೆಯ ಸದಸ್ಯರಂತೆ ಎನ್ನುವುದಕ್ಕಿಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಆದಾಗ್ಯೂ ನಿಮ್ಮ ಮನೆಯಲ್ಲಿ ನಾಯಿ ಮತ್ತು ಚಿಕ್ಕ ಮಕ್ಕಳು (Children) ಇಬ್ಬರೂ ಇದ್ದರೆ ಸರಿಯಾದ ಕೆಲವು ಅಗತ್ಯ ಕ್ರಮಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಸಾಕುಪ್ರಾಣಿಗಳ ಮೇಲಿನ ಪ್ರೀತಿ ಜೊತೆಗೆ ಮಕ್ಕಳ ಮೇಲೆ ಕಾಳಜಿ ಸಹ ವಹಿಸಬೇಕಾಗುತ್ತದೆ. 

ಬೆಕ್ಕು, ನಾಯಿಗಳ ತುಪ್ಪಳದಿಂದ ಮಕ್ಕಳನ್ನು ರಕ್ಷಿಸಿ
ನಿಮ್ಮ ಸಾಕುಪ್ರಾಣಿಗಳೊಂದಿಗೆ ಬೆಳೆಯುವುದು ನಿಮ್ಮ ಮಗುವಿನ ಪಾಲನೆಯ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂಬುವುದು ಉತ್ತಮ ವಿಚಾರವಾದರೂ , ನವಜಾತ ಶಿಶುವಿನ ಸಂದರ್ಭದಲ್ಲಿ, ಮಗುವನ್ನು ನಿಮ್ಮ ಸಾಕುಪ್ರಾಣಿಗಳಾದ ನಾಯಿ, ಬೆಕ್ಕಿನಂತಹುಗಳಿಂದ ದೂರವಿರಿಸಲು ಸಲಹೆ ನೀಡಲಾಗುತ್ತದೆ. ಏಕೆಂದರೆ ಬೆಕ್ಕು, ನಾಯಿಯಲ್ಲಿ ಅವುಗಳ ಕೂದಲು ಉದುರುತ್ತಿರುತ್ತದೆ. ಈ ತುಪ್ಪಳವು ನಿಮ್ಮ ಮಗುವಿನ ಬಾಯಿ ಅಥವಾ ಮೂಗಿಗೆ ಹೋಗುವ ಮೂಲಕ ಅಲರ್ಜಿ, ಸೋಂಕಿನಂತಹ ಅನಾರೋಗ್ಯ ಸ್ಥಿತಿ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ:  Rs 20 Lakhs Fish Price: 20 ಲಕ್ಷಕ್ಕೆ ಮಾರಾಟವಾದ ಮೀನು! ಏನಿದರ ಮಸಲತ್ತು?

ತಜ್ಞರ ಸಲಹೆ ಪಡೆಯಿರಿ
ಈಗಾಗಲೇ ಮನೆಯಲ್ಲಿ ನಾಯಿ, ಬೆಕ್ಕು ಹೊಂದಿರುವವರು ಪಶುವೈದ್ಯರ ಜೊತೆ ಮಕ್ಕಳ ವೈದ್ಯರನ್ನು ಸಂಪರ್ಕಿಸಿಸಿ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಎಷ್ಟು ಹೊತ್ತು ಮಕ್ಕಳನ್ನು ಪ್ರಾಣಿಗಳ ಜೊತೆ ಬಿಡಬಹುದು, ನಾಯಿ, ಬೆಕ್ಕುಗಳನ್ನು ಹೇಗೆ ಶುಚಿಯಾಗಿ ಆರೋಗ್ಯವಾಗಿಡುವುದು ಈ ಎಲ್ಲವುಗಳ ಕುರಿತು ಚರ್ಚಿಸಿ ನಂತಹ ಚಿಕ್ಕಮಕ್ಕಳನ್ನು ನಿಮ್ಮ ಪ್ರೀತಿಯ ಪೆಟ್ ಗೆ ಪರಿಚಯಿಸಿ. ಆದರೆ ಸಾಕುಪ್ರಾಣಿಗಳ ಜೊತೆ ನಿಮ್ಮ ಮಕ್ಕಳನ್ನು ಬಿಟ್ಟಾಗ ಪೋಷಕರಾದ ನೀವು ಹೆಚ್ಚಿನ ನಿಗಾ ವಹಿಸುವುದು ತುಂಬಾ ಉತ್ತಮ.

ಆರಂಭಿಕ ತಿಂಗಳುಗಳಲ್ಲಿಯೂ ನಿಮ್ಮ ನಾಯಿ, ಬೆಕ್ಕು ಅಥವಾ ನಿಮ್ಮ ನವಜಾತ ಯಾವುದೇ ಸಾಕುಪ್ರಾಣಿಗಳನ್ನು ಸಂಪೂರ್ಣವಾಗಿ ನಿಮ್ಮ ಮಕ್ಕಳಿಂದ ದೂರವಿಡಬೇಡಿ. ಇದು ನಂತರದ ದಿನಗಳಲ್ಲಿ ಮಕ್ಕಳು ನಿಮ್ಮ ಸಾಕುಪ್ರಾಣಿಗಳನ್ನು ನಿರ್ಲಕ್ಷಿಸಬಹುದು. ಹೀಗಾಗಿ ಪ್ರತಿದಿನ ಸ್ವಲ್ಪ ಸಂವಹನ ಮಾಡಲು ನಿಮ್ಮ ಸಾಕು ನಾಯಿ ಜೊತೆ ಮಕ್ಕಳನ್ನು ಬಿಡಿ ಎನ್ನುತ್ತಾರೆ ತಜ್ಞರು. ಹೀಗೆ ಅವರಿಬ್ಬರ ನಡುವೆ ಬಾಂಧವ್ಯ ಹೆಚ್ಚಾಗುತ್ತಿದ್ದಂತೆ ಅಪಾಯಗಳು ಕಡಿಮೆಯಾಗುತ್ತವೆ. ಆದರೂ ಪೋಷಕರು ಮಕ್ಕಳಿಗೆ ಮೂರು, ನಾಲ್ಕು ವರ್ಷ ಆಗುವವರೆಗೂ ಮುತುವರ್ಜಿ ವಹಿಸಬೇಕು.

ಇದನ್ನೂ ಓದಿ: Viral Video: ಪಾರಿವಾಳದ ಬ್ಯಾಕ್ ಫ್ಲಿಪ್ ವೀಡಿಯೋ ಸಖತ್ ವೈರಲ್; ನೋಡಿ ಬೆರಗಾದ ನೆಟ್ಟಿಗರು

ನೆನಪಿಡಿ, ಇಬ್ಬರ ನಡುವಿನ ಸಂಬಂಧದ ಸ್ವರೂಪವು ಮಕ್ಕಳಿಂದ ಮಕ್ಕಳು ಮತ್ತು ಸಾಕುಪ್ರಾಣಿಗಳ ಮೇಲೆ ಅವಲಂಬಿತವಾಗಿರುತ್ತದೆ. ನಿಮ್ಮ ಸಾಕುಪ್ರಾಣಿ ಸ್ವಭಾವದಲ್ಲಿ ಸ್ನೇಹಪರವಾಗಿದ್ದರೆ, ನಿಮ್ಮ ಮಗು ಮತ್ತು ಸಾಕುಪ್ರಾಣಿ ಎರಡನ್ನೂ ನಿರ್ವಹಿಸುವುದು ನಿಮಗೆ ಸುಲಭವಾಗುತ್ತದೆ. ಆದರೆ, ನಿಮ್ಮ ಮುದ್ದಿನ ನಾಯಿ, ಬೆಕ್ಕು ಆಕ್ರಮಣಕಾರಿಯಾಗಿ ವರ್ತಿಸಿದರೆ, ನಂತರ ವೃತ್ತಿಪರ ಸಲಹೆ ಅತ್ಯಗತ್ಯವಾಗಿ ತೆಗೆದುಕೊಳ್ಳಬೇಕಾಗುತ್ತದೆ.

ಮುನ್ನೆಚ್ಚರಿಕೆಗಳು

  • ನೀವು ಹೊಸ ಪ್ರಾಣಿಯನ್ನು ಮನೆಗೆ ತಂದಾಗ, ನಿಮ್ಮ ಮೇಲ್ವಿಚಾರಣೆಯಲ್ಲಿ ಮಾತ್ರ ಅದನ್ನು ನಿಮ್ಮ ಮಗುವಿಗೆ ಪರಿಚಯಿಸಿ.

  • ಅವರು ಒಟ್ಟಿಗೆ ಕಳೆಯುವ ಸಮಯವನ್ನು ಕ್ರಮೇಣ ಹೆಚ್ಚಿಸುವ ಮೂಲಕ ಪರಸ್ಪರ ತಿಳಿದುಕೊಳ್ಳಲು ಅವರಿಗೆ ಅವಕಾಶ ಮಾಡಿಕೊಡಿ. ಅಲ್ಲದೆ ಇವರಿಬ್ಬರ ಜೊತೆ ವಯಸ್ಕರು ಎಲ್ಲಾ ಸಮಯದಲ್ಲೂ ಇರುವುದನ್ನು ಖಚಿತಪಡಿಸಿಕೊಳ್ಳಿ.

  • ನಿಮ್ಮ ಮಗು ಮತ್ತು ನಿಮ್ಮ ಸಾಕುಪ್ರಾಣಿಗಳು ಚಿಕ್ಕವರಾಗಿದ್ದರೆ, ನೈರ್ಮಲ್ಯದ ಕಾರಣಗಳಿಗಾಗಿ ಮಾತ್ರವಲ್ಲದೆ ಮಾನಸಿಕ ಕಾರಣಗಳಿಗಾಗಿ ಅವರ ಆಟಿಕೆಗಳನ್ನು ಪ್ರತ್ಯೇಕವಾಗಿ ಇರಿಸಿ.

  • ನಿಮ್ಮ ಮಗುವಿಗೆ ಯಾವುದೇ ತೆರೆದ ಗಾಯಗಳು, ಕಡಿತಗಳು ಅಥವಾ ಹುಣ್ಣುಗಳು ಇದ್ದಲ್ಲಿ, ನಿಮ್ಮ ಸಾಕುಪ್ರಾಣಿಗಳು ಅವುಗಳನ್ನು ನೆಕ್ಕದಂತೆ ನೋಡಿಕೊಳ್ಳಿ, ಏಕೆಂದರೆ ಸೋಂಕಿನ ಸಾಧ್ಯತೆ ಹೆಚ್ಚು.

Published by:Ashwini Prabhu
First published: