Children’s Care: ನಿಮ್ಮ ಮಗುವಿನ ಎದುರು ಮಾತನಾಡುವಾಗ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ!

ಕೆಲವೊಮ್ಮೆ ಮಕ್ಕಳು ವಿಷಯಗಳನ್ನು ವಿಭಿನ್ನವಾಗಿ ಅರ್ಥೈಸಿಕೊಳ್ತಾರೆ. ಮಕ್ಕಳೊಂದಿಗೆ ಪೋಷಕರು ಮಾತನಾಡುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು. ಮಕ್ಕಳು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳದಂತೆ ಪೋಷಕರು ಕಾಳಜಿ ವಹಿಸಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಕ್ಕಳು (Children’s) ಬೆಳೆಯುತ್ತಾ ಹೋದಂತೆ ಅವರಲ್ಲಿ ವಿಷಯಗಳನ್ನು (Things) ತಿಳಿಯುವ ಕುತೂಹಲ (Curiosity) ಹೆಚ್ಚುತ್ತದೆ. ಹೀಗಾಗಿ ಮನೆಯಲ್ಲಿ (Home) ದೊಡ್ಡವರು ತಮ್ಮ ಖಾಸಗಿ (Private) ವಿಷಯಗಳ ಚರ್ಚೆಯನ್ನು ಮಕ್ಕಳ ಮುಂದೆ ಮಾಡುವುದು ಸರಿಯಲ್ಲ. ಹಾಗೆಯೇ ಮನೆಯಲ್ಲಿ ನಡೆಯುವ ತಂದೆ-ತಾಯಿ ಜಗಳ, ದೊಡ್ಡವರ ಮಧ್ಯೆ ಕಲಹ ಹಾಗೂ ಇತರೆ ಕೌಟುಂಬಿಕ ಕೆಟ್ಟ ವಾತಾವರಣವು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗೆಯೇ ತಂದೆ-ತಾಯಿ ನಡುವಿನ ಜಗಳವು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುವುದರ ಜೊತೆಗೆ ಮಕ್ಕಳ ನಡವಳಿಕೆಯೂ ಅದೇ ರೀತಿ ಆಗುವ ಚಾನ್ಸ್ ಹೆಚ್ಚು. ಮಕ್ಕಳು ವಿಷಯದ ಬಗ್ಗೆ ಅರ್ಥ ಮಾಡಿಕೊಳ್ಳಲು ಮತ್ತು ತಿಳಿಯಲು ಕುತೂಹಲರಾಗಿರುತ್ತಾರೆ.

    ಮಕ್ಕಳಿಗೆ ಹೇಳಬಾರದ ಕೆಲವು ವಿಷಯಗಳು ಯಾವವು?

    ಕೆಲವೊಮ್ಮೆ ಮಕ್ಕಳು ವಿಷಯಗಳನ್ನು ವಿಭಿನ್ನವಾಗಿ ಅರ್ಥೈಸಿಕೊಳ್ತಾರೆ. ಮಕ್ಕಳೊಂದಿಗೆ ಪೋಷಕರು ಮಾತನಾಡುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು. ಮಕ್ಕಳು ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳದಂತೆ ಪೋಷಕರು ಕಾಳಜಿ ವಹಿಸಬೇಕು.

    ನಿಮ್ಮ ಮಗು ಸರಿಯಾದ ದಾರಿಯಲ್ಲಿ ಮತ್ತು ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು, ಉತ್ತಮ ನಡವಳಿಕೆ ಹೊಂದಬೇಕಾದರೆ ಮಕ್ಕಳಿಗೆ ಕೆಲವು ವಿಷಯಗಳನ್ನು ತಪ್ಪಾಗಿ ಹೇಳದಿರುವುದು ಮುಖ್ಯ. ನಿಮ್ಮ ಮಕ್ಕಳಿಗೆ ಯಾವತ್ತೂ ಹೇಳಬಾರದ ಕೆಲವು ವಿಷಯಗಳಿದ್ದು ಯಾವುವು ಎಂದು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ಒತ್ತಡ ಉಂಟಾಗೋದು ಹೇಗೆ? ಅದನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಆರೋಗ್ಯ ಕಾಪಾಡಿ

    ಸಂಗಾತಿ ಅಥವಾ ಬೇರೆಯವರಿಗೆ ಕೆಟ್ಟದ್ದು ಮಾಡಬೇಡಿ, ಬಯಸಬೇಡಿ

    ಅನೇಕ ಬಾರಿ ಜನರು ಕೋಪಗೊಂಡಾಗ, ಇತರರನ್ನು ಬೈಯುತ್ತಾರೆ. ಕೆಟ್ಟದಾಗಿ ಮಾತನಾಡುತ್ತಾರೆ. ಕೆಟ್ಟದ್ದು ಬಯಸುತ್ತಾರೆ. ಮಕ್ಕಳ ಮನಶ್ಶಾಸ್ತ್ರಜ್ಞ ಮತ್ತು ಪೋಷಕರ ಹದಿಹರೆಯದ ತಜ್ಞ ಏಂಜೆಲಾ ಕರಂಜಾ ಹೇಳುವ ಪ್ರಕಾರ, ಅನೇಕ ಬಾರಿ ಜನರು ತಮ್ಮ ಸಂಗಾತಿ ಅಥವಾ ಕುಟುಂಬದ ಸದಸ್ಯರನ್ನು ಮಕ್ಕಳೆದುರು ಟೀಕಿಸುತ್ತಾರೆ. ಬೈಯುತ್ತಾರೆ. ಇದು ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    ನಿಮ್ಮ ಮಾತುಗಳಿಂದ ಮಗು ತನ್ನ ಭಾವನೆಗಳಲ್ಲಿ ಬದಲಾವಣೆ ತಂದುಕೊಳ್ಳುತ್ತದೆ. ಪೋಷಕರು ಯಾರನ್ನು ಬೈಯುತ್ತಾರೋ ಅಂತವರ ಬಗ್ಗೆ ಮಕ್ಕಳು ಕೆಟ್ಟ ಭಾವನೆ ಹೊಂದುತ್ತಾರೆ. ಕ್ರಮೇಣ ಮಕ್ಕಳ ಮನಸ್ಸಲ್ಲಿ ಅವರ ಬಗ್ಗೆ ದ್ವೇಷ ಮನೆ ಮಾಡುತ್ತದೆ. ಹಾಗಾಗಿ ಮಕ್ಕಳೆದುರು ಏನೇ ಮಾತನಾಡುವ ಹಾಗೂ ಜಗಳ, ಬೈಯುವ ಮೊದಲು ಯೋಚಿಸಿ.

    ಜವಾಬ್ದಾರಿ, ಹಣ ಮತ್ತು ಅನಾರೋಗ್ಯದ ಮಾತು ಬೇಡ

    ಮಕ್ಕಳೆದುರು ನಿಮ್ಮ ಆರ್ಥಿಕ ಸ್ಥಿತಿಗತಿ ಹಾಗೂ ಜವಾಬ್ದಾರಿಗಳನ್ನು ಎಂದಿಗೂ ಚರ್ಚಿಸಬೇಡಿ. ಇದು ಬೆಳೆಯುವ ಮಗುವಿನ ಮನಸ್ಸಿನ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ. ಮಕ್ಕಳೆದುರು ಹಣ ಮತ್ತು ಅನಾರೋಗ್ಯದ ಬಗ್ಗೆ ಪೋಷಕರು ಮಾತನಾಡಿದಾಗ ಅದು ಮಕ್ಕಳಲ್ಲಿ ಭಯದ ವಾತಾವರಣ ಮೂಡಿಸುತ್ತದೆ. ಅನೇಕ ಬಾರಿ ಪೋಷಕರ ಕೆಲ ಮಾತುಗಳು ಮಕ್ಕಳು ತಾವು ಹೊರೆಯೇ ಎಂದು ಹೆಚ್ಚು ಚಿಂತೆ, ಖಿನ್ನತೆ, ಟೆನ್ಶನ್ ತೆಗೆದುಕೊಳ್ಳಲು ಕಾರಣವಾಗುತ್ತದೆ.

    ಮಕ್ಕಳನ್ನು ಇತರರೊಂದಿಗೆ ಹೋಲಿಸುವುದು ಬೇಡ

    ಮಕ್ಕಳನ್ನು ಇತರೆ ಮಕ್ಕಳ ಜೊತೆ ಹೋಲಿಕೆ ಮಾಡಬೇಡಿ. ಹೋಲಿಕೆ ಮಾಡುವುದು ಮಗುವಿನ ನಂಬಿಕೆ ಮತ್ತು ಆತ್ಮವಿಶ್ವಾಸಕ್ಕೆ ಪೆಟ್ಟು ನೀಡುತ್ತದೆ. ಆಗ ಮಕ್ಕಳು ಒತ್ತಡಕ್ಕೆ ಬಲಿಯಾಗುತ್ತಾರೆ. ನಿಮ್ಮ ಮಗುವಿನೆದುರು ಬೇರೆ ಮಗುವನ್ನು ಹೊಗಳುವುದು ನಿಮ್ಮ ಮಗುವಿನ ಮನಸ್ಸಿನ ಮೇಲೆ ತಪ್ಪು ಪರಿಣಾಮ ಬೀರುತ್ತದೆ.

    ಅನುಭವ ಮತ್ತು ದುಃಖ ವ್ಯಕ್ತಪಡಿಸುವಾಗ ಎಚ್ಚರಿಕೆ ವಹಿಸಿ

    ಮಕ್ಕಳ ಎದುರು ದುಃಖ ಹಾಗೂ ಅನುಭವದ ಕೆಲ ಘಟನೆಗಳನ್ನು ಹೇಳುವಾಗ ಎಚ್ಚರಿಕೆ ವಹಿಸಿ. ನಿಮ್ಮ ಮಗು ದುಃಖಿತನಾಗಿದ್ದರೆ ಮೊದಲು ಚೆನ್ನಾಗಿ ಸಮಜಾಯಿಷಿ ನೀಡಿ. ಮಗುವಿನ ದುಃಖ ನಿವಾರಣೆಗೆ ಸಾಥ್ ನೀಡಿ. ಮಗುವನ್ನು ಮೋಟಿವೇಟ್ ಮಾಡಿ. ಮಗುವಿಗೆ ಬೈಯುವಾಗ ನೀನ್ ಹುಟ್ಟದಿದ್ದರೆ ಚೆನ್ನಾಗಿತ್ತು ಎಂಬ ಮಾತುಗಳನ್ನು ಆಡದಿರಿ. ಇದು ಮಗುವನ್ನು ಘಾಸಿಗೊಳಿಸುತ್ತದೆ. ನನ್ನನ್ನ ಯಾರೂ ಇಷ್ಟ ಪಡುವುದಿಲ್ಲ ಎಂಬ ಭಾವನೆ ಮಗುವಿನ ಮನಸ್ಸಲ್ಲಿ ಬೇರೂರುತ್ತದೆ.

    ಇದನ್ನೂ ಓದಿ: ಥೈರಾಯ್ಡ್‌ ಕಡಿಮೆ ಮಾಡಲು ಅಶ್ವಗಂಧ! ಹಲವು ರೋಗ ನಿವಾರಣೆಗೆ ಪರಿಣಾಮಕಾರಿ ಔಷಧಿ ಇದು

    ಸ್ಟೀರಿಯೊಟೈಪಿಕಲ್ ಕಾಮೆಂಟ್‌ ಮಾಡಬೇಡಿ

    ಮಗುವಿನೆದುರು ಹುಡುಗರು ಅಳುವುದಿಲ್ಲ. ಅಥವಾ ಹುಡುಗಿಯರು ಶಾಂತವಾಗಿ ಕುಳಿತುಕೊಳ್ಳಬೇಕು ಎಂಬ ಹೇಳಿಕೆ ನೀಡಬೇಡಿ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹಾಗಾಗಿ ಪೋಷಕರು ಮಕ್ಕಳೆದುರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನಿಲ್ಲಿಸಿದರೆ ಸ್ವಲ್ಪ ಮಟ್ಟಿಗೆ ಉತ್ತಮ.
    Published by:renukadariyannavar
    First published: