• Home
  • »
  • News
  • »
  • lifestyle
  • »
  • Skin Care: ನೀವು ತಿನ್ನುವ ಈ ಆಹಾರಗಳು ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ.. ಎಚ್ಚರ!

Skin Care: ನೀವು ತಿನ್ನುವ ಈ ಆಹಾರಗಳು ನಿಮ್ಮ ಚರ್ಮದ ಸೌಂದರ್ಯವನ್ನು ಹಾಳು ಮಾಡುತ್ತವೆ.. ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಯಾವ ಆಹಾರ ಚರ್ಮದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ನೋಡೋಣ.

  • Share this:

    ನಾವು ಏನೇ ತಿಂದರೂ ಅದು ನಮ್ಮ ಆರೋಗ್ಯದ (Health)  ಜೊತೆಗೆ ನಮ್ಮ ಚರ್ಮದ (Skin) ಮೇಲೆ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯಕ್ಕೆ ಹಾಗೂ ತ್ವಚೆಗೆ ಪ್ರಯೋಜನಕಾರಿಯಾದ (Benefits)  ವಸ್ತುಗಳನ್ನು ಸೇವಿಸುವುದು ಬಹಳ ಮುಖ್ಯ. ಕೆಲವು ವಿಷಯಗಳು ನಿಮ್ಮ ತ್ವಚೆಗೆ ವರವಾಗಿ ಇರಬಹುದು. ಆದರೆ ಕೆಲವು ವಿಷಯಗಳು ನಿಮ್ಮ ಚರ್ಮವನ್ನು ಘಾಸಿಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ತ್ವಚೆಗೆ ಯಾವ ಆಹಾರ (Food) ಪದಾರ್ಥಗಳ ಸೇವನೆ ಚೆನ್ನಾಗಿ ಒಗ್ಗಿಕೊಳ್ಳುತ್ತದೆ. ಮತ್ತು ಯಾವ ಆಹಾರ ಪದಾರ್ಥಗಳ ಸೇವನೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿದುಕೊಳ್ಳಿ. ಯಾವ ಆಹಾರ ಪದಾರ್ಥಗಳು ನಿಮ್ಮ ತ್ವಚೆಗೆ ಹಾನಿ ಉಂಟು ಮಾಡಬಲ್ಲವು ಎಂಬುದನ್ನು ಎಲ್ಲರೂ ತಿಳಿದುಕೊಳ್ಳುವುದು ಅತೀ ಅವಶ್ಯಕ. ನಿಮ್ಮ ಚರ್ಮಕ್ಕೆ ಅಡ್ಡ ಪರಿಣಾಮ ಉಂಟು ಮಾಡಬಲ್ಲ ಮತ್ತು ಒಳಿತು ಮಾಡಬಲ್ಲ ಆಹಾರ ಪದಾರ್ಥಗಳು ಹೀಗಿವೆ.


    ಉರಿಯೂತಕ್ಕೆ ಕಾರಣವಾಗುವ ಆಹಾರಗಳು: ಫ್ರೆಂಚ್ ಫ್ರೈಸ್, ಸಂಸ್ಕರಿಸಿದ ಆಹಾರ ಮತ್ತು ಬಿಳಿ ಬ್ರೆಡ್ ಉರಿಯೂತ ಉಂಟು ಮಾಡುತ್ತದೆ. ಉರಿಯೂತದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಕರುಳಿನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಮತ್ತು ಚರ್ಮದಲ್ಲಿ ಬಿರುಕು, ಒಣಗಿದ ಚರ್ಮ ಆಂತರಿಕ ಉರಿಯೂತವನ್ನು ಹೆಚ್ಚಿಸುತ್ತದೆ. ನಮ್ಮ ಕರುಳಿನ ಆರೋಗ್ಯವು ನಮ್ಮ ಚರ್ಮಕ್ಕೆ ಸಂಬಂಧಿಸಿದೆ. ಆದ್ದರಿಂದ, ನಿಮ್ಮ ಹೊಟ್ಟೆಗೆ ಒಳ್ಳೆಯದನ್ನು ನೀವು ಸೇವಿಸಬೇಕು. ಇದು ನಿಮ್ಮ ಚರ್ಮದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.


    ಪ್ರೋಬಯಾಟಿಕ್ ಆಹಾರ ಸೇವನೆ ಮಾಡಿ: ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರೋಬಯಾಟಿಕ್‌ಗಳು ಸಹಾಯ ಮಾಡುತ್ತವೆ. ಇದು ನಿಮ್ಮ ಆರೋಗ್ಯಕ್ಕೆ ಮತ್ತು ನಿಮ್ಮ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರೋಬಯಾಟಿಕ್ಸ್ ಹೊಂದಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ.


    ಇದನ್ನೂ ಓದಿ: ದಿನಕ್ಕೊಂದು ಕಿವಿ ಹಣ್ಣು ತಿನ್ನಿ, ಆರೋಗ್ಯದ ಜೊತೆ ಸ್ಕಿನ್ ಕೇರ್​ಗೂ ಇದೇ ಬೆಸ್ಟ್


    ಪ್ರೋಬಯಾಟಿಕ್‌ಗಳು ಹುದುಗಿಸಿದ ಆಹಾರಗಳಲ್ಲಿ ಕಂಡುಬರುವ ನೇರ ಸೂಕ್ಷ್ಮಜೀವಿಗಳಾಗಿವೆ. ಇವು ನಮ್ಮ ದೇಹ, ಚರ್ಮ, ಮನಸ್ಸು ಮತ್ತು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಬೀತುಪಡಿಸುವ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಾಗಿವೆ. ಹಾಗಾಗಿ ಪ್ರೋಬಯಾಟಿಕ್‌ಗಳ ಕಡಿಮೆ ಸೇವನೆ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.


     ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಹೆಚ್ಚು ಸೇವನೆ ಬೇಡ: ಬಿಳಿ ಬ್ರೆಡ್, ಪಾಸ್ತಾ, ಬಿಳಿ ಅಕ್ಕಿ, ಸೋಡಾ ಇತ್ಯಾದಿಗಳು ಹೆಚ್ಚಿನ ಪ್ರಮಾಣದ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ. ಇವುಗಳಲ್ಲಿ ಪೌಷ್ಠಿಕಾಂಶ ಮತ್ತು ನಾರಿನಂಶ ಬಹಳ ಕಡಿಮೆ. ಅವುಗಳನ್ನು ಅತಿಯಾಗಿ ಸೇವಿಸುವುದರಿಂದ ಹೃದ್ರೋಗ, ಬೊಜ್ಜು ಮತ್ತು ಟೈಪ್ 2 ಮಧುಮೇಹದ ಅಪಾಯ ಹೆಚ್ಚುತ್ತದೆ. ಅಲ್ಲದೆ, ಇದು ಚರ್ಮಕ್ಕೆ ತುಂಬಾ ಅಪಾಯಕಾರಿ ಆಗಿದೆ. ಅವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ, ಚರ್ಮದ ಮೇಲೆ ಸುಕ್ಕುಗಳು ಪ್ರಾರಂಭವಾಗುತ್ತವೆ. ವ್ಯಕ್ತಿಯು ಬೇಗ ವಯಸ್ಸಾದವನಂತೆ ಕಾಣುತ್ತಾನೆ. ಇದು ಮೊಡವೆಗೂ ಉತ್ತೇಜನ ನೀಡುತ್ತದೆ.


    ಸಿಹಿ ಪದಾರ್ಥಗಳ ಅತಿಯಾದ ಸೇವನೆ ಬೇಡ: ಅತಿಯಾದ ಸಿಹಿ ಪದಾರ್ಥಗಳ ಸೇವನೆಯು ನಿಮ್ಮ ಚರ್ಮಕ್ಕೆ ತುಂಬಾ ಹಾನಿಕಾರಕವಾಗಿದೆ. ಇದು ಕೊಲಾಜನ್ ನ್ನು ಒಡೆಯುತ್ತದೆ. ನಿಮ್ಮ ಚರ್ಮದ ಸಡಿಲಿಕೆ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ. ಸಕ್ಕರೆಯ ಅತಿಯಾದ ಸೇವನೆಯಿಂದಾಗಿ, ನಿಮ್ಮ ಚರ್ಮದ ರಂಧ್ರಗಳು ಮುಚ್ಚಿಹೋಗಲು ಪ್ರಾರಂಭಿಸುತ್ತವೆ. ಇದರಿಂದಾಗಿ ಚರ್ಮದ ಮೇಲೆ ಬಹಳಷ್ಟು ಬಿರುಕುಗಳು ಗೋಚರಿಸುತ್ತವೆ.


    ಇದನ್ನೂ ಓದಿ: ಈ ಹಣ್ಣು ಕ್ಯಾನ್ಸರ್​​ಗೆ ರಾಮಬಾಣವಂತೆ! ಇದರ ಪ್ರಯೋಜನ ಒಂದೆರಡಲ್ಲ!


    ಕೆಫೀನ್ ಹೊಂದಿರುವ ಪದಾರ್ಥಗಳ ಸೇವನೆ ಕಡಿಮೆ ಮಾಡಿ: ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಅಂಶವಿರುವ ವಸ್ತುಗಳ ಸೇವನೆಯು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ನಿಮ್ಮ ಚರ್ಮವೂ ಅದರಿಂದ ಅಪಾಯಕ್ಕೆ ಗುರಿಯಾಗುತ್ತದೆ. ಅನೇಕ ಜನರು ಖಾಲಿ ಹೊಟ್ಟೆಯಲ್ಲಿ ಕಾಫಿ ಅಥವಾ ಚಹಾವನ್ನು ಕುಡಿಯುವ ಅಭ್ಯಾಸ ಹೊಂದಿದ್ದಾರ. ಈ ಸಂದರ್ಭದಲ್ಲಿ ಅದು ನಿಮ್ಮ ಚರ್ಮಕ್ಕೆ ಇನ್ನಷ್ಟು ಅಪಾಯ ತಂದೊಡ್ಡುತ್ತದೆ.

    Published by:renukadariyannavar
    First published: