Breakfast: ಬಲ್ಲವರೇ ಬಲ್ಲರು ಊದಲು ಅಕ್ಕಿ ರುಚಿ, ಮೊಸರನ್ನ ಮಾಡಿ ಬೆಳಗ್ಗೆ ಉಂಡ್ರೆ ಅನಾರೋಗ್ಯ ದೂರ!

ಊದಲು ಅಕ್ಕಿ ಮೊಸರು ಅನ್ನ

ಊದಲು ಅಕ್ಕಿ ಮೊಸರು ಅನ್ನ

ಸಾಮಾನ್ಯವಾಗಿ ಮೊಸರು ಅನ್ನವನ್ನು ಅನ್ನದಲ್ಲಿ ಮಾಡುವುದನ್ನು ಕಾಣಬಹುದು. ಆದರೆ ಊದಲು ಧಾನ್ಯದಲ್ಲಿ ಕೂಡ ಮಾಡಿ ಸೇವಿಸಬಹುದು. ಇದರಿಂದ ದೇಹ ತಂಪಾಗಿರುವುದಷ್ಟೇ ಅಲ್ಲದೇ, ಆರೋಗ್ಯಕ್ಕೂ ಕೂಡ ಒಳ್ಳೆಯದು. ಊದಲು ಅಕ್ಕಿಯಲ್ಲಿ ಫೈಬರ್, ಪಿಷ್ಟ, ಕೊಬ್ಬು, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದ ಸಮೃದ್ಧವಾಗಿದೆ. ಜೊತೆಗೆ ಗೋಧಿಗಿಂತ ಆರು ಪಟ್ಟು ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಸದ್ಯ  ಊದಲು ಅಕ್ಕಿಯಲ್ಲಿ ಮೊಸರು ಅನ್ನವನ್ನು ಹೇಗೆ ಮಾಡಬೇಕೆಂದು ನಾವು ಇಂದು ನಿಮಗೆ ತಿಳಿಸುತ್ತೇವೆ.

ಮುಂದೆ ಓದಿ ...
  • Share this:

fಬೇಸಿಗೆ ಕಾಲ  (Summer) ಶುರುವಾಗಿದೆ. ಜನ ಬಿಸಿಲಿನ ಬೇಗೆಯಿಂದ ಒದ್ದಾಡುತ್ತಿದ್ದಾರೆ. ಈ ನಡುವೆ ದೇಹದ ಉಷ್ಣಾಂಶ (Heat) ಕಡಿಮೆ ಮಾಡಿಕೊಳ್ಳಲು ತಂಪಾಗಿರುವ ಆಹಾರ (Food) ಸೇವಿಸುವುದು ಉತ್ತಮ. ಹಾಗಾಗಿ ಜನ ನೀರಿನಾಂಶವಿರುವ ಆಹಾರ ಪದಾರ್ಥಗಳತ್ತ ವಾಲುತ್ತಿದ್ದಾರೆ. ಈ ನಡುವೆ ಮೊಸರನ್ನು (Curd Rice) ಕೂಡ ತಂಪಾದ ಆಹಾರಗಳಲ್ಲಿ ಒಂದಾಗಿದ್ದು, ಬೆಳಗಿನ ತಿಂಡಿಗೆ ಕೂಡ ಸೇವಿಸಬಹುದು. ಆದರೆ ಪ್ರತಿ ಬಾರಿ ಒಂದೇ ತರಹದ ಮೊಸರನ್ನ ಸೇವಿಸಿದರೇ ಈ ಬಾರಿ ಕೊಂಚ ಡಿಫರೆಂಟ್​ ಆಗಿ ಊದಲು (Barnyard Millet) ಸಿರಿ ಧಾನ್ಯದಲ್ಲಿ ಮೊಸರು ಅನ್ನ ಟ್ರೈ ಮಾಡಬಹುದು. ಅಷ್ಟಕ್ಕೂ ಊದಲು ಎಂಬ ಪದವನ್ನೇ ಎಷ್ಟೋ ಮಂದಿ ಕೇಳಿರುವುದಿಲ್ಲ. ಅಷ್ಟಕ್ಕೂ ಊದಲು ಸಣ್ಣ ಸಿರಿಧಾನ್ಯಗಳಲ್ಲಿ ಒಂದಾಗಿದೆ. ಸಿಹಿ ಮತ್ತು ರುಚಿಯಾಗಿರುವ ಊದಲನ್ನು ಮುಖ್ಯವಾಗಿ ಭಾರತ, ಪಾಕಿಸ್ತಾನ, ನೇಪಾಳ, ಜಪಾನ್ ಮತ್ತು ಚೀನಾದ ಪರ್ವತ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಈ ಸಿರಿಧಾನ್ಯವನ್ನು ಹೆಚ್ಚಾಗಿ ಉತ್ತರಾಖಂಡದಲ್ಲಿ ಬೆಳೆಯಲಾಗುತ್ತದೆ. ಅಲ್ಲದೇ ತಮಿಳುನಾಡಿನ ಪರ್ವತ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.


ಊದಲು ಅಕ್ಕಿ ಮೊಸರು ಅನ್ನ


ಸಾಮಾನ್ಯವಾಗಿ ಮೊಸರು ಅನ್ನವನ್ನು ಅನ್ನದಲ್ಲಿ ಮಾಡುವುದನ್ನು ಕಾಣಬಹುದು. ಆದರೆ ಊದಲು ಧಾನ್ಯದಲ್ಲಿ ಕೂಡ ಮಾಡಿ ಸೇವಿಸಬಹುದು. ಇದರಿಂದ ದೇಹ ತಂಪಾಗಿರುವುದಷ್ಟೇ ಅಲ್ಲದೇ, ಆರೋಗ್ಯಕ್ಕೂ ಕೂಡ ಒಳ್ಳೆಯದು. ಊದಲು ಅಕ್ಕಿಯಲ್ಲಿ ಫೈಬರ್, ಪಿಷ್ಟ, ಕೊಬ್ಬು, ಕ್ಯಾಲ್ಸಿಯಂ, ರಂಜಕ ಮತ್ತು ಕಬ್ಬಿಣದ ಸಮೃದ್ಧವಾಗಿದೆ. ಜೊತೆಗೆ ಗೋಧಿಗಿಂತ ಆರು ಪಟ್ಟು ಹೆಚ್ಚು ಫೈಬರ್ ಅಂಶವನ್ನು ಹೊಂದಿದೆ. ಸದ್ಯ  ಊದಲು ಅಕ್ಕಿಯಲ್ಲಿ ಮೊಸರು ಅನ್ನವನ್ನು ಹೇಗೆ ಮಾಡಬೇಕೆಂದು ನಾವು ಇಂದು ನಿಮಗೆ ತಿಳಿಸುತ್ತೇವೆ.


ಊದಲು ಅಕ್ಕಿ ಮೊಸರು ಅನ್ನ


ಊದಲು ಅಕ್ಕಿಯಲ್ಲಿ ಮೊಸರನ್ನ ಮಾಡಲು ಬೇಕಾಗಿರುವ ಸಾಮಾಗ್ರಿಗಳು:


  • ಊದಲು ಅಕ್ಕಿ - 500 ಗ್ರಾಂ

  • ಹಾಲು - ಒಂದು ಕಪ್

  • ಮೊಸರು - ಅರ್ಧ ಕಪ್

  • ಉಪ್ಪು – ಅಗತ್ಯಕ್ಕೆ ತಕ್ಕಷ್ಟು

  • ಕೊತ್ತಂಬರಿ ಸೊಪ್ಪು – ಸ್ವಲ್ಪ

  • ಕರಿಬೇವಿನ ಸೊಪ್ಪು – ಸ್ವಲ್ಪ

  • ಸಾಸಿವೆ - 1 ಟೀ ಸ್ಪೂನ್

  • ಒಣ ಮೆಣಸಿನಕಾಯಿ - 2

  • ದಾಳಿಂಬೆ, ಶುಂಠಿ – ಸ್ವಲ್ಪ




ಊದಲು ಅಕ್ಕಿಯಲ್ಲಿ ಮೊಸರನ್ನ ಮಾಡುವ ವಿಧಾನ


  • ಮೊದಲು ಊದಲು ಅಕ್ಕಿಯನ್ನು ಸ್ವಚ್ಛಗೊಳಿಸಿ ಮತ್ತು ಮೂರು ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ.  ಅಕ್ಕಿ ತಣ್ಣಗಾದ ನಂತರ, ಹಾಲು ಸೇರಿಸಿ ಮತ್ತು ಮಿಕ್ಸ್​ ಮಾಡಿ.

  • ನಂತರ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ ಹಾಕಿ. ಒಣ ಮೆಣಸಿನಕಾಯಿ, ಶುಂಠಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ. ಬಳಿಕ ಅದನ್ನು ಮೊಸರಿಗೆ ಸೇರಿಸಿ, ಹಾಲು ಸುರಿಯಿರಿ ಮತ್ತು ಅದನ್ನು ಅನ್ನಕ್ಕೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಉಪ್ಪು ಸೇರಿಸಿ.

  • ಕೊನೆಗೆ ಕೊತ್ತಂಬರಿ ಸೊಪ್ಪು ಮತ್ತು ದಾಳಿಂಬೆಯನ್ನು ಹಾಕಿ ಸರ್ವ್ ಮಾಡಿ. ಈಗ ಊದಲು ಅಕ್ಕಿಯಿಂದ ಮಾಡಿದ ಮೊಸರು ಅನ್ನವು ಸವಿಯಲು ಸಿದ್ಧ. ನೀವು ಕೂಡ ಮನೆಯಲ್ಲಿಯೇ ಒಮ್ಮೆ ಟ್ರೈ ಮಾಡಿ ನೋಡಿ.

  • ಅಲ್ಲದೇ ಇದು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.


ಸಿಹಿಯಾಗಿರುವ ಊದಲಿನಿಂದ ಮಾಡಿದ ಆಹಾರಗಳು ಉತ್ತಮ ಬಲವರ್ಧಕವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಅದಕ್ಕಾಗಿಯೇ ಉತ್ತರ ಭಾರತದಲ್ಲಿ ಅನೇಕ ಜನರು ಉಪವಾಸದ ಸಮಯದಲ್ಲಿ ಊದಲಿನಿಂದ ಮಾಡಿದ ಆಹಾರವನ್ನು ಸೇವಿಸುತ್ತಾರೆ. ಊದಲು ತಿನ್ನುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.

Published by:Monika N
First published: