ಇಂಗ್ಲೆಂಡ್‌ನ ಪ್ರತಿಷ್ಠಿತ ಪ್ರಶಸ್ತಿಗೆ ಬೆಂಗಳೂರು ಮನೋವೈದ್ಯೆ ಡಾ. ರಮ್ಯಾ ಹೆಸರು ಶಿಫಾರಸು

ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಂತರ ಪ್ರತಿಕ್ರಿಯಿಸಿದ ಡಾ.ರಮ್ಯಾ ಮೋಹನ್, ಇದು ಹೆಮ್ಮೆಯ ಸಂಗತಿಯಾಗಿದ್ದು, ಮನೋವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಇಂಗ್ಲೆಂಡ್ ಗುರುತಿಸಿದೆ

news18-kannada
Updated:September 6, 2019, 10:18 PM IST
ಇಂಗ್ಲೆಂಡ್‌ನ ಪ್ರತಿಷ್ಠಿತ ಪ್ರಶಸ್ತಿಗೆ ಬೆಂಗಳೂರು ಮನೋವೈದ್ಯೆ ಡಾ. ರಮ್ಯಾ ಹೆಸರು ಶಿಫಾರಸು
ಡಾ.ರಮ್ಯಾ ಮೋಹನ್
  • Share this:
ಬೆಂಗಳೂರು (ಸೆ. 05) : ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸೈಕ್ರಿಯಾರ್ಟಿಸ್ಟ್ ಮನೋವೈದ್ಯಕೀಯ ಕ್ಷೇತ್ರದ ಉನ್ನತ ಸಾಧಕರಿಗೆ ಪ್ರಶಸ್ತಿ ಘೋಷಿಸಿದೆ. ಈ ಪ್ರಶಸ್ತಿಗೆ ಬೆಂಗಳೂರು ಮೂಲದ ಮನೋವೈದ್ಯೆ ಡಾ.ರಮ್ಯಾ ಮೋಹನ್ ನಾಮನಿರ್ದೇಶನಗೊಂಡಿದ್ದಾರೆ. 2019ರ ಮನೋವೈದ್ಯಕೀಯ ಸಂವಹನ ವಿಭಾಗದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಮೂವರು ವೈದ್ಯರಲ್ಲಿ ಡಾ. ರಮ್ಯಾ ಕೂಡ ಒಬ್ಬರಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೇ ವಿದ್ಯಾರ್ಥಿ ಮತ್ತು ಕಲಾವಿದೆಯಾಗಿದ್ದಾರೆ.

ಜಾಗತಿಕ ಮಾನಸಿಕ ಆರೋಗ್ಯ ಪ್ರವರ್ತಕಿಯಾಗಿರುವ ಡಾ.ರಮ್ಯಾ ಮೋಹನ್, ವಿಶ್ವ ಮನೋವೈದ್ಯಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ 2018ರಲ್ಲಿ ರಾಯಲ್‌ ಕಾಲೇಜ್‌ ಫೆಲೋಶಿಪ್‌ನ್ನು ಕೂಡ ಪಡೆದಿದ್ದರು. ನರವಿಜ್ಞಾನ, ಮಾನಸಿಕ ಆರೋಗ್ಯ ಮತ್ತು ಸಂಗೀತ ಕಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಸಮುದಾಯ ಅಭಿವೃದ್ಧಿ ಯೋಜನೆಗಳ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದ ಡಾ.ರಮ್ಯಾ ಮೋಹನ್ ಸಂಗೀತ ಆಧಾರಿತ ಮಾನಸಿಕ ಚಿಕಿತ್ಸಾ ವಿಧಾನ 'ಕೇಪ್‌' ಬಳಕೆಯಲ್ಲಿ ಪ್ರಮುಖರಾಗಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ನಂತರ ಪ್ರತಿಕ್ರಿಯಿಸಿದ ಡಾ.ರಮ್ಯಾ ಮೋಹನ್, ಇದು ಹೆಮ್ಮೆಯ ಸಂಗತಿಯಾಗಿದ್ದು, ಮನೋವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಇಂಗ್ಲೆಂಡ್ ಗುರುತಿಸಿದೆ. ಇದರಿಂದ ಎಲ್ಲರಿಗೂ ಉತ್ತಮ ಮಾನಸಿಕ ಆರೋಗ್ಯ ನೀಡುವ ಕಾರ್ಯ ಮಾಡಲು ನನಗೆ ಹೊಸ ಶಕ್ತಿ ಬಂದಂತಾಗಿದೆ. ನನ್ನ ಈ ಕಾರ್ಯ ಮುಂದುವರಿಯುತ್ತದೆ  ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಡಾ.ರಮ್ಯಾ ಮೋಹನ್


ಡಾ. ಡಾ.ರಮ್ಯಾ ಮೋಹನ್ ಆರ್​​ಸಿಪಿಸೈಕ್​ ಪ್ರಶಸ್ತಿ ನಾಮನಿರ್ದೇಶನಗೊಂಡಿದ್ದಾರೆ. ಇದನ್ನು ಮಾಧ್ಯಮ, ಸಮುದಾಯ ಕಾರ್ಯಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮನೋವೈದ್ಯಕೀಯ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ತಂಡಗಳ ಶ್ಲಾಘನೀಯ ಕಾರ್ಯವನ್ನು ಗುರುತಿಸುವ ಸಲುವಾಗಿ ರಾಯಲ್‌ ಕಾಲೇಜ್‌ ಆಫ್‌ ಸೈಕ್ರಿಯಾರ್ಟಿಸ್ಟ್‌ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಒಟ್ಟು 17 ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ನವೆಂಬರ್‌ನಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.

ಇಂಗ್ಲೆಂಡ್‌ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿರುವ ಇವರು, ಪ್ರಸ್ತುತ ಭಾರತದಲ್ಲಿ ಸಮುದಾಯದ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮಕ್ಕಳು ಮತ್ತು ಯುವಜನತೆಯಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾ, ಎಲ್ಲರಿಗೂ ಗುಣಮಟ್ಟದ ಮಾನಸಿಕ ಆರೋಗ್ಯ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
First published:September 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ