ಬಾಳೆಹಣ್ಣನ್ನು(Banana) ನೀವು ಯಾವುದೇ ರೂಪದಲ್ಲಿ ತಿಂದರೂ ದೇಹಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಕುಕೀಗಳು, ಮಿಲ್ಕ್ ಶೇಕ್ ಗಳು ಅಥವಾ ಚಿಪ್ಸ್ ಹೀಗೆ ಬಾಳೆಹಣ್ಣುಗಳು ಪ್ರತಿಯೊಂದು ರೂಪದಲ್ಲೂ ಜನರಿಗೆ ಇಷ್ಟವಾಗುವ ಮತ್ತು ಕಡಿಮೆ ಹಣದಲ್ಲಿ ಸಿಗುವ ಒಂದು ಹಣ್ಣು ಅಂತಾನೆ ಹೇಳಿದರೆ ತಪ್ಪಾಗುವುದಿಲ್ಲ.ಇದು ಕಡಿಮೆ ಹಣಕ್ಕೆ ಸಿಗುತ್ತದೆ ಎಂದು ನೀವು ಇದರಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆಯೋ ಅಂತ ಸಂಶಯ ಪಡಬೇಕಾಗಿಲ್ಲ. ಬಾಳೆಹಣ್ಣಿನಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿವೆ(Health Benefits).
ನೀವು ಬೆಳಗ್ಗೆ ಜಿಮ್‌ನಲ್ಲಿ ತೀವ್ರವಾದ ತಾಲೀಮು ಮಾಡಿ ಮುಗಿಸಿ ಬಂದು ಬಾಳೆಹಣ್ಣನ್ನು ಸೇವಿಸಬಹುದು ಮತ್ತು ದಿನದ ಯಾವುದೇ ಸಮಯದಲ್ಲಿಯೂ ಈ ಹಣ್ಣನ್ನು ತಿನ್ನಬಹುದು.
ಬಾಳೆಹಣ್ಣುಗಳಲ್ಲಿ ಪ್ರೋಟೀನ್, ಪೊಟ್ಯಾಷಿಯಮ್, ಫೈಬರ್ ಕಾರ್ಬೋಹೈಡ್ರೇಟ್‌ಗಳು ಮತ್ತು ಪೋಷಕಾಂಶಗಳು ಹೇರಳವಾಗಿ ಇರುತ್ತವೆ. ಆದರೆ ಈ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವವರು ಮತ್ತು ಮಧುಮೇಹದಿಂದ ಬಳಲುತ್ತಿರುವ ರೋಗಿಗಳು ಈ ಹಣ್ಣಿನಲ್ಲಿರುವ ಸಕ್ಕರೆ ಅಂಶದಿಂದಾಗಿ ಇದನ್ನು ಹೆಚ್ಚಾಗಿ ತಿನ್ನುವುದಿಲ್ಲ. ತಜ್ಞರು ಈ ಕೊಬ್ಬು ರಹಿತ ಹಣ್ಣನ್ನು ನಿಮ್ಮ ಜೀರ್ಣಕ್ರಿಯೆಗೆ ಉತ್ತಮ ಎಂದು ಹೇಳಿದ್ದಾರೆ.
ಬಾಳೆಹಣ್ಣಿನಿಂದಾಗುವ ಆರೋಗ್ಯ ಪ್ರಯೋಜನಗಳು
ಇದನ್ನೂ ಓದಿ: ಕೆಮ್ಮಿ ಕೆಮ್ಮಿ ಸಾಕಾಯ್ತಾ? ಈ ವಸ್ತುಗಳನ್ನು ಬಳಸಿದ್ರೆ ಕೆಮ್ಮು ಮಾಯವಾಗುತ್ತೆ
ಜರ್ನಲ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿಯಲ್ಲಿ ಪ್ರಕಟವಾದ ಆಸ್ಟ್ರೇಲಿಯದ ಅಧ್ಯಯನದ ಪ್ರಕಾರ, ಗ್ಯಾಸ್ಟ್ರೋ, ಡಯಟಿಷಿಯನ್‌ಗಳು ಮತ್ತು ಪೌಷ್ಟಿಕ ತಜ್ಞರು ಕರುಳು ಸಂಬಂಧಿತ ಅಸ್ವಸ್ಥತೆಯ ಬಗ್ಗೆ ಮತ್ತು ಬಾಳೆಹಣ್ಣು ಹೇಗೆ ಸಹಾಯಕವಾಗಿದೆ ಎಂದು ವ್ಯಾಖ್ಯಾನಿಸಲು ಹಿಂದಿನ ಅಧ್ಯಯನಗಳ ವಿಮರ್ಶೆ ಮಾಡಲು ಒಟ್ಟಿಗೆ ಸೇರಿದರು.
ಜೀವನದ ಆರಂಭಿಕ ಹಂತದಲ್ಲಿ ನಾವು ತೆಗೆದುಕೊಳ್ಳುವ ಆಹಾರ ಪದಾರ್ಥಗಳು ನಮ್ಮ ಜೀವನದ ನಂತರದ ಹಂತದಲ್ಲಿ ರೋಗ ಅಥವಾ ಸಾವಿನ ಅಪಾಯ ನಿರ್ಧರಿಸುತ್ತವೆ ಎಂದು ಹೇಳಲಾಗುತ್ತದೆ. ಬಾಲ್ಯ ಅಥವಾ ಹದಿಹರೆಯದಲ್ಲಿ ಸಂಸ್ಕರಿಸಿದ, ಹೆಚ್ಚಿನ ಕೊಬ್ಬು ಮತ್ತು ಸಕ್ಕರೆಯುಕ್ತ ಆಹಾರಗಳ ಹೆಚ್ಚುವರಿ ಸೇವನೆಯು ಕರುಳಿನ ಕಾಯಿಲೆ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್‌ನ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. ಇದು ಮದ್ಯ, ಸಂಸ್ಕರಿಸಿದ ಆಹಾರಗಳು, ಪ್ರಾಣಿಗಳ ಕೊಬ್ಬುಗಳು, ಕರುಳಿನ ಉರಿಯೂತ ಪ್ರಚೋದಿಸುವ ಮತ್ತು ಕರುಳಿನ ಆರೋಗ್ಯವನ್ನೂ ಹಾನಿಗೊಳಿಸಬಹುದು.
ಈ ಅಧ್ಯಯನವು ಕೆಂಪು ಮಾಂಸ, ಗೋಧಿ ಮತ್ತು ಡೈರಿ ಉತ್ಪನ್ನಗಳನ್ನು ನಿಮ್ಮ ಆಹಾರದಿಂದ ಸಂಪೂರ್ಣವಾಗಿ ತೆಗೆದು ಹಾಕಿ ಮತ್ತು ಸೇಬು, ಬಾಳೆಹಣ್ಣು, ಆಲೂಗಡ್ಡೆ ಮುಂತಾದ ಹೆಚ್ಚಿನ ನಾರಿನಂಶ ಹೊಂದಿರುವ ಸಸ್ಯ ಆಧಾರಿತ ಆಹಾರಗಳನ್ನು ಸೇವಿಸುವುದರಿಂದ ನಿಮ್ಮ ಕರುಳಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದೆ.
ಕರುಳಿನ ಆರೋಗ್ಯಕ್ಕೆ ಬಾಳೆಹಣ್ಣುಗಳು ಹೇಗೆ ಪ್ರಯೋಜನಕಾರಿ..?
ಸೇಬುಗಳು ನಾರು ಮತ್ತು ಆ್ಯಂಟಿ ಆಕ್ಸಿಡೆಂಟ್ಗಳ ಸಮೃದ್ಧ ಮೂಲವಾಗಿದೆ ಎಂದು ತಜ್ಞರು ತುಂಬಾ ಸಮಯದಿಂದ ಹೇಳುತ್ತಲೇ ಬಂದಿದ್ದಾರೆ. ಆದರೂ, ಬಾಳೆಹಣ್ಣುಗಳು ತುಲನಾತ್ಮಕವಾಗಿ ಕಡಿಮೆ ನಾರಿನ ಅಂಶ ಹೊಂದಿವೆ. ಹಾಗಾದರೆ ಈ ಹಣ್ಣು ಕರುಳಿನ ಆರೋಗ್ಯವನ್ನು ಕಾಪಾಡುವ ಹಣ್ಣಿನ ಪಟ್ಟಿಯಲ್ಲಿ ಹೇಗೆ ಸ್ಥಾನ ಕಂಡುಕೊಳ್ಳುತ್ತದೆ ಎಂದು ನೀವು ಕೇಳಬಹುದು.
ಇದನ್ನೂ ಓದಿ: ತಲೆ ತಿರುಗುವ ಸಮಸ್ಯೆ ಇದ್ರೆ ಈ ಮನೆಮದ್ದುಗಳನ್ನು ಟ್ರೈ ಮಾಡಿ
ಈ ಅಧ್ಯಯನದ ಲೇಖಕರು ವಿವರಿಸಿದಂತೆ ಬಾಳೆಹಣ್ಣುಗಳು ಒಂದು ಪೂರ್ವಜೈವಿಕ ಆಹಾರವಾಗಿದ್ದು, ಇದು ಬ್ಯೂಟಿರೇಟ್ ಉತ್ಪಾದನೆ ಉತ್ತೇಜಿಸಲು ದೇಹಕ್ಕೆ ನಾರು ಮತ್ತು ನಿರೋಧಕ ಪಿಷ್ಟವನ್ನು ಒದಗಿಸುತ್ತದೆ. ಹೆಲ್ತ್ ಲೈನ್ ಪ್ರಕಾರ, ಈ ಪದಾರ್ಥವು ಕರುಳಿನಲ್ಲಿ ಕಂಡುಬರುವ ಮೂರು ಪ್ರಮುಖ ಕೊಬ್ಬಿನಾಮ್ಲಗಳಲ್ಲಿ ಒಂದಾಗಿದೆ ಮತ್ತು ಇದರ ಹೆಚ್ಚಿನ ಮಟ್ಟವು ಕಿಬ್ಬೊಟ್ಟೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. 2016ರಲ್ಲಿ ಮಾಡಿದಂತಹ ಒಂದು ಅಧ್ಯಯನದಲ್ಲಿ ಬ್ಯೂಟೈರೇಟ್ ಕರುಳಿನ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ