ಬಾಳೆ ಹೂವು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ, ಈ ರೀತಿಯಾಗಿ ಬಳಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಶ್ವಾದ್ಯಂತ 80 ಪ್ರತಿಶತಕ್ಕಿಂತಲೂ ಹೆಚ್ಚು ಮಧುಮೇಹ ಪ್ರಕರಣಗಳು ಟೈಪ್ 2 ಡಯಾಬಿಟಿಸ್. ಟೈಪ್ 2 ಡಯಾಬಿಟಿಸ್ ಇರುವವರು ಸಾಮಾನ್ಯವಾಗಿ ಜಡ ಜೀವನಶೈಲಿಯನ್ನು ಹೊಂದಿರುತ್ತಾರೆ.

  • Share this:

    ಮಧುಮೇಹ ಅಥವಾ ಡಯಾಬಿಟಿಸ್ ಇಂದು ಸಾಮಾನ್ಯ ಕಾಯಿಲೆ ಆಗಿಬಿಟ್ಟಿದೆ. ಈ ಸಮಸ್ಯೆ ಕಾಣಿಸಿಕೊಂಡರೆ ರಕ್ತದಲ್ಲಿನ ಸಕ್ಕರೆ ಅಥವಾ ಗ್ಲೂಕೋಸ್ ಮಟ್ಟವು ಹೆಚ್ಚಾಗುತ್ತದೆ. ಆಹಾರದ ಮೂಲಕ ದೇಹ ಸೇರುವ ಗ್ಲೂಕೋಸ್ ಅಂಶವನ್ನು ಇನ್ಸುಲಿನ್ ಎಂಬ ಹಾರ್ಮೋನ್ ದೇಹದ ಜೀವಕೋಶಗಳಿಗೆ ತಲುಪುವಂತೆ ಮಾಡುತ್ತದೆ. ಆದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹೆಚ್ಚಾಗುವುದರಿಂದ ದೇಹದ ಪ್ರಮುಖ ಭಾಗಗಳು ಅನೇಕ ಬಾರಿ ಹಾನಿಗೊಳಗಾಗುತ್ತವೆ. ಹೀಗಾಗಿ ಮಧುಮೇಹಿಗಳ ಆಹಾರ ಕ್ರಮಗಳ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಏಕೆಂದರೆ ಈ ಸಮಸ್ಯೆಯಿಂದ ಬಳಲುತ್ತಿರುವವರು ಕೆಲ ಆಹಾರಗಳನ್ನು ಸೇವಿಸುವುದರಿಂದ ಮತ್ತು ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ರಕ್ತದಲ್ಲಿ ಅತಿಯಾದ ಗ್ಲೂಕೋಸ್ ಇರುವುದರಿಂದ, ಹಲವಾರು ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅವು ಕಣ್ಣು, ಮೂತ್ರಪಿಂಡ ಮತ್ತು ನರಗಳಿಗೆ ಹಾನಿಯನ್ನುಂಟು ಮಾಡುತ್ತದೆ.


    ಆದಾಗ್ಯೂ, ಪ್ರಕೃತಿಯಲ್ಲಿರುವ ಅನೇಕ ಸಸ್ಯಗಳು ಅದ್ಭುತ ಔಷಧೀಯ ಗುಣಗಳನ್ನು ಹೊಂದಿವೆ. ಬಾಳೆಹಣ್ಣು ಕೂಡ ಅಂತಹ ಒಂದು ಗಿಡವಾಗಿದೆ. ಬಾಳೆಹಣ್ಣಿನಂತೆ, ಇದರ ಎಲೆಗಳು, ಕಾಂಡ ಮತ್ತು ಹೂವುಗಳನ್ನು ಸಹ ತುಂಬಾ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಸಂಶೋಧನೆಯ ಪ್ರಕಾರ, ಬಾಳೆ ಹೂವಿನಲ್ಲಿ ಇಂತಹ ಅಂಶಗಳು ಕಂಡುಬರುತ್ತವೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ. ನೀವು ಕಚ್ಚಾ ಬಾಳೆ ಹೂವುಗಳನ್ನು ಸಹ ತಿನ್ನಬಹುದು ಅಥವಾ ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. ಬಾಳೆ ಹೂವು ಮಧುಮೇಹದಲ್ಲಿ ಹೇಗೆ ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ಹೇಗೆ ತಿನ್ನಬೇಕು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.


    2011 ರ ಸಂಶೋಧನೆಯ ಪ್ರಕಾರ , ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಾಳೆ ಹೂವು ಪ್ರಯೋಜನಕಾರಿ ಎಂದು ಕಂಡುಬಂದಿದೆ. ಈ ಸಂಶೋಧನೆಯನ್ನು ಮಧುಮೇಹ ಹೊಂದಿದ್ದ ಇಲಿಗಳ ಮೇಲೆ ಮಾಡಲಾಗಿತ್ತು. ಈ ವೇಳೆ ಅವುಗಳ ತೂಕ ತುಂಬಾ ಹೆಚ್ಚಿತ್ತು ಮತ್ತು ರಕ್ತ ಮತ್ತು ಮೂತ್ರದಲ್ಲಿ ಹೆಚ್ಚು ಸಕ್ಕರೆ ಅಂಶವಿತ್ತು. ಇದೇ ವೇಳೆ ಬಾಳೆ ಹೂವುಗಳನ್ನು ನೀಡಿದ್ದರಿಂದ ಈ ಇಲಿಗಳ ದೇಹದಲ್ಲಿನ ಸಕ್ಕರೆ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿರುವುದು ಎಂದು ಅಧ್ಯಯನದಿಂದ ಕಂಡು ಬಂತು. 2013 ರಲ್ಲಿ ನಡೆಸಿದ ಮತ್ತೊಂದು ಸಂಶೋಧನೆಯು ಇದೇ ರೀತಿಯ ಫಲಿತಾಂಶಗಳನ್ನು ನೀಡಿದೆ.


    ವಿಶ್ವಾದ್ಯಂತ 80 ಪ್ರತಿ ಶತಕ್ಕಿಂತಲೂ ಹೆಚ್ಚು ಮಧುಮೇಹ ಪ್ರಕರಣಗಳು ಟೈಪ್ 2 ಡಯಾಬಿಟಿಸ್. ಟೈಪ್ 2 ಡಯಾಬಿಟಿಸ್ ಇರುವವರು ಸಾಮಾನ್ಯವಾಗಿ ಜಡ ಜೀವನಶೈಲಿಯನ್ನು ಹೊಂದಿರುತ್ತಾರೆ. ನೀವು ಮಧುಮೇಹ ರೋಗಿಯಾಗಿದ್ದರೆ, ಬಾಳೆ ಹೂವಿನ ರಾಮಬಾಣವು ಪರಿಹಾರವಾಗಿದೆ. ಇದಕ್ಕೆ ಕಾರಣ ಬಾಳೆ ಹೂವು ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೆ ತೂಕವನ್ನು ಕಡಿಮೆ ಮಾಡುತ್ತದೆ. ಅದರೊಂದಿಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯನ್ನು ಆರೋಗ್ಯವಾಗಿರಿಸುತ್ತದೆ.


    ಬಾಳೆ ಹೂವುಗಳನ್ನು ಹೇಗೆ ಸೇವಿಸಬೇಕು?
    ಡಾ.ಲಕ್ಷ್ಮಿದತ್ತ ಶುಕ್ಲಾ ಅವರ ಪ್ರಕಾರ ಬಾಳೆ ಹೂವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಏಕೆಂದರೆ ಇದರಲ್ಲಿ ಫೈಬರ್ ಮತ್ತು ಕಬ್ಬಿಣ ಅಂಶಗಳು ಸಮೃದ್ಧವಾಗಿದೆ. ಇದು ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹೀಗಾಗಿ ಬಾಳೆ ಹೂವಿನ ಆಹಾರವನ್ನಾಗಿ ಬಳಸಿಕೊಳ್ಳಬಹುದು. ಇದಕ್ಕಾಗಿ ನೀವು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅರ್ಧ ಚಮಚ ಸಾಸಿವೆ ಸೇರಿಸಿ. ನಂತರ ಕಡಲೆಕಾಳುಗಳನ್ನು ಸೇರಿಸಿ ಅದನ್ನು ಮುಚ್ಚಿ. ಕಂದು ಬಣ್ಣ ಬರುವವರೆಗೆ ಬೆರೆಸಿ ನಂತರ ಸ್ವಲ್ಪ ಕರಿಬೇವಿನ ಎಲೆ ಸೇರಿಸಿ. ನಂತರ ಕತ್ತರಿಸಿದ ಬಾಳೆ ಹೂವು, ಒಂದು ಚಮಚ ಸಾಂಬಾರ್ ಪುಡಿ, ನಿಮಗೆ ಬೇಕಾದಷ್ಟು ಅರಿಶಿನ ಪುಡಿ ಮತ್ತು ಉಪ್ಪು ಮಿಶ್ರಣ ಮಾಡಿ. ಅದನ್ನು ಮುಚ್ಚಿ ಬೇಯಲು ಬಿಡಿ. ಮತ್ತೆ ಬಿಸಿಯಾಗಿ ಬಡಿಸಿ. ಹೀಗೆ ಪ್ರತಿನಿತ್ಯ ಆಹಾರದಲ್ಲಿ ಬಾಳೆಹೂವಿನ ಪಲ್ಯವನ್ನು ಸೇರ್ಪಡೆಗೊಳಿಸುವುದು ಮಧುಮೇಹ ರೋಗಿಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.


    ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!

    Published by:zahir
    First published: