• Home
  • »
  • News
  • »
  • lifestyle
  • »
  • Baldness Remedy: ತಲೆ ಬೋಳಾಗ್ತಿದೆ ಅಂತ ಚಿಂತೆ ಬಿಡಿ, ಇಲ್ಲೊಂದು ಗುಡ್​ ನ್ಯೂಸ್​ ಇದೆ

Baldness Remedy: ತಲೆ ಬೋಳಾಗ್ತಿದೆ ಅಂತ ಚಿಂತೆ ಬಿಡಿ, ಇಲ್ಲೊಂದು ಗುಡ್​ ನ್ಯೂಸ್​ ಇದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Baldness Can Be Cured: ಕೂದಲಿನ ಕೋಶಕವು ತನ್ನ ಕಾಂಡಕೋಶವನ್ನು ಹಾಳು ಮಾಡುವುದಿಲ್ಲ. ಉಳಿದಿರುವ ಕಾಂಡಕೋಶಗಳು ಕ್ಷೀಣಗೊಳ್ಳುತ್ತಿದ್ದ ಹಾಗೆ ಅವು ವಿಭಜನೆಯಾಗಿ, ಹೊಸ ಕೋಶಗಳನ್ನು ಸೃಷ್ಟಿ ಮಾಡುತ್ತವೆ ಮತ್ತು ಹೊಸ ಕೋಶಕವಾಗಿ ಬೆಳೆಯುತ್ತವೆ ಎಂದು ಕ್ವಿಕ್ಸುವಾನ್ ಹೇಳಿದ್ದಾರೆ.

  • Share this:

ಕೂದಲು ಉದುರುವಿಕೆ (Hair Loss) ಈಗಿನ ಜನರಲ್ಲಿನ ಸರ್ವೇಸಾಮಾನ್ಯವಾದ ಚಿಂತೆಯಾಗಿದೆ. ಹತ್ತು ಜನರಲ್ಲಿ ಕನಿಷ್ಠ ಪಕ್ಷ ಏಳು ಜನರಾದರೂ ಅಯ್ಯೋ ನನ್ನ ಕೂದಲ ವಿಪರೀತ ಕೂದುರುತ್ತಿದೆ, ನಾನು ಸ್ವಲ್ಪೇ ದಿನದಲ್ಲಿ ಬೋಳು ತಲೆ (Bald Hair) ಆಗುತ್ತದೆ ಅಂತಾ ಮಾತಾಡಿಕೊಳ್ಳುತ್ತಿರುತ್ತಾರೆ. ಕೂದಲು ಉದುರುವಿಕೆ ಸಮಸ್ಯೆಗೆ ಬಂದರೆ ಮಾಲಿನ್ಯ, ನಿದ್ರೆಯ ಕೊರತೆ 9Sleeping Problem), ಅನಾರೋಗ್ಯಕರ ಆಹಾರ ಪದ್ಧತಿ (Unhealthy Food), ಒತ್ತಡ ಮತ್ತು ಇತರ ಅಂಶಗಳಿಂದ ಕೂದಲು ಉದುರುವಿಕೆಯ ಸಮಸ್ಯೆ ಹೆಚ್ಚು ಸಾಮಾನ್ಯವಾಗುತ್ತಿದೆ. ಅಷ್ಟೇ ಅಲ್ಲ ಹಲವರಿಗೆ ಇದು ಹಾರ್ಮೋನುಗಳ ಬದಲಾವಣೆಗಳು ಮತ್ತು ಅನುವಂಶಿಕತೆಯಿಂದಲೂ ಉಂಟಾಗಬಹುದು. ಉದುರುವಿಕೆ ಸಮಸ್ಯೆ ಹೆಚ್ಚಾಗಿ ಅಂತಿಮಾವಾಗಿ ಬೊಕ್ಕು ತಲೆ ಉಂಟಾಗುತ್ತದೆ. ಬೋಳಾದ ತಲೆ ಕೆಲವರಿಗೆ ಮುಜುಗರದ ಪ್ರಶ್ನೆ ಕೂಡ ಹೌದು.


ಹೀಗಾಗಿ ಬೋಳು ತಲೆ ನಿವಾರಣೆಗೆ ಅಂತಾನೆ ಈಗ ಕೂದಲ ಕಸಿ ಎಂಬ ವಿಧಾನ ಬಂದಿದೆ. ಕೂದಲ ಕಸಿ ಬೊಕ್ಕತಲೆಯ ವ್ಯಕ್ತಿಗಳಿಗೆ ಅಥವಾ ಕೂದಲು ಉದುರುವ ಸಮಸ್ಯೆ ಇರುವ ವ್ಯಕ್ತಿಗಳಿಗೊಂದು ವರದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಬೋಳು ತಲೆಯಿಂದ ಸ್ವಲ್ಪವಾದರೂ ನಿರಾಳವಾಗಲು ಈ ವಿಧಾನ ಸಹಕಾರಿ. ಆದರೆ ಈಗ ಬೋಳು ತಲೆ ಹೊಂದಿರುವವರಿಗೆ ಮತ್ತೊಂದು ಖುಷಿ ಸಮಾಚಾರವನ್ನು ಸಂಶೋಧನೆ ಪ್ರಕಟಿಸಿದೆ.


ಇದನ್ನೂ ಓದಿ: ಸಂಸ್ಕರಿಸಿದ ಎಣ್ಣೆಯನ್ನು ಅತಿಯಾಗಿ ಬಳಸಿದ್ರೆ ಸಾಲಾಗಿ ಆರೋಗ್ಯ ಸಮಸ್ಯೆ ಕಾಡುತ್ತೆ


ಬೋಳು ತಲೆಯನ್ನು ಗುಣಪಡಿಸಬಹುದು ಎಂದ ಸಂಶೋಧನೆ
ಹೌದು, ವೆಬ್‌ಎಮ್‌ಡಿ ಸೈಟ್‌ನ ಪ್ರಕಾರ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧನೆಯು ಪ್ರೋಟೀನ್ ಅನ್ನು ಪರಿವರ್ತಿಸುವ ಬೆಳವಣಿಗೆಯ ಅಂಶ ಬೀಟಾವನ್ನು (TGF-β) ಗುರುತಿಸಿದೆ. ಇದು ಬೋಳು ತಲೆಯಲ್ಲಿ ಕೂದಲ ಬೆಳವಣಿಗೆಗೆ ಸಹಕಾರಿ ಎಂದು ಸಂಶೋಧಕರು ತಿಳಿಸಿದ್ದಾರೆ.
ಬೀಟಾ (TGF-β) ಹೇಗೆ ಸಹಕಾರಿ?
ಸಂಶೋಧಕರ ಪ್ರಕಾರ, ಭವಿಷ್ಯದ ವಿಜ್ಞಾನಿಗಳು TGF-β ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾದರೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಬಹುದು. TGF-β ನಿರ್ದಿಷ್ಟ ಜೀನ್‌ಗಳೊಂದಿಗೆ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿಜ್ಞಾನಿಗಳು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.


ಬೀಟಾವನ್ನು ಪರಿವರ್ತಿಸುವುದು ಸೈಟೊಕಿನ್‌ಗಳು ಎಂಬ ಸಣ್ಣ ಪ್ರೋಟೀನ್‌ಗಳಲ್ಲಿ ಒಂದಾಗಿದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ರಕ್ತ ಕಣಗಳ ಕೂದಲು ಕೋಶಕ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ಕೂದಲು ಕೋಶಕ ಕೋಶಗಳು ಯಾವಾಗ ಬೆಳೆಯುತ್ತವೆ ಮತ್ತು ಸಾಯುತ್ತವೆ ಎಂಬುದನ್ನು ಈ ಚಕ್ರವು ನಿರ್ಧರಿಸುತ್ತದೆ. ಕಾಂಡಕೋಶಗಳ ಬೆಳವಣಿಗೆಯ ಮೂಲವಾಗಿರುವ ಕೂದಲು ಕಿರುಚೀಲಗಳನ್ನು ಅಧ್ಯಯನ ಮಾಡುವ ಮೂಲಕ ಪುನರುತ್ಪಾದಕ ಔಷಧವನ್ನು ತಯಾರಿಸಲು ಅಧ್ಯಯನವು ತಿಳಿಸಿದೆ.


ರಿವರ್‌ಸೈಡ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಗಣಿತದ ಜೀವಶಾಸ್ತ್ರಜ್ಞ ಮತ್ತು ಈ ಅಧ್ಯಯನದ ಸಹ-ಲೇಖಕರಾದ ಕಿಕ್ಸುವಾನ್ ವಾಂಗ್ ಅವರು ತಮ್ಮ  ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ. ತಮ್ಮ ಹೊಸ ಸಂಶೋಧನೆಯು ಕಾಂಡಕೋಶದ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿದೆ ಎಂದು ಕ್ವಿಕ್ಸುವಾನ್ ಹೇಳಿದರು.


ಸಂಶೋಧನೆಯಲ್ಲಿ ಹೇಳಿರುವಂತೆ, TGF-β ಜೀವಕೋಶಗಳು ಸತ್ತ ಬಳಿಕ ಅಂತಿಮವಾಗಿ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಈ ರಾಸಾಯನಿಕದ ಕಡಿಮೆ ಪ್ರಮಾಣವು ಜೀವಕೋಶಗಳನ್ನು ಬೆಳೆಯಲು ಮತ್ತು ವಿಭಜಿಸಲು ಅನುವು ಮಾಡಿಕೊಡುತ್ತದೆ. ಸಂಶೋಧಕರು ಕೂದಲಿನ ಕಿರುಚೀಲಗಳು ಯಾವುದೇ ಗಾಯವಿಲ್ಲದೆ ನಿರಂತರವಾಗಿ ಪುನರುತ್ಪಾದನೆಯಾಗುತ್ತದೆ ಎಂದು ತಮ್ಮ ಅಧ್ಯಯನದಲ್ಲಿ ಕೂದಲಿನ ಕಿರುಚೀಲಗಳ ಬಗ್ಗೆ ಕೆಲವು ಆಸಕ್ತಿದಾಯಕ ಗುಣಲಕ್ಷಣವನ್ನು ಸಹ ಕಂಡುಕೊಂಡಿದ್ದಾರೆ.


ಇದನ್ನೂ ಓದಿ: ನಿದ್ರಾಹೀನತೆ ಬರೀ ಹೃದಯಕ್ಕೆ ಅಪಾಯ ಮಾತ್ರ ಅಲ್ಲ, ಟೈಪ್ 2 ಡಯಾಬಿಟಿಸ್​ಗೂ ಕಾರಣವಾಗುತ್ತೆ


ಕೂದಲಿನ ಕೋಶಕವು ತನ್ನ ಕಾಂಡಕೋಶವನ್ನು ಹಾಳು ಮಾಡುವುದಿಲ್ಲ. ಉಳಿದಿರುವ ಕಾಂಡಕೋಶಗಳು ಕ್ಷೀಣಗೊಳ್ಳುತ್ತಿದ್ದ ಹಾಗೆ ಅವು ವಿಭಜನೆಯಾಗಿ, ಹೊಸ ಕೋಶಗಳನ್ನು ಸೃಷ್ಟಿ ಮಾಡುತ್ತವೆ ಮತ್ತು ಹೊಸ ಕೋಶಕವಾಗಿ ಬೆಳೆಯುತ್ತವೆ ಎಂದು ಕ್ವಿಕ್ಸುವಾನ್ ಹೇಳಿದ್ದಾರೆ. ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಸಂಶೋಧನೆ ಪ್ರಯೋಜನಕಾರಿಯಾಗಲಿದೆ ಎಂದು ಬೋಳು ತಲೆ ಹೊಂದಿರುವವರಲ್ಲಿ ಭರವಸೆಯನ್ನು ಮೂಡಿಸಿದ್ದಾರೆ.

Published by:Sandhya M
First published: