Mutton Sukka Recipe: ಮಟ ಮಟ ಮಧ್ಯಾಹ್ನ ಮಟನ್ ಸುಕ್ಕ ಸವಿಯಿರಿ! ಇದು ಬಕ್ರೀದ್ ಸ್ಪೆಷಲ್

Bakrid Special: ಸರಿಯಾದ ರೀತಿಯಲ್ಲಿ ಮಟನ್​ ಸುಕ್ಕ ಮಾಡಿ ಸವಿದರೆ ಅದರ ಟೇಸ್ಟ್​ ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ. ಅಂದಹಾಗೆಯೇ ನೀವೂ ಮಟನ್​ ಸುಕ್ಕ ಸವಿದಿದ್ದೀರಾ? ಒಂದು ವೇಳೆ ಭಾನುವಾರ ಮನೆಯಲ್ಲಿ ಮಟನ್​ ಸುಕ್ಕ ಮಾಡಲು ತೀರ್ಮಾನಿಸಿದರೆ ಈ ರೆಸಿಪಿ ಮಾಡಿ ಸವಿಯಲು ಪ್ರಯತ್ನಿಸಿ. ಅದರಲ್ಲೂ ಸುಲಭವಾಗಿ ಮತ್ತು ವಿಧಾನದ ಮೂಲಕ ಮಾಡಿ ಸವಿದರೆ ಅದರೆ ಟೇಸ್ಟ್​ ಮಸ್ತ್​​ ಆಗಿ ಇರುತ್ತದೆ.

ಮಟನ್ ಸುಕ್ಕ

ಮಟನ್ ಸುಕ್ಕ

  • Share this:
    ಹಬ್ಬದ ಸಮಯದಲ್ಲಿ ಮಟನ್ (Mutton) ಬೆಲೆ ಗಗನಕ್ಕೇರಿರುತ್ತದೆ. ಅದರಲ್ಲೂ ಮುಸ್ಲಿಮರ ಹಬ್ಬದ ಸಮಯದಲ್ಲಿ ಮಟನ್​ ಮಾಂಸದ ಬೆಲೆ ನಾಲ್ಕಂಕೆಯ ಸಂಖ್ಯೆಯಲ್ಲಿರುತ್ತದೆ. ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚಾದರೂ ಅನುಮಾನವಿಲ್ಲ. ಏಕೆಂದರೆ ಮಟನ್​ ಮಾಂಸಕ್ಕೆ ಕೊಂಚ ಬೇಡಿಕೆ (Demond) ಹೆಚ್ಚು. ಹೆಚ್ಚಾಗಿ ಮಟನ್​ ಬಿರಿಯಾನಿ (Mutton Biriyani) ಮಾಡಿ ಸವಿಯುವವರ ಸಂಖಯೆಯೇ ಹೆಚ್ಚು. ಇನ್ನು ಕೆಲವರು ಮಟನ್​​ ಗ್ರೀನ್​ ಮಸಾಲ (Mutton Green Masala) ಮಾಡಿ ಸವಿಯುತ್ತಾರೆ. ಆದರೆ ಮಟನ್​ ಸುಕ್ಕ (Muttin Sukka) ಮಾಡಿ ಸವಿದರೆ ಅದರ ಟೇಸ್ಟ್​ ಬೇರೆಯೇ ಇರುತ್ತದೆ.

    ಹೌದು. ಸರಿಯಾದ ರೀತಿಯಲ್ಲಿ ಮಟನ್​ ಸುಕ್ಕ ಮಾಡಿ ಸವಿದರೆ ಅದರ ಟೇಸ್ಟ್​ ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ. ಅಂದಹಾಗೆಯೇ ನೀವೂ ಮಟನ್​ ಸುಕ್ಕ ಸವಿದಿದ್ದೀರಾ? ಒಂದು ವೇಳೆ ಭಾನುವಾರ ಮನೆಯಲ್ಲಿ ಮಟನ್​ ಸುಕ್ಕ ಮಾಡಲು ತೀರ್ಮಾನಿಸಿದರೆ ಈ ರೆಸಿಪಿ ಮಾಡಿ ಸವಿಯಲು ಪ್ರಯತ್ನಿಸಿ. ಅದರಲ್ಲೂ ಸುಲಭವಾಗಿ ಮತ್ತು ವಿಧಾನದ ಮೂಲಕ ಮಾಡಿ ಸವಿದರೆ ಅದರೆ ಟೇಸ್ಟ್​ ಮಸ್ತ್​​ ಆಗಿ ಇರುತ್ತದೆ.

    ಮಟನ್​ ಸುಕ್ಕ

    ಇಂದು ಬಕ್ರೀದ್​​ ಹಬ್ಬ. ಈ ಸಡಗರದ ಸಮಯದಲ್ಲಿ ಮುಸ್ಲಿಂ ಸ್ನೇಹಿತರು ಹೆಚ್ಚಾಗಿ ಮಟನ್​ ಮಾಂಸದಿಂದ ತಯಾರಿಸಿದ ಆಹಾರ ತಯಾರಿಸುತ್ತಾರೆ. ಅದರಲ್ಲೂ ಮಟನ್​ ಸುಕ್ಕ ಮಾಡಿ ಸವಿದರೆ ಅದರ ರುಚಿ ಬೇರೆಯೇ ಇರುತ್ತದೆ.

    ಮಟನ್​​ ಸುಕ್ಕಕ್ಕೆ ಬೇಕಾಗುವ ಸಾಮಗ್ರಿಗಳು

    ಎಣ್ಣೆ, ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸು, 30ಸಣ್ಣ ಈರುಳ್ಳಿ, 2 ಟೊಮೆಟೊ, 1.5 ಕೆಜಿ ಮಟನ್, ಕಲ್ಲು ಉಪ್ಪು,1 ಚಮಚ ಅರಶಿಣ ಪುಡಿ, 1 ಚಮಚ ಗಸಗಸೆ, 4 ಚಮಚ ಕೊತ್ತಂಬರಿ, 1 ಚಮಚ ಜೀರಿಗೆ, 1/2 ಚಮಚ ಕಾಳುಮೆಣಸು,1 ಚಮಚ ಸೋಂಪು, 1/2 ಚಮಚ ಮೆಂತ್ಯ, ಚಿಟಿಕೆ ಯಷ್ಟು ಸಾಸಿವೆ, ಏಲಕ್ಕಿ, ಲವಂಗ, ಚಕ್ಕೆ, ಪಲಾವ್ ಎಲೆ, 20 ಬ್ಯಾಡಗಿ ಮೆಣಸು,5  ಸಣ್ಣ ಮೆಣಸು, ತೆಂಗಿನ ತುರಿ, ಹುಣಸೆ ಹುಳಿ.

    ಮಾಡುವ ವಿಧಾನ

    ಒಂದು ಕುಕ್ಕರ್ ಗೆ 1/2 ಚಮಚ ಎಣ್ಣೆ, 5 ಬೆಳ್ಳುಳ್ಳಿ, ಶುಂಠಿ,ಕರಿಬೇವಿನ ಎಲೆ,3 ಹಸಿ ಮೆಣಸು,3 ಸಣ್ಣ ಈರುಳ್ಳಿ,2 ಟೊಮೆಟೊ,1.5 ಕೆಜಿ ಮಟನ್ ಹಾಕಿ ಚೆನ್ನಾಗಿ ಫ್ರೈ ಮಾಡಿ ನಂತರ ಕಲ್ಲು ಉಪ್ಪು,1 ಚಮಚ ಅರಶಿಣ ಪುಡಿ ಸ್ವಲ್ಪ ನೀರು ಸೇರಿಸಿ ಬೇಯಲು ಇಡಿ.

    ಇದನ್ನೂ ಓದಿ: Breakfast Recipe: ಬೆಳಗಿನ ಉಪಹಾರಕ್ಕೆ ಎಳನೀರಿನ ದೋಸೆ ಮಾಡಿ



    ನಂತರ ಒಂದು ಪ್ಯಾ ನ್ ಗೆ , ಸ್ವಲ್ಪ ಎಣ್ಣೆ,  1 ಚಮಚ ಗಸಗಸೆ,4 ಚಮಚ ಕೊತ್ತಂಬರಿ,1 ಚಮಚ ಜೀರಿಗೆ,1/2 ಚಮಚ ಕಾಳುಮೆಣಸು,1 ಚಮಚ ಸೋಂಪು,1/2 ಚಮಚ ಮೆಂತ್ಯ,ಚಿಟಿಕೆ ಯಷ್ಟು ಸಾಸಿವೆ, ಏಲಕ್ಕಿ,ಲವಂಗ,ಚಕ್ಕೆ,ಪಲಾವ್ ಎಲೆ ಹಾಕಿ ಹುರಿದು ತಣ್ಣಗಾಗಲು ಇಡಿ.

    ಇದನ್ನೂ ಓದಿ: Maggi: ಮ್ಯಾಗಿಯನ್ನು ಹೀಗೂ ಮಾಡಬಹುದು! ರೆಸಿಪಿ ಇಲ್ಲಿದೆ

    ಬಳಿಕ ಅದೇ ಪ್ಯಾ ನ್ ಗೆ ಸ್ವಲ್ಪ ಎಣ್ಣೆ, 20 ಬ್ಯಾಡಗಿ ಮೆಣಸು,5 ಸಣ್ಣ ಮೆಣಸು ಹಾಕಿ ಹುರಿಯಿರಿ , ತಣ್ಣಗಾದ ನಂತರ ನೀರು ಸೇರಿಸದೆ ಪೌಡರ್ ಮಾಡಿ .

    ಪ್ಯಾ ನ್ ಗೆ 8 ಬೆಳ್ಳುಳ್ಳಿ, 1 ತುಂಡರಿಸಿದ  ಈರುಳ್ಳಿ,ಸ್ವಲ್ಪ ಕರಿಬೇವಿನ ಎಲೆ ಹಾಕಿ ಫ್ರೈ ಮಾಡಿ , ತಣ್ಣಗಾದ ನಂತರ ಹುಣಸೆಹಣ್ಣು , ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿ.  ನಂತರ ಪ್ಯಾ ನ್ ಗೆ  ತೆಂಗಿನ ತುರಿ,ಒಂದು ಚಮಚ ಅರಶಿನ ಪುಡಿ ಹಾಕಿ ಫ್ರೈ ಮಾಡಿ.

    ಈಗ ಕುಕ್ಕರ್ ನಲ್ಲಿ ಬೇಯಲು ಇಟ್ಟಿದ್ದ ಮಟನ್ ಗೆ , ಮಿಕ್ಸಿ ಮಾಡಿದ ಈರುಳ್ಳಿ ಬೆಳ್ಳುಳ್ಳಿ ಮಿಶ್ರಣ ವನ್ನು ಹಾಕಿ , ನಂತರ ಮಿಕ್ಸಿ ಮಾಡಿರುವ  ಪೌಡರ್  ಹಾಕಿ , ನಂತರ ಹುರಿದ ತೆಂಗಿನ ತುರಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ . ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿ. ಮಟನ್ ಸುಕ್ಕ ಸವಿಯಲು ಸಿದ್ಧ.
    Published by:Harshith AS
    First published: