Non-Veg Recipe: ಬಕ್ರೀದ್ ಸ್ಪೆಷಲ್ ಪೆಪ್ಪರ್ ಮಟನ್ ರೆಸಿಪಿ

ಬಕ್ರೀದ್ ಹಬ್ಬದ ಈ ಶುಭ ಸಂದರ್ಭದಲ್ಲಿ ಮುಸ್ಲಿಂ ಕುಟುಂಬದವರು ಸಾಮಾನ್ಯವಾಗಿ ಕುರಿಮಾಂಸದ ಅಡುಗೆಯನ್ನೇ ಮಾಡುತ್ತಾರೆ. ಹಬ್ಬದ ಮಧ್ಯಾಹ್ನ ಅಥವಾ ರಾತ್ರಿಯೂಟಕ್ಕಾಗಿ ಈ ರುಚಿಕರ ಮತ್ತು ಕೊಂಚ ಖಾರವಾದ ಪೆಪ್ಪರ್ ಮಟನ್ ಖಾದ್ಯವನ್ನು ಮಾಡಿನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಕ್ರೀದ್​ ಹಬ್ಬವನ್ನು (Bakrid Festival) ಮುಸ್ಲಿಂರು ಸಂಭ್ರಮದಿಂದ ಆಚರಿಸುತ್ತಾರೆ. ಕೆಲವೊಂದು ನಿಯಮಗಳನ್ನು ಅನುಸರಿಸಿಕೊಂಡು ಹಬ್ಬವನ್ನು ಆಚರಿಸುತ್ತಾರೆ. ಕುರಿಯನ್ನಿ ಬಲಿ ನೀಡಿದ ನಂತರ ಈ ಮಾಂಸವನ್ನು (Meat)  ಮೂರು ಸಮಾನ ತುಂಡುಗಳನ್ನಾಗಿ ಹಂಚಲಾಗುತ್ತದೆ. ಒಂದು ಭಾಗ ಕುಟುಂಬಕ್ಕೆ, ಇನ್ನೆರಡು ತುಂಡುಗಳನ್ನು ಸ್ನೇಹಿತರು ಮತ್ತು ಕುಟುಂಬಕ್ಕೆ ಹೀಗೆ ಹಂಚಿಕೊಳ್ಳಲಾಗುತ್ತದೆ. ಕೊನೆಯ ತುಂಡನ್ನು ಬಡವರಿಗೆ ನೀಡುತ್ತಾರೆ. ಇದು ಅಲ್ಲಾಹುವಿನ ಆಜ್ಞೆಯಾಗಿದೆ. ಬಕ್ರೀದ್ ಹಬ್ಬಕ್ಕಾಗಿ ಮಟನ್ ಬಿರಿಯಾನಿ, (Mutton Biryani) ಮಟನ್ ಕುರ್ಮಾ, ಮಟನ್ ಕೀಮಾ (Mutton Keema) ಮತ್ತು ಭುನಿ ಕಲೆಜಿ ತಯಾರಿಸಲಾಗುತ್ತದೆ. ಇದರೊಂದಿಗೆ ಸಿಹಿ ತಿಂಡಿಗಳಾಗಿರುವಂತಹ ಶೀರ ಕುರ್ಮಾ ಮತ್ತು ಪಾಯಸ ಮಾಡಲಾಗುತ್ತದೆ. ಇದೀಗ ನಾವು ಪೆಪ್ಪರ್ ಮಟನ್ ಮಾಡೋದನ್ನು ತಿಳಿಸಕೊಡುತ್ತಿದ್ದೇವೆ.

ಅಗತ್ಯವಿರುವ ಸಾಮಾಗ್ರಿಗಳು:

*ಮಟನ್ - ಒಂದು ಕೆಜಿ

*ಒಣಮೆಣಸಿನ ಪುಡಿ: ಒಂದು ದೊಡ್ಡ ಚಮಚ

*ಗರಂ ಮಸಾಲಾ ಪುಡಿ : ಒಂದು ದೊಡ್ಡ ಚಮಚ

*ಬೇವಿನ ಎಲೆಗಳು : ಒಂದು ಎಸಳು

*ಅರಿಶಿನ ಪುಡಿ: ಅರ್ಧ ದೊಡ್ಡಚಮಚ

*ಹಸಿಮೆಣಸು : ನಾಲ್ಕು (ಉದ್ದಕ್ಕೆ ಸೀಳಿದ್ದು)

*ಹಸಿಶುಂಠಿಯ ಪೇಸ್ಟ್: ಒಂದು ದೊಡ್ಡಚಮಚ

*ಸಾಸಿವೆ: ಒಂದು ದೊಡ್ಡಚಮಚ

*ಕಾಳುಮೆಣಸು: ಮೂರು ದೊಡ್ಡಚಮಚ

*ಕೊತ್ತಂಬರಿ ಪುಡಿ: ಒಂದು ದೊಡ್ಡಚಮಚ

*ಶುಂಠಿ-ಬೆಳ್ಳುಳ್ಳಿ ಪೇಸ್ಟ್: ಅರ್ಧ ದೊಡ್ಡಚಮಚ

*ಎಣ್ಣೆ : ಒಂದು ದೊಡ್ಡಚಮಚ

*ಉಪ್ಪು: ರುಚಿಗನುಸಾರ

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

ವಿಧಾನ:

1) ಮಾಂಸದ ತುಂಡುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರೆಲ್ಲಾ ಹೊರಹೋಗುವಂತೆ ಬಸಿಯಿರಿ. ಇದಕ್ಕೆ ಅರ್ಧದಷ್ಟು ಅರಿಶಿನದ ಪುಡಿ ಹಚ್ಚಿ ಬದಿಗಿಡಿ.

2) ಸುಮಾರು ಹದಿನೈದು ನಿಮಿಷದ ಬಳಿಕ ಪ್ರೆಶರ್ ಕುಕ್ಕರ್ ನಲ್ಲಿ ಕೊಂಚ ಎಣ್ಣೆ ಹಾಕಿ ಬಿಸಿಮಾಡಿ. ಬಿಸಿಯಾದ ಬಳಿಕ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಳಿದ ಅರಿಶಿನ ಪುಡಿ, ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಚಿಕ್ಕ ಉರಿಯಲ್ಲಿ ನಡುನಡುವೆ ತಿರುವುತ್ತಾ ಹುರಿಯಿರಿ.

3) ಕೊಂಚ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಮಾಂಸದ ತುಂಡುಗಳನ್ನು ಹಾಕಿ ಕೆಲಕಾಲ ಹುರಿದು ಬಳಿಕ ಮುಚ್ಚಳ ಮುಚ್ಚಿ ಅತಿ ಕಡಿಮೆ ಉರಿಯಲ್ಲಿ ಸುಮಾರು ಹದಿನೈದು ನಿಮಿಷ ಬೇಯಲು ಬಿಡಿ.

4) ಇನ್ನೊಂದು ಪಾತ್ರೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಬಳಿಕ ಬೇವಿನ ಎಲೆ, ಶುಂಠಿ ಪೇಸ್ಟ್, ಹಸಿಮೆಣಸು ಹಾಕಿ ಕಂದು ಬಣ್ಣವಾಗುವವರೆಗೆ ಹುರಿಯಿರಿ.

ಇದನ್ನೂ ಓದಿ: Recipe: ಒಂದು ಕುಕ್ಕರ್, ಐದು ಡಿಶ್: ಈ ನಾನ್-ವೆಜ್ ರೆಸಿಪಿಗಳನ್ನು ಕುಕ್ಕರ್ ‌ನಲ್ಲಿ ಸುಲಭವಾಗಿ ತಯಾರಿಸಿ

5) ಬಳಿಕ ಗರಂ ಮಸಾಲ ಪುಡಿ, ಕಾಳುಮೆಣಸು ಹಾಕಿ ಹುರಿಯಿರಿ.

6) ನಂತರ ಪ್ರೆಶರ್ ಕುಕ್ಕರಿನಲ್ಲಿ ಬೇಯಿಸಿದ್ದ ಮಾಂಸದ ತುಂಡುಗಳನ್ನು ಇದಕ್ಕೆ ಹಾಕಿ ತಿರುವಿ

7) ಚಿಕ್ಕ ಉರಿಯಲ್ಲಿಯೇ ನಡುನಡುವೆ ತಿರುವುತ್ತಾ ಮಾಂಸ ಬೇಯಲು ಬಿಡಿ. ಹತ್ತು ನಿಮಿಷದ ಬಳಿಕ ಉರಿಯನ್ನು ನಂದಿಸಿ.

8) ಕೊತ್ತಂಬರಿ ಸೊಪ್ಪನ್ನು ಚಿಕ್ಕದಾಗಿ ಹೆಚ್ಚಿ ಮೇಲೆ ಹಾಕಿ ಬಿಸಿಬಿಸಿಯಿದ್ದಂತೆಯೇ ಅತಿಥಿಗಳಿಗೆ ಬಡಿಸಿ.


ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿದೆ. ಭಾರತೀಯ ಮುಸ್ಲಿಂ ಬಾಂಧವರು ಸೇರಿದಂತೆ ವಿಶ್ವದ್ಯಾಂತ ಇರುವ ಮುಸ್ಲಿಮರು ಈ ಹಬ್ಬವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬದ ಹಿನ್ನಲೆಯ ಪ್ರಕಾರ ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲ್ಹಾನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎಂದು ಆಚರಿಸುತ್ತಾರೆ. ಬಕ್ರೀದ್ ದಿನ ಮುಸ್ಲೀಮ್ ಬಾಂಧವರು ಪರಸ್ಪರ ಶುಭ ಹಾರೈಸಿ ತುಂಬಾ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಹೆಚ್ಚಾಗಿ ನಾನ್ ವೆಜ್ ಹಬ್ಬದ ಅಡುಗೆಗಳನ್ನು ಮಾಡಲಾಗುವುದು.


Published by:Pavana HS
First published: