Non-Veg Recipe: ಬಕ್ರೀದ್ ಹಬ್ಬಕ್ಕೆ ಸ್ಪೆಷಲ್ ಮಟನ್ ಖೀಮಾ ರೆಸಿಪಿ

ಬಕ್ರೀದ್ ಹಬ್ಬಕ್ಕಾಗಿ ಮಟನ್ ಬಿರಿಯಾನಿ, (Mutton Biryani) ಮಟನ್ ಕುರ್ಮಾ, ಮಟನ್ ಕೀಮಾ (Mutton Keema) ಮತ್ತು ಭುನಿ ಕಲೆಜಿ ತಯಾರಿಸಲಾಗುತ್ತದೆ. ಇದರೊಂದಿಗೆ ಸಿಹಿ ತಿಂಡಿಗಳಾಗಿರುವಂತಹ ಶೀರ ಕುರ್ಮಾ ಮತ್ತು ಪಾಯಸ ಮಾಡಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಕ್ರೀದ್​ ಹಬ್ಬವನ್ನು (Bakrid Festival) ಮುಸ್ಲಿಂರು ಸಂಭ್ರಮದಿಂದ ಆಚರಿಸುತ್ತಾರೆ. ಕೆಲವೊಂದು ನಿಯಮಗಳನ್ನು ಅನುಸರಿಸಿಕೊಂಡು ಹಬ್ಬವನ್ನು ಆಚರಿಸುತ್ತಾರೆ. ಕುರಿಯನ್ನಿ ಬಲಿ ನೀಡಿದ ನಂತರ ಈ ಮಾಂಸವನ್ನು (Meat)  ಮೂರು ಸಮಾನ ತುಂಡುಗಳನ್ನಾಗಿ ಹಂಚಲಾಗುತ್ತದೆ. ಒಂದು ಭಾಗ ಕುಟುಂಬಕ್ಕೆ, ಇನ್ನೆರಡು ತುಂಡುಗಳನ್ನು ಸ್ನೇಹಿತರು ಮತ್ತು ಕುಟುಂಬಕ್ಕೆ ಹೀಗೆ ಹಂಚಿಕೊಳ್ಳಲಾಗುತ್ತದೆ. ಕೊನೆಯ ತುಂಡನ್ನು ಬಡವರಿಗೆ ನೀಡುತ್ತಾರೆ. ಇದು ಅಲ್ಲಾಹುವಿನ ಆಜ್ಞೆಯಾಗಿದೆ. ಬಕ್ರೀದ್ ಹಬ್ಬಕ್ಕಾಗಿ ಮಟನ್ ಬಿರಿಯಾನಿ, (Mutton Biryani) ಮಟನ್ ಕುರ್ಮಾ, ಮಟನ್ ಕೀಮಾ (Mutton Keema) ಮತ್ತು ಭುನಿ ಕಲೆಜಿ ತಯಾರಿಸಲಾಗುತ್ತದೆ. ಇದರೊಂದಿಗೆ ಸಿಹಿ ತಿಂಡಿಗಳಾಗಿರುವಂತಹ ಶೀರ ಕುರ್ಮಾ ಮತ್ತು ಪಾಯಸ ಮಾಡಲಾಗುತ್ತದೆ.

ಬೇಕಾಗುವ ಸಾಮಾಗ್ರಿಗಳು:

ಅರ್ಧ ಕೆಜಿ ಮಟನ್ ಖೀಮಾ

ಲಿವರ್ 1/4 ಕೆಜಿ

ಈರುಳ್ಳಿ 3

ಬೆಳ್ಳುಳ್ಳಿ 7-8 ಎಸಳು

ಶುಂಠಿ 2 ಇಂಚಿನಷ್ಟು

ಕತ್ತರಿಸಿದ  ಹಸಿಮೆಣಸಿನ ಕಾಯಿ 4

ಜೀರಿಗೆ 1 ಚಮಚ

ಕರಿಮೆಣಸಿನಕಾಳು 1 ಚಮಚ

ಚಕ್ಕೆ ಮತ್ತು ಲವಂಗ

ಕೆಂಪು ಮೆಣಸಿನ ಪುಡಿ 1 ಚಮಚ

ಕೊತ್ತಂಬರಿ ಪುಡಿ 1 ಚಮಚ

ಟೊಮೆಟೊ 1 (ಕತ್ತರಿಸಿದ್ದು)

ಮೊಸರು 2 ಚಮಚ

ಕೊತ್ತಂಬರಿ ಸೊಪ್ಪು

ಎಣ್ಣೆ 2 ಚಮಚ

ಪಲಾವ್ ಎಲೆ 1

ರುಚಿಗೆ ತಕ್ಕ ಉಪ್ಪು

ಇದನ್ನೂ ಓದಿ: Recipe: ಒಂದು ಕುಕ್ಕರ್, ಐದು ಡಿಶ್: ಈ ನಾನ್-ವೆಜ್ ರೆಸಿಪಿಗಳನ್ನು ಕುಕ್ಕರ್ ‌ನಲ್ಲಿ ಸುಲಭವಾಗಿ ತಯಾರಿಸಿ

ತಯಾರಿಸುವ ವಿಧಾನ:

1. ಹಸಿ ಮಟನ್ ಖೀಮಾ, ಲಿವರ್, ಉಪ್ಪು ಮತ್ತು ಒಂದು ಬಟ್ಟಲು ನೀರನ್ನು ಅದಕ್ಕೆ ಸೇರಿಸಿ ಕುಕ್ಕರ್ ಮುಚ್ಚಿ 5 ನಿಮಿಷಗಳ ಕಾಲ ಬೇಯಿಸಿ ಒಂದು ಪಾತ್ರೆಯಲ್ಲಿ ಹಾಕಿಡಬೇಕು.

2. ಬೆಳ್ಳುಳ್ಳಿ, ಕರಿಮೆಣಸಿನ ಕಾಳು, ಜೀರಿಗೆ, ಚಕ್ಕೆ, ಲವಂಗ ಶುಂಠಿಯನ್ನು ಅರೆದು ಗಟ್ಟಿ ಪೇಸ್ಟ್ ಮಾಡಿ ಇಟ್ಟುಕೊಳ್ಳಬೇಕು.

3. ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ , ಅದರಲ್ಲಿ ಪಲಾವ್ ಎಲೆಗಳನ್ನು ಹಾಕಿ, ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಉರಿಯಬೇಕು.

4. ಈರುಳ್ಳಿ ಕಂದು ಬಣ್ಣಕ್ಕೆ ಬರುವಾಗ ಖೀಮಾ ಮತ್ತು ಲಿವರ್ (ಬೇಯಿಸಿದ ಮಾಂಸ) ಹಾಕಿ 2-3 ನಿಮಿಷ ಮಿಶ್ರ ಮಾಡಬೇಕು. ನಂತರ ಕತ್ತರಿಸಿದ ಹಸಿಮೆಣಸಿನ ಕಾಯಿ, ಸಂಬಾರ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ನಂತರ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಬೇಕು. ನಂತರ ಕತ್ತರಿಸಿದ ಟೊಮೆಟೊ, ಕೆಂಪು ಮೆಣಸಿನ ಪುಡಿ ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರ ಮಾಡಿ 2-3 ನಿಮಿಷ ಬೇಯಿಸಬೇಕು.

5. ನಂತರ 1 ಕಪ್ ನೀರು ಸೇರಿಸಿ ಮಿಶ್ರ ಮಾಡಿ, ಪಾತ್ರೆಯ ಬಾಯಿ ಮುಚ್ಚಿ 7-10 ನಿಮಿಷ ಬೇಯಿಸಬೇಕು.

ಇದನ್ನೂ ಓದಿ: Sunday Special Recipe: ಭಾನುವಾರದ ಬಾಡೂಟಕ್ಕೆ ಮನೆಯಲ್ಲಿಯೇ ಮಾಡಿ ಸ್ಪೆಷಲ್ ಎಗ್ ಬಿರಿಯಾನಿ

ಬಕ್ರೀದ್ ಹಬ್ಬವು ತ್ಯಾಗ ಬಲಿದಾನದ ಸಂಕೇತವಾಗಿದೆ. ಭಾರತೀಯ ಮುಸ್ಲಿಂ ಬಾಂಧವರು ಸೇರಿದಂತೆ ವಿಶ್ವದ್ಯಾಂತ ಇರುವ ಮುಸ್ಲಿಮರು ಈ ಹಬ್ಬವನ್ನು ಶ್ರದ್ಧೆ ಭಕ್ತಿಯಿಂದ ಆಚರಿಸುತ್ತಾರೆ. ಈ ಹಬ್ಬದ ಹಿನ್ನಲೆಯ ಪ್ರಕಾರ ಪ್ರವಾದಿಗಳಲ್ಲೊಬ್ಬರಾದ ಪ್ರವಾದಿ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್‌ರನ್ನು ಸೃಷ್ಟಿಕರ್ತ ಅಲ್ಲ್ಹಾನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್ ಉಲ್ ಅದಾ ಅರ್ಥಾತ್ ಬಕ್ರೀದ್ ಎಂದು ಆಚರಿಸುತ್ತಾರೆ. ಬಕ್ರೀದ್ ದಿನ ಮುಸ್ಲೀಮ್ ಬಾಂಧವರು ಪರಸ್ಪರ ಶುಭ ಹಾರೈಸಿ ತುಂಬಾ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಹೆಚ್ಚಾಗಿ ನಾನ್ ವೆಜ್ ಹಬ್ಬದ ಅಡುಗೆಗಳನ್ನು ಮಾಡಲಾಗುವುದು.
Published by:Pavana HS
First published: