• Home
  • »
  • News
  • »
  • lifestyle
  • »
  • Eid al-Adha 2021: ಚಿಕನ್​ ಬಿರಿಯಾನಿ ಘಮ ಘಮ ಬರಬೇಕಂದ್ರೆ ಈ ವಿಧಾನವನ್ನ ಟ್ರೈ ಮಾಡಿ

Eid al-Adha 2021: ಚಿಕನ್​ ಬಿರಿಯಾನಿ ಘಮ ಘಮ ಬರಬೇಕಂದ್ರೆ ಈ ವಿಧಾನವನ್ನ ಟ್ರೈ ಮಾಡಿ

ಬಿರಿಯಾನಿ

ಬಿರಿಯಾನಿ

Bakrid Biryani Recipes: ಬಕ್ರೀದ್​ ಹಬ್ಬದ ಸಮಯದಲ್ಲಿ ಸುಲಭವಾಗಿ ಘಮ ಘಮಿಸುವ ಚಿಕನ್​ ಬಿರಿಯಾನಿ ಮಾಡುವುದು ಹೇಗೆ? ಅದರ ಪಾಕ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.

  • Share this:

    ಮುಸಲ್ಮಾನರ ಹಬ್ಬಗಳಲ್ಲಿ ಬಕ್ರೀದ್​ ಕೂಡ ಒಂದು. ನಾಳೆ (ಜುಲೈ21) ದೇಶದಾದ್ಯಂತ ಬಕ್ರೀದ್ ಹಬ್ಬದ ಸಡಗರದಲ್ಲಿರುತ್ತಾರೆ. ಈ ಸಮಯದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಭಕ್ಷ್ಯ ಬೋಜನಗಳನ್ನು ತಯಾರಿಸುತ್ತಾರೆ. ಬಕ್ರೀದ್​ ಹಬ್ಬದ ಸ್ಪೆಷಲ್​ ಬಿರಿಯಾನಿ ರೈಸ್​ ತಯಾರಿಸುತ್ತಾರೆ. ಚಿಕನ್​ ಅಥವಾ ಮಟನ್​ ಬಿರಿಯಾನಿ ಸವಿಯುತ್ತಾರೆ.


    ಆರ್ಥಿಕವಾಗಿ ಸಮರ್ಥರಾದವರು ಮಟನ್​ ಬಿರಿಯಾನಿ ಸವಿದರೆ. ಇನ್ನು ಕೆಲವರು ಚಿಕನ್​  ಬಿರಿಯಾನಿ ಸಿದ್ಧಪಡಿಸಿ ಆಹ್ವಾದಿಸುತ್ತಾರೆ. ಒಟ್ಟಿನಲ್ಲಿ ಹಬ್ಬದ ಪ್ರಯುಕ್ತ ಪ್ರತಿಯೊಬ್ಬರ ಮನೆಯಲ್ಲಿ ಬಿರಿಯಾನಿಯಂತೂ ಇದ್ದೇ ಇರುತ್ತದೆ.


    ಬಕ್ರೀದ್​ ಹಬ್ಬದ ಸಮಯದಲ್ಲಿ ಸುಲಭವಾಗಿ ಘಮ ಘಮಿಸುವ ಚಿಕನ್​ ಬಿರಿಯಾನಿ ಮಾಡುವುದು ಹೇಗೆ? ಅದರ ಪಾಕ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ.


    ಬೇಕಾಗುವ ಸಾಮಗ್ರಿಗಳು


    600 ಗ್ರಾಂ ಬಾಸುಮತಿ ಅಕ್ಕಿ (ಸ್ವಲ್ಪ ಉಪ್ಪು ಹಾಕಿ ಬೇಯಿಸಿ)


    4 ಚಮಚ ಪುದೀನಾ ಪೇಸ್ಟ್


    ರುಚಿಗೆ ತಕ್ಕ ಉಪ್ಪು


    2 ಚಮಚ ಕೊತ್ತಂಬರಿ ಪುಡಿ


    1 ಚಮಚ ಬೆಳ್ಳುಳ್ಳಿ ಪೇಸ್ಟ್


    2 ಸೌಟು ಟೊಮೆಟೊ ಪೇಸ್ಟ್


    ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 4-5


    (ಅರ್ಧ ಈರುಳ್ಳಿಯನ್ನು ಚಿಕನ್ ಮಾಡುವಾಗ ಹಾಕಿ ಉಳಿದ ಈರುಳ್ಳಿಯನ್ನು ತುಪ್ಪದಲ್ಲಿ ಫ್ರೈ ಮಾಡಿ ಇಡಿ)


    5-6 ಏಲಕ್ಕಿ


    ಅರ್ಧ ಚಮಚ ಖಾರದ ಪುಡಿ


    1/2 ಲೀಟರ್ ಮೊಸರು


    1 ಕೆಜಿ ಚಿಕನ್‌ ಲೆಗ್ ಪೀಸ್‌


    1 ಚಮಚ ಗರಂ ಮಸಾಲ


    ಚಿಟಿಕೆಯಷ್ಟು ಕೇಸರಿ


    1 ಚಮಚ ಶುಂಠಿ ಪೇಸ್ಟ್


    4 ಹಸಿ ಮೆಣಸಿನಕಾಯಿ (ಕತ್ತರಿಸಿದ್ದು)


    3 ಟೊಮೆಟೊ


    2 ಚಮಚ ಜೀರಿಗೆ


    1 ಚಮಚ ಅರಿಶಿಣ


    1 ಚಮಚ ಹಾಲು


    ಎಣ್ಣೆ 2 ಚಮಚ

    ಮಾಡುವ ವಿಧಾನ:


    ಮಾಂಸ ಹಿಡಿಯುವಷ್ಟು ದೊಡ್ಡದಾದ ಬೌಲ್​​ ತೆಗೆದುಕೊಂಡು ಅದಕ್ಕೆ ಮೊಸರು, ಅರಿಶಿಣ ಪುಡಿ, ಖಾರದ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ನಂತರ ಚಿಕನ್‌ ಪೀಸ್‌ ಹಾಕಿ ಮಿಕ್ಸ್ ಮಾಡಿ. ಅರ್ಧ ಗಂಟೆ ತೆಗೆದಿಡಿ. ಸ್ವಲ್ಪ ಹೊತ್ತಿನ ಬಳಿಕ ಕೇಸರಿಯನ್ನು ಸ್ವಲ್ಪ ಬಿಸಿ ಹಾಲಿನಲ್ಲಿ ನೆನೆ ಹಾಕಿ.


    ದೊಡ್ಡದಾದ ಪಾತ್ರೆಯೊಂದನ್ನು ತೆಗೆದುಕೊಂಡು 2 ಚಮಚ ಎಣ್ಣೆ ಹಾಕಿ, ಸಾಧಾರಣ ಉರಿಯಲ್ಲಿ ಬಿಸಿ ಮಾಡಿ. ಅದಾದ ಬಳಿಕ ಎಣ್ಣೆ ಬಿಸಿಯಾದಾಗ ಜೀರಿಗೆ ಹಾಕಿ, ಏಲಕ್ಕಿ ಹಾಕಿ, 3 ನಿಮಿಷದ ನಂತರ ಈರುಳ್ಳಿ ಹಾಕಿ 15 ನಿಮಿಷ ಫ್ರೈ ಮಾಡಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗುವವರೆಗೆ ಕಾಯಿರಿ. ಕಂದು ಬಣ್ಣಕ್ಕೆ ತಿರುಗಿದ ನಂತರ ಟೊಮೆಟೊ ಹಾಕಿ, ಟೊಮೆಟೊ ಪೇಸ್ಟ್ ಇದ್ದರೆ ಅದನ್ನು ಸೇರಿಸಿ 5 ನಿಮಿಷ ಫ್ರೈ ಮಾಡಿ.


    ಮಾಡಿಟ್ಟ ಹಸಿ ಮೆಣಸು ಹಾಕಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅದಕ್ಕೆ ಸೇರಿಸಿ 2 ನಿಮಿಷ ಫ್ರೈ ಮಾಡಿ, ಬಳಿಕ ಕೊತ್ತಂಬರಿ ಪುಡಿ ಹಾಕಿ,ಇಷ್ಟಾದ ಬಳಿಕ ಚಿಕನ್‌ ಹಾಕಿ ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ ಬೇಯಿಸಿ. ಚಿಕನ್ ಬೆಂದ ಮೇಲೆ ಗ್ಯಾಸ್‌ ಆಫ್‌ ಮಾಡಿ.


    ಈಗ ಚಿಕನ್ ಮತ್ತು ಅನ್ನವನ್ನ ಒಂದು ಪಾತ್ರೆಗೆ ಹಾಕಿ, ನಂತರ ಅದರ ಮೇಲೆ ಕೇಸರಿ, ಗರಂ ಮಸಾಲ, ಸ್ವಲ್ಪ ಪುದೀನಾ, ಕೊತ್ತಂಬರಿ ಸೊಪ್ಪು, ಮೊಸರು ಹಾಕಿ ಮಿಕ್ಸ್​ ಮಾಡಿ. ಇಷ್ಟು ಆದ ಮೇಲೆ ಪದರ-ಪದರವಾಗಿ ಚಿಕನ್‌ ಹಾಗೂ ಅನ್ನ ಹಾಕಿ ಮೇಲ್ಭಾಗದಲ್ಲಿ ತುಪ್ಪದಲ್ಲಿ ಫ್ರೈ ಮಾಡಿದ ಈರುಳ್ಳಿ ಹಾಕಿ ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ ನಂತರ ಮಿಕ್ಸ್ ಮಾಡಿಬೇಕು.


    ಈಗ ಘಮ-ಘಮ ಚಿಕನ್​ ಬಿರಿಯಾನಿ ಸವಿಯಲು ಸಿದ್ಧ.

    Published by:Harshith AS
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು