• Home
  • »
  • News
  • »
  • lifestyle
  • »
  • Type 2 Diabetes: ನಿದ್ರೆ ಸರಿಯಾಗಿ ಬರ್ತಿಲ್ಲ ಅಂದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಟೈಪ್​ 2 ಮಧುಮೇಹಕ್ಕೆ ಕಾರಣವಾಗುತ್ತಂತೆ

Type 2 Diabetes: ನಿದ್ರೆ ಸರಿಯಾಗಿ ಬರ್ತಿಲ್ಲ ಅಂದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಟೈಪ್​ 2 ಮಧುಮೇಹಕ್ಕೆ ಕಾರಣವಾಗುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Type 2 Diabetes And Sleep: ನಿದ್ರಾಹೀನತೆಯಿಂದ ಬಳಲುತ್ತಿರುವವರ ಆರೋಗ್ಯ ಸ್ಥಿತಿಯು ಕೂಡ ಹದಗೆಡುತ್ತದೆ.ನಿದ್ರಾಹೀನತೆಯಿಂದ ನಿಮಗೆ ಟೈಪ್ 2 ಮಧುಮೇಹ ಬರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ಮನುಷ್ಯನ ದಿನಚರಿ (Routine) ಸರಿಯಾಗಿರಬೇಕಾದರೆ ಹಲವು ಅಂಶಗಳು ಸರಿಯಾಗಿ ಕೆಲಸ ಮಾಡಬೇಕಾಗಿರುತ್ತದೆ. ಸರಿಯಾದ ಆಹಾರ (Food), ಸೂಕ್ತ ಕೆಲಸ, ಅಗತ್ಯ ಪ್ರಮಾಣದ ವಿರಾಮ ಎಲ್ಲವೂ ಮುಖ್ಯ. ಆದರೆ ಇವುಗಳ ಜೊತೆಗೆ ಇವುಗಳಿಗಿಂತಲೂ ಹೆಚ್ಚು ಅಗತ್ಯವಾದ ಇನ್ನೊಂದು ವಿಚಾರವಿದೆ. ಅದೇ ನಿದ್ದೆ. ನಿದ್ದೆ ಸರಿಯಾಗಿ ಬಾರದ ದಿನಗಳನ್ನು ಎಲ್ಲರೂ ಅನಿಭವಿಸಿರಬಹುದು. ರಾತ್ರಿ ಕಳೆಯುವುದಂತೂ ಕಷ್ಟದ ಕೆಲಸ ಆದರೆ ನಿದ್ದೆ (Sleep) ಬಾರದ ಮರುದಿನ ಸರಿಯಾಗಿ ಕೆಲಸ ಮಾಡುವುದು ಮತ್ತೂ ಕಷ್ಟ. ದಿನವಿಡಿ ಆಲಸ್ಯ ಮೈಯಲ್ಲಿ ಜಡತ್ವ ಸಾಮಾನ್ಯವಾಗಿರುತ್ತದೆ, ಇದರ ಜೊತೆಗೆ ನಮ್ಮ ಮನಸ್ಸೂ ಉತ್ಸಾಹದಿಂದ ಇರುವುದಿಲ್ಲ. ಸ್ವಲ್ಪವೇ ಕೆಲಸವಿದ್ದರೂ ಇಷ್ಟೆಲ್ಲಾ ಕೆಲಸವೇ ಎಂದು ಅನ್ನಿಸುತ್ತದೆ. ಆದರೆ ಇದರ ಮರುದಿನ ಸರಿಯಾಗಿ ನಿದ್ದೆ ಬಂದರೆ ಅದರ ಮರುದಿನ ಎಷ್ಟೇ ಕೆಲಸ ಇದ್ದರೂ ಆಸಕ್ತಿಯಿಂದ ಮಾಡುತ್ತೇವೆ.


ಇನ್ನು ನಿದ್ರಾಹೀನತೆಯಿಂದ ಬಳಲುತ್ತಿದ್ದವರ ಸ್ಥಿತಿ ಹೇಗಿರಬೇಡ. ಅವರ ಆರೋಗ್ಯ ಸ್ಥಿತಿಯು ಕೂಡ ಹದಗೆಡುತ್ತದೆ.ನಿದ್ರಾಹೀನತೆಯಿಂದ ನಿಮಗೆ ಟೈಪ್‌ 2 ಮಧುಮೇಹ ಬರುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.


ಸಂಶೋಧಕರು ಏನ್‌ ಹೇಳ್ತಿದಾರೆ?


ಈಗ ಕ್ರಿಸ್‌ಮಸ್ ಹಬ್ಬದ ವಾತಾವರಣ ಎಲ್ಲೆಡೆ ಹೆಚ್ಚಾಗುತ್ತಿದ್ದಂತೆ, ದಕ್ಷಿಣ ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯದ ಸಂಶೋಧಕರು ರಾತ್ರಿಯ ಸಮಯ ಉತ್ತಮವಾಗಿ ನಿದ್ರೆ ಮಾಡಲು ಆದ್ಯತೆ ನೀಡಿ ಎಂದು ಹೇಳಿದ್ದಾರೆ.


ಹೊಸ ಸಂಶೋಧನೆಯಲ್ಲಿ ಇರುವುದೇನು?


ಹೊಸ ಸಂಶೋಧನೆಯ ಪ್ರಕಾರ ನಿದ್ರಾಹೀನತೆಯು ಟೈಪ್ 2 ಮಧುಮೇಹದ ರೋಗಗಳನ್ನು ತರುವ ಅಪಾಯ ಹೆಚ್ಚು. ನಿದ್ರಾಹೀನತೆಗೂ ಟೈಪ್‌ 2 ಮಧುಮೇಹಕ್ಕೂ ನೇರ ಸಂಬಂಧವಿದೆ ಎಂದು ತಿಳಿಸುತ್ತದೆ.


ಇದನ್ನೂ ಓದಿ: ಶ್ವಾಸಕೋಶದ ಕಾಯಿಲೆಗೆ ಯೋಗ ಪರಿಣಾಮಕಾರಿ ಪರಿಹಾರವಂತೆ


ಸಂಶೋಧನೆಯ ಮೊದಲ ಅಧ್ಯಯನದಲ್ಲಿ, ನಿದ್ರೆಯ ತೊಂದರೆಯನ್ನು ಅನುಭವಿಸಿದ ಜನರು ಸರಾಸರಿ ಕಳಪೆ ಕಾರ್ಡಿಯೊಮೆಟಾಬೊಲಿಕ್ ಆರೋಗ್ಯದ ಸೂಚಕಗಳನ್ನು ಹೊಂದಿರುತ್ತಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.


ಅಂದರೆ ಉರಿಯೂತದ ಗುರುತುಗಳು, ಕೊಲೆಸ್ಟ್ರಾಲ್ ಮತ್ತು ದೇಹದ ತೂಕ ಈ ಎಲ್ಲ ಲಕ್ಷಣಗಳನ್ನು ಹೊಂದಿರುತ್ತಾರೆ. ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗಬಹುದು. ಆಸ್ಟ್ರೇಲಿಯಾದಲ್ಲಿ, ಸುಮಾರು ಒಂದು ಮಿಲಿಯನ್ ವಯಸ್ಕರು ಟೈಪ್ 2 ಮಧುಮೇಹವನ್ನು ಹೊಂದಿದ್ದಾರೆ. ಜಾಗತಿಕವಾಗಿ, ಟೈಪ್ 2 ಮಧುಮೇಹವು 422 ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ.




ಯುನಿಸಾ ಸಂಶೋಧಕಿ ಡಾ. ಲಿಸಾ ಮ್ಯಾಟ್ರಿಸಿಯಾನಿ ಅವರು “ನಿದ್ರೆಯ ವಿವಿಧ ಅಂಶಗಳು ಮಧುಮೇಹದ ಅಪಾಯಕಾರಿ ಅಂಶಗಳೊಂದಿಗೆ ನೇರ ಸಂಬಂಧ ಹೊಂದಿವೆ” ಎಂದು ಹೇಳುತ್ತಾರೆ.


ಮಧುಮೇಹಕ್ಕೆ ನಿದ್ದೆ ಹೇಗೆ ಕಾರಣ?


"ನಾವು ಎಷ್ಟು ಚೆನ್ನಾಗಿ ನಿದ್ರಿಸುತ್ತೇವೆ. ನಾವು ಮಲಗಲು ಮತ್ತು ಎದ್ದೇಳುವಾಗ ಮತ್ತು ನಮ್ಮ ನಿದ್ರೆಯ ಅಭ್ಯಾಸಗಳು ಎಷ್ಟು ನಿಯಮಿತವಾಗಿರುತ್ತವೆ, ಇವೆಲ್ಲ ನಿದ್ರೆಯ ಅವಧಿಯಷ್ಟೇ ಮುಖ್ಯವಾಗಿರುತ್ತದೆ." ಎಂದು ಲಿಸಾ ಹೇಳಿದರು.


"ಈ ಅಧ್ಯಯನದಲ್ಲಿ, ನಾವು ನಿದ್ರೆಯ ವಿವಿಧ ಅಂಶಗಳ ಸಂಬಂಧವನ್ನು ಮತ್ತು ಮಧುಮೇಹಕ್ಕೆ ಇರುವ ಅಪಾಯಕಾರಿ ಅಂಶಗಳನ್ನು ಸಹ ಪರಿಶೀಲಿಸಿದ್ದೇವೆ. ನಿದ್ರೆಯ ತೊಂದರೆ ಇರುವವರು ಮತ್ತು ಟೈಪ್ 2 ಮಧುಮೇಹದ ಅಪಾಯದಲ್ಲಿರುವವರ ನಡುವೆ ಎಷ್ಟೆಲ್ಲ ಸಾಮ್ಯತೆಗಳು ಇವೆ ಎಂದು ಕಂಡುಕೊಂಡಿದ್ದೇವೆ." ಎನ್ನುತ್ತಾರೆ ಲಿಸಾ.


44.8 ವರ್ಷ ವಯಸ್ಸಿನ ಸರಾಸರಿ ವಯಸ್ಸಿನ 1000 ಕ್ಕೂ ಹೆಚ್ಚು ಆಸ್ಟ್ರೇಲಿಯನ್ ವಯಸ್ಕರನ್ನು ಅಧ್ಯಯನವು ಮೌಲ್ಯಮಾಪನ ಮಾಡಿದೆ. ಸಂಶೋಧಕರು ನಿದ್ರೆಯ ಗುಣಲಕ್ಷಣಗಳ ಶ್ರೇಣಿಯನ್ನು ಪರಿಶೀಲಿಸಿದ್ದಾರೆ.


ಇದನ್ನೂ ಓದಿ: ಮಲಬದ್ಧತೆ ಸಮಸ್ಯೆ ನಿವಾರಣೆಗೆ ಮಾತ್ರೆ ಬೇಡ, ದಿನವೂ ಈ ಯೋಗ ಮಾಡಿ!


ಲಿಸಾ ಅವರ ಪ್ರಕಾರ, "ಮಧುಮೇಹದ ಆರಂಭಿಕ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ, ನಮ್ಮ ಆರೋಗ್ಯ ಉತ್ತಮವಾಗಿರಲು ನಾವು ಮೊದಲು ನಮ್ಮ ನಿದ್ರೆಗೆ ಆದ್ಯತೆ ನೀಡಬೇಕು . ಇದಕ್ಕೆ ಇನ್ನು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಆದರೆ ಈ ಅಧ್ಯಯನವು ಸಂಶೋಧಿಸಿದಂತೆ, ನಮ್ಮ ದೇಹಕ್ಕೆ ನಿದ್ರೆ ಅತಿ ಅಗತ್ಯವಾಗಿದೆ ಎನ್ನುವುದು ಪ್ರಮುಖ ಅಂಶವಾಗಿದೆ” ಎಂದು ಹೇಳುತ್ತಾರೆ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು