• Home
  • »
  • News
  • »
  • lifestyle
  • »
  • Skin Care: ನೀವ್ ಮಾಡೋ ಈ ತಪ್ಪು ಚರ್ಮದ ಅಂದವನ್ನು ಹಾಳು ಮಾಡುತ್ತೆ

Skin Care: ನೀವ್ ಮಾಡೋ ಈ ತಪ್ಪು ಚರ್ಮದ ಅಂದವನ್ನು ಹಾಳು ಮಾಡುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Skin Care Mistakes: ನಿಮ್ಮ ಕೆಲವು ಅಭ್ಯಾಸಗಳು (Practice) ನಿಮ್ಮ ತ್ವಚೆಯ ಆರೋಗ್ಯವನ್ನು ಕೆಡಿಸುತ್ತವೆ. ಹಾಗಿದ್ರೆ ನಿಮ್ಮ ಯಾವೆಲ್ಲ ಅಭ್ಯಾಸಗಳು ತ್ವಚೆಗೆ ಹಾನಿಕಾರಕ ಅನ್ನೋದನ್ನು ತಿಳಿದುಕೊಳ್ಳಬೇಕು.

  • Trending Desk
  • 3-MIN READ
  • Last Updated :
  • Share this:

ಇಂದಿನ ಕಲುಷಿತ ವಾತಾವರಣದಲ್ಲಿ ಆರೋಗ್ಯ (Health)  ಹದಗೆಡುವ ಹಾಗೆ ಚರ್ಮದ (Skin) ಆರೋಗ್ಯವೂ ಹದಗೆಡುತ್ತದೆ. ದಿನಕಳೆದಂತೆ ಚರ್ಮ ಸುಕ್ಕಾಗುವುದು, ಹೊಳಪವನ್ನು ಕಳೆದುಕೊಳ್ಳುವುದು, ತೇವಾಂಶ ಕಳೆದುಕೊಳ್ಳುವುದರ ಜೊತೆಗೆ ಇನ್ನಿತರ ಚರ್ಮದ ಆರೋಗ್ಯ ಸಮಸ್ಯೆಗಳು (Health problem)  ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಚರ್ಮವನ್ನು ಸ್ವಚ್ಛವಾಗಿಡುವುದು, ಟೋನಿಂಗ್ ಮತ್ತು ಮಾಯಿಶ್ಚರೈಸಿಂಗ್ ಆರೋಗ್ಯಕರ ಚರ್ಮಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತೇ ಇರುತ್ತದೆ. ಆದರೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಿಮ್ಮ ಕೆಲವು ಅಭ್ಯಾಸಗಳು (Practice) ನಿಮ್ಮ ತ್ವಚೆಯ ಆರೋಗ್ಯವನ್ನು ಕೆಡಿಸುತ್ತವೆ. ಹಾಗಿದ್ರೆ ನಿಮ್ಮ ಯಾವೆಲ್ಲ ಅಭ್ಯಾಸಗಳು ತ್ವಚೆಗೆ ಹಾನಿಕಾರಕ ಅನ್ನೋದನ್ನು ತಿಳಿದುಕೊಳ್ಳಬೇಕು.


ಪ್ರತಿದಿನ ಬೆಳಗ್ಗೆ ಎದ್ದ ನಂತರ ನೀವು ಮುಖ ತೊಳೆಯುತ್ತೀರಿ., ಮಾಯಿಶ್ಚರೈಸರ್‌ ಹಚ್ಚುತ್ತೀರಿ,  ಇವೆಲ್ಲ ಸಾಮಾನ್ಯ ಚರ್ಮದ ಆರೈಕೆಗಳು. ನಂತರ ಹೊರಗೆ ಹೋಗುವಾಗ ನೀವು ಸನ್‌ಸ್ಕ್ರೀನ್‌ ಲೋಷನ್‌ ಹಚ್ಚಿಕೊಳ್ಳುತ್ತೀರಿ. ನಂತರ ಸಾಯಂಕಾಲ ಅಥವಾ ರಾತ್ರಿ ಆ್ಯಂಟಿಏಜಿಂಗ್‌ ಕ್ರೀಮ್‌ ಹಚ್ಚಿಕೊಳ್ಳಬಹುದು. ಇವೆಲ್ಲ ನಿಮ್ಮ ನಿತ್ಯದ ದಿನಚರಿಯಾಗಿರಬಹುದು. ಆದ್ರೆ ನೀವು ಉತ್ತಮ ತ್ವಚೆಯ ಆರೈಕೆಯ ಅಭ್ಯಾಸಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.


ಅಂದಹಾಗೆ ಅನೇಕ ಮಹಿಳೆಯರು ಚರ್ಮದ ಆರೈಕೆಯಲ್ಲಿ ಅನೇಕ ತಪ್ಪುಗಳನು ಮಾಡುತ್ತಾರೆ. ಅವುಗಳು ಯಾವವು ಅನ್ನೋದ್ರ ಬಗ್ಗೆ ಸೌಂದರ್ಯವರ್ಧಕ ಡರ್ಮಟಾಲಜಿಸ್ಟ್ ಡಾ. ಅಪ್ರತಿಮ್ ಗೋಯೆಲ್ ಅವರು ಕೆಲವೊಂದಿಷ್ಟು ಸಲಹೆಗಳನು ನೀಡಿದ್ದಾರೆ.


ಒಳ್ಳೆಯ ತ್ವಚೆ ಹೊಂದಲು ನೀವು ತ್ಯಜಿಸಬೇಕಾದ ಕೆಟ್ಟ ಅಭ್ಯಾಸಗಳು ಹೀಗಿವೆ.


1.ಅತಿಯಾಗಿ ಚರ್ಮವನ್ನು ಉಜ್ಜುವುದು: ನಿಮ್ಮ ಚರ್ಮವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ನಿಜ. ಆದರೆ ಅದನ್ನು ಅತಿಯಾಗಿ ಮಾಡಬೇಡಿ. ಡೆಡ್‌ಸ್ಕಿನ್‌ ತೆಗೆದುಹಾಕಲು ಕಠಿಣವಾದ ಸ್ಕ್ರಬ್‌ಗಳನ್ನು ಬಳಸುವುದು ಅಥವಾ ಚರ್ಮವನ್ನು ಉಜ್ಜುವುದು ಮಾಡುತ್ತೀರಾ ಎಂದಾದರೆ ಅದನ್ನು ತಕ್ಷಣ ನಿಲ್ಲಿಸಿ. ಏಕೆಂದರೆ ಇದರಿಂದ ಕಪ್ಪು ಕಲೆಗಳು, ಪಿಗ್ಮೆಂಟೇಶನ್ ಅಥವಾ ಚರ್ಮದ ಸಮಸ್ಯೆಗಳು ಉಂಟಾಗಬಹುದು.


ಆದ್ದರಿಂದ ವಾರಕ್ಕೊಮ್ಮೆ ಮಾತ್ರ ಸೌಮ್ಯವಾದ ಸ್ಕ್ರಬ್‌ಗಳನ್ನು ಬಳಸಲು ಡಾ ಗೋಯೆಲ್ ಸೂಚಿಸುತ್ತಾರೆ. ಮೈಕ್ರೊಡರ್ಮಾಬ್ರೇಶನ್ ಅಥವಾ ಸೌಮ್ಯವಾದ ರಾಸಾಯನಿಕ ಪೀಲ್‌ಗಳನ್ನು ತಿಂಗಳಿಗೊಮ್ಮೆ ಬಳಸಿ. ನೀವು ಚರ್ಮರೋಗ ಚಿಕಿತ್ಸಾಲಯದಲ್ಲಿ ಎಫ್ಫೋಲಿಯೇಟ್ ಮಾಡಬಹುದು ಎಂದು ಅವರು ಹೇಳುತ್ತಾರೆ. ಆದಾಗ್ಯೂ, ಈ ಯಾವುದೇ ಚಿಕಿತ್ಸೆಗಳನ್ನು ಮಾಡುವ ಮೊದಲು ನಿಮ್ಮ ಚರ್ಮವನ್ನು ಚರ್ಮರೋಗ ವೈದ್ಯರಿಂದ ಮೌಲ್ಯಮಾಪನ ಮಾಡುವುದು ಮುಖ್ಯ. ನಿಮ್ಮ ವೈದ್ಯರು ಈ ಕುರಿತಾದ ಸರಿಯಾದ ಸಲಹೆ ನೀಡುತ್ತಾರೆ.
2.ಕುತ್ತಿಗೆ, ಎದೆ, ಕೈ ಮತ್ತು ಪಾದಗಳನ್ನು ನಿರ್ಲಕ್ಷಿಸುವುದು: ತ್ವಚೆಯ ಆರೈಕೆ ಮುಖಕ್ಕೆ ಮಾತ್ರವಲ್ಲ ಅನ್ನೋದನ್ನು ಅನೇಕ ಮಹಿಳೆಯರು ಮರೆತುಬಿಡುತ್ತಾರೆ. ಸ್ನಾನದ ನಂತರ, ವಿಶೇಷವಾಗಿ ಬಿಸಿನೀರಿನೊಂದಿಗೆ ಸ್ನಾನದ ನಂತರ ನಿಮ್ಮ ದೇಹವನ್ನು ತೇವಗೊಳಿಸಿ. ನಿಮ್ಮ ಕುತ್ತಿಗೆ, ಎದೆ, ಕೈ ಮತ್ತು ಪಾದಗಳ ಮೇಲೆ ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಮತ್ತು ಆ್ಯಂಟಿಏಜಿಂಗ್‌ ಕ್ರೀಮ್‌ಗಳನ್ನು ಬಳಸಿ. ಅಂಗೈ ಮತ್ತು ಅಡಿಭಾಗದ ಚರ್ಮವನ್ನು ಮೃದುವಾಗಿಡಲು ಕೈ ಮತ್ತು ಪಾದದ ಕ್ರೀಮ್‌ ಬಳಸಿ.


3.ಧೂಮಪಾನ ಮತ್ತು ಅತಿಯಾಗಿ ಕುಡಿಯುವುದು: ಧೂಮಪಾನ ಹಾಗೂ ಅತಿಯಾಗಿ ಆಲ್ಕೋಹಾಲ್ ಸೇವನೆ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ... ತ್ವಚೆಯ ಆರೋಗ್ಯಕ್ಕೂ ತುಂಬಾನೇ ಹಾನಿಕರ. ನಿಮ್ಮನ್ನು ಹೈಡ್ರೀಕರಿಸದಂತಹ ಹಾನಿಕಾರಕ ಅಭ್ಯಾಸಗಳಿಗೆ ವಿದಾಯ ಹೇಳುವ ಸಮಯ ಇದು. ಒಳಗಿನಿಂದ ಉತ್ತಮ ಪೋಷಣೆ ಪಡೆದರೆ ಮಾತ್ರ ಚರ್ಮವು ಹೊರಗಿನಿಂದ ಹೊಳೆಯುತ್ತದೆ ಎಂಬುದನ್ನು ನೆನಪಿಡಿ. ಅತಿಯಾದ ಧೂಮಪಾನವು ನಿಮ್ಮ ಚರ್ಮವನ್ನು ಮಂದವಾಗಿಸುತ್ತದೆ ಜೊತೆಗೆ ಸುಕ್ಕಾಗಿಸುತ್ತದೆ. ಮುಖದಲ್ಲಿ ಗೆರೆಗಳು ಮೂಡತೊಡಗುತ್ತವೆ ಎಂಬುದಾಗಿ ತಜ್ಞರು ಹೇಳುತ್ತಾರೆ.


4. ರಾತ್ರಿಯಿಡೀ ಮುಖದ ಮೇಕಪ್ ಹಾಗೆಯೇ ಬಿಡುವುದು: ಸ್ವಲ್ಪ ಲಿಪ್‌ಸ್ಟಿಕ್‌ ಅಥವಾ ಐಲೈನರ್ ಹಚ್ಚುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ತ್ವಚೆ ಸುಂದರವಾಗಿ, ನಯವಾದ ಮತ್ತು ಕಾಂತಿಯುತವಾಗಿದ್ದಾಗ ಮೇಕಪ್ ಇನ್ನಷ್ಟು ಚೆನ್ನಾಗಿ ಕಾಣುತ್ತದೆ. ಮೇಕಪ್ಅನ್ನು ಅನ್ವಯಿಸುವ ಮೊದಲು ನಿಮ್ಮ ಚರ್ಮಕ್ಕೆ ಮಾಯಿಶ್ಚರೈಸರ್ ಮತ್ತು ಪ್ರೈಮರ್‌ ಹಾಕಿಕೊಂಡಿದ್ದೀರಾ ಅನ್ನುವುದನ್ನು ಖಚಿತಪಡಿಸಿಕೊಳ್ಳಿ. ಆದ್ರೆ ಯಾವಾಗಲೂ ಸೌಮ್ಯವಾದ ಮೇಕಪ್ ರಿಮೂವರ್ ಅನ್ನು ಬಳಸಿ ಮೇಕಪ್ ತೆಗೆದುಹಾಕಿ. ಮೇಕಪ್‌ ಹಾಕಿಕೊಂಡೇ ಎಂದಿಗೂ ಮಲಗಬೇಡಿ. ಮಲಗುವ ಮುನ್ನ ಕ್ಲೆನ್ಸರ್ನಿಂದ ಮುಖ ತೊಳೆದಿರುವುದನ್ನು ಖಚಿತಪಡಿಸಿಕೊಳ್ಳಿ.


5. ಮೇಕಪ್ ಬ್ರಷ್‌ಗಳನ್ನು ತೊಳೆಯದಿರುವುದು ಅಥವಾ ಮೊಬೈಲ್ ಪರದೆಯನ್ನು ಒರೆಸದಿರುವುದು : ನಿಮ್ಮ ಮೇಕಪ್ ಬ್ರಷ್‌ಗಳನ್ನು ನೀವು ಆಗಾಗ ತೊಳೆಯಬೇಕು. ಇದರ ಜೊತೆಗೆ ನಿಮ್ಮ ಮೊಬೈಲ್ ಸ್ಕ್ರೀನ್‌ ಸ್ವಚ್ಛಗೊಳಿಸುವುದೂ ಅಷ್ಟೇ ಮುಖ್ಯ. ಆದರೆ ಇದು ಹೆಚ್ಚಿನ ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳಲ್ಲಿ ಇದೂ ಒಂದಾಗಿದೆ. ನಿಮ್ಮ ಮುಖವನ್ನು ಮುಟ್ಟುವ ಎಲ್ಲವನ್ನೂ ಸ್ವಚ್ಛಗೊಳಿಸಬೇಕು ಎಂಬುದನ್ನು ನೆನಪಿಸಿ. ಹೀಗೆ ಮಾಡುವುದರ ಮೂಲಕ ಕೊಳಕು, ಬ್ಯಾಕ್ಟೀರಿಯಾವನ್ನು ನಿಮ್ಮ ಮುಖ ಪ್ರವೇಶಿಸದಂತೆ ನೋಡಿಕೊಳ್ಳಬೇಕು.


6. ಪರಿಣತರಲ್ಲದವರಿಂದ ಚರ್ಮದ ಆರೈಕೆ ಬಗ್ಗೆ ಸಲಹೆ ಪಡೆಯುವುದು: ಅದು ಆನ್‌ಲೈನ್ ಆಗಿರಲಿ ಅಥವಾ ನಿಮ್ಮ ನೆರೆಹೊರೆಯವರಾಗಿರಲಿ ಒಂದಿಷ್ಟು ಸಲಹೆಗಳನ್ನು ನೀಡುತ್ತಿರುತ್ತಾರೆ. ತ್ವಚೆಗೆ ಏನನ್ನು ಬಳಸಬೇಕು... ಯಾವ ಸೌಂದರ್ಯ ಉತ್ಪನ್ನಗಳನ್ನು ಬಳಸಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಆದ್ರೆ ಪ್ರತಿಯೊಬ್ಬರೂ ವಿಭಿನ್ನ ಚರ್ಮದ ಪ್ರಕಾರವನ್ನು ಹೊಂದಿರುತ್ತಾರೆ. ಆದ್ದರಿಂದ ಇಂಟರ್ನೆಟ್, ಇನ್‌ಸ್ಟಾಗ್ರಾಮ್, ಸ್ನೇಹಿತರು ಅಥವಾ ನೆರೆಹೊರೆಯವರಿಂದ ವೈಯಕ್ತಿಕ ಚರ್ಮದ ಆರೈಕೆ ಸಲಹೆಯನ್ನು ತೆಗೆದುಕೊಳ್ಳಬೇಡಿ. ಬದಲಾಗಿ ತಜ್ಞರಿಂದ ಸೌಂದರ್ಯ ಸಲಹೆಗಳನ್ನು ತೆಗೆದುಕೊಳ್ಳಿ ಎಂಬುದಾಗಿ ಎಂದು ಡಾ ಗೋಯೆಲ್ ಹೇಳುತ್ತಾರೆ.


ಹಾಗಿದ್ರೆ ಹೊಸವರ್ಷದಿಂದ ನೀವು ಸರಿಯಾದ ರೀತಿಯಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದರೆ ಈ ಕೆಳಗಿನ ಆರೋಗ್ಯಕರ ಚರ್ಮದ ಆರೈಕೆ ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು.


1. ಚರ್ಮದ ಆರೈಕೆಯನ್ನು ದಿನವೂ ಮಾಡಿ: ನೀವು ದಿನವೂ ಮರೆಯದೇ ಚರ್ಮದ ಆರೈಕೆ ಮಾಡಬೇಕು. ಫೇಸ್‌ವಾಶ್ ಬಳಸುವುದರಿಂದ ಹಿಡಿದು ಮಾಯಿಶ್ಚರೈಸರ್, ಸನ್‌ಸ್ಕ್ರೀನ್, ರಾತ್ರಿಗೆ ಸೀರಮ್ ಮತ್ತು ಕ್ರೀಂ ಅಪ್ಲೈ ಮಾಡುವುದನ್ನು ಮರೆಯಬೇಡಿ. ಮೊಡವೆ, ಪಿಗ್ಮೆಂಟೇಶನ್ ಅಥವಾ ವಯಸ್ಸಾದ ಚರ್ಮದಂತಹ ನಿಮ್ಮ ಮುಖ್ಯ ಕಾಳಜಿಗೆ ಚಿಕಿತ್ಸೆ ನೀಡಲು ರಾತ್ರಿಯಲ್ಲಿ ಸರಿಯಾದ ಕ್ರಮ ಅನುಸರಿಸಿ. ಹಲವಾರು ಉತ್ಪನ್ನಗಳನ್ನು ಉಪಯೋಗಿಸುವುದು ನಿಮ್ಮ ಚರ್ಮವನ್ನು ಹಾನಿಗೊಳಿಸುತ್ತದೆ ಎಂಬುದಾಗಿ ಡಾ ಗೋಯೆಲ್ ಹೇಳಿದ್ದಾರೆ.


ಇದನ್ನೂ ಓದಿ: ದಿನಕ್ಕೆ 20 ನಿಮಿಷ ಮಾತ್ರ; ಬೇಗನೇ ಕರಗುತ್ತೆ ನಿಮ್ಮ ಬೊಜ್ಜು


2. ಒಳಗೆ ಮತ್ತು ಹೊರಗೆ ಹೈಡ್ರೇಟ್ ಮಾಡಿ: ಕೇವಲ ನೀರು ಕುಡಿಯುವುದರಿಂದ ನಿಮ್ಮ ಚರ್ಮ ಹೈಡ್ರೇಟ್ ಆಗುವುದಿಲ್ಲ. ನೀವು ತಿಂಗಳಿಗೊಮ್ಮೆ ಡೆಡ್‌ಸ್ಕಿನ್‌ ಸ್ವಚ್ಛಗೊಳಿಸಬೇಕು. ನಿಮ್ಮ ತ್ವಚೆಯನ್ನು ತೇವಾಂಶದಿಂದ ಇಡಲು ಪ್ರತಿದಿನವೂ ಚೆನ್ನಾಗಿ ಮಾಯಿಶ್ಚರೈಸ್ ಅಪ್ಲೈ ಮಾಡಬೇಕು.


3. ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿ: ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ಆದಷ್ಟು ತಪ್ಪಿಸಬೇಕು. ಜೊತೆಗೆ ಪೂರ್ಣ ತೋಳಿನ ಬಟ್ಟೆಗಳು ಮತ್ತು ಕ್ಯಾಪ್‌ ಹಾಕಿಕೊಳ್ಳುವುದು ಒಳ್ಳೆಯದು. ಜೊತೆಗೆ ಸನ್‌ಸ್ಕ್ರೀನ್‌ ಹಚ್ಚಿಕೊಳ್ಳುವುದನ್ನು ಎಂದಿಗೂ ಮರೆಯಬೇಡಿ. ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುವುದು ನಿಮ್ಮ ಚರ್ಮವನ್ನು ಟ್ಯಾನಿಂಗ್ ಮತ್ತು ಪಿಗ್ಮೆಂಟೇಶನ್‌ನಿಂದ ತಡೆಯುತ್ತದೆ.


4. ಚರ್ಮದ ಸಮಸ್ಯೆಗಳಿದ್ದರೆ, ತಜ್ಞರಿಂದ ಸಲಹೆ ಪಡೆಯಿರಿ: ನೀವೇ ಪರಿಣಿತರಾಗಬೇಡಿ. ಹಾಗೇ ನಿಮಗೆ ನೀವೇ ಯಾವುದೇ ಉತ್ಪನ್ನವನ್ನು ಬಳಸಬೇಡಿ. ವಿಶೇಷವಾಗಿ ಲೇಬಲ್ ಇಲ್ಲದಂತಹ ಉತ್ಪನ್ನಗಳನನು ಬಳಸಬೇಡಿ. ಚರ್ಮಕ್ಕೆ ಗ್ಲೋ ನೀಡುತ್ತದೆ ಎಂದು ಸಲೂನ್‌ ಸಿಬ್ಬಂದಿ ಅಥವಾ ಬೇರೆ ಯಾರಾದರೂ ನೀಡಿದಂತಹ ಕ್ರೀಂಗಳನ್ನು ಬಳಸಬೇಡಿ. ಇತ್ತೀಚಿಗೆ ಸ್ಟೀರಾಯ್ಡ್ ಬಳಕೆಯ ಸಮಸ್ಯೆ ಹೆಚ್ಚುತ್ತಿದೆ ಎಂದು ಡಾ ಗೋಯೆಲ್ ಹೇಳಿದ್ದಾರೆ. ಇದು ದೀರ್ಘಾವಧಿಯಲ್ಲಿ ಚರ್ಮದ ತೀವ್ರ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಚರ್ಮದ ಮೇಲೆ ಯಾವುದೇ ಉತ್ಪನ್ನವನ್ನು ಬಳಸುವ ಮೊದಲು ನಿಮ್ಮ ಚರ್ಮರೋಗ ವೈದ್ಯರನ್ನು ಕೇಳಿ.


ಮುಖ, ಕೈ ಕಾಲುಗಳ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ಸ್ವಲ್ಪ ಮಾತ್ರದ ಪ್ರಯತ್ನ ಬೇಕೇ ಬೇಕು. ಏಕೆಂದರೆ ಇವು ಹೊರಗೆ ತೆರೆದಿರುವಂತಹ ಭಾಗಗಳಾಗಿರುವುದರಿಂದ ಪೊಲ್ಯೂಷನ್‌ಗೆ, ಬಿಸಿಲು - ಗಾಳಿಗಳಿಗೆ ತಕ್ಷಣವೇ ಈಡಾಗುತ್ತದೆ. ಆದ್ದರಿಂದ ಆರೋಗ್ಯವಾದ ಆಹಾಗಳನ್ನು ತಿನ್ನುವುದು, ಹೆಚ್ಚು ನೀರು ಕುಡಿದು ಹೈಡ್ರೇಟ್‌ ಆಗಿರುವಂತೆ ನೋಡಿಕೊಳ್ಳುವುದು ಹಾಗೂ ಸರಿಯಾದ ಸೌಂದರ್ಯ ಉತ್ಪನ್ನಗಳನ್ನು ಬಳಸುವುದು, ಕ್ರೀಂ ಗಳನ್ನು ಉಪಯೋಗಿಸುವುದು ಬಹಳ ಮುಖ್ಯ. ಜೊತೆಗೆ ದೂಮಪಾನ, ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳನ್ನು ಬಿಡುವುದು ಕೂಡ ಅಷ್ಟೇ ಮುಖ್ಯ.


ಇದನ್ನೂ ಓದಿ: ತಾಮ್ರದ ಪಾತ್ರೆಯಲ್ಲಿ ಇಟ್ಟ ನೀರು ಆರೋಗ್ಯಕ್ಕೆ ಒಳ್ಳೆಯದ್ದಾ? ಕೆಟ್ಟದ್ದಾ?


ಒಟ್ಟಾರೆ 2023 ರನ್ನು ಒಳ್ಳೆಯ ಅಭ್ಯಾಸಗಳೊಂದಿಗೆ ಆರಂಭಿಸುವುದು ನಿಮ್ಮ ಗುರಿಯಾಗಿದ್ದರೆ ಇವಿಷ್ಟನ್ನೂ ಪಾಲಿಸಿ. ಏನಾದರೂ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ವೈದ್ಯರ ಬಳಿ ತೆರಳಿ ಸಲಹೆ ಪಡೆಯಿರಿ. ಬದಲಾಗಿ ಸ್ವಯಂ ವೈದ್ಯ ಮಾಡಬೇಡಿ.

Published by:Sandhya M
First published: