Air Pollution: ಕಟ್ಟಡದ ಒಳಗಿನ ಗಾಳಿ ಕಲುಷಿತವಾಗಿದ್ದರೆ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ?

How Indoor Bad Air Effects Brain: ಉದ್ಯೋಗಿಗಳು ಹಾಗೂ ಶಾಲೆಗಳಲ್ಲಿ ಮಕ್ಕಳ ಪೋಷಕರಿಂದ ಒತ್ತಡ ಉಂಟಾಗುತ್ತಿದ್ದು ಹೆಚ್ಚಿನ ಮಟ್ಟದ ಅರಿವು ಹಾಗೂ ಪರಿಣತಿಗೆ ಪೂರಕವಾಗಿರುವ ಅಂಶಗಳತ್ತ ಆದ್ಯತೆ ನೀಡಬೇಕು ಎಂದು ಅಲೆನ್ ತಿಳಿಸುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಹೊಸ ಅಧ್ಯಯನವು ತಿಳಿಸಿರುವ ಅಂಶಗಳ ಪ್ರಕಾರ ಕಳಪೆ ಒಳಾಂಗಣ ಗಾಳಿಯ ಮಟ್ಟವು ಮಾಹಿತಿಯನ್ನು ಕೇಂದ್ರೀಕರಿಸುವ ಹಾಗೂ ಪ್ರಕ್ರಿಯೆಗೊಳಿಸುವ ನಮ್ಮ ಸಾಮರ್ಥ್ಯ ಒಳಗೊಂಡಂತೆ ಸೂಕ್ಷ್ಮವಾದ ದುರ್ಬಲತೆಗಳಿಗೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ.  ಕಚೇರಿಯೊಳಗಿನ ಗಾಳಿಯು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವುದರ ಜೊತೆಗೆ ನಿಮ್ಮ ಮೆದುಳಿನ ಮೇಲೂ ಪರಿಣಾಮ ಬೀರುತ್ತವೆ ಎಂಬುದು ಇದೀಗ ವರದಿಯಾಗಿದೆ. ಹೊಸ ಅಧ್ಯಯನದ ಪ್ರಕಾರ ಕಳಪೆ ಒಳಾಂಗಣ ಗಾಳಿಯ ಮಟ್ಟವು ಮೆದುಳಿನ ಸೂಕ್ಷ್ಮ ನರಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದು ವರದಿಯಾಗಿದೆ.


ಅಧ್ಯಯನಗಳು ತಿಳಿಸಿರುವ ಮಾಹಿತಿಗಳೇನು?


ಮಾಹಿತಿಯನ್ನು ಕೇಂದ್ರೀಕರಿಸುವ ಹಾಗೂ ಪ್ರಕ್ರಿಯೆಗೊಳಿಸುವ ಅರಿವಿನ ಮಟ್ಟದ ಮೇಲೂ ಇದು ಕೆಟ್ಟ ಅಂಶವನ್ನು ಬೀರಲಿವೆ ಎಂಬುದು ವರದಿಗಳಿಂದ ತಿಳಿದುಬಂದಿರುವ ಅಂಶವಾಗಿದೆ. ಪರಿಸರ ಸಂಶೋಧನಾ ಪತ್ರಗಳಲ್ಲಿ ಪ್ರಕಟವಾದ ಈ ಅಧ್ಯಯನವು 12 ತಿಂಗಳುಗಳ ಕಾಲ ಆರು ದೇಶಗಳಾದ ಅಮೆರಿಕಾ, ಬ್ರಿಟನ್, ಚೀನಾ, ಭಾರತ, ಮೆಕ್ಸಿಕೋ ಹಾಗೂ ಥೈಲ್ಯಾಂಡ್‌ನ ವಾಣಿಕ್ಯ ಕಟ್ಟಗಳಲ್ಲಿ ಕೆಲಸ ಮಾಡುವ 302 ಉದ್ಯೋಗಿಗಳನ್ನು ಟ್ರ್ಯಾಕ್ ಮಾಡಿದೆ. ಕಟ್ಟಡಗಳಲ್ಲಿನ ಗಾಳಿ ಹಾಗೂ ಒಳಾಂಗಣ ಗಾಳಿಯ ಮಟ್ಟವನ್ನು ಅಳೆಯಲು ವಿಜ್ಞಾನಿಗಳು ಮಾನಿಟರ್‌ಗಳ ಬಳಕೆಯನ್ನು ಮಾಡಿದರು. ಇದರಲ್ಲಿ ಧೂಳು, ಧೂಳಿನ ಕಣಗಳು, ಶುಚಿಗೊಳಿಸುವ ಉತ್ಪನ್ನಗಳು ಹಾಗೂ ಹೊರಾಂಗಣ ವಾಯುಮಾಲಿನ್ಯದ ಧೂಳು ಮೊದಲಾದ ಅಂಶಗಳು ಸೇರಿವೆ.


ಕೆಲಸದ ದಿನಗಳಲ್ಲಿ ಅರಿವಿನ ಪರೀಕ್ಷೆಗಳನ್ನು ಕೈಗೊಳ್ಳಲು ಉದ್ಯೋಗಿಗಳಿಗೆ ಆ್ಯಪ್ ಬಳಸುವಂತೆ ಕೇಳಲಾಯಿತು. ಈ ಪರೀಕ್ಷೆಗಳು ಸರಳ ಗಣಿತದ ಸಮಸ್ಯೆಗಳು, ಅಂತೆಯೇ ಟ್ರಿಕಿ ಬಣ್ಣಗಳ ಪರೀಕ್ಷೆಗಳನ್ನು ಒಳಗೊಂಡಿತ್ತು. ಕಳಪೆ ಒಳಾಂಗಣ ಗಾಳಿಯ ಗುಣಮಟ್ಟ ಹೊಂದಿರುವ ಕಟ್ಟಡಗಳಲ್ಲಿನ ಉದ್ಯೋಗಿಗಳು ಮೆದುಳಿನ ಕಸರತ್ತುಗಳಲ್ಲಿ ಕೆಟ್ಟದಾಗಿ ಪ್ರದರ್ಶನ ನೀಡಿದ್ದು ಅಧ್ಯಯನಕಾರರ ಗಮನಕ್ಕೆ ಬಂದಿದೆ. ಉಸಿರಾಡುವ ಗಾಳಿಯು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಇದರಿಂದ ಪುಷ್ಟೀಕರಣಗೊಳ್ಳುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.


ಅರಿವಿನ ಕಾರ್ಯ ಹಾಗೂ ಕಾರ್ಯಕ್ಷಮತೆಯ ಮೇಲೆ ಒಳಾಂಗಣ ಪರಿಸರ ಹೇಗೆ ಪರಿಣಾಮ ಬೀರಲಿದೆ?


"ಈ ಅಧ್ಯಯನವು ಒಳಾಂಗಣ ಪರಿಸರದಲ್ಲಿನ ಹಲವಾರು ಅಂಶಗಳು ನಮ್ಮ ಅರಿವಿನ ಕಾರ್ಯ ಮತ್ತು ಕಾರ್ಯಕ್ಷಮತೆಯ ಮೇಲೆ ಹೇಗೆ ತಕ್ಷಣದ ಪ್ರಭಾವವನ್ನು ಬೀರುತ್ತವೆ" ಎಂದು ಹಾರ್ವರ್ಡ್ ಆರೋಗ್ಯಕರ ಕಟ್ಟಡಗಳ ಕಾರ್ಯಕ್ರಮದ ನಿರ್ದೇಶಕ ಮತ್ತು ಅಧ್ಯಯನದ ಹಿರಿಯ ಲೇಖಕ ಜೋಸೆಫ್ ಅಲೆನ್ ಹೇಳಿದರು. "ಈ ಸಮಯದಲ್ಲಿ ನಿಮ್ಮ ಮೇಜಿನ ಬಳಿ ನೀವು ಉಸಿರಾಡುವ ಗಾಳಿಯು ನೀವು ಎಷ್ಟು ಆಳವಾಗಿ ಯೋಚಿಸುತ್ತೀರಿ ಎಂಬುದರ ಮೇಲೆ ಪ್ರಭಾವ ಬೀರುವ ಅಂಶವನ್ನು ಈ ಅಧ್ಯಯನವು ತೋರಿಸುತ್ತದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ಉದ್ಯೋಗಿಗಳು ಈ 3 ಆಹಾರಗಳನ್ನು ಕಡ್ಡಾಯವಾಗಿ ಸೇವಿಸಲೇಬೇಕು: ಏಕೆ ಅಂತ ತಿಳಿಯಿರಿ

ಹಿಂದೆ, ಕಟ್ಟಡಗಳಲ್ಲಿ ವಾಯು-ಗುಣಮಟ್ಟದ ನಿಯಂತ್ರಣವು ಹೆಚ್ಚಾಗಿ ಶಕ್ತಿಯ ದಕ್ಷತೆ ಮತ್ತು ಸೌಕರ್ಯದ ಮೇಲೆ ಕೇಂದ್ರೀಕರಿಸಲಾಗದೆ, ಸೋಂಕು ನಿಯಂತ್ರಣದ ಜೊತೆಗೆ ಸಂಪೂರ್ಣವಾಗಿ ಕೆಲಸಗಾರರ ಆರೋಗ್ಯಕ್ಕೆ ಸ್ವಲ್ಪ ಗಮನ ನೀಡಲಾಯಿತು. ಆದರೆ ಸಾಂಕ್ರಾಮಿಕವು ಅನೇಕ ಕಚೇರಿ ಸ್ಥಳಗಳನ್ನು ಒಳಾಂಗಣ ಗಾಳಿಯ ಗುಣಮಟ್ಟದಿಂದ ಸಮೀಪದಿಂದ ಅವಲೋಕಿಸಲು ಪ್ರೇರೇಪಿಸಿದೆ. ಒಳ್ಳೆಯ ಸುದ್ದಿ ಏನೆಂದರೆ, ಕೋವಿಡ್ -19 ಹರಡುವುದನ್ನು ತಡೆಯಲು ಮಾಡಲಾಗುತ್ತಿರುವ ಹಲವು ಬದಲಾವಣೆಗಳ ಜೊತೆಗೆ ಬುದ್ಧಿಯ ಕಾರ್ಯ ಮತ್ತು ಕೆಲಸಗಾರರ ಕೆಲಸದ ಉತ್ಪಾದಕತೆಯೊಂದಿಗೆ ವಾಯು ಗುಣಮಟ್ಟವನ್ನು ಸುಧಾರಿಸಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಒಳಾಂಗಣ ಪರಿಸರವು ನಮ್ಮ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ ಎಂಬ ಅಂಶ ಇಲ್ಲಿ ಉಲ್ಲೇಖನೀಯವಾದುದು ಎಂದು ಅಲೆನ್ ತಿಳಿಸಿದ್ದಾರೆ.


ಆರೋಗ್ಯಕರ ಕಟ್ಟಡಗಳು ಎಂದರೇನು?


ಕೋವಿಡ್ ಅಥವಾ ಬೇರೆ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಮಾತ್ರವೇ ಆರೋಗ್ಯಕರ ಗಾಳಿಯಿರುವ ಕಟ್ಟಡಗಳನ್ನು ಒದಗಿಸುವುದು ಮಾತ್ರವಲ್ಲದೆ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ಇಂತಹ ವಾತಾವರಣವಿರುವ ಕಟ್ಟಗಳನ್ನು ಒದಗಿಸಬೇಕಾಗಿದೆ ಎಂದು ಅಲೆನ್ ತಿಳಿಸಿದ್ದಾರೆ. ಒಳಾಂಗಣ ಗಾಳಿಯ ವ್ಯವಸ್ಥೆಯ ಕಡೆಗೂ ನಾವು ನ್ಯೂ ನಾರ್ಮಲ್ ಎಂಬ ಅಂಶವನ್ನು ರೂಪಿಸಬೇಕಾಗಿದೆ ಎಂದು ಅಲೆನ್ ಅಭಿಪ್ರಾಯ ಪಟ್ಟಿದ್ದಾರೆ.


ಕೋಣೆಯ ಮಧ್ಯಭಾಗದಲ್ಲಿ HEPA ಫಿಲ್ಟರ್‌ನೊಂದಿಗೆ ಪೋರ್ಟಬಲ್ ಏರ್ ಕ್ಲೀನರ್ ಅನ್ನು ಸೇರಿಸುವುದರಿಂದ ಕಡಿಮೆ ದಕ್ಷತೆಯ ವೆಂಟಿಲೇಶನ್ ಸಿಸ್ಟಮ್‌ಗಳು ಕಚೇರಿಗಳಲ್ಲಿ ಅರ್ಥಪೂರ್ಣ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ಅಲೆನ್ ಹೇಳುತ್ತಾರೆ. ಏರ್ ಕ್ಲೀನರ್ ಅನ್ನು ಆಯ್ಕೆ ಮಾಡುವ ಪ್ರಮುಖ ಅಂಶವೆಂದರೆ ಕೋಣೆಯ ಗಾತ್ರಕ್ಕೆ ಸರಿಯಾದ ಸಾಧನವನ್ನು ಆರಿಸುವುದು. ಒಂದು ಸಾಮಾನ್ಯ ಕೆಲಸದ ಸ್ಥಳಕ್ಕಾಗಿ, ಕ್ಲೀನ್-ಏರ್ ಡೆಲಿವರಿ ದರ ಅಥವಾ CADR ಅನ್ನು ಪ್ರತಿ 500 ಚದರ ಅಡಿ ನೆಲದ ಜಾಗಕ್ಕೆ 300 ಕ್ಕಿಂತ ಒಂದು ಏರ್ ಕ್ಲೀನರ್ ಅನ್ನು ಆರಿಸಿಕೊಳ್ಳಿ ಎಂದು ಅಲೆನ್ ಸಲಹೆ ನೀಡುತ್ತಾರೆ-ಇದು ಪ್ರತಿ 15 ನಿಮಿಷಗಳಿಗೊಮ್ಮೆ ಕೋಣೆಯಲ್ಲಿನ ಗಾಳಿಯನ್ನು ಫಿಲ್ಟರ್ ಮಾಡುವುದಕ್ಕೆ ಸಮನಾಗಿದೆ. ಎಂದವರು ತಿಳಿಸಿದ್ದಾರೆ.


ಆರೋಗ್ಯಕರ ಕಟ್ಟಗಳು: ಒಳಾಂಗಣ ಸ್ಥಳಗಳು ಕಾರ್ಯಕ್ಷಮತೆ ಹಾಗೂ ಉತ್ಪಾದಕತೆಯನ್ನು ಹೇಗೆ ಹೆಚ್ಚಿಸುತ್ತವೆ? ಎಂಬ ಪುಸ್ತಕದ ಸಹ ಲೇಖಕರಾಗಿರುವ ಅಲೆನ್ ಸಾಂಕ್ರಾಮಿಕದ ನಂತರ ಹೆಚ್ಚಿನ ಕಚೇರಿಗಳು, ಸಂಸ್ಥೆಗಳು ಒಳಾಂಗಣ ಗಾಳಿಯ ಗುಣಮಟ್ಟದ ಕುರಿತಾಗಿ ಹೆಚ್ಚು ಗಂಭೀರ ಅಂಶಗಳನ್ನು ತೆಗೆದುಕೊಳ್ಳುತ್ತಿರುವುದ ಗಮನಕ್ಕೆ ಬಂದಿದೆ ಹಾಗೂ ಈ ಅಂಶಗಳು ಹೆಚ್ಚು ಪ್ರೋತ್ಸಾಹಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ. ಕಂಪನಿಯ ಜಾಗತಿಕ ರಿಯಲ್ ಎಸ್ಟೇಟ್ ವಿಭಾಗದಲ್ಲಿ “ಆರೋಗ್ಯಕರ ಕಟ್ಟಡಗಳ ಮುಖ್ಯಸ್ಥ” ಎಂಬ ಉದ್ಯೋಗ ಜಾಹೀರಾತನ್ನು ನೋಡಿದರು. ಇದರಿಂದ ತಿಳಿದು ಬರುವುದೇನೆಂದರೆ ಉನ್ನತ ಕಟ್ಟಡಗಳು ತಮ್ಮ ಕಟ್ಟಡಗಳ ವಿನ್ಯಾಸಗಳತ್ತ ಗಮನ ನೀಡುವ ಅಂಶವಾಗಿದೆ. ಹಾಗೂ ಈ ಬೆಳವಣಿಗೆ ಬಂದಿರುವುದು ಕೋವಿಡ್-19 ಸಾಂಕ್ರಾಮಿಕದ ನಂತರವಾಗಿದೆ ಎಂದು ಅಲೆನ್ ತಿಳಿಸಿದ್ದಾರೆ.


ಇದನ್ನೂ ಓದಿ: ಆಯಾಸ ಹೆಚ್ಚಾಗ್ತಿದೆಯಾ? ಹಾಗಾದ್ರೆ ಈ ಆಹಾರಗಳನ್ನು ಟ್ರೈ ಮಾಡಿ..

ಗಾಳಿಯ ಗುಣಮಟ್ಟದ ಕುರಿತಾಗಿರುವ ತಾಂತ್ರಿಕ ವಿವರಗಳೇನು?


ಗಾಳಿಯ ಗುಣಮಟ್ಟದ ಕುರಿತಾಗಿರುವ ಕೆಲವೊಂದು ತಾಂತ್ರಿಕ ವಿವರಗಳು ಗೊಂದಲಗೊಳಿಸುವಂತಿದ್ದರೂ ಭಯಪಡಬೇಡಿ ಏಕೆಂದರೆ ಸಾಂಕ್ರಾಮಿಕದ ಸಮಯದಲ್ಲಿ ಹಾಗೂ ಭವಿಷ್ಯದಲ್ಲಿ ನಿಮ್ಮನ್ನು ಸುರಕ್ಷಿತರಾಗಿರಿಸಲು ಉದ್ಯೋಗದಾತರು ಕೈಗೊಳ್ಳುವ ಕೆಲವೊಂದು ಮುನ್ನೆಚ್ಚರಿಕಾ ಅಂಶಗಳತ್ತ ಗಮನ ಹರಿಸಲು ನೀವು ಆಸಕ್ತಿ ತೋರಿಸಲು ನೀವು ವೆಂಟಿಲೇಟರ್ ತಜ್ಞರಾಗಿರಬೇಕು ಎಂದೇನಿಲ್ಲ ಎಂದು ಅಲನ್ ಹೇಳುತ್ತಾರೆ. ಸಾಮಾನ್ಯ ಜ್ಞಾನ ಬಳಸಿಕೊಂಡು ಒಳಾಂಗಣ ಗಾಳಿಯ ಮಟ್ಟವನ್ನು ಸುಲಭವಾಗಿ ಕಂಡುಹಿಡಿಯಬಹುದು ಎಂದು ಅಲೆನ್ ತಿಳಿಸುತ್ತಾರೆ.


ಉದ್ಯೋಗಿಗಳು ಹಾಗೂ ಶಾಲೆಗಳಲ್ಲಿ ಮಕ್ಕಳ ಪೋಷಕರಿಂದ ಒತ್ತಡ ಉಂಟಾಗುತ್ತಿದ್ದು ಹೆಚ್ಚಿನ ಮಟ್ಟದ ಅರಿವು ಹಾಗೂ ಪರಿಣತಿಗೆ ಪೂರಕವಾಗಿರುವ ಅಂಶಗಳತ್ತ ಆದ್ಯತೆ ನೀಡಬೇಕು ಎಂದು ಅಲೆನ್ ತಿಳಿಸುತ್ತಾರೆ. ಸಾಂಕ್ರಾಮಿಕ ಬಂದ ನಂತರ ಜನರು ಕೂಡ ಗಾಳಿಯ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದು ಇದು ಜ್ಞಾನವನ್ನು ವೃದ್ಧಿಸುವಲ್ಲಿ ಹೇಗೆ ಸಹಕಾರಿಯಾಗಿದೆ ಎಂಬ ಅಂಶವನ್ನು ಮನಗಾಣುತ್ತಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ತಿಳಿಸುತ್ತಾರೆ. ಸಾಂಕ್ರಾಮಿಕದ ಮೊದಲು ಯಾರೊಬ್ಬರೂ MERV 13 ಕುರಿತು ಮಾತನಾಡುತ್ತಿರಲಿಲ್ಲ ಹಾಗೂ ಈ ಬಗ್ಗೆ ತಲೆಕೆಡೆಸಿಕೊಂಡಿರಲಿಲ್ಲ. ಸಾಂಕ್ರಾಮಿಕದ ನಂತರ ಆರೋಗ್ಯದ ಬಗ್ಗೆ ಕೂಡ ಜನರು ಕಾಳಜಿಗಳನ್ನು ತೆಗೆದುಕೊಳ್ಳುತ್ತಿದ್ದು ಸ್ವಾಸ್ಥ್ಯದ ಕುರಿತು ಹೆಚ್ಚಿನ ಜವಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ ಎಂಬುದಾಗಿ ಅಲೆನ್ ತಿಳಿಸಿದ್ದಾರೆ.


ಮಾನಸಿಕ ಸ್ವಾಸ್ಥ್ಯಕ್ಕೆ ಒಳಾಂಗಣ ಗಾಳಿ ಹೇಗೆ ಅವಶ್ಯಕ?


ಹೊರಾಂಗಣ ವಾತಾವರಣದ ಗಾಳಿಯಂತೆಯೇ ನೀವು ಕೆಲಸ ಮಾಡುವ ಕಚೇರಿ, ವಾಸಿಸುವ ಮನೆ, ಶಾಲೆ, ಕಾಲೇಜುಗಳ ಒಳಾಂಗಣ ಗಾಳಿಯೂ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕೀಲಿಕೈಯಾಗಿದೆ ಎಂದು ಅಲೆನ್ ಅಭಿಪ್ರಾಯಪಡುತ್ತಾರೆ. ಒಳಾಂಗಣ ಗಾಳಿಯು ಕಲುಷಿತವಾಗಿದ್ದರೆ ಇದು ನಿಮ್ಮ ಅರಿವಿನ ಮಟ್ಟದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂಬುದು ಗಮನಾರ್ಹವಾದ ಅಂಶವಾಗಿದೆ. ಅಧ್ಯಯನಗಳಿಂದ ಖಾತ್ರಿಯಾದ ಅಂಶವೆಂದರೆ ಕಟ್ಟಡಗಳಲ್ಲಿ ಕೆಲಸ ಮಾಡುವ ಕಚೇರಿ ಉದ್ಯೋಗಿಗಳು ದುರ್ಬಲ ಒಳಾಂಗಣ ಗಾಳಿಯ ಪರಿಣಾಮದಿಂದ ಅರಿವಿನ ಮಟ್ಟದಲ್ಲಿ ಕಳಪೆ ಪ್ರದರ್ಶನ ತೋರಿಸುತ್ತಿರುವುದು. ಮೆದುಳಿನ ನರಗಳಿಗೆ ಇದು ಹಾನಿಯನ್ನುಂಟು ಮಾಡಬಹುದು ಎಂದು ಕೂಡ ಅಲೆನ್ ಎಚ್ಚರಿಸಿದ್ದಾರೆ.


ಇದನ್ನೂ ಓದಿ: ಮಧುಮೇಹಿಗಳು ಈ ಹಣ್ಣುಗಳನ್ನು ಎಷ್ಟು ಬೇಕಾದ್ರೂ ತಿನ್ನಬಹುದು..

ಹಾಗಾಗಿ ಕೋವಿಡ್‌ನೊಂದಿಗೆ ನಿಮ್ಮ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವುದು ಮುಖ್ಯವಾಗಿರುವುದರಿಂದ ಈ ನಿಟ್ಟಿನಲ್ಲಿ ಎಲ್ಲಾ ಕಟ್ಟಡ ಮಾಲೀಕರು ಅಥವಾ ಸಂಸ್ಥೆಯ ಮಾಲೀಕರು ತಮ್ಮ ಉದ್ಯೋಗಿಗಳ ಅರಿವಿನ ಪ್ರಗತಿಯಲ್ಲೂ ಕೈಜೋಡಿಸಬೇಕು ಎಂದು ಸಲಹೆ ನೀಡಿದ್ದಾರೆ.


First published: