Health Tips: ಆಹಾರ ಸೇವನೆಯಲ್ಲಿ ಮಾಡುವ ಈ ತಪ್ಪುಗಳು ನಮ್ಮ ಜೀರ್ಣಕ್ರಿಯೆಗೆ ಮಾರಕ

Digestion System: ಕಡಿಮೆ ಪೌಷ್ಠಿಕಾಂಶದ ಆಹಾರಗಳಿಂದ  ನಮ್ಮ ಜೀರ್ಣಕ್ರಿಯೆ ಸರಿಯಾಗದೇ ಔಷಧಗಳ ಮೊರೆ ಹೋಗಬೇಕಾಗುತ್ತದೆ. ಈ ಹೊಟ್ಟೆಯ ಸಮಸ್ಯೆಗಳು ಕೆಲವೊಮ್ಮೆ ಆಹಾರ ಪದಾರ್ಥಗಳನ್ನು ತಪ್ಪು ಸಂಯೋಜನೆ ಮಾಡಿ ತಿನ್ನುವುದರಿಂದ ಉಂಟಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಆಹಾರವನ್ನು ಜೀರ್ಣಿಸಿಕೊಳ್ಳುವುದು ದೇಹದ ಆರೋಗ್ಯದಲ್ಲಿ ಬಹಳ ಮುಖ್ಯವಾದ ವಿಚಾರ. ಅಲ್ಲದೇ ಇದು ದೇಹದ ಇತರ ಚಟುವಟಿಗಳಿಗಿಂತ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ. ಜೀರ್ಣಕ್ರಿಯೆಯ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳ್ಳಲು ಸರಾಸರಿ ಮನುಷ್ಯನ ದೇಹ 24 ರಿಂದ 72 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ನಿಮ್ಮ ದೇಹವು ಜೀರ್ಣಿಸಿಕೊಳ್ಳುವ ಈ ಪ್ರಕ್ರಿಯೆಯಲ್ಲಿ ನೀವು ಅಡೆತಡೆ ಉಂಟುಮಾಡುತ್ತೀರೋ ಅಥವಾ ನಿಮ್ಮ ದೇಹವು ಅದನ್ನು ಸರಾಗವಾಗಿ ಪೂರ್ಣಗೊಳಿಸಲು ಸಹಾಯ ಮಾಡುತ್ತಿರೋ ನಿಮಗೆ ಬಿಟ್ಟ ವಿಚಾರ.

ಕಡಿಮೆ ಪೌಷ್ಠಿಕಾಂಶದ ಆಹಾರಗಳಿಂದ  ನಮ್ಮ ಜೀರ್ಣಕ್ರಿಯೆ ಸರಿಯಾಗದೇ ಔಷಧಗಳ ಮೊರೆ ಹೋಗಬೇಕಾಗುತ್ತದೆ. ಈ ಹೊಟ್ಟೆಯ ಸಮಸ್ಯೆಗಳು ಕೆಲವೊಮ್ಮೆ ಆಹಾರ ಪದಾರ್ಥಗಳನ್ನು ತಪ್ಪು ಸಂಯೋಜನೆ ಮಾಡಿ ತಿನ್ನುವುದರಿಂದ ಉಂಟಾಗುತ್ತದೆ. ಹಾಗಾದರೆ ಯಾವ ಯಾವ ಆಹಾರಗಳನ್ನು ಸೇರಿಸಿ ತಿನ್ನಬಾರದು ಇಲ್ಲಿದೆ ಪಟ್ಟಿ.

ಹೆಚ್ಚು ಪ್ರೋಟೀನ್‌ನ ಆಹಾರಗಳು

ಹೆಚ್ಚು ಪ್ರೋಟೀನ್ ಅಂಶವಿರುವ ಆಹಾರಗಳು ಜೀರ್ಣವಾಗುವುದು ಕಷ್ಟಕರ. ಹಾಗಾಗಿ ಆಹಾರದಲ್ಲಿ ಒಂದು ಪ್ರೋಟೀನ್ ಅಂಶವಿರಲಿ, ಎರಡು ವಿಭಿನ್ನ ರೀತಿಯ ಪ್ರೋಟೀನ್‌ಗಳನ್ನು ಸೇವಿಸುವುದನ್ನು ತಪ್ಪಿಸಿ. ಏಕೆಂದರೆ ಜೀರ್ಣ ಪ್ರಕ್ರಿಯೆಯಾಗಲು ಹೆಚ್ಚು ಸಮಯವಾಗುತ್ತದೆ, ಇದು ನಿಮ್ಮ ಆರೋಗ್ಯದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಈ ಆಹಾರಗಳು ನಿಮ್ಮ ದೇಹವು ಪ್ರಕ್ರಿಯೆಯಲ್ಲಿ ಹೆಚ್ಚಿನ ಶಕ್ತಿಯನ್ನು ಬಳಕೆ ಮಾಡಲು ಕಾರಣವಾಗುತ್ತದೆ.

ಇದನ್ನೂ ಓದಿ: ಈ ಹೂವುಗಳಿಂದ ಏನೆಲ್ಲ ಆಹಾರ ಪದಾರ್ಥಗಳನ್ನು ತಯಾರಿಸಬಹುದು ಗೊತ್ತಾ?

ಹಾಲು ಮತ್ತು ಬಾಳೆಹಣ್ಣು
ಹಾಲು ಮತ್ತು ಬಾಳೆಹಣ್ಣು ಜೀರ್ಣಕ್ರಿಯೆಯನ್ನು ತುಂಬಾ ಕಠಿಣಗೊಳಿಸುತ್ತದೆ. ಏಕೆಂದರೆ ಈ ಎರಡರ ಸಂಯೋಜನೆ ದೇಹದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತದೆ. ಇವುಗಳನ್ನು ಒಟ್ಟಿಗೆ ಸೇವನೆ ಮಾಡುವುದು ಕೊಬ್ಬು ಸಂಗ್ರಹಿಸುವ ಹಾರ್ಮೋನ್, ಇನ್ಸುಲಿನ್ ಹೆಚ್ಚಳಕ್ಕೆ ಕಾರಣವಾಗಬಹುದು. ಇನ್ನು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವ ಜನರಿಗೆ ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇರಿಗೆ ತಿನ್ನುವುದು ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಹಣ್ಣು ಮತ್ತು ತರಕಾರಿ
ಹಣ್ಣುಗಳಲ್ಲಿ ಸಕ್ಕರೆಯ ಅಂಶವಿರುತ್ತದೆ, ಇದು ತರಕಾರಿಗಳ ಜೀರ್ಣಕ್ರಿಯೆಯನ್ನು ನಿಧಾನ ಮಾಡುತ್ತದೆ. ಈ ತರಕಾರಿ ಮತ್ತು ಹಣ್ಣುಗಳು ಎರಡು ವಿಭಿನ್ನ ರೀತಿಯ ಆಹಾರವಾಗಿದ್ದು, ಅವುಗಳು ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಆದ್ದರಿಂದ ಈ ಎರಡನ್ನು ಒಟ್ಟಿಗೆ ಸೇವನೆ ಮಾಡುವುದು ಜೀರ್ಣಕ್ರಿಯೆಗೆ ಒಳ್ಳೆಯದಲ್ಲ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಹಾಲು ಮತ್ತು ಟೀ

ಚಹಾ ಆ್ಯಂಟಿ ಆಕ್ಸಿಡೆಂಟ್ಗಳ ಒಂದು ಶ್ರೇಣಿಯನ್ನು ಹೊಂದಿದ್ದು ಅದು ಉರಿಯೂತವನ್ನು ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ. ಹಾಲು ಮತ್ತು ಚಹಾವನ್ನು ಒಮ್ಮಲೆ ಕುಡಿಯುವುದು ಚಹಾದ ಉತ್ತಮ ಗುಣಗಳನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ.

ಹಣ್ಣುಗಳು ಮತ್ತು ಯೋಗರ್ಟ್
ಹಣ್ಣುಗಳು ಮತ್ತು ಯೋಗರ್ಟ್ನಂತಹ ಯಾವುದೇ ಹುಳಿ ಪದಾರ್ಥಗಳನ್ನು ಒಟ್ಟಿಗೆ ಸೇವನೆ ಮಾಡುವುದು ಆರೋಗ್ಯಕರವಲ್ಲ. ಕೆಲವರು ಈ ಎರಡು ಪದಾರ್ಥಗಳನ್ನು ಒಟ್ಟಿಗೆ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದುಕೊಂಡಿದ್ದಾರೆ, ಆದರೆ ನಿಜಕ್ಕೂ ಈ ವಸ್ತುಗಳು ಸೇರಿದಾಗ ದೇಹದಲ್ಲಿ ವಿಷ ಉತ್ಪತ್ತಿಯಾಗುತ್ತದೆ. ಅಲ್ಲದೇ ಇದು ಕೆಲವು ಅಲರ್ಜಿಗಳಿಗೆ ಕಾರಣವಾಗುತ್ತದೆ.

ಇದಷ್ಟೇ ಅಲ್ಲದೇ ಇನ್ನು ಕೆಲವು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಹಾನಿ ಮಾಡುತ್ತದೆ.
ಬೀನ್ಸ್ ಮತ್ತು ಚೀಸ್, ಮೊಟ್ಟೆ, ಹಾಲು, ಅಥವಾ ಮೊಸರು
ಯಾವುದೇ ಹಣ್ಣಿನ ರಸದೊಂದಿಗೆ ಸಿರಿಧಾನ್ಯ ಮತ್ತು ಕಿತ್ತಳೆ ರಸ ಅಥವಾ ಗಂಜಿ
ಬಾಳೆಹಣ್ಣು, ಒಣದ್ರಾಕ್ಷಿ ಅಥವಾ ಹಾಲಿನೊಂದಿಗೆ ಮೂಲಂಗಿ
ಊಟದ ನಂತರ ಹಣ್ಣುಗಳ ಸೇವನೆ ಒಳ್ಳೆಯದಲ್ಲ
ಆಲ್ಕೊಹಾಲ್ ಜೊತೆ ಎನರ್ಜಿ ಪಾನೀಯಗಳ ಸೇವನೆ.
Published by:Sandhya M
First published: