• Home
  • »
  • News
  • »
  • lifestyle
  • »
  • Cholesterol Problem: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಆಹಾರ ಸೇವಿಸಿ

Cholesterol Problem: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಈ ಆಹಾರ ಸೇವಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಟ್ಟ ಕೊಲೆಸ್ಟ್ರಾಲ್ ತೊಡೆದು ಹಾಕಲು ನಿಮ್ಮ ನಿಯಮಿತ ದಿನಚರಿ ಮತ್ತು ಆಹಾರದಲ್ಲಿ ಕೆಲವು ಪ್ರಮುಖ ಬದಲಾವಣೆ ಮಾಡಬೇಕು. ಇದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆಯದಂತೆ ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ತಡೆಯಲು ತಜ್ಞರು ಐದು ಆಹಾರ ಪದಾರ್ಥಗಳನ್ನು ತಿಳಿಸಿದ್ದಾರೆ. ಅವುಗಳು ಯಾವುವು ಎಂಬುದನ್ನು ನೋಡೋಣ.

ಮುಂದೆ ಓದಿ ...
  • Share this:

    ದೇಹದಲ್ಲಿನ (Body) ಕೊಲೆಸ್ಟ್ರಾಲ್ (Cholesterol) ಹೆಚ್ಚಳವಾಗುವುದು ಹಲವು ಹೊಸ ರೋಗಗಳ ಸಂಕೇತ (Disease Sign) ಆಗಿದೆ. ಕೊಲೆಸ್ಟ್ರಾಲ್ ಮಟ್ಟವು ವೇಗವಾಗಿ ಹೆಚ್ಚಾಗುತ್ತಾ ಇದ್ರೆ ಅದು ನಿಮ್ಮ ರಕ್ತದ (Blood) ರಕ್ತನಾಳಗಳಲ್ಲಿ ಸಂಗ್ರಹ ಆಗುತ್ತದೆ. ಹೀಗಾಗಿ ದೇಹದಲ್ಲಿ (Body) ರಕ್ತ ಪೂರೈಕೆ ಸಹ ನಿಧಾನವಾಗುತ್ತದೆ. ಇದು ನಿಮ್ಮ ಹೃದಯಕ್ಕೆ ಹೆಚ್ಚು ಹೊರೆಯುಂಟು ಮಾಡುತ್ತದೆ. ಹಾಗಾಗಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ ನಿಯಂತ್ರಿಸುವುದು ತುಂಬಾ ಮುಖ್ಯ. ತಪ್ಪು ಆಹಾರ ಪದ್ಧತಿ, ಕಳಪೆ ಜೀವನಶೈಲಿ, ದೈಹಿಕವಾಗಿ ನಿಷ್ಕ್ರಿಯತೆ ಜೊತೆಗೆ ಕೆಲವು ಕಾರಣಗಳು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಪ್ರಮುಖ ಕಾರಣಗಳಾಗಿವೆ.


    ಕೆಟ್ಟ ಕೊಲೆಸ್ಟ್ರಾಲ್ ದೇಹಕ್ಕೆ ಮಾರಕ


    ಕೆಟ್ಟ ಕೊಲೆಸ್ಟ್ರಾಲ್ ತೊಡೆದು ಹಾಕಲು ನಿಮ್ಮ ನಿಯಮಿತ ದಿನಚರಿ ಮತ್ತು ಆಹಾರದಲ್ಲಿ ಕೆಲವು ಪ್ರಮುಖ ಬದಲಾವಣೆ ಮಾಡಬೇಕು. ಇದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆಯದಂತೆ ತಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ತಡೆಯಲು ತಜ್ಞರು ಐದು ಆಹಾರ ಪದಾರ್ಥಗಳನ್ನು ತಿಳಿಸಿದ್ದಾರೆ. ಅವುಗಳು ಯಾವವು ಎಂಬುದನ್ನು ನೋಡೋಣ.


    ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ತಪ್ಪಿಸಲು ತಜ್ಞರು ಹೇಳಿರುವ ಆಹಾರ ಪದಾರ್ಥಗಳು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಸಹ ತಿಳಿಯೋಣ.




    ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡುವ ಆಹಾರ ಪದಾರ್ಥಗಳು


    ಪೌಷ್ಟಿಕ ತಜ್ಞೆ ಮತ್ತು ಹೆಲ್ತ್ ಟೋಟಲ್ ಸಂಸ್ಥಾಪಕಿ ಅಂಜಲಿ ಮುಖರ್ಜಿ ಅವರು ಕೊಲೆಸ್ಟ್ರಾಲ್ ಮಟ್ಟ ಸಮತೋಲನದಲ್ಲಿಡಲು ಕೆಲವು ಪ್ರಮುಖ ಆಹಾರ ಸೂಚಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.


    ಹಸಿರು ಎಲೆಗಳ ತರಕಾರಿ ಸೇವನೆ ಮಾಡುವುದು


    ತರಕಾರಿಗಳು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಅವುಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಕ್ಯಾಲೋರಿಗಳಿವೆ. ಕೆಲವು ತರಕಾರಿಗಳು ಪೆಕ್ಟಿನ್ನಲ್ಲಿ ಸಮೃದ್ಧವಾಗಿವೆ. ಇದು ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಸಹಕಾರಿ. ಆಹಾರದಲ್ಲಿ ಮೆಗ್ನೀಸಿಯಮ್ ಭರಿತ ಗೋಧಿ ಹುಲ್ಲಿನಂತಹ ತಾಜಾ ತರಕಾರಿ ಮತ್ತು ಹಸಿರು ಎಲೆಗಳ ತರಕಾರಿ ರಸ ಸೇವನೆ ಮಾಡಿ.


    ಕಚ್ಚಾ ಬೆಳ್ಳುಳ್ಳಿ ಸೇವನೆ ಮಾಡುವುದು


    ಬೆಳ್ಳುಳ್ಳಿ ಆರೋಗ್ಯದ ಸಮಸ್ಯೆ ತೊಡೆದು ಹಾಕಲು ಮನೆಮದ್ದಾಗಿ ಬಳಕೆ ಮಾಡಲಾಗುತ್ತಿದೆ. ಬೆಳ್ಳುಳ್ಳಿ ಅಲಿಸಿನ್ ಮತ್ತು ಇತರ ಅನೇಕ ಸಸ್ಯ ಸಂಯುಕ್ತ ಹೊಂದಿದೆ. ಬೆಳ್ಳುಳ್ಳಿಯ ನಿಯಮಿತ ಸೇವನೆ ರಕ್ತದೊತ್ತಡ ನಿಯಂತ್ರಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ.


    ಮೀನು ಸೇವನೆ


    ಒಮೆಗಾ 3 ಕೊಬ್ಬಿನಾಮ್ಲಗಳು ಮೀನುಗಳಲ್ಲಿದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿಸುತ್ತದೆ. ಕಾಯಿಲೆ ಕಡಿಮೆ ಮಾಡುತ್ತದೆ. ವಾರಕ್ಕೆ 2 ರಿಂದ 3 ಬಾರಿ ಮೀನು ಸೇವಿಸಿ. ಹಬೆಯಲ್ಲಿ ಬೇಯಿಸಿ ಸೇವಿಸಿ.


    ಕಪ್ಪು ಚಾಕೊಲೇಟ್  ಸೇವಿಸಿ


    ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ ಅಧ್ಯಯನದ ಪ್ರಕಾರ, ಡಾರ್ಕ್ ಚಾಕೊಲೇಟ್ ಮತ್ತು ಕೋಕೋ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಕೊಕೊ ಮತ್ತು ಡಾರ್ಕ್ ಚಾಕೊಲೇಟ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ರಕ್ತದಲ್ಲಿ ಆಕ್ಸಿಡೈಸ್ ಮಾಡಲು ಬಿಡಲ್ಲ.


    ಆವಕಾಡೊ


    ಆವಕಾಡೊ ಮೊನೊಸಾಚುರೇಟೆಡ್ ಕೊಬ್ಬು ಮತ್ತು ಫೈಬರ್ ಹೊಂದಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.


    ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸಲು ಜೀವನಶೈಲಿ ಬದಲಾವಣೆ


    ಧೂಮಪಾನ ಮಾಡಬೇಡಿ


    ಧೂಮಪಾನದ ಅಭ್ಯಾಸವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಧೂಮಪಾನ ರಕ್ತ ಪರಿಚಲನೆ, ಶ್ವಾಸಕೋಶದ ಕಾರ್ಯ ಎಲ್ಲವನ್ನೂ ಹಾಳು ಮಾಡುತ್ತದೆ. ಹಾಗಾಗಿ ಧೂಮಪಾನ ಬಿಡಿ.


    ಇದನ್ನೂ ಓದಿ: ತುಪ್ಪವನ್ನು ಈ ರೀತಿ ತಿಂದರೆ ತೂಕ ಇಳಿಸೋದು ಬಲು ಸುಲಭ


    ತೂಕ ನಿಯಂತ್ರಿಸಿ


    ಕೊಲೆಸ್ಟ್ರಾಲ್ ಹೆಚ್ಚಾಗಲು ತೂಕ ಹೆಚ್ಚಾಗುವುದು ಕಾರಣ. ಆಹಾರ ಮತ್ತು ವ್ಯಾಯಾಮದ ಮೂಲಕ ಜೀವನಶೈಲಿಯಲ್ಲಿ ಬದಲಾವಣೆ ಮಾಡಿ. ತೂಕ ನಿಯಂತ್ರಿಸಿ. ಮದ್ಯಪಾನ ಮಾಡಬೇಡಿ.

    Published by:renukadariyannavar
    First published: