ಅನೇಕ ಜನರು (People) ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಸಮಸ್ಯೆಯಿಂದ (Problem) ಹೆಚ್ಚು ಬಳಲುತ್ತಿರುವ ಸಂಗತಿಗಳು, ದೂರುಗಳು ಸಾಮಾನ್ಯ ಆಗಿವೆ. ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಇದು ನಿಮ್ಮ ರಕ್ತದಲ್ಲಿ (Blood) ಕಂಡು ಬರುವ ಮೇಣದಂಥ ಕೊಬ್ಬಿನ ವಸ್ತು ಆಗಿದೆ. ಇದನ್ನು ನಿಮ್ಮ ಯಕೃತ್ತು ತಯಾರಿಸುತ್ತದೆ. ಆದರೆ ಇದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಗೆ ಆಹಾರ ಸೇವನೆಯು ತುಂಬಾ ಮುಖ್ಯ ಕಾರಣವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ರಚನೆಗೆ ದೊಡ್ಡ ಕಾರಣವೆಂದರೆ ಅನಾರೋಗ್ಯಕರ ಆಹಾರ, ಹೆಚ್ಚು ಜಂಕ್ ಫುಡ್, ಕರಿದ ಆಹಾರ ಸೇವನೆ ಕಾರಣವಾಗಿದೆ. ಅದರ ಜೊತೆಗೆ ಯಾವುದೇ ರೀತಿಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದೇ ಇರುವದು ಸಹ ಮುಖ್ಯ ಕಾರಣವಾಗಿದೆ.
ಕೊಲೆಸ್ಟ್ರಾಲ್ ಎಂದರೇನು?
ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ. ಉತ್ತಮ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಉತ್ತಮ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಅಗತ್ಯ. ಉತ್ತಮ ಕೊಲೆಸ್ಟ್ರಾಲ್ ಬೇಕು. ಆದರೆ ಕೆಟ್ಟ ಕೊಲೆಸ್ಟ್ರಾಲ್ ಹಲವು ಕಾಯಿಲೆಗಳಿಗೆ ಕಾರಣವಾಗುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಇದು ರಕ್ತದಲ್ಲಿ ಸಂಗ್ರಹವಾಗುತ್ತದೆ. ಮತ್ತು ರಕ್ತನಾಳಗಳನ್ನು ನಿರ್ಬಂಧಿಸುತ್ತದೆ. ಹೀಗಾಗಿ ಇದು ಹೃದಯಾಘಾತ, ಪಾರ್ಶ್ವವಾಯು ಮತ್ತು ಹೃದಯ ಕಾಯಿಲೆ ಅಪಾಯದ ಹೆಚ್ಚಳಕ್ಕೆ ಕಾರಣ ಆಗುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಳಕ್ಕೆ ಕಾರಣಗಳು ಯಾವವು?
ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ರಕ್ತನಾಳಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳವಾಗಲು ಕೊಬ್ಬು-ಭರಿತ ಆಹಾರ ಸೇವನೆ, ವ್ಯಾಯಾಮ ಕೊರತೆ, ಆಲ್ಕೋಹಾಲ್ ಸೇವನೆ, ಮಧುಮೇಹ ಅಥವಾ ಬೊಜ್ಜು ಸೇರಿದಂತೆ ಇತರೆ ಕಾಯಿಲೆಗಳು ಸೇರಿ ಅನೇಕ ಕಾರಣಗಳಿವೆ.
ಇವುಗಳಲ್ಲಿ ಆರೋಗ್ಯಕರ ಆಹಾರ ಅಥವಾ ನಿಯಮಿತ ವ್ಯಾಯಾಮ ಮಾಡದೇ ಇರುವುದು ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಕೆಟ್ಟದಾಗಿಸಲು ಮತ್ತು ಹೆಚ್ಚಿಸಲು ಕಾರಣವಾಗುತ್ತದೆ. ಇದರ ಜೊತೆಗೆ ಕೆಲವು ಕಾರಣಗಳಿವೆ. ಅವುಗಳನ್ನು ನೋಡೋಣ.
ಕುಟುಂಬದ ಇತಿಹಾಸ
ಕುಟುಂಬದಲ್ಲಿ ಯಾರಾದ್ರೂ ಕೆಟ್ಟ ಕೊಲೆಸ್ಟ್ರಾಲ್ ಇದ್ದರೆ, ನೀವು ಸಹ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೊಂದುವ ಸಾಧ್ಯತೆ ಹೆಚ್ಚು. ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಆ ಜನರಿಗಿಂತ ಹೆಚ್ಚಾಗಿ ನೀವು ಪರಿಶೀಲಿಸಬೇಕು. ಹೆಚ್ಚು ಜಾಗ್ರತೆ ವಹಿಸಿ.
ವೃದ್ಧಾಪ್ಯದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶದ ಅಪಾಯ
ಪ್ರತಿಯೊಬ್ಬರಿಗೂ ಅಧಿಕ ಕೊಲೆಸ್ಟ್ರಾಲ್ ಅಪಾಯ ವಯಸ್ಸಾದಂತೆ ಹೆಚ್ಚಾಗುತ್ತದೆ. ಏಕೆಂದರೆ ವಯಸ್ಸಾದಂತೆ, ದೇಹವು ರಕ್ತದಿಂದ ಕೊಲೆಸ್ಟ್ರಾಲ್ ಅನ್ನು ತೆರವುಗೊಳಿಸಲು ಸಾಧ್ಯ ಆಗುವುದಿಲ್ಲ. ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಾರಣವಾಗುತ್ತದೆ. ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ.
ಮಹಿಳೆಯರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಪಾಯ ಹೆಚ್ಚು
ಪುರುಷರಿಗಿಂತ ಮಹಿಳೆಯರು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚು ಅಪಾಯ ಹೊಂದಿದ್ದಾರೆ. ಮಹಿಳೆಯಾಗಿದ್ದರೆ ತಿನ್ನುವ ಮತ್ತು ಕುಡಿಯುವ ವ್ಯಾಯಾಮದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
ಅಧಿಕ ಕೊಲೆಸ್ಟ್ರಾಲ್ ಗೆ ಅಧಿಕ ಸ್ಯಾಚುರೇಟೆಡ್ ಆಹಾರ ಸೇವನೆ ಕಾರಣ
ಅಧಿಕ ಸ್ಯಾಚುರೇಟೆಡ್ ಆಹಾರ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಅಪಾಯ ತಂದೊಡ್ಡುತ್ತದೆ. ದೈಹಿಕ ಚಟುವಟಿಕೆ ಮಾಡದಿರುವುದು, ತೂಕ ಹೆಚ್ಚಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕಾರಣವಾಗಬಹುದು. ಧೂಮಪಾನವು ನಿಮ್ಮ ರಕ್ತನಾಳಕ್ಕೆ ಹಾನಿ ಮಾಡುತ್ತದೆ. ಇದು ಕೊಬ್ಬನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಕಿತ್ತಳೆ ಹಣ್ಣಂತೆ ಕಾಣುತ್ತೆ, ಆದರೆ ಕಿತ್ತಳೆ ಹಣ್ಣು ಅಲ್ಲ! ಕಿನ್ನೋ ಫ್ರೂಟ್ಸ್ನ ಆರೋಗ್ಯ ಪ್ರಯೋಜನ ಹೀಗಿವೆ
ಬೊಜ್ಜು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣ
ಸ್ಥೂಲಕಾಯ ಸಮಸ್ಯೆ ಹೆಚ್ಚಿನ ಟ್ರೈಗ್ಲಿಸರೈಡ್ ಮಟ್ಟ, ಹೆಚ್ಚಿನ LDL ಕೊಲೆಸ್ಟರಾಲ್ ಮಟ್ಟ, ಸ್ಥೂಲಕಾಯ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸೇರಿ ಹಲವು ಕಾಯಿಲೆ ಅಪಾಯ ಹೆಚ್ಚಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ