• Home
  • »
  • News
  • »
  • lifestyle
  • »
  • Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?

Bad Cholesterol: ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಯಾವ ಅಂಶಗಳು ಮುಖ್ಯ ಕಾರಣವಾಗಿವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಟ್ಟ ಕೊಲೆಸ್ಟ್ರಾಲ್ ನಿಂದ ಅಧಿಕ ರಕ್ತದೊತ್ತಡ ಉಸಿರಾಟದ ತೊಂದರೆ ಅಥವಾ ನಿರಂತರ ತೂಕ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತವೆ. ಅದಕ್ಕಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವ ಕಾರಣಗಳ ಬಗ್ಗೆ ನೀವು ತಿಳಿಯುವುದು ಬಹಳ ಮುಖ್ಯ. ಕೊಲೆಸ್ಟ್ರಾಲ್ ಮಟ್ಟವು ರಕ್ತದಲ್ಲಿ ಕಂಡು ಬರುವ ಒಟ್ಟು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸೂಚಿಸುತ್ತದೆ.

ಮುಂದೆ ಓದಿ ...
  • Share this:

    ಪ್ರಪಂಚದಲ್ಲಿ (World) ಹೆಚ್ಚುತ್ತಿರುವ ಕಾಯಿಲೆಗಳು (Disease) ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯದ ಕಾಯಿಲೆಗಳು (Heart Disease) ಹೆಚ್ಚಿನ ಸಂಖ್ಯೆಯ ಸಾವುಗಳಿಗೆ (Deaths) ಕಾರಣ ಆಗಿವೆ. ಹೃದಯ ರಕ್ತನಾಳದ ಕಾಯಿಲೆಗಳಿಗೆ ದೊಡ್ಡ ಕಾರಣ ಅಂದ್ರೆ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಹೆಚ್ಚು ಆಗುವುದು. ಆದರೆ ಕೊಲೆಸ್ಟ್ರಾಲ್ ಮೂಕ ಕಾಯಿಲೆ ಎಂದು ಕರೆಯಲಾಗುತ್ತದೆ. ಯಾಕೆಂದರೆ ಕೆಟ್ಟ ಕೊಲೆಸ್ಟ್ರಾಲ್ ಯಾವುದೇ ರೀತಿಯ ಸಂಕೇತ ನೀಡಲ್ಲ. ಆದ್ರೆ ಆರಂಭದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕೆಲವು ರೋಗ ಲಕ್ಷಣಗಳನ್ನು ನೀಡುತ್ತದೆ. ಅವುಗಳು ತುಂಬಾ ಸಾಮಾನ್ಯವಾಗಿ ಕಂಡು ಬರುತ್ತವೆ. ಅಧಿಕ ರಕ್ತದೊತ್ತಡ, ಉಸಿರಾಟದ ತೊಂದರೆ ಅಥವಾ ನಿರಂತರ ತೂಕ ಹೆಚ್ಚಾಗುವ ಲಕ್ಷಣಗಳು ಕಂಡು ಬರುತ್ತವೆ.


    ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳ


    ಅದಕ್ಕಾಗಿ ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವ ಕಾರಣಗಳ ಬಗ್ಗೆ ನೀವು ತಿಳಿಯುವುದು ಬಹಳ ಮುಖ್ಯ. ಕೊಲೆಸ್ಟ್ರಾಲ್ ಮಟ್ಟವು ರಕ್ತದಲ್ಲಿ ಕಂಡು ಬರುವ ಒಟ್ಟು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸೂಚಿಸುತ್ತದೆ.


    ಇದು ನಿಮ್ಮ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಉತ್ತಮ ಕೊಲೆಸ್ಟ್ರಾಲ್ ನ್ನು ಒಳಗೊಂಡಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ 20 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ಮಾತ್ರ 4 ರಿಂದ 6 ವರ್ಷಗಳಲ್ಲಿ ತಮ್ಮ ಕೊಲೆಸ್ಟ್ರಾಲ್ ಮಟ್ಟ ಪರೀಕ್ಷಿಸಬೇಕು.


    ಇದನ್ನೂ ಓದಿ: ರುಚಿಗೆ ಮಾತ್ರವಲ್ಲ, ಚರ್ಮದ ಆರೋಗ್ಯ ಮತ್ತು ತೂಕ ನಿಯಂತ್ರಣಕ್ಕೂ ಬೇಕು ಬಟಾಣಿ ಕಾಳು


    ಅನಾರೋಗ್ಯಕರ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಹೊಂದಲು ದೊಡ್ಡ ಕಾರಣ ಆಗಿದೆ. ಇದು ತ್ವರಿತ ತೂಕ ಬದಲಾವಣೆ, ತೀವ್ರ ಆಯಾಸ ಅಥವಾ ದೇಹದ ದೌರ್ಬಲ್ಯದ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಹೆಚ್ಚಿನ ಕೊಲೆಸ್ಟ್ರಾಲ್ ಗೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಿಳಿಯೋಣ.


    ಅಧಿಕ ಕೊಲೆಸ್ಟ್ರಾಲ್‌ ಗೆ ಕಾರಣ ಮತ್ತು ಲಕ್ಷಣಗಳು ಯಾವವು?


    ತಜ್ಞರು ಮತ್ತು ಸಂಶೋಧನೆ ಪ್ರಕಾರ, ಹೆಚ್ಚಿನ ವೇಳೆ ವ್ಯಕ್ತಿಯಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ನಿರ್ಣಯಿಸಲು ಕಷ್ಟ ಆಗುತ್ತದೆ. ಏಕೆಂದರೆ ಪರೀಕ್ಷೆಯಿಲ್ಲದೆ ಇದರ ಮುಖ್ಯ ಲಕ್ಷಣಗಳು ತಿಳಿಯಲ್ಲ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ, ಕೆಲವು ಪರಿಸ್ಥಿತಿಗಳು ಅಧಿಕ ಕೊಲೆಸ್ಟ್ರಾಲ್ ಗೆ ಕಾರಣ ಆಗುತ್ತವೆ.


    ಅಧಿಕ ತೂಕ ಇರುವುದು


    ವ್ಯಕ್ತಿಯ ತೂಕವು ಅವರ BMI ದರಕ್ಕಿಂತ ಹೆಚ್ಚಿದ್ದರೆ ಅಧಿಕ ತೂಕವು ಅಧಿಕ ಕೊಲೆಸ್ಟ್ರಾಲ್‌ಗೆ ಕಾರಣ ಆಗಬಹುದು. ಇದು ಅವರು ಪ್ರಮುಖ ಹೃದಯ ಕಾಯಿಲೆಗಳ ಅಪಾಯ ಹೊಂದಲು ಕಾರಣ ಆಗುತ್ತದೆ. ಹಾಗಾಗಿ BMI ದರ ಕಾಪಾಡಿಕೊಳ್ಳಬೇಕು. ಜೊತೆಗೆ ದೈಹಿಕ ಚಟುವಟಿಕೆ ಅದನ್ನು ಇಟ್ಟುಕೊಳ್ಳುವುದು ಅವಶ್ಯಕ. ಇದು ನಿಮ್ಮ ರಕ್ತದ ಕೊಲೆಸ್ಟ್ರಾಲ್ ಮಟ್ಟ ಕಾಪಾಡುತ್ತದೆ.


    ಅನುವಂಶಿಕ ಕಾರಣ


    ಅನೇಕ ಸನ್ನಿವೇಶಗಳಲ್ಲಿ ಚಿಕ್ಕ ವಯಸ್ಸಿನಲ್ಲಿ ಕೊಲೆಸ್ಟ್ರಾಲ್ ಅನ್ನು ಹೊಂದಲು ಅನುವಂಶಿಕ ಕಾರಣಗಳು ಇವೆ. ಅಂದರೆ ಪೋಷಕರಿಗೆ ಅಧಿಕ ಕೊಲೆಸ್ಟ್ರಾಲ್ ಅಥವಾ ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೆ ಅವರ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಅಭಿವೃದ್ಧಿಪಡಿಸುವ ಅಪಾಯ ಇದೆ.


    ಧೂಮಪಾನ ಅಭ್ಯಾಸ


    ನಿಮ್ಮ ಧೂಮಪಾನದ ಅಭ್ಯಾಸವು ದೇಹದ ಕೊಲೆಸ್ಟ್ರಾಲ್ ಮಟ್ಟದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಧೂಮಪಾನ ಅಥವಾ ತಂಬಾಕು ಸೇವನೆ ದೇಹದ ಒಳ್ಳೆಯ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಆದಾಗ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಅಲ್ಲದೆ ಅತಿಯಾದ ಆಲ್ಕೊಹಾಲ್ ಸೇವನೆ ನಿಮ್ಮ ಒಟ್ಟು ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ.


    ಅತಿಯಾದ ಒತ್ತಡ


    ಹೆಚ್ಚಿನ ಒತ್ತಡ ತೆಗೆದುಕೊಳ್ಳುವುದು ನಿಮ್ಮ ಅಧಿಕ ಕೊಲೆಸ್ಟ್ರಾಲ್‌ ಗೆ ಕಾರಣ ಆಗಬಹುದು. ಏಕೆಂದರೆ ಇದು ನಿಮ್ಮ ದೇಹದಲ್ಲಿ ಹಾರ್ಮೋನ್ ಬದಲಾವಣೆ ಉಂಟು ಮಾಡುತ್ತದೆ. ಇದು ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನ್ನು ಹೆಚ್ಚು ಮಾಡುತ್ತದೆ.


    ಇದನ್ನೂ ಓದಿ: ಮೃದುವಾದ ಮತ್ತು ಹೊಳೆಯುವ ಕೂದಲು ಬೇಕೇ? ಹಾಗಾದ್ರೆ ಪ್ರತಿದಿನ ಈ ಹೂವುಗಳ ಹೇರ್ ಮಾಸ್ಕ್ ಹಾಕೊಳ್ಳಿ


    ಅತಿಯಾಗಿ ತಿನ್ನುವುದು ಮತ್ತು ಭಾರೀ ಆಹಾರ


    ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬಿನಂಶ ಇರುವ ಆಹಾರಗಳ ಸೇವನೆ. ಈ ಕಾರಣ ರಕ್ತದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆ ಅಪಾಯ ಹೆಚ್ಚಿಸಬಹುದು.

    Published by:renukadariyannavar
    First published: