ದೇಹದಲ್ಲಿ (Body) ಹಲವು ಕಾಯಿಲೆಗಳು (Disease) ಹುಟ್ಟಲು ಮುಖ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಕೂಡ ಕಾರಣವಾಗಿರುತ್ತದೆ. ಯಾಕಂದ್ರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಸಂಗ್ರಹವಾದಂತೆ ಬೊಜ್ಜು (Fat) ಬೆಳೆಯುತ್ತದೆ. ಬೊಜ್ಜಿನಿಂದ ಮಧುಮೇಹ, ರಕ್ತದೊತ್ತಡ ಮತ್ತು ಹೃದ್ರೋಗ, ಯಕೃತ್ತಿನ ಕಾಯಿಲೆ, ಹೊಟ್ಟೆಯ ಅಸ್ವಸ್ಥತೆ ಸೇರಿದಂತೆ ಹಲವು ರೋಗಗಳು ದೇಹವನ್ನು ಬಾಧಿಸುತ್ತವೆ. ಹಾಗೆಯೇ ನಡೆದಾಡಲು ತೊಂದರೆಯಾಗುತ್ತದೆ. ಹಿಮ್ಮಡಿ ನೋವು, ಸಂಧಿವಾತದಂತಹ ಕಾಯಿಲೆಗಳು ಕಾಡುತ್ತವೆ. ಹಾಗಾಗಿ ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ ನ್ನು ತೊಡೆದು ಹಾಕುವುದು, ಆರೋಗ್ಯದ ಹಿತದೃಷ್ಟಿಯಿಂದ ತುಂಬಾ ಮುಖ್ಯವಾಗಿದೆ. ಕೆಟ್ಟ ಕೊಲೆಸ್ಟ್ರಾಲ್ ಗಂಭೀರ ಮತ್ತು ಕೆಟ್ಟ ಜೀವನಶೈಲಿಯಿಂದ ಉಂಟಾಗುವ ಸಾಮಾನ್ಯ ಸಮಸ್ಯೆ.
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ
ಈ ಕೆಟ್ಟ ಕೊಲೆಸ್ಟ್ರಾಲ್ ಎನ್ನುವ ಸಾಮಾನ್ಯ ಸಮಸ್ಯೆ ಮುಂದೆ ದೊಡ್ಡ ದೊಡ್ಡ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತದೆ. ಹಾಗಾಗಿ ಎಚ್ಚರಿಕೆ ವಹಿಸುವುದು ಮುಖ್ಯ. ಕೆಟ್ಟ ಕೊಲೆಸ್ಟ್ರಾಲ್ ಇದು ರಕ್ತದಲ್ಲಿ ಕಂಡು ಬರುವ ಮೇಣದಂತಹ ಕೊಬ್ಬು ಆಗಿದೆ.
ಇದು ಆರೋಗ್ಯಕರ ಕೋಶಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಆದರೆ ಅದರ ಮಟ್ಟ ಹೆಚ್ಚಾದಾಗ ರಕ್ತನಾಳಗಳ ತಡೆಗಟ್ಟುವಿಕೆಯಂತಹ ಅಪಾಯ ಹೆಚ್ಚುತ್ತದೆ. ಅಂದ ಹಾಗೇ ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ.
ಅದರಲ್ಲಿ ಒಂದು ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಮತ್ತೊಂದು ಉತ್ತಮ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಹೃದ್ರೋಗ, ಹೃದಯಾಘಾತ, ಪಾರ್ಶ್ವವಾಯು ಸೇರಿಂದತೆ ಹಲವು ಆರೋಗ್ಯ ಅಪಾಯ ಹೆಚ್ಚು ಮಾಡುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ತಡೆಗೆ ಹಲವು ಔಷಧಿಗಳಿವೆ. ಆದರೆ ಅದೆಲ್ಲದ್ದಕ್ಕಿಂತ ಕೆಟ್ಟ ಕೊಲೆಸ್ಟ್ರಾಲ್ ತಡೆಗೆ ಅಥವಾ ಕಡಿಮೆ ಮಾಡಲು ನೀವು ನಿಮ್ಮ ದೈನಂದಿನ ಅಭ್ಯಾಸಗಳಲ್ಲಿ ಸುಧಾರಣೆ ತಂದುಕೊಳ್ಳುವುದು ತುಂಬಾ ಮುಖ್ಯ.
ಕೆಲವೊಮ್ಮೆ ಸ್ವಲ್ಪ ದಿನದ ನಂತರ ಔಷಧಿಗಳು ಸಹ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ನೀವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಯಾವುದೇ ಔಷಧ ಸೇವನೆ ಮಾಡದೆಯೇ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು ಅಂತಾರೆ ತಜ್ಞರು.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಕೆಲವು ಕ್ರಮಗಳು ಹೀಗಿವೆ
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ತಡೆಯಲು ಪೌಷ್ಟಿಕ ತಜ್ಞ ಲವ್ನೀತ್ ಬಾತ್ರಾ ಅವರು ತಮ್ಮ Instagram ಹ್ಯಾಂಡಲ್ ನಲ್ಲಿ ಕೆಲವು ಕ್ರಮಗಳ ಬಗ್ಗೆ ಹೇಳಿದ್ದಾರೆ. ರಕ್ತನಾಳಗಳಲ್ಲಿ ಕೊಬ್ಬು ಹೆಚ್ಚಳ ಮತ್ತು ಹೃದ್ರೋಗದ ಅಪಾಯ ಹೆಚ್ಚಿಸುವ ಜೀವನಶೈಲಿಯ ಅಭ್ಯಾಸಗಳ ಬಗ್ಗೆಯೂ ಹೇಳಿದ್ದಾರೆ.
ಆಹಾರದಲ್ಲಿ ಯಾವೆಲ್ಲಾ ಬದಲಾವಣೆ ಮಾಡಬೇಕು?
ಜಂಕ್ ಫುಡ್, ಕರಿದ ಪದಾರ್ಥ, ಪಿಜ್ಜಾ, ಬರ್ಗರ್, ತಂಪು ಸಕ್ಕರೆ ಪಾನೀಯಗಳ ಸೇವನೆಯು ಅಧಿಕ ಕೊಲೆಸ್ಟ್ರಾಲ್ ಗೆ ಕಾರಣವಾಗಿದೆ. ಹೀಗಾಗಿ ರೋಗಿಯು ಉತ್ತಮ ಆಹಾರ ಸೇವನೆ ಮಾಡಬೇಕು. ಇದು ಹೃದಯದ ಆರೋಗ್ಯ ಹೆಚ್ಚಿಸುತ್ತದೆ.
ಆರೋಗ್ಯ ಮತ್ತು ಉತ್ತಮ ಕೊಲೆಸ್ಟ್ರಾಲ್ ಗಾಗಿ ಸ್ಯಾಚುರೇಟೆಡ್ ಕೊಬ್ಬು, ಟ್ರಾನ್ಸ್ ಕೊಬ್ಬಿನ ಆಹಾರದ ಬದಲಿಗೆ ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಕರಗುವ ಫೈಬರ್ನಲ್ಲಿ ಸಮೃದ್ಧವಾಗಿರುವ ಆಹಾರ ಪದಾರ್ಥ ಸೇವಿಸಿ.
ಹಸುವಿನ ತುಪ್ಪ, ಸಾಲ್ಮನ್, ವಾಲ್‌ನಟ್ಸ್ ಮತ್ತು ಅಗಸೆ ಬೀಜ ಸೇವಿಸಿ. ಈ ಆಹಾರಗಳು ರಕ್ತದ ಹೆಚ್ಚುವರಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ನಿಯಮಿತ ವ್ಯಾಯಾಮ
ನಿಯಮಿತವಾಗಿ ವಾಕಿಂಗ್, ವ್ಯಾಯಾಮ ಮಾಡುವುದು, ಆರೋಗ್ಯಕ್ಕೆ ಉತ್ತಮ. ದೈಹಿಕ ಚಟುವಟಿಕೆ ಕೊರತೆ ಸಹ ರಕ್ತನಾಳಗಳಲ್ಲಿ ಕೊಬ್ಬಿನ ಶೇಖರಣೆಯ ಸಾಧ್ಯತೆ ಹೆಚ್ಚಿಸುತ್ತದೆ. ಹಾಗಾಗಿ ನೀವು ನಿಯಮಿತವಾಗಿ ವ್ಯಾಯಾಮ ಮಾಡಿ. ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ.
ಧೂಮಪಾನ ತ್ಯಜಿಸಿ
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಕಡಿಮೆ ಮಾಡಲು ಧೂಮಪಾನ ಕಡಿಮೆ ಮಾಡಿ. ಧೂಮಪಾನ ತ್ಯಜಿಸಿದರೆ ಎಲ್‌ಡಿಎಲ್ ಕೊಲೆಸ್ಟ್ರಾಲ್ ಕಡಿಮೆ ಮಾಡಬಹುದು. ಮತ್ತು ಹೃದ್ರೋಗ ಅಪಾಯ ಕಡಿಮೆ ಮಾಡಬಹುದು.
ಆರೋಗ್ಯಕರ ತೂಕ ಕಾಪಾಡಿಕೊಳ್ಳಿ
ಕೆಟ್ಟ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಿ ಬೊಜ್ಜು ಹೊಂದಿರುವ ಜನರಲ್ಲಿ ಕಂಡು ಬರುತ್ತದೆ. ಅಧಿಕ ತೂಕವು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: 'ಎದೆ ಬಡಿತ' ಜೋರಾಗಿದೆಯಾ? ಇದು ಪ್ರೀತಿಯೊಂದೇ ಅಲ್ಲ, ಹೃದಯದ ಕಾಯಿಲೆಯೂ ಆಗಿರಬಹುದು!
ಮದ್ಯಪಾನ ಮಾಡಬೇಡಿ
ಮದ್ಯಪಾನ ತ್ಯಜಿಸಿ. ಮಹಿಳೆಯರು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು ದಿನಕ್ಕೆ ಒಂದು ಗ್ಲಾಸ್ ಮಾತ್ರ ಮದ್ಯ ಸೇವಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ