ಈಗಾಗಲೇ ಹೋಳಿ ಹಬ್ಬಕ್ಕೆ (Holi Festival) ಜನರು (People) ತಯಾರಿ ಶುರು ಮಾಡಿದ್ದಾರೆ. ಬಣ್ಣಗಳ ಹಬ್ಬ ಹೋಳಿಯು ಸಂತಸ (Happiness) ಮತ್ತು ಸಂಭ್ರಮ ಹೊತ್ತು ತರುತ್ತದೆ. ಜನರು ತಮ್ಮಿಷ್ಟದ ರಂಗು ರಮಗಿನ ಬಣ್ಣದ (Color) ಓಕುಳಿಯಾಡುತ್ತಾರೆ. ಬಣ್ಣದಲ್ಲಿ ಮಿಂದೇಳುವ ಜನರು ಹಬ್ಬಕ್ಕೆ ಬೇಕಾದ ಸಿಹಿ ಮತ್ತು ಕರಿದ ಖಾದ್ಯಗಳ (Sweet And Oily Food) ತಯಾರಿ ಮಾಡಿಕೊಳ್ಳುತ್ತಾರೆ. ಹಬ್ಬದಲ್ಲಿ ಹೆಚ್ಚಾಗಿ ಸಿಹಿ ಮತ್ತು ಕರಿದ ಪದಾರ್ಥಗಳ ಸೇವನೆಯೇ ಹೆಚ್ಚು. ಆದರೆ ಕರಿದ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ ಬೇಸಿಗೆಯಲ್ಲಿ ಕರಿದ ಪದಾರ್ಥಗಳ ಸೇವನೆಯು ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ.
ಕರಿದ ಆಹಾರ ಸೇವನೆ ಮಾಡುವ ಮುನ್ನ ಜಾಗ್ರತೆ ವಹಿಸಿ
ಬೇಸಿಗೆಯಲ್ಲಿ ಬರುವ ಹೋಳಿ ಹಬ್ಬಕ್ಕಾಗಿ ಜನರು ವಿಶಿಷ್ಟ ಖಾದ್ಯಗಳನ್ನು ಮಾಡುತ್ತಾರೆ. ಅದರಲ್ಲಿ ಹೆಚ್ಚಿನ ಪದಾರ್ಥಗಳು ಕರಿದ ಪದಾರ್ಥಗಳು ಮತ್ತು ಸಿಹಿ ಪದಾರ್ಥಗಳಾಗಿರುತ್ತವೆ. ಹಬ್ಬದಂದು ಬರುವ ಅತಿಥಿಗಳು ಮತ್ತು ಜನರಿಗಾಗಿ ವಿಶೇಷ ಖಾದ್ಯ ಮಾಡಲಾಗುತ್ತದೆ. ಬಜ್ಜಿ, ಖರ್ಚಿಕಾಯಿ, ಹೋಳಿಗೆ, ವಡೆ, ಸಮೋಸಾ, ಆಲೂ ಪರಾಠಾ ಹೀಗೆ ಎಣ್ಣೆಯಿಂದ ಕೂಡಿದ ಪದಾರ್ಥಗಳ ಸೇವನೆಯೇ ಹೆಚ್ಚು.
ಆದರೆ ಈ ಸಮೋಸಾ ಮತ್ತು ಆಲೂ ಪರಾಠ ಹಾಗೂ ಕರಿದ ಪದಾರ್ಥಗಳನ್ನು ಅನಾರೋಗ್ಯ ಮತ್ತು ಕಾಯಿಲೆ ಹೊಂದಿದವರು ತಿನ್ನುವುದನ್ನು ತಪ್ಪಿಸಿ. ಇಲ್ಲವೇ ಕಡಿಮೆ ಸೇವನೆ ಮಾಡಿ. ಬಣ್ಣಗಳ ಹಬ್ಬದಂದು ಸಮೋಸ ಮಾಡಲು ಯೋಚನೆ ಮಾಡಿದ್ದರೆ, ಯಾರದ್ದಾದ್ರು ಮನೆಯಲ್ಲಿ ಕರಿದ ಆಹಾರ ತಿನ್ನುವ ಮೊದಲು ಯೋಚನೆ ಮಾಡಿ. ನಿಮ್ಮ ಆರೋಗ್ಯದ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸೇವನೆ ಮಾಡಿ.
ಅಧಿಕ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಹೊಂದಿರುವವರು ಕರಿದ ಪದಾರ್ಥ ಸೇವನೆ ತಪ್ಪಿಸಿ
ಸಮೋಸಾ ಒಂದು ಕರಿದ ಆಹಾರ ಪದಾರ್ಥ. ಇದು ಹೆಚ್ಚಿನ ಪ್ರಮಾಣದ ಟ್ರಾನ್ಸ್ ಕೊಬ್ಬು ಹೊಂದಿದೆ. ಈ ಕೊಬ್ಬು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ರಕ್ತನಾಳಗಳನ್ನು ಬ್ಲಾಕ್ ಮಾಡುವ ಸಾಧ್ಯತೆ ಹೆಚ್ಚು. ಹಾಗಾಗಿ ಹೆಚ್ಚಿನ ಎಲ್ ಡಿಎಲ್ ಕೊಲೆಸ್ಟ್ರಾಲ್ ಹೊಂದಿರುವ ಜನರು ಈ ಕರಿದ ಆಹಾರ ಸೇವನೆಯನ್ನು ತಪ್ಪಿಸಿ.
ಅಧಿಕ ರಕ್ತದ ಸಕ್ಕರೆ ಹೊಂದಿರುವ ರೋಗಿಗಳು ಕರಿದ ಮತ್ತು ಸಕ್ಕರೆ ಸಿಹಿ ಸೇವನೆ ತಪ್ಪಿಸಿ
ಅಧಿಕ ಶುಗರ್ ಇರುವ ರೋಗಿಗಳು ಸಮೋಸ ಹಾಗೂ ಸಿಹಿ ಪದಾರ್ಥಗಳ ಸೇವನೆ ತಪ್ಪಿಸಿ. ಇದು ಮತ್ತಷ್ಟು ನಿಮ್ಮನ್ನು ಅನಾರೊಗ್ಯಕ್ಕೆ ದೂಡುತ್ತದೆ. ಕರಿದ ಆಹಾರ ಸೇವನೆ ಮಾಡುವವರಿಗೆ ಟೈಪ್ 2 ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚು. ಈ ಆಹಾರವು ರಕ್ತದ ಸಕ್ಕರೆ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತದೆ ಮತ್ತು ಅಪಾಯಕಾರಿ ಪರಿಸ್ಥಿತಿಗೆ ಕಾರಣ ಆಗುತ್ತದೆ.
ಹೃದ್ರೋಗಿಗಳು ಕರಿದ ಮತ್ತು ಸಿಹಿ ಸೇವನೆ ತಪ್ಪಿಸಿ
ನಿಮ್ಮ ಹೃದಯದ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಮತ್ತು ನೀವು ಹೃದ್ರೋಗ ಹೊಂದಿರುವ ರೋಗಿ ಆಗಿದ್ದರೆ ಅಪ್ಪಿತಪ್ಪಿಯೂ ಸಮೋಸ ಮತ್ತು ಕರಿದ ಮತ್ತು ಸಕ್ಕರೆ ಸಿಹಿ ಖಾದ್ಯ ಸೇವನೆ ಮಾಡಬೇಡಿ. ಇದು ನರಗಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದು ಹೃದಯದ ಮೇಲಿನ ಒತ್ತಡ ಹೆಚ್ಚಾಗಲು ಕಾರಣವಾಗುತ್ತದೆ. ಈ ಸ್ಥಿತಿಯು ಹೃದಯಾಘಾತಕ್ಕೆ ಕಾರಣ ಆಗುವ ಸಾಧ್ಯತೆ ಹೆಚ್ಚು.
ಅಧಿಕ ರಕ್ತದೊತ್ತಡ ರೋಗಿಗಳು ಕರಿದ ಮತ್ತು ಸಿಹಿ ಸೇವನೆ ತಪ್ಪಿಸಿ
ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಕರಿದ ಮತ್ತು ಸಿಹಿ ಸೇವನೆ ತಪ್ಪಿಸಿ. ಇಲ್ಲದಿದ್ದರೆ ಇದು ಹೃದಯದ ಜೊತೆಗೆ ಮೆದುಳು ಮತ್ತು ಮೂತ್ರಪಿಂಡಕ್ಕೆ ಹಾನಿ ಮಾಡುವ ಸಾಧ್ಯತೆ ಹೆಚ್ಚು. ಸಮೋಸಾಗಳಂತಹ ಹೆಚ್ಚು ಕರಿದ ಆಹಾರ ಸೇವನೆಯು ಅಧಿಕ ರಕ್ತದೊತ್ತಡ ಸಮಸ್ಯೆ ಉಂಟು ಮಾಡುತ್ತದೆ.
ಇದನ್ನೂ ಓದಿ: ಈ ಸ್ಪೆಷಲ್ ಟೀ ಕುಡಿದ್ರೆ ಒಂದು ತಿಂಗಳಿನಲ್ಲಿಯೇ ಸಣ್ಣ ಆಗ್ತೀರಾ; ನೆನಪಿನ ಶಕ್ತಿಯೂ ಹೆಚ್ಚಾಗುತ್ತೆ
ಆಲೂ ತುಂಬಿದ ಸಮೋಸಾ ಸೇವನೆಯು ಕ್ಯಾನ್ಸರ್ ಗೆಡ್ಡೆಗೆ ಕಾರಣ
ಆಲೂಗಡ್ಡೆ ಅಕ್ರಿಲಾಮೈಡ್ ಎಂಬ ಸಂಯುಕ್ತ ಹೊಂದಿದೆ. ಇದು ದೀರ್ಘಕಾಲದವರೆಗೆ ಹೆಚ್ಚಿನ ತಾಪಮಾನದಲ್ಲಿ ಹುರಿದರೆ ವಿಷಕಾರಿಯಾಗುತ್ತದೆ. ಈ ಸಂಯುಕ್ತವು ಅನೇಕ ಕ್ಯಾನ್ಸರ್ ಗಳಿಗೆ ಕಾರಣ ಆಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ