• Home
  • »
  • News
  • »
  • lifestyle
  • »
  • Health Tips: ಬ್ಯಾಕ್ಟೀರಿಯಾಗಳು ತ್ವಚೆಯ ಆರೋಗ್ಯಕ್ಕೆ ಸಹಕಾರಿ, ಹೊಸ ಅಧ್ಯಯನ ತಿಳಿಸಿರುವ ಮಾಹಿತಿ ಏನು?

Health Tips: ಬ್ಯಾಕ್ಟೀರಿಯಾಗಳು ತ್ವಚೆಯ ಆರೋಗ್ಯಕ್ಕೆ ಸಹಕಾರಿ, ಹೊಸ ಅಧ್ಯಯನ ತಿಳಿಸಿರುವ ಮಾಹಿತಿ ಏನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಧ್ಯಯನಕಾರರು ಹೇಳುವಂತೆ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳು ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖವಾಗಿವೆ ಎಂದಾಗಿದೆ.

  • Trending Desk
  • 4-MIN READ
  • Last Updated :
  • Share this:

ಯಾವುದೇ ಬ್ರ್ಯಾಂಡ್‌ಗಳನ್ನು ಖರೀದಿಸುವ ಮುನ್ನ ಬ್ಯಾಕ್ಟೀರಿಯಾ ವಿರೋಧಿ (ಆ್ಯಂಟಿ ಬ್ಯಾಕ್ಟೀರಿಯಾ) ಅಂಶಗಳತ್ತ ನೀವು ದಿಟ್ಟಿಸುತ್ತೀರಿ. ಸೌಂದರ್ಯ ಸಂಸ್ಥೆಗಳು ಇದನ್ನೇ ತಮ್ಮ ಮಾರುಕಟ್ಟೆಯ ಬಂಡವಾಳವಾಗಿ ಉತ್ಪನ್ನಗಳನ್ನು ಮಾರುತ್ತವೆ. ಅದರಲ್ಲೂ ಸೌಂದರ್ಯ ಉತ್ಪನ್ನಗಳಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಲೇಬಲ್‌ಗಳು ಗ್ರಾಹಕರನ್ನು ಆಕರ್ಷಿಸುವ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಅಧ್ಯಯನಕಾರರು ಹೇಳುವಂತೆ ಆರೋಗ್ಯಕಾರಿ (Health) ಬ್ಯಾಕ್ಟೀರಿಯಾಗಳು ಚರ್ಮದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಮುಖವಾಗಿವೆ ಎಂದಾಗಿದೆ. ಹಾಗಾಗಿ ಬ್ಯಾಕ್ಟೀರಿಯಾ (Bacteria) ವಿರೋಧಿ ಉತ್ಪನ್ನಗಳನ್ನು ಆಯ್ಕೆಮಾಡುವ ಮುನ್ನ ಅವುಗಳಿಂದ ದೊರೆಯುವ ಪ್ರಯೋಜನಗಳನ್ನು ಅರಿತುಕೊಳ್ಳಿ ಎಂದು ಸಲಹೆ ನೀಡುತ್ತಾರೆ. ಅಂತೆಯೇ ನೈಸರ್ಗಿಕ ಉತ್ಪನ್ನಗಳಿಂದಲೇ ಸೌಂದರ್ಯವನ್ನು (Beautiful) ಕಾಪಾಡಿ ಎಂಬ ಸಲಹೆಯನ್ನು ನೀಡಿದ್ದಾರೆ.


ಚರ್ಮಸ್ನೇಹಿ ಬ್ಯಾಕ್ಟೀರಿಯಾಗಳು ಆರೋಗ್ಯವರ್ಧನೆಗೆ ಸಹಕಾರಿ


ಚರ್ಮಶಾಸ್ತ್ರಜ್ಞರು ಹೇಳುವಂತೆ ಬ್ಯಾಕ್ಟೀರಿಯಾಗಳು ತ್ವಚೆಯ ನೈಸರ್ಗಿಕ ಹೊಳಪನ್ನು ಕಾಪಾಡಲು ಸಹಕಾರಿಯಾಗಿರುವುದರ ಜೊತೆಗೆ ಅನೇಕ ಚರ್ಮ ರೋಗಗಳನ್ನು ದೂರವಿಡುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಅದಕ್ಕೂ ಮುನ್ನ ತ್ವಚೆಗಳಲ್ಲಿರುವ ಬ್ಯಾಕ್ಟೀರಿಯಾಗಳ ಕುರಿತು ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸುವ ವಸ್ತುವಾದ ಪ್ರೋಬಯಾಟಿಕ್‌ಗಳನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ.


ಅಧಿಕ ರಾಸಾಯನಿಕಗಳಿಂದ ಸೂಕ್ಷ್ಮಾಣುಜೀವಿಗಳ ನಾಶ


ಅಧಿಕ ರಾಸಾಯನಿಕಗಳು, ಮುಖದ ಮೇಲೆ ಬ್ಲೀಚ್‌ಗಳ ಬಳಕೆ, ಹೊಸ ಹೊಸ ಸೌಂದರ್ಯ ಉತ್ಪನ್ನಗಳ ಬಳಕೆ ತ್ವಚೆಯ ಸೂಕ್ಷ್ಮಾಣುಜೀವಿಗಳನ್ನು ನಾಶಪಡಿಸಬಹುದು ಎಂಬುದು ಈ ಸಂಶೋಧಕರ ಮಾತಾಗಿದೆ.'


ಇದನ್ನೂ ಓದಿ: ನಿಮ್ಮ ಮೂಳೆಗಳನ್ನು ಸ್ಟ್ರಾಂಗ್​​ ಮಾಡುತ್ತಂತೆ ಈ ಸ್ಟ್ರಾಬೆರಿ ಹಣ್ಣು!


ಆದರೆ ಪ್ರೊಬಯೋಟಿಕ್‌ಗಳು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂಬುದು ಈ ಸಂಶೋಧಕರ ಮಾತಾಗಿದೆ.


ಉತ್ತಮ ಮೈಕ್ರೊಬ್ಸ್ ಎಂದರೇನು?


ನಮ್ಮ ದೇಹ ಅಥವಾ ತ್ವಚೆಯ ಮೇಲೆ ಕಂಡುಬರುವ ಜೀವಂತ ಸೂಕ್ಷ್ಮಜೀವಿಗಳೇ ಈ ಪ್ರೊಬಯೋಟಿಕ್‌ಗಳು. ನಮ್ಮ ದೇಹಕ್ಕೆ ಅಗತ್ಯವಾಗಿರುವ ಆರೋಗ್ಯ ಪ್ರಯೋಜನಗಳನ್ನು ಇವು ಒದಗಿಸುತ್ತವೆ. ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ.


ಉತ್ತಮ ಬ್ಯಾಕ್ಟೀರಿಯಾಗಳು ಹೇಗೆ ಸಹಕಾರಿಯಾಗಿವೆ?


ತ್ವಚೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಚರ್ಮದ ನವೆ, ಉರಿಯೂತ, ಮೊಡವೆ ಒಡೆಯುವುದು ಹಾಗೂ ಇತರ ಚರ್ಮ ರೋಗಗಳ ವಿರುದ್ಧ ಹೋರಾಡುತ್ತದೆ.


ಸಾಂದರ್ಭಿಕ ಚಿತ್ರ


ಪ್ರೊಬಯೊಟಿಕ್ ಒಳಗೊಂಡಿರುವ ಚರ್ಮದ ಉತ್ಪನ್ನಗಳು ಚರ್ಮದ ಹಲವಾರು ಸಮಸ್ಯೆಗಳನ್ನು ನಿವಾರಿಸುವ ಪ್ರಯೋಜನಗಳೊಂದಿಗೆ ಬಂದಿದ್ದು ಇವುಗಳು ಪ್ರಧಾನವಾಗಿರುವ ಆಹಾರಗಳನ್ನು ಸೇವಿಸಬೇಕು ಎಂಬುದು ಅಧ್ಯಯನಕಾರರ ಮಾತಾಗಿದೆ.


ಮೊಸರಿನಲ್ಲಿ ಇರುವ ಪ್ರೊಬಯೊಟಿಕ್‌ಗಳು


ನೈಸರ್ಗಿಕ ರೂಪದಲ್ಲಿ ಪ್ರೊಬಯಾಟಿಕ್‌ಗಳ ಬಳಕೆ ಅಥವಾ ಸೌಂದರ್ಯವರ್ಧಕ ಬಳಕೆಯು ಮುಕ್ತ ರಾಡಿಕಲ್‌ಗಳು, ಯುವಿ ವಿಕಿರಣ, ಅತಿಯಾದ ಪರದೆಯ ಸಮಯ ಇತ್ಯಾದಿಗಳಂತಹ ಪರಿಸರದ ಒತ್ತಡಗಳ ಪ್ರಭಾವದ ವಿರುದ್ಧ ಚರ್ಮವನ್ನು ಬಲಪಡಿಸುತ್ತದೆ.


ಮೊಸರಿನಲ್ಲಿ ಕಂಡುಬರುವ ಈ ಪ್ರೊಬಯೊಟಿಕ್‌ಗಳನ್ನೇ ಹೆಚ್ಚಿನ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಇದೀಗ ಬಳಸಲಾಗುತ್ತಿದೆ.


ಎಲ್ಲಾ ಚರ್ಮವಿಧದವರಿಗೂ ಉತ್ತಮ


ಪ್ರೊಬಯೊಟಿಕ್ ಒಳಗೊಂಡಿರುವ ಸೌಂದರ್ಯ ಉತ್ಪನ್ನಗಳು ಚರ್ಮದ ಪದರವನ್ನು ಬಲಪಡಿಸುತ್ತದೆ ಹಾಗೂ ಉರಿಯೂತ ನವೆಯನ್ನು ಕಡಿಮೆ ಮಾಡುತ್ತದೆ. ಎಲ್ಲಾ ವಿಧದ ತ್ವಚೆಯವರು ಪ್ರೊಬಯೊಟಿಕ್ ಉತ್ಪನ್ನಗಳನ್ನು ಬಳಸಬಹುದಾಗಿದೆ.


ತಜ್ಞರೊಂದಿಗೆ ಸಮಾಲೋಚನೆ ಮುಖ್ಯ


ಯಾವುದೇ ಸೌಂದರ್ಯ ಉತ್ಪನ್ನಗಳನ್ನು ಬಳಸುವ ಮುನ್ನ ತಜ್ಞರನ್ನು ಸಮಾಲೋಚಿಸುವುದು ಉತ್ತಮ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ.


ಪ್ರತಿಯೊಬ್ಬರ ಚರ್ಮದ ರಚನೆ, ವಿನ್ಯಾಸ ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ ಹಾಗಾಗಿ ಒಬ್ಬರು ಬಳಸುವ ಸೌಂದರ್ಯ ಉತ್ಪನ್ನಗಳು ಮತ್ತೊಬ್ಬರಿಗೆ ಪ್ರಯೋಜನಕಾರಿಯಾಗಬೇಕೆಂದೇನಿಲ್ಲ ಎಂಬುದು ಪರಿಣಿತರು ತಿಳಿಸಿರುವ ಸಲಹೆಯಾಗಿದೆ.


ಮನೆಯಲ್ಲಿರುವ ಸೌಂದರ್ಯ ಉತ್ಪನ್ನಗಳನ್ನೇ ಬಳಸಿ


ಮಾರುಕಟ್ಟೆ ಲಭ್ಯವಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಫೇಸ್ ವಾಶ್ ಅನ್ನು ಬಳಸುವ ಮುನ್ನ ನಿಮ್ಮ ತ್ವಚೆಯ ಆರೋಗ್ಯಕಾರಿ ಬ್ಯಾಕ್ಟೀರಿಯಾಗಳನ್ನು ಇದು ನಾಶಪಡಿಸುತ್ತಿದೆ ಎಂಬುದನ್ನು ಗಮನದಲ್ಲಿರಿಸಿಕೊಳ್ಳಿ ಎಂಬುದು ಸಂಶೋಧಕರ ಮಾತಾಗಿದೆ.


ಮಾರುಕಟ್ಟೆ ದೊರೆಯುವ ರಾಸಾಯನಿಕಯುಕ್ತ ಕ್ರೀಮ್, ಫೇಸ್‌ವಾಶ್, ಪೌಡರ್‌ಗಳನ್ನು ಬಳಸುವ ಮುನ್ನ ಮನೆಯಲ್ಲೇ ಕೆಲವೊಂದು ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ ಎಂಬುದು ತಜ್ಞರ ಸಲಹೆಯಾಗಿದೆ.

First published: