ತುಂಬಾ ಜನರು (People) ತೂಕ ಇಳಿಕೆಗೆ (Weight Loss) ಹಲವು ರೀತಿಯ ಸರ್ಕಸ್ ಮಾಡ್ತಾರೆ. ಕೆಲವರು ಡಯಟ್ (Diet) ಫಾಲೋ ಮಾಡ್ತಾರೆ, ಕೆಲವರು ಜಿಮ್ ಹೋಗಿ ವರ್ಕೌಟ್ (Workout) ಮಾಡ್ತಾರೆ, ಇನ್ನು ಕೆಲವರು ಯೋಗ ಮಾಡ್ತಾರೆ, ವ್ಯಾಯಾಮ, ರನ್ನಿಂಗ್ (Running) ಮಾಡ್ತಾರೆ. ಒಟ್ಟಿನಲ್ಲಿ ಫಿಟ್ ಆಗಿರೋಕೆ ಯಾವೆಲ್ಲಾ ವಿಧಾನಗಳು (Method) ತಮ್ಮ ಅನುಕೂಲಕ್ಕೆ ಮತ್ತು ತಮ್ಮ ದೇಹಕ್ಕೆ ಸರಿ ಹೊಂದುತ್ತವೆಯೋ ಅವುಗಳನ್ನು ಫಾಲೋ ಮಾಡ್ತಾರೆ. ನೀವೆಲ್ಲಾ ಫಿಟ್ ಆಗಿರಲು ನಿಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ ದಿನದ ಒಂದಷ್ಟು ಸಮಯವನ್ನು ತೆಗೆದಿಡಬೇಕಾಗುತ್ತದೆ. ಆರೋಗ್ಯ ಮತ್ತು ಫಿಟ್ನೆಸ್ ಕಾಳಜಿ ತುಂಬಾ ಮುಖ್ಯವಾಗಿದೆ.
ಹಿಮ್ಮುಖ ಓಟ ತೂಕ ಇಳಿಕೆಗೆ ಸಹಕಾರಿಯೇ?
ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಲು ತುಂಬಾ ಜನರು ಬೆಳಗ್ಗೆ ಬೇಗ ಎದ್ದು, ವಾಕಿಂಗ್, ರನ್ನಿಂಗ್ ಮಾಡ್ತಾರೆ. ನಾವು ಮುಂದೆ ಮುಂದೆ, ಚಲಿಸುವುದು, ವಾಕಿಂಗ್ ಮಾಡುವುದು, ಮುಂದೆ ಮುಂದೆ ರನ್ನಿಂಗ್ ಮಾಡುವುದು ಕಾಮನ್. ವಾಕಿಂಗ್ ಬಂದ ಜನರಲ್ಲಿ ಕೆಲವರು ಹಿಮ್ಮುಖವಾಗಿ ನಡೆಯುವುದನ್ನು ನೀವು ನೋಡಿರಬಹುದು.
ಇದೇನಿದು ಇವರೆಲ್ಲಾ ಹಿಮ್ಮುಖವಾಗಿ ನಡೆಯುತ್ತಿದ್ದಾರೆ ಅಂತಾ ನೀವು ಆಶ್ಚರ್ಯ ವ್ಯಕ್ತಪಡಿಸಿರಬಹುದು. ಆದ್ರೆ ಈ ಹಿಮ್ಮುಖ ಚಲನೆ ಅಥವಾ ನಡೆಯುವುದು, ಹಿಮ್ಮುಖ ವಾಕಿಂಗ್, ರನ್ನಿಂಗ್ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಹಿಂದಿನ ಕಾಲದಿಂದಲೂ ಈ ಹಿಮ್ಮುಖ ಓಟ ರೂಢಿಯಲ್ಲಿದೆ.
ಹಿಮ್ಮುಖ ನಡೆಯುವುದು ಸಾಕಷ್ಟು ಎಂಜಾಯ್ ಮಾಡಬಹುದು. ಇದು ಪ್ರತಿಯೊಬ್ಬರ ನೆಚ್ಚಿನ ವಿಧಾನ ಅಂದ್ರೂ ತಪ್ಪಿಲ್ಲ. ಹಿಮ್ಮುಖ ಓಟ ತೂಕ ನಷ್ಟ ಮತ್ತು ಆರೋಗ್ಯಕ್ಕೆ ಅತ್ಯುತ್ತಮ ಮತ್ತು ವಿಶೇಷ ಮಾರ್ಗ ಎಂದು ಹೇಳಲಾಗುತ್ತದೆ.
ಇಂದಿಗೂ ಹಿಮ್ಮುಖ ಓಟ ಜನರ ನೆಚ್ಚಿನ ಫಿಟ್ ನೆಸ್ ವರ್ಕೌಟ್ ಆಗಿದೆ. ಜನರು ಉತ್ತಮ ಆರೋಗ್ಯಕ್ಕಾಗಿ ರನ್ನಿಂಗ್ ಮಾಡ್ತಾರೆ. ಜೊತೆಗೆ ತೂಕ ಇಳಿಕೆ, ಬೊಜ್ಜು ಕರಗಿಸಲು, ಸ್ಥೂಲಕಾಯ ಹೊಡೆದೋಡಿಸಲು, ಬೆಲ್ಲಿ ಫ್ಯಾಟ್ ಬರ್ನ್ ಮಾಡೋಕೆ, ತೂಕ ನಿಯಂತ್ರಿಸೋಕೆ ಓಡ್ತಾರೆ.
ಹಿಮ್ಮುಖ ಓಟದಿಂದ ಸಿಗುವ ಆರೋಗ್ಯ ಪ್ರಯೋಜನಗಳು
ಏಕಾಗ್ರತೆ ಸಾಧಿಸಲು ಸಹಕಾರಿ
ತಜ್ಞರ ಪ್ರಕಾರ ಹಿಮ್ಮುಖ ಓಟದಿಂದ ಸಮನ್ವಯತೆ ಸಾಧಿಸುವ ಕಲೆ ಕರಗತವಾಗುತ್ತದೆ. ಜೊತೆಗೆ ಸಮನ್ವಯ ಸಾಧಿಸಲು ಬೇಕಾಗುವ ಏಕಾಗ್ರತೆ ಪಡೆಯಲು, ಮನಸ್ಸಿನ ಆರೋಗ್ಯಕ್ಕೂ ಸಹಾಯ ಮಾಡುತ್ತದೆ. ಜೊತೆಗೆ ಮೆದುಳಿನ ಆರೋಗ್ಯಕ್ಕೂ ಹಿಮ್ಮುಖ ರನ್ನಿಂಗ್, ವಾಕಿಂಗ್ ಸಾಕಷ್ಟು ಸಹಕಾರಿ ಆಗಿದೆ.
ಹಿಮ್ಮುಖ ಓಟದಿಂದ ತೂಕ ನಷ್ಟ
ಹಿಮ್ಮುಖ ಓಟದ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಈ ಸಂಶೋಧನೆಯನ್ನು ಕ್ರೀಡಾಪಟುಗಳ ಮೇಲೆ ಮಾಡಲಾಗಿದೆ. ದೀರ್ಘಕಾಲ ಮುಂದೆ ಮುಂದೆ ಓಡುತ್ತಿದ್ದ ಕ್ರೀಡಾಪಟುಗಳಿಗಿಂತ, ಹಿಮ್ಮುಖ ಓಟ ಮಾಡಿದವರ ಆರೋಗ್ಯದಲ್ಲಿ ಅನೇಕ ಉತ್ತಮ ಬದಲಾವಣೆ ಕಂಡು ಬಂದಿವೆ.
ಫಾರ್ವರ್ಡ್ ಓಟಕ್ಕಿಂತ ಹಿಮ್ಮುಖ ಓಟವು ಹೆಚ್ಚು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧನೆ ಹೇಳುತ್ತದೆ. ಹಿಮ್ಮುಖ ಓಟದಿಂದ, ನೇರವಾಗಿ ಮುಂದೆ ಓಡುವುದಕ್ಕಿಂತ 20 ಪ್ರತಿಶತ ಹೆಚ್ಚು ಕ್ಯಾಲೊರಿ ಬರ್ನ್ ಮಾಡಬಹುದಾಗಿದೆ.
ದೇಹದ ಭಂಗಿಯು ಸುಧಾರಿಸುತ್ತದೆ
ಹಿಮ್ಮುಖ ಓಟವು ಯುರೋಪ್ ಮತ್ತು ಜಪಾನ್ ನಲ್ಲಿ ಶತಮಾನಗಳಿಂದ ಜನಪ್ರಿಯವಾಗಿದೆ. ನೇರವಾಗಿ ಓಡುವಾಗ ಸೊಂಟವು ಮುಂದಕ್ಕೆ ಬಾಗುತ್ತದೆ. ಮುಂದಕ್ಕೆ ವಾಲುವುದು ಕುತ್ತಿಗೆ ಮತ್ತು ಬೆನ್ನುನೋವಿಗೂ ಕಾರಣವಾಗಬಹುದು. ಅದೇ ಹಿಮ್ಮುಖ ಓಟದಲ್ಲಿ ಬೆನ್ನು, ಕುತ್ತಿಗೆ ನೇರವಾಗಿರುತ್ತದೆ. ಸೊಂಟವು ನೇರವಾಗಿದ್ದು, ದೇಹದ ಭಂಗಿಯು ಸುಧಾರಿಸುತ್ತದೆ.
ಇದನ್ನೂ ಓದಿ: ಆರೋಗ್ಯಕರ ಪ್ರಯೋಜನ ನೀಡುವ ಸಾಸಿವೆ ಎಣ್ಣೆಯನ್ನು ತ್ವಚೆಯ ಆರೈಕೆಗೆ ಹೀಗೆ ಬಳಸಿ
ದೇಹದ ಸಾಮರ್ಥ್ಯ ಉತ್ತಮವಾಗುತ್ತದೆ
ನೇರವಾಗಿ ಮುಂದಕ್ಕೆ ಓಡುವುದಕ್ಕಿಂತ ಹಿಮ್ಮುಖ ಓಟವು ಹೆಚ್ಚು ಶ್ರಮದಾಯಕವಾಗಿದೆ. ಇದು ಹೃದಯದ ಸಾಮರ್ಥ್ಯ ಹೆಚ್ಚಿಸುತ್ತದೆ. ಹಿಮ್ಮುಖವಾಗಿ ಓಡುವುದು ಖುಷಿ ಮತ್ತು ವಿನೋದಮಯವಾಗಿರುತ್ತದೆ. ಹಿಮ್ಮುಖವಾಗಿ ಓಡುವುದರಿಂದ ಸ್ನಾಯುಗಳ ಬಲಿಷ್ಠಗೊಳ್ಳುತ್ತವೆ. ಹಿಂದಕ್ಕೆ ಓಡುವುದರಿಂದ ಸ್ನಾಯುಗಳಿಗೆ ಪರಿಹಾರ ಸಿಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ