Back Pain: ನಿಮ್ಮ ಬೆನ್ನು ನೋವಿಗೆ ಅಡುಗೆ ಮನೆಯಲ್ಲೇ ಇದೆ ಪರಿಹಾರ, ಒಮ್ಮೆ ಟ್ರೈ ಮಾಡಿ...!

ಈ ಬೆನ್ನು ನೋವಿಗೆ ಪ್ರಮುಖ ಕಾರಣವೆಂದರೆ ಒಂದೇ ಸ್ಥಳದಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದು, ಅದು ಕೆಲಸ ಮಾಡುವ ವೃತ್ತಿಪರರು ಅಥವಾ ವಿದ್ಯಾರ್ಥಿಗಳು ಅಥವಾ ಜಡ ಜೀವನ ಶೈಲಿಗೆ ಒಗ್ಗಿಕೊಂಡಿರುವವರಾಗಿರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೊದಲೆಲ್ಲಾ ವಯಸ್ಸಾದವರಿಗೆ ಕಾಡುತ್ತಿದ್ದ ಬೆನ್ನು ನೋವು(Back Pain) ಈಗ ಯಾವುದೇ ವಯಸ್ಸಿನ ಮಿತಿಯಿಲ್ಲದೇ ಬಹುತೇಕರನ್ನು ಕಾಡುತ್ತಿದೆ ಎಂದು ಹೇಳಬಹುದು. ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನ ಶೈಲಿ(Life Style) ಎನ್ನಬಹುದು, ಈ ಕೋವಿಡ್-19(COVID-19) ವೈರಸ್ ಹಾವಳಿಯಿಂದಾಗಿ ಸುಮಾರು ಒಂದೂವರೆ ವರ್ಷದಿಂದ ಕಚೇರಿಗೆ ಹೋಗದೆ ಮನೆಯಲ್ಲಿಯೇ ಕಂಪ್ಯೂಟರ್(Computers) ಮುಂದೆ ಗಂಟೆಗಳ ಕಾಲ ಕೂತು ಕೆಲಸ ಮಾಡುವುದರಿಂದ ಅನೇಕರಿಗೆ ಈ ಬೆನ್ನು ನೋವು ಕಾಡುತ್ತಿದೆ.ಇದಕ್ಕೆ ಪರಿಹಾರ ಏನು ಅಂತೀರಾ.. ಈ ಬೆನ್ನು ನೋವಿಗೆ ಪರಿಹಾರ ನಿಮ್ಮ ಮನೆಯ ಅಡುಗೆ ಮನೆಯಲ್ಲಿಯೇ ಇದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ಸತ್ಯವಾದ ಮಾತು, ವಿಶೇಷವಾಗಿ ಬೆನ್ನು ನೋವಿನ ಮೇಲೆ ಧನಾತ್ಮಕ ಪರಿಣಾಮ ಬೀರುವ ಒಂದು ಮಸಾಲೆ ಪದಾರ್ಥ ಇದೆ.

ಬೆನ್ನು ನೋವಿಗೆ ಆಹಾರ ಕ್ರಮವು ಸಹಾಯ ಮಾಡಬಹುದೇ?

ನಿಮ್ಮ ಬೆನ್ನು ನೋವನ್ನು ಸ್ವಾಭಾವಿಕವಾಗಿ ನಿರ್ವಹಿಸಲು ಒಂದು ಉತ್ತಮ ಮಾರ್ಗವೆಂದರೆ ನಿಮ್ಮ ಆಹಾರದಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆಗಳನ್ನು ಮಾಡಿಕೊಳ್ಳುವುದು. ನೋವು ಮತ್ತು ಅಸ್ವಸ್ಥತೆ ನಿವಾರಿಸುವ ಉರಿಯೂತ ನಿರೋಧಕ ಅಂಶಗಳನ್ನು ಹೊಂದಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದು ಇದಕ್ಕೆ ಪರಿಹಾರ ಎಂದು ಹೇಳಬಹುದಾಗಿದೆ.

ಈ ಬೆನ್ನು ನೋವಿಗೆ ಪ್ರಮುಖ ಕಾರಣವೆಂದರೆ ಒಂದೇ ಸ್ಥಳದಲ್ಲಿ ಗಂಟೆಗಳ ಕಾಲ ಕುಳಿತುಕೊಳ್ಳುವುದು, ಅದು ಕೆಲಸ ಮಾಡುವ ವೃತ್ತಿಪರರು ಅಥವಾ ವಿದ್ಯಾರ್ಥಿಗಳು ಅಥವಾ ಜಡ ಜೀವನ ಶೈಲಿಗೆ ಒಗ್ಗಿಕೊಂಡಿರುವವರಾಗಿರಬಹುದು.

ಇದನ್ನೂ ಓದಿ:BP Checkup at Home: ಮಾನಿಟರ್, ಡಾಕ್ಟರ್​ ಸಹಾಯವಿಲ್ಲದೆ ಮನೆಯಲ್ಲಿಯೇ BP ಟೆಸ್ಟ್​ ಮಾಡಿಕೊಳ್ಳೋದು ಹೇಗೆ?

ಕಾಲಾನಂತರದಲ್ಲಿ, ಇದು ನಿಮ್ಮ ಬೆನ್ನಿನ ಮೇಲೆ ಒತ್ತಡ ಹೆಚ್ಚಿಸುತ್ತದೆ, ಆ ಮೂಲಕ ಬೆನ್ನು ನೋವನ್ನು ಪ್ರಚೋದಿಸುತ್ತದೆ. ಅತಿಯಾದ ಬೆನ್ನು ನೋವನ್ನು ಔಷಧೋಪಚಾರ ಮತ್ತು ಫಿಸಿಯೋಥೆರಪಿಯಿಂದ ತಗ್ಗಿಸಬಹುದಾದರೂ, ಅದನ್ನು ಸಂಪೂರ್ಣವಾಗಿ ಹೋಗಲಾಡಿಸಲು ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ತುಂಬಾನೇ ಅವಶ್ಯಕವಾಗಿದೆ.

ನಿಯಮಿತವಾಗಿ ವ್ಯಾಯಾಮ ಮಾಡುವುದು, ಸರಿಯಾದ ಆಹಾರ ತಿನ್ನುವುದು ಮತ್ತು ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಕುಳಿತುಕೊಳ್ಳದೇ ಗಂಟೆಗೆ ಒಂದು ಬಾರಿಯಾದರೂ ಆ ಜಾಗದಿಂದ ಎದ್ದು ಓಡಾಡುವುದು ಇತ್ಯಾದಿಗಳನ್ನು ಮಾಡಬೇಕು. ಆಹಾರದ ವಿಷಯದಲ್ಲಿ, ತಜ್ಞರು ಬೆನ್ನು ನೋವನ್ನು ನಿವಾರಿಸಲು ಅರಿಶಿನ ಶಿಫಾರಸು ಮಾಡುತ್ತಾರೆ.

ಅರಿಶಿನದಿಂದ ಬೆನ್ನು ನೋವು ಹೇಗೆ ನಿವಾರಣೆಯಾಗುತ್ತದೆ

ನಿಮ್ಮ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳ ಡಬ್ಬಿಯಲ್ಲಿರುವ ಅರಿಶಿನ ಬೆನ್ನು ನೋವಿಗೆ ರಾಮಬಾಣ ಎಂದರೆ ಅತಿಶಯೋಕ್ತಿಯಲ್ಲ. ಇದನ್ನು ನೀವು ಕುಡಿಯುವ ಹಾಲಿನಲ್ಲಿ ಮತ್ತು ನೀವು ಮಾಡುವ ಬಹುತೇಕ ಆಹಾರ ಪದಾರ್ಥಗಳಲ್ಲಿ ಸೇರಿಸಿಕೊಳ್ಳಬಹುದಾಗಿದೆ. ಅರಿಶಿನ ಬರೀ ಬಣ್ಣ ಕೊಡುವುದಲ್ಲದೇ ಇದು ಬೆಚ್ಚಗಿನ ಪರಿಣಾಮ ಬೀರುತ್ತದೆ.

ಇದು ಉತ್ಕರ್ಷಣ ನಿರೋಧಕಗಳು, ಉರಿಯೂತ ನಿರೋಧಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳ ಸಮೃದ್ಧ ಮೂಲವಾಗಿದೆ, ಅದು ನಿಮ್ಮ ಆರೋಗ್ಯವನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಈ ಪರಿಣಾಮಗಳು ಕರ್ಕ್ಯುಮಿನ್‌ ಎಂಬ ಉರಿಯೂತ ನಿರೋಧಕ ಸಂಯುಕ್ತಕ್ಕೆ ಕಾರಣವಾಗಿವೆ. ಇದು ಅರಿಶಿನಕ್ಕೆ ಬೆನ್ನು ನೋವು ಗುಣಪಡಿಸುವ ಗುಣವನ್ನು ನೀಡುತ್ತದೆ.

ಇದನ್ನೂ ಓದಿ:Benefits of Ashwagandha: ಸರ್ವರೋಗಕ್ಕೆ ಮನೆ ಮದ್ದು ಈ ಅಶ್ವಗಂಧ; ಇದರ ಪ್ರಯೋಜನಗಳನ್ನು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಕರ್ಕ್ಯುಮಿನ್‌ ಉರಿಯೂತ ಕಡಿಮೆ ಮಾಡುತ್ತದೆ ಮತ್ತು ಕಾಲಾನಂತರದಲ್ಲಿ ಬೆನ್ನು ನೋವನ್ನು ನಿವಾರಿಸುತ್ತದೆ. ಅರಿಶಿನವನ್ನು ನೀವು ಅನೇಕ ರೀತಿಯಲ್ಲಿ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದಾಗಿದೆ.

ಅರಿಶಿನ ಮಾತ್ರ ಉರಿಯೂತ ನಿವಾರಕ ಮಸಾಲೆಯೇ?

ಉರಿಯೂತ ನಿರೋಧಕ ಗುಣಲಕ್ಷಣಗಳೊಂದಿಗೆ ಬರುವ ಏಕೈಕ ಮಸಾಲೆ ಅರಿಶಿನವಲ್ಲ. ಉರಿಯೂತದಿಂದ ಪರಿಹಾರ ನೀಡಬಲ್ಲ ಇತರ ಮಸಾಲೆ ಪದಾರ್ಥಗಳು ಶುಂಠಿ ಮತ್ತು ಚಕ್ಕೆ ತೊಗಟೆಯಾಗಿವೆ.
Published by:Latha CG
First published: