• Home
  • »
  • News
  • »
  • lifestyle
  • »
  • Back Pain: ಅತಿಯಾಗಿ ಬೆನ್ನು ನೋವು ಕಾಡ್ತಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಅದು ಹೃದಯಾಘಾತದ ಲಕ್ಷಣವಂತೆ

Back Pain: ಅತಿಯಾಗಿ ಬೆನ್ನು ನೋವು ಕಾಡ್ತಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಅದು ಹೃದಯಾಘಾತದ ಲಕ್ಷಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Back Pain And Heart Health: ಎದೆ, ತೋಳಿನ ಭಾಗದಲ್ಲಿ ಕಂಡುಬರುವ ತೀವ್ರ ಬೆನ್ನು ನೋವು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ಹೃದಯಾಘಾತದ ಮೊದಲು ಮತ್ತು ಸಮಯದಲ್ಲಿ ಸಂಭವಿಸುವ ಬೆನ್ನು ನೋವಿಗೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಒಳಗಾಗಿದ್ದಾರೆ

  • Share this:

ಹೃದಯಾಘಾತವಾಗುವ (Heart Attack) ಮುನ್ನ ಕೆಲವು ಚಿಹ್ನೆಗಳು (Signs) ಇಲ್ಲವೇ ರೋಗಲಕ್ಷಣಗಳು (Symptoms)  ಕಂಡುಬರುವುದರಿಂದ ಯಾವುದೇ ಎಚ್ಚರಿಕೆಯ ಚಿಹ್ನೆಯ ಮೇಲೆ ಗಮನಹರಿಸುವುದು ಮುಖ್ಯವಾಗಿದೆ ಎಂಬುದು ಮಸಿನಾ ಆಸ್ಪತ್ರೆಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ ರುಚಿತ್ ಷಾ  ಅಭಿಪ್ರಾಯವಾಗಿದೆ. ಈ ಲಕ್ಷಣಗಳು ಉಂಟಾದಾಗ ತುರ್ತಾಗಿ ವೈದ್ಯಕೀಯ ನೆರವು (Medical Help)  ಹಾಗೂ ಚಿಕಿತ್ಸೆಗಳನ್ನು (treatment) ಪಡೆದುಕೊಳ್ಳುವುದರಿಂದ ಪ್ರಾಣಾಹಾನಿಯನ್ನು ತಡೆಯಬಹುದು ಎಂಬುದು ವೈದ್ಯರ ಸಲಹೆಯಾಗಿದೆ. ಹೃದಯ ಸ್ತಂಭನಕ್ಕೆ ಸಂಬಂಧಿಸಿದ ಅತ್ಯಂತ ಸಾಮಾನ್ಯ ಚಿಹ್ನೆ ಎದೆನೋವಾಗಿದ್ದು ಈ ಕುರಿತು ಏಕೆ ಹಚ್ಚಿನ ಮುತುವರ್ಜಿ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ


ಹೃದಯಾಘಾತಕ್ಕೆ ಕಾರಣಗಳು


ಹೃದಯ ಸ್ತಂಭನವು ಸಾಮಾನ್ಯವಾಗಿ ಹೃದಯಾಘಾತ ಅಥವಾ ಹೃದಯ ವೈಫಲ್ಯದ ನಂತರ ಸಂಭವಿಸುತ್ತದೆ ಎಂಬುದು ಡಾ. ಷಾ ಅವರ ಹೇಳಿಕೆಯಾಗಿದೆ. ಹೃದಯಾಘಾತ ಎಂಬುದು ಹೃದಯದ ಹಠಾತ್ ಕುಸಿತಕ್ಕೆ ಕಾರಣವಾಗುವ ಅಥವಾ ಹೃದಯ ಸ್ತಂಭನಕ್ಕೆ ಕಾರಣವಾಗುವ ಹೃದಯದ ಅಪಧಮನಿಯಲ್ಲಿ ಕಂಡುಬರುವ ಅಡಚಣೆಯಾಗಿದೆ. ಈ ಸಮಯದಲ್ಲಿ ಕಂಡುಬರುವ ಎದೆನೋವು ಸಾಮಾನ್ಯ ಲಕ್ಷಣವಾಗಿದ್ದರೂ ದೇಹದ ಯಾವ ಭಾಗದಲ್ಲಿ ಕೂಡ ನೋವು ಕಾಣಿಸಿಕೊಳ್ಳಬಹುದು ಎಂಬುದು ವೈದ್ಯರ ಮಾತಾಗಿದೆ.


ಹೃದಯಾಘಾತದ ಮೊದಲು ನೋವು ಎಲ್ಲೆಲ್ಲಿ ಕಂಡುಬರುತ್ತದೆ


ಮುಂಭಾಗ, ಎಡ, ಅಥವಾ ಬಲ ಭುಜ, ಎಡಗೈ, ಬಲಗೈ, ಹೊಟ್ಟೆಯ ಮೇಲಿನ ಭಾಗ, ದವಡೆ, ಕುತ್ತಿಗೆ, ಗಲ್ಲ, ಹೊಕ್ಕುಳಿನ ನಡುವೆ ಹೀಗೆ ದೇಹದ ಯಾವ ಭಾಗದಲ್ಲಾದರೂ ನೋವಿನ ಅನುಭವವನ್ನುಂಟು ಮಾಡಬಹುದು.


ವಿವಿಧ ವಯಸ್ಸಿನ ಜನರಲ್ಲಿ ಹಠಾತ್ತನೆ ಉದ್ಭವಿಸುವ ಹೃದಯ ಸಮಸ್ಯೆಗಳ ಹಲವಾರು ಪ್ರಕರಣಗಳಿವೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಹೃದಯದ ತೊಂದರೆಗಳು ಸೌಮ್ಯವಾದ ನೋವು ಅಥವಾ ಅಸ್ವಸ್ಥತೆಯೊಂದಿಗೆ ಪ್ರಾರಂಭವಾಗುತ್ತವೆ. ಕಲ್ಯಾಣ್‌ನ ಫೋರ್ಟಿಸ್ ಆಸ್ಪತ್ರೆಯ ಹಿರಿಯ ಸಲಹೆಗಾರ-ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಡಾ.ಝಕಿಯಾ ಖಾನ್ ತಿಳಿಸುತ್ತಾರೆ.


ಬೆನ್ನು ನೋವು ಕೂಡ ಹೃದಯಾಘಾತದ ಲಕ್ಷಣ


ಖಾನ್ ಪ್ರಕಾರ ಎದೆ, ತೋಳಿನ ಭಾಗದಲ್ಲಿ ಕಂಡುಬರುವ ತೀವ್ರ ಬೆನ್ನು ನೋವು ಹೃದಯಾಘಾತದ ಸಾಮಾನ್ಯ ಲಕ್ಷಣವಾಗಿದೆ. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ಹೃದಯಾಘಾತದ ಮೊದಲು ಮತ್ತು ಸಮಯದಲ್ಲಿ ಸಂಭವಿಸುವ ಬೆನ್ನು ನೋವಿಗೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಒಳಗಾಗಿದ್ದಾರೆ ಎಂದು ತಿಳಿಸಿದೆ.


ಇದನ್ನೂ ಓದಿ: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಬಿಸಿನೀರು ಕುಡಿಬೇಡಿ, ಇದರ ಅಡ್ಡಪರಿಣಾಮಗಳು ಒಂದೆರೆಡಲ್ಲ


ಮಾರಣಾಂತಿಕ ಸ್ಥಿತಿ


ಹೆಚ್ಚುವರಿಯಾಗಿ, ತೀವ್ರವಾದ ಬೆನ್ನು ನೋವು ದೇಹಕ್ಕೆ ಶುದ್ಧ ರಕ್ತವನ್ನು ಸಾಗಿಸುವ ನಾಳದ ಛೇದನದಲ್ಲಿ ಪ್ರಕಟವಾಗಬಹುದು ಇದೊಂದು ಮಾರಣಾಂತಿಕ ಸ್ಥಿತಿಯಾಗಿದೆ ಎಂಬುದು ವೈದ್ಯರ ಹೇಳಿಕೆಯಾಗಿದೆ.


ಹೆಚ್ಚುವರಿಯಾಗಿ, ತೀವ್ರವಾದ ಅಧಿಕ ರಕ್ತದೊತ್ತಡವು ಮಹಾಪಧಮನಿಯ ಹೆಮಟೋಮಾವನ್ನು (ಅಂಗಾಂಶಗಳೊಳಗೆ ಹೆಪ್ಪುಗಟ್ಟಿದ ರಕ್ತದ ಊತ) ಉಂಟುಮಾಡಬಹುದು, ಆದ್ದರಿಂದ ಅದನ್ನು ಗಂಭೀರವಾಗಿ ಪರಿಗಣಿಸುವುದು ಮತ್ತು ಆದಷ್ಟು ಬೇಗ ಆಸ್ಪತ್ರೆಗೆ ಹೋಗುವುದು ಅತ್ಯಗತ್ಯ. ಸಕಾಲದಲ್ಲಿ ರೋಗ ಪತ್ತೆ ಆಗದಿದ್ದರೆ ಹಠಾತ್ ಸಾವಿಗೆ ಕಾರಣವಾಗಬಹುದು’ ಎಂದು ಡಾ.ಕುಲಕರ್ಣಿ ಎಚ್ಚರಿಸುತ್ತಾರೆ.


ಈ ಸಂದರ್ಭದಲ್ಲಿ ಏನು ಮಾಡಬೇಕು?


ಒಬ್ಬ ವ್ಯಕ್ತಿಯು ಮೇಲಿನ ಯಾವುದೇ ಲಕ್ಷಣಗಳನ್ನು ಎದುರಿಸಿದರೆ, ಆರೈಕೆಯ ಮೊದಲ ಹಂತವಾಗಿ, ವೈದ್ಯರನ್ನು ಕಾಣಬೇಕು ಮತ್ತು ECG, ECHO, TMT ಇತ್ಯಾದಿ ವಿಧಾನಗಳ ಮೂಲಕ ಹೃದಯ ಪರೀಕ್ಷೆಯನ್ನು ನಡೆಸಬೇಕು ಎಂದು ಡಾ. ಖಾನ್ ತಿಳಿಸುತ್ತಾರೆ.
ಇದನ್ನೂ ಓದಿ: ಮಕ್ಕಳಿಗೆ ಹಾಲನ್ನು ಅತಿಯಾಗಿ ಕೊಡಬೇಡಿ, ಅದಕ್ಕೂ ಒಂದು ಲಿಮಿಟ್​ ಇದೆ


ತಡೆಗಟ್ಟುವುದು ಹೇಗೆ?


ನಿಯಮಿತ ದೈಹಿಕ ಪರೀಕ್ಷೆಗಳು ಮತ್ತು ಆಗಾಗ್ಗೆ ರಕ್ತದೊತ್ತಡ ತಪಾಸಣೆಗಳನ್ನು ನಡೆಸುವುದು ಮತ್ತು ರೋಗನಿರ್ಣಯ ಪರೀಕ್ಷೆಗಳು ಒಳಗೊಂಡಂತೆ ಇತರ ಆರೋಗ್ಯ ಕ್ರಮಗಳನ್ನು ಕೈಗೊಳ್ಳುವುದು ಹೃದಯ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗಿದೆ ಮತ್ತು ಹೃದಯಕ್ಕೆ ಸಂಬಂಧಿತವಾಗಿರುವ ಸುಲಭವಾಗಿ ತಡೆಗಟ್ಟಬಹುದಾದ ಯಾವುದೇ ಅಪಾಯಕಾರಿ ಅಂಶಗಳನ್ನು ಬೆಳಕಿಗೆ ತರಲು ಈ ಪರೀಕ್ಷೆಗಳು ಸಹಾಯ ಮಾಡುತ್ತದೆ ಎಂಬುದು ಡಾ ಸುದೀಪ್ ಅವರ ಅಭಿಪ್ರಾಯವಾಗಿದೆ.

Published by:Sandhya M
First published: