Baby Skin Care Tips: ನವಜಾತ ಮಗುವಿನ ತ್ವಚೆಯ ರಕ್ಷಣೆಗೆ ಈ ಟಿಪ್ಸ್​ ಫಾಲೋ ಮಾಡಿ

ಹವಾಮಾನ, ಶಿಶುಗಳಿಗೆ ತೊಡಿಸುವ ಉಡುಪುಗಳು, ಅವುಗಳನ್ನು ತೊಳೆಯಲು ಬಳಸುವ ಡಿಟರ್ಜೆಂಟ್(Detergent), ಹಾಗೆಯೇ ತ್ವಚೆ ಉತ್ಪನ್ನಗಳು(Skin Products), ಎಲ್ಲವೂ ಮಗುವಿನ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವಜಾತ ಶಿಶುಗಳು(New Born Babies) ತುಂಬಾ ಮೃದುವಾದ ಚರ್ಮ(Soft Skin)ವನ್ನು ಹೊಂದಿರುತ್ತವೆ. ಆದಾಗ್ಯೂ ಶಿಶು(Child)ಗಳ ಸೂಕ್ಷ್ಮ ಚರ್ಮವು ವಯಸ್ಕರಿಗಿಂತ ಹೆಚ್ಚಾಗಿ ಸೋಂಕು(Virus)ಗಳು ಮತ್ತು ಅಲರ್ಜಿ(Allergies)ಗಳಿಗೆ ಒಳಗಾಗುತ್ತದೆ. ಇದಕ್ಕೆ ಕಾರಣ ಹವಾಮಾನ, ಶಿಶುಗಳಿಗೆ ತೊಡಿಸುವ ಉಡುಪುಗಳು, ಅವುಗಳನ್ನು ತೊಳೆಯಲು ಬಳಸುವ ಡಿಟರ್ಜೆಂಟ್(Detergent), ಹಾಗೆಯೇ ತ್ವಚೆ ಉತ್ಪನ್ನಗಳು(Skin Products), ಎಲ್ಲವೂ ಮಗುವಿನ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದಕ್ಕೆ ಸ್ವಲ್ಪ ಹೆಚ್ಚುವರಿ ಪ್ರೀತಿ(Love) ಮತ್ತು ಕಾಳಜಿ(Care)ಯ ಅಗತ್ಯವಿದೆ. ಮಗುವಿನ ಚರ್ಮವನ್ನು ಆರೈಕೆ ಮಾಡುವುದು ತುಂಬಾ ಅತ್ಯಗತ್ಯ. ಮಗುವಿನ ತ್ವಚೆಯ ರಕ್ಷಣೆಗೆ ನಾವು ಕೆಲವು ಸಲಹೆಗಳನ್ನು ನೀಡಿದ್ದೇವೆ.

ಲೇಬಲ್ ಅನ್ನು ಪರೀಕ್ಷಿಸಿ

ಮಗುವಿಗೆ ಕೌಂಟರ್‌ನಿಂದ ಏನನ್ನಾದರೂ ತೆಗೆದುಕೊಳ್ಳುವ ಮೊದಲು ನೆನಪಿಡುವ ಪ್ರಮುಖ ವಿಷಯವೆಂದರೆ ಉತ್ಪನ್ನದ ಲೇಬಲ್ ಅನ್ನು ಓದುವುದು. ಹೌದು, ಅವು ಸಲ್ಫೇಟ್‌ಗಳು, ಸಿಲಿಕೋನ್‌ಗಳು, ಕೃತಕ ಪರಿಮಳಗಳು ಅಥವಾ ಪ್ಯಾರಾಬೆನ್‌ಗಳಂತಹ ಅಪಾಯಕಾರಿ ಪದಾರ್ಥಗಳನ್ನು ಒಳಗೊಂಡಿವೆಯೇ ಎಂದು ನೀವು ನೋಡಬೇಕು. ಈ ರೀತಿಯ ಅಂಶಗಳು ಮಗುವಿಗೆ ಬಳಸುವ ಉತ್ಪನ್ನಗಳಲ್ಲಿ ಇದ್ದರೆ ಅವುಗಳನ್ನು ಖರೀದಿಸದೆ ಕೈಬಿಡುವುದು ಒಳಿತು.

ಇದನ್ನೂ ಓದಿ:Skin Care: ಚಳಿಗಾಲದಲ್ಲಿ ಚರ್ಮದ ಆರೈಕೆಯನ್ನು ನಿರ್ಲಕ್ಷಿಸಬೇಡಿ; ಈ ಟಿಪ್ಸ್​ ಫಾಲೋ ಮಾಡಿ..!

ಸರಿಯಾಗಿ ಸ್ನಾನ ಮಾಡುವುದು

ನವಜಾತ ಶಿಶುಗಳಿಗೆ ಸ್ನಾನ ಮಾಡಿಸುವುದು ಸುಲಭದ ಕೆಲಸವಲ್ಲ. ಅನುಭವಿ ಕೈಗಳಿಂದ ಮಗುವಿಗೆ ಸ್ನಾನ ಮಾಡಿಸಬೇಕು. ಸ್ನಾನ ಮಾಡಿಸುವಾಗ ಮಕ್ಕಳಿಗೆ ಬಳಸುವ ಸೋಪು, ಶ್ಯಾಂಪೂ ಬಗ್ಗೆಯೂ ಎಚ್ಚರಿಕೆ ಇರಲಿ. ಉಗುರು ಬೆಚ್ಚನೆಯ ನೀರು ಜೊತೆಗೆ ಪರಿಸರ ಸ್ನೇಹಿ ಸೋಪು, ಶ್ಯಾಂಪೂಗಳು, ಬಾಡಿವಾಶ್​​ಗಳನ್ನು ಮಾತ್ರ ಬಳಸಬೇಕು. ಕೆಮಿಕಲ್ ಯುಕ್ತ ಉತ್ಪನ್ನಗಳಿಂದ ದೂರ ಇರಿ ಲೇಬಲ್‌ನಲ್ಲಿ ಪಟ್ಟಿ ಮಾಡಲಾದ ಕಡಿಮೆ ರಾಸಾಯನಿಕಗಳು ನಿಮ್ಮ ಮಗುವಿನ ಚರ್ಮಕ್ಕೆ ಆರೋಗ್ಯಕರವಾಗಿರುತ್ತದೆ ಎಂಬುದನ್ನು ನೆನಪಿಡಿ.

ಮಾಯಿಶ್ಚರೈಸಿಂಗ್ ಅತ್ಯಗತ್ಯ

ನಿಮ್ಮ ಮಗುವಿನ ಚರ್ಮವು ಮೃದುವಾದಷ್ಟೂ ತೇವಾಂಶದಿಂದ ಇರುತ್ತದೆ. ಮಾಯಿಶ್ಚರೈಸಿಂಗ್ ಸ್ನಾನದ ನಂತರ ಮೃದುತ್ವವನ್ನು ಇರಿಸಲು ಸಹಕರಿಸುತ್ತದೆ. ದದ್ದುಗಳು ಮತ್ತು ಶುಷ್ಕತೆಯನ್ನು ತಪ್ಪಿಸಲು, ಬೇಸಿಗೆಯಲ್ಲಿ ಲಘು ಲೋಷನ್ ಮತ್ತು ಚಳಿಗಾಲದಲ್ಲಿ ಕ್ರೀಮ್ ಅನ್ನು ಹಚ್ಚಿರಿ. ಶಿಶು ಸ್ನೇಹಿ ಮಾಯಿಶ್ಚರೈಸರ್‌ಗಳನ್ನು ಬಳಸಿ.

ಮಸಾಜ್

ಮಸಾಜ್ ಮಗುವಿನ ಚರ್ಮವನ್ನು ತೇವಗೊಳಿಸುವುದು ಮಾತ್ರವಲ್ಲ, ಮಗು ಮತ್ತು ಆರೈಕೆ ಮಾಡುವವರ ನಡುವೆ ಬಾಂಧವ್ಯವನ್ನು ಬೆಳೆಸುತ್ತದೆ. ಮಸಾಜ್ ಮಾಡಲು ಕಚ್ಚಾ ತೆಂಗಿನ ಎಣ್ಣೆ, ವಿಟಮಿನ್ ಇ ಅಥವಾ ಬಾದಾಮಿ ಎಣ್ಣೆಯನ್ನು ಹೊಂದಿರುವ ಉತ್ಪನ್ನವನ್ನು ಬಳಸಿ. ಇವು ಸೌಮ್ಯವಾಗಿರುತ್ತವೆ ಮತ್ತು ತೇವಾಂಶವನ್ನು ಉಳಿಸಿಕೊಂಡು ಚರ್ಮವನ್ನು ಪೋಷಿಸುತ್ತದೆ.

ಇದನ್ನೂ ಓದಿ:Leather: ಚಳಿಗಾಲದಲ್ಲಿ ನಿಮ್ಮ ವಾರ್ಡ್‌ರೋಬ್‌ನಲ್ಲಿ ಇರಲೇಬೇಕಾದ ಲೆದರ್ ಉತ್ಪನ್ನಗಳಿವು..!

ಕಡಿಮೆ ರಾಸಾಯನಿಕಗಳನ್ನು ಬಳಸಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ

ಬಟ್ಟೆ ತೊಳೆಯಲು ಬಳಸುವ ಡಿಟರ್ಜೆಂಟ್‌ಗಳಲ್ಲಿನ ಕಠಿಣ ರಾಸಾಯನಿಕಗಳು ನಿಮ್ಮ ಮಗುವಿನ ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಹೀಗಾಗಿ ಅತೀ ಕಡಿಮೆ ರಾಸಾಯನಿಕಗಳಿರುವ ಡಿಟರ್ಜೆಂಟ್​ಗಳನ್ನು ಬಳಸಿ. ಸ್ವಲ್ಪಮಟ್ಟಿನ ಸುವಾಸನೆ ಮತ್ತು ಚರ್ಮ-ಸ್ನೇಹಿ ಪದಾರ್ಥಗಳನ್ನು ಹೊಂದಿರುವ ಡಿಟರ್ಜೆಂಟ್​​ಗಳು ಉತ್ತಮ ಆಯ್ಕೆಯಾಗಿದೆ.
Published by:Latha CG
First published: