Baby Hair Care Tips: ನಿಮ್ಮ ಮಗುವಿನ ಕೂದಲು ದಟ್ಟವಾಗಿ ಬೆಳೆಯಲು ಈ ವಿಧಾನಗಳನ್ನು ಅನುಸರಿಸಿ

ನಿಮ್ಮ ಮಗುವಿನ ತಲೆಯ ಕೂದಲು ತೆಳ್ಳಗಿದೆಯೇ..? ಚಿಂತಿಸಬೇಡಿ, ಕೆಲವು ಸ್ವಾಭಾವಿಕ ವಿಧಾನಗಳ ಮೂಲಕ ಮಗುವಿನ ತಲೆಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವಂತೆ ಮಾಡಬಹುದು. ಅಂತಹ ಕೆಲವು ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Baby Hair Care Tips: ಅಂಬೆಗಾಲಿಕ್ಕುವ ಬಹಳಷ್ಟು ಶಿಶುಗಳಿಗೆ(Toddlers) ದಟ್ಟ ಕೂದಲು ಇರುವುದಿಲ್ಲ. ತೆಳು ಕೂದಲು ಇರಲಿ ಅಥವಾ ಬೋಡ ತಲೆಯೇ ಇರಲಿ ಆ ವಯಸ್ಸಿನಲ್ಲಿ ಮಕ್ಕಳು ಹೇಗಿದ್ದರೂ ನೋಡಲು ಸುಂದರ. ಆದರೆ ತಲೆ ತುಂಬ ಕೂದಲು ಇದ್ದರಂತೂ ಇನ್ನಷ್ಟು ಮುದ್ದಾಗಿ ಕಾಣುತ್ತಾರೆ. ತಮ್ಮ ಮಗು ಇನ್ನಷ್ಟು ಸುಂದರವಾಗಿ ಕಾಣಲೆಂದು ಬಯಸದವರು ಇರುವುದಿಲ್ಲ. ನಿಮ್ಮ ಮಗುವಿನ ತಲೆಯ ಕೂದಲು ತೆಳ್ಳಗಿದೆಯೇ..? ಚಿಂತಿಸಬೇಡಿ, ಕೆಲವು ಸ್ವಾಭಾವಿಕ ವಿಧಾನಗಳ ಮೂಲಕ ಮಗುವಿನ ತಲೆಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವಂತೆ ಮಾಡಬಹುದು. ಅಂತಹ ಕೆಲವು ವಿಧಾನಗಳನ್ನು ಈ ಕೆಳಗೆ ನೀಡಲಾಗಿದೆ.

1. ನಿಧಾನವಾಗಿ ಬಾಚುವುದು: ನಿಮ್ಮ ಮಗುವಿಗೆ ಕಡಿಮೆ ಕೂದಲು ಇರಬಹುದು , ಆದರೆ ನೆತ್ತಿಯಲ್ಲಿ ರಕ್ತ ಪರಿಚಲನೆ ಸುಗಮವಾಗಿ ನಡೆಯಲು ನಿತ್ಯವೂ ಕೂದಲು ಬಾಚಬೇಕು. ಮಗುವಿನ ಕೂದಲು ಬಾಚಲು ಮೆತ್ತಗಿನ ಬ್ರಶ್ ಅಥವಾ ಬಾಚಣಿಗೆ ಬಳಸಿ. ಇದರಿಂದ ನಿಮ್ಮ ಮಗುವಿನ ತಲೆಗೆ ಮಸಾಜ್ ಆದಂತಾಗುತ್ತದೆ.

2. ತೆಂಗಿನ ಎಣ್ಣೆ: ಇದು ಸಾಕಷ್ಟು ಪೋಷಣೆಯ ಅಂಶಗಳನ್ನು ಹೊಂದಿರುವ ಸೌಮ್ಯವಾದ ಎಣ್ಣೆ. ಅದು ನೆತ್ತಿಯನ್ನು ಗುಣ ಪಡಿಸುವುದು ಮಾತ್ರವಲ್ಲದೆ ಕೂದಲ ಬೆಳವಣಿಗೆಯನ್ನೂ ಉತ್ತೇಜಿಸುತ್ತದೆ. ಶಿಶುವಿನ ತಲೆಗೆ ನಿತ್ಯವೂ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಕೂದಲು ಹೊಳಪಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ.

3. ಜುಟ್ಟು ಹಾಕಬೇಡಿ: ಬಹಳಷ್ಟು ಪೋಷಕರಿಗೆ ತಮ್ಮ ಪುಟ್ಟ ಕಂದಮ್ಮಗಳಿಗೆ ಚಿಕ್ಕ ಪೋನಿಟೇಲ್‍ಗಳನ್ನು ಹಾಕುವುದು ಎಂದರೆ ತುಂಬಾ ಇಷ್ಟ. ಹಾಗೆ ಮಾಡಿದಾಗ ಆ ಕಂದಮ್ಮಗಳು ಕೂಡ ಇನ್ನಷ್ಟು ಮುದ್ದುಮುದ್ದಾಗಿ ಕಾಣುತ್ತವೆ ಎಂಬುವುದರಲ್ಲಿ ಸಂಶಯವಿಲ್ಲ. ಆದರೆ ಶಿಶುಗಳಿಗೆ ಜುಟ್ಟು ಹಾಕುವುದರಿಂದ ಅವುಗಳ ಕೂದಲಿಗೆ ಹಾನಿ ಆಗುತ್ತದೆ. ಶಿಶುಗಳ ಕೂದಲಿನ ಬುಡ ದುರ್ಬಲವಾಗಿರುತ್ತದೆ, ಅದನ್ನು ಕಟ್ಟುವುದರಿಂದ ಕೂದಲಿಗೆ ತೊಂದರೆ ಆಗುತ್ತದೆ.

4. ವಿಟಮಿನ್ ಇ : ನಿಮ್ಮ ಮಗುವಿನ ನೆತ್ತಿಗೆ ಅಗತ್ಯ ಪೋಷಕಾಂಶಗಳನ್ನು ನೀಡಲು ವಿಟಮಿನ್ ಬಿ ಎಣ್ಣೆಯನ್ನು ಕೂಡ ಬಳಸಬಹುದು. ತೆಂಗಿನ ಎಣ್ಣೆಗೆ ವಿಟಮಿನ್ ಇ ಎಣ್ಣೆಯ ಕೆಲವು ಹನಿಗಳನ್ನು ಹಾಕಿ ಮಿಶ್ರ ಮಾಡಿ, ಅದರಿಂದ ಮಗುವಿನ ತಲೆಗೆ ಮಸಾಜ್ ಮಾಡಬಹುದು.ವಿಟಮಿನ್ ಇ ಎಣ್ಣೆಯು ನೆತ್ತಿಯಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಅರೋಗ್ಯಕರ ಕೂದಲ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

5. ನಿತ್ಯವೂ ಶಾಂಪೂ ಹಾಕಿ: ನೆತ್ತಿಯನ್ನು ನಿರ್ಮಲವಾಗಿ ಇಡುವುದರಿಂದ ಕೂದಲ ಬೆಳವಣಿಗೆ ಇನ್ನಷ್ಟು ಹೆಚ್ಚಲು ಸಾಧ್ಯವಿದೆ. ನಿಮ್ಮ ಮಗುವಿನ ನೆತ್ತಿ ಯಾವ ಪ್ರಕಾರದ್ದು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು, ನಿತ್ಯವೂ ಕೂದಲು ತೊಳೆಯಿರಿ. ಯಾವ ಶಾಂಪೂ ಬಳಸಬೇಕೆಂದು ವೈದ್ಯರ ಸಲಹೆ ಪಡೆಯುವುದು ಉತ್ತಮ.

6. ಅಲೋವೇರಾ: ಕೂದಲ ಬೆಳವಣಿಗೆ ಹೆಚ್ಚುವಂತೆ ಮಾಡಲು ಅಲೋವೇರಾ ಬಳಸುವುದು ಅತ್ಯುತ್ತಮ ನೈಸರ್ಗಿಕ ವಿಧಾನ. ನೀವು ಬಾಟಲಿಯಲ್ಲಿ ಸಿಗುವ ಆಲೋವೇರಾ ಜೆಲ್ ಬಳಸಬಹುದು ಅಥವಾ ಗಿಡದಿಂದ ತೆಗೆದ ಜೆಲ್ ಅನ್ನೂ ಬಳಸಬಹುದು. ಶಿಶುವಿನ ನೆತ್ತಿಯ ಮೇಲೆ ನೇರವಾಗಿ ಜೆಲ್ ಹಚ್ಚಿರಿ ಮತ್ತು ಚೆನ್ನಾಗಿ ಮಸಾಜ್ ಮಾಡಿರಿ. 15 ರಿಂದ 20 ನಿಮಿಷ ಬಿಟ್ಟು ಚೆನ್ನಾಗಿ ತೊಳೆಯಿರಿ.

7. ಜಿಲೆಟಿನ್: ಜಿಲೆಟಿನ್‍ನಲ್ಲಿ ಪ್ರೊಲಿನ್‍ನಂತಹ ಅಮಿನೋ ಆಮ್ಲಗಳಿವೆ. ಅವು ಮಗುವಿನ ನೆತ್ತಿಯನ್ನು ಒಣಗಿಸದೆ, ಕೂದಲಿನ ಬೆಳವಣಿಗೆ ಉತ್ತೇಜಿಸುತ್ತದೆ. ಆದರೆ ಅದನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಕಂಡು, ಸಲಹೆ ಪಡೆಯುವುದನ್ನು ಮರೆಯದಿರಿ.
Published by:Latha CG
First published: