ನವಜಾತ ಶಿಶುಗಳು ತುಂಬಾ ಸೂಕ್ಷ್ಮ. ಅದರಲ್ಲೂ ಚಳಿಗಾಲದಲ್ಲಿ (Winter ) ಹುಟ್ಟಿದ ಶಿಶುವನ್ನು ತುಂಬಾನೇ ಜಾಗೃತೆಯಾಗಿ ನೋಡಿಕೊಳ್ಳಬೇಕು. ಹವಾಮಾನ ಬದಲಾವಣೆ (Weather Change )ಯಿಂದಾಗಿ ಮಗುವಿನ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಇದಲ್ಲದೆ ಚಳಿಗಾಲದಲ್ಲಿ ಮಗುವಿಗೆ ಹೆಚ್ಚಾಗಿ ನೆಗಡಿ, ಶೀತ, ಕೆಮ್ಮು ಮುಂತಾದ ಕಾಯಿಲೆಗಳು ಬಹುಬೇಗನೆ ವಕ್ಕರಿಸಿ ಬಿಡುತ್ತದೆ. ಇಂತಹ ಸಮಯದಲ್ಲಿ ನವಜಾತ ಶಿಶುವನ್ನು(Baby Care ) ತಾಯಿಯಾದವಳು ಬಹಳ ಸೂಕ್ಷ್ಮವಾಗಿ ಅರೈಕೆ ಮಾಡಬೇಕು. ತಾಯಂದಿರು ತಮ್ಮ ಮಕ್ಕಳ ಸರಿಯಾದ ಆರೈಕೆ ಮಾಡಿದರೆ ಮಕ್ಕಳು ಸರಿಯಾದ ರೀತಿಯಲ್ಲಿ ಬೆಳೆಯಲು ಸಾಧ್ಯವಾಗುತ್ತದೆ.
ಶೀತ, ಕೆಮ್ಮು, ನೆಗಡಿ
ಚಳಿಗಾಲದಲ್ಲಿ ಮಕ್ಕಳಿಗೆ ಶೀತ, ಕೆಮ್ಮು, ನೆಗಡಿಗಳು ಬೇಗನೆ ಆಗುತ್ತದೆ. ಇದಲ್ಲದೆ ಆಗತಾನೆ ಹುಟ್ಟಿದ ನವಜಾತ ಶಿಶುಗಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ, ಇಂತಹ ಮಕ್ಕಳು ಮೂರು ತಿಂಗಳ ಚಳಿಗಾಲದಲ್ಲಿ ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ. ಅಷ್ಟೇ ಅಲ್ಲದೇ ಇಂತಹ ಮಕ್ಕಳಲ್ಲಿ ಚರ್ಮ ತುಂಬಾ ಮೃದುವಾಗಿರುವುದರಿಂದ ಹಲವು ಚರ್ಮ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಈ ಸಮಯದಲ್ಲಿ ಮಗುವನ್ನು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿಸಿ. ಆದಷ್ಟು ಬೆಚ್ಚಗಿನ ಬಟ್ಟೆಗಳು ಧರಿಸಿ.
ಮಗುವಿಗೆ ಎಣ್ಣೆ ಮಸಾಜ್
ಚಳಿಗಾಲದ ಗಾಳಿ ಮಗುವಿನ ಚರ್ಮಕ್ಕೆ ಹಾನಿ ಮಾಡುತ್ತದೆ. ಇದರಿಂದ ಮಗುವಿನ ಚರ್ಮ ಹಾಗೂ ನಿರ್ಜೀವವಾದಂತೆ ಆಗುತ್ತದೆ. ಚಳಿಗಾಲದಲ್ಲಿ ಮಗುವಿನ ತೇವಾಂಶ ಕಾಪಾಡಿಕೊಳ್ಳಲು ದಿನಕ್ಕೆ 2 ಬಾರಿಯಂತೆ ಸಾಸಿವೆ ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದು ಒಳ್ಳೆಯದು. ಇದು ಚರ್ಮದ ಒಳಗಿನ ಎಷ್ಟೋ ಪದರಗಳು ಈ ಎಣ್ಣೆಯನ್ನು ಹೀರಿಕೊಂಡು ಚರ್ಮವನ್ನು ರಕ್ಷಿಸುತ್ತದೆ. ಮಗುವಿನ ಚರ್ಮವನ್ನು ರಕ್ಷಿಸುವುದರ ಜೊತೆಗೆ ಮೂಳೆಗಳನ್ನು ಬಲಿಷ್ಠ ಮಾಡುತ್ತದೆ.
ಇದನ್ನೂ ಓದಿ: Winter Food: ಚಳಿಗಾಲದಲ್ಲಿ ಮಕ್ಕಳಿಗೆ ಕಾಡುವ ಶೀತವನ್ನು ದೂರ ಮಾಡಲು ಮನೆಯಲ್ಲೇ ತಯಾರಿಸಿ ಮಿಠಾಯಿ!
ಸೂರ್ಯನ ಕಿರಣಗಳಿಂದ ರಕ್ಷಣೆ
ಸೂರ್ಯನ ಕಿರಣಗಳು ಮನುಷ್ಯನ ದೇಹಕ್ಕೆ ಎಷ್ಟು ಮುಖ್ಯ ಎಂಬುದು ಈಗಾಗಲೇ ಗೊತ್ತಿರುವ ವಿಚಾರ. ಸೂರ್ಯನ ಕಿರಣಗಳಲ್ಲಿ ವಿಟಮಿನ್-ಡಿ ಅಂಶ ಹೆಚ್ಚಾಗಿರುತ್ತದೆ. ಇದು ಮೂಳೆಗಳ ರಕ್ಷಣೆ, ದೇಹವು ಲವಲವಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ. ಮಗುವಿಗೆ ಸ್ನಾನದ ನಂತರ ಅಥವಾ ಬಟ್ಟೆ ಬದಲಾಯಿಸಿದ ನಂತರ ಬೆಳಗಿನ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಸೂರ್ಯನೊಂದಿಗೆ ಸಮಯ ಕಳೆಯುವುದು ಚಲೈಗಳದಲ್ಲಿ ಒಳ್ಳೆಯದು. ಇದಲ್ಲದೆ , ಸೂರ್ಯನ ಕಿರಣಗಳಿಂದ ಹಲವು ಬ್ಯಾಕ್ಟೀರಿಯಾ ಹಾಗೂ ಸೂಕ್ಷ್ಮಜೀವಿಗಳು ಮಗುವನ್ನು ತಾಗದಂತೆ ಸಹಾಯ ಮಾಡುತ್ತದೆ.
ಬೆಚ್ಚಗಿನ ಉಡುಪುಗಳು
ಚಳಿಗಾಲದಲ್ಲಿ ಮಗುವಿನ ರಕ್ಷಣೆ ಮಾಡಲು ಬೆಚ್ಚಗಿನ ಉಡುಪುಗಳನ್ನು ಧರಿಸುವುದು ಅಗತ್ಯವಾಗುತ್ತದೆ. ಯಾವಾಗಲೂ ಹಲವು ಪದರವಾಗಿರುವ ಬಟ್ಟೆಗಳನ್ನು ಧರಿಸಿ. ಪ್ಯಾಂಟ್, ತುಂಬುತೋಳಿನ ಶರ್ಟ್, ಸಾಕ್ಸ್, ಟೋಪಿ, ಮೇಲೆ ಒಂದು ಜಾಕೆಟ್ ಇವೆಲ್ಲವನ್ನು ಮಗುವಿಗೆ ಚಳಿಗಾಲದಲ್ಲಿ ತೊಡಿಸಿ. ಮುಖ್ಯವಾಗಿ ಮಗುವಿನ ತಲೆ ಭಾಗವನ್ನು ಟೋಪಿಯಿಂದ ಆವರಿಸಿ.
ಸ್ವಚ್ಛತೆ ಕಾಪಾಡಿ
ನವಜಾತ ಶಿಶುಗಳಿಗೆ ಧೂಳಿನಿಂದ ಶೀತ, ಕೆಮ್ಮು, ಕಫ ಮುಂತಾದ ಅರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ನಗು ಮಲಗುವ ಬೆಡ್ ರೂಮ್ ಹಾಗು ಮನೆಯ ಇತರ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಚಳಿಗಾಲದ ಸಮಯದಲ್ಲಿ ಮಕ್ಕಳನ್ನು ಹೆಚ್ಚಾಗಿ ಹೊರಗಡೆ ಕಡೆದುಕೊಂಡು ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಗಾಳಿ ಸೋಂಕಿದಾಗ ಶೀತ ಉಂಟಾಗಬಹುದು.
ಚಳಿಗಾಲದಲ್ಲಿ ಚುಚ್ಚು ಮದ್ದುಗಳನ್ನು ತಪ್ಪಿಸಬೇಡಿ
ನವಜಾತ ಶಿಶುಗಳಿಗೆ ಇಷ್ಟೇ ಪ್ರಮಾಣದ ಚುಚ್ಚುಮದ್ದುಗಳನ್ನು ಇದೇ ಸಮಯಗಳಲ್ಲಿ ನೀಡಬೇಕು ಎಂದಿರುತ್ತದೆ. ಅಂತಹ ದಿನಾಂಕಗಳನ್ನು ಎಂದಿಗೂ ತಪ್ಪಿಸಬೇಡಿ. ಎಲೆ ಕೆಲಸ ಇದ್ದರು ಸರಿಯಾದ ಸಮಯಕ್ಕೆ ಮಗುವಿಗೆ ಚುಚ್ಚು ಮದ್ದು ನೀಡುವುದನ್ನು ಮರೆಯಬೇಡಿ. ಈ ರೀತಿ ಮಾಡುವುದರಿಂದ ಮಗುವಿನ ರೋಗ ನಿರಿಧಕ ಶಕ್ತಿ ಹೆಚ್ಚುತ್ತದೆ. ಮಗುವಿಗೆ ಹುಷಾರಿಲ್ಲದಿದ್ದರೆ ಆದಷ್ಟು ಹುಷಾರಾಗಿ ನೋಡಿಕೊಳ್ಳಿ.
ಇದನ್ನೂ ಓದಿ: ಚಳಿಗಾಲದಲ್ಲಿ ಕೂದಲು ಹೆಚ್ಚು ಉದುರುತ್ತಿದ್ರೆ ಇವುಗಳನ್ನು ಬಳಸಿ
ಒಂದು ಮಗುವಿನ ಜವಾಬ್ದಾರಿ, ಕಾಳಜಿ ತಾಯಿಗೆ ಇರುತ್ತದೆ. ಯಾವುದೇ ನಿರ್ಲಕ್ಷ್ಯತೆ ಮಾಡದೇ, ತುಂಬಾ ಎಚ್ಚರಿಕೆ ಇಂದ ಮಗುವನ್ನು ಚಳಿಗಾಲದಲ್ಲಿ ನೋಡಿಕೊಳ್ಳುವುದು ಒಳ್ಳೆಯದು. ಚಳಿಗಾಲದಲ್ಲಿ ಬರುವ ಅನೇಕ ರೋಗಗಳು ಮಗುನಿನ ಬೆಳವಣಿಗೆಗೆ ಪರಿಣಾಮ ಬೀರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ