Baby Barefoot Walking: ಮಕ್ಕಳು ಬರಿಗಾಲಲ್ಲಿ ನೆಲದ ಮೇಲೆ ಓಡಾಡಿದ್ರೆ ಎಷ್ಟು ಲಾಭ ಇದೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಗು ಬರಿಗಾಲಿನಲ್ಲಿ ಕಿಲ ಕಿಲ ನಗುತ್ತಾ ನಡೆಯೋದು, ಅದರ ತುದಿ ಬೆರಳುಗಳನ್ನ ಹಿಡಿದು ನಡೆಸುವುದು ಎಷ್ಟು ಆನಂದಕರ ಅಷ್ಟೇ ಆರೋಗ್ಯಕರವೂ ಆಗಿದೆ. ಇದು ಮಗವಿನ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ. ಪಾದದ ಅಡಿ ಭಾಗ ತುಂಬಾ ಸೂಕ್ಷ್ಮವಾಗಿರುತ್ತೆ. ಬರಿಗಾಲಿನಲ್ಲಿ ನಡೆಯುವುದು ದೇಹಕ್ಕೆ ಮತ್ತು ಆರೋಗ್ಯಕ್ಕೆ ಅನೇಕ ಪ್ರಯೋಜನ ನೀಡುತ್ತದೆ ಅಂತಾರೆ ತಜ್ಞರು.

ಮುಂದೆ ಓದಿ ...
  • Share this:

    ಕಿಲಕಿಲನೇ ನಗುವ ಮುದ್ದು ಮಕ್ಕಳು (Cute Babies) ಮನಸ್ಸನ್ನು ಹರ್ಷೋಲ್ಲಾಸಗೊಳಿಸುತ್ತವೆ. ಕಿಲಕಿಲ ನಗುವ ಮುದ್ದು ಮುಗ್ಧ ಮಗುವನ್ನು ನೋಡಿದಾಗ ಎಂಥವರೂ ಸಹ ಒಂದು ಕ್ಷಣ ಸ್ಮೈಲ್ (Smile) ಮಾಡ್ತಾರೆ. ಸಂಬಂಧವಿರಲಿ, ಇಲ್ಲದೇ ಇರಲಿ, ಮಗು ಕಂಡರೆ ಎಂಥವರೂ ಪ್ರೀತಿ (Love) ತೋರುತ್ತಾರೆ. ಅದನ್ನು ಕಂಡ ಕೂಡಲೇ ಸಂಜ್ಞೆ ತೋರುತ್ತಾರೆ. ಬಳಿಗೆ ಕರೆಯುತ್ತಾರೆ. ಮುದ್ದು ಮಾಡುತ್ತಾರೆ. ಮಕ್ಕಳೇ (Children) ಹಾಗೇ. ಎಲ್ಲಾ ನೋವನ್ನೂ ಮರೆಸುವ ಶಕ್ತಿ ಅವರಿಗಿದೆ. ಹಾಗೆಯೇ ಆಗ ತಾನೇ ಮಗು ಅತ್ತಿಂದಿತ್ತ, ಇತ್ತಿಂದತ್ತ ಹೆಜ್ಜೆ ಇಡುತ್ತಾ ನಡೆಯುವುದನ್ನು ನೋಡೋದೇ ಮಹದಾನಂದ. ಮಗು ಎದ್ದು, ಬಿದ್ದು, ನಕ್ಕು ಮತ್ತೆ ನಡೆಯೋದು ನೋಡೋದೇ ಚೆಂದ.


    ಮಗು ಬರಿಗಾಲಿನಲ್ಲಿ ನಡೆದರೆ ಏನಾಗುತ್ತದೆ?


    ಮಗು ಬರಿಗಾಲಿನಲ್ಲಿ ಕಿಲ ಕಿಲ ನಗುತ್ತಾ ನಡೆಯೋದು, ಅದರ ತುದಿ ಬೆರಳುಗಳನ್ನ ಹಿಡಿದು ನಡೆಸುವುದು ಎಷ್ಟು ಆನಂದಕರ ಅಷ್ಟೇ ಆರೋಗ್ಯಕರವೂ ಆಗಿದೆ. ಇದು ಮಗವಿನ ಆರೋಗ್ಯಕ್ಕೆ ಉತ್ತೇಜನ ನೀಡುತ್ತದೆ. ಪಾದದ ಅಡಿ ಭಾಗ ತುಂಬಾ ಸೂಕ್ಷ್ಮವಾಗಿರುತ್ತೆ. ಬರಿಗಾಲಿನಲ್ಲಿ ನಡೆಯುವುದು ದೇಹಕ್ಕೆ ಮತ್ತು ಆರೋಗ್ಯಕ್ಕೆ ಅನೇಕ ಪ್ರಯೋಜನ ನೀಡುತ್ತದೆ ಅಂತಾರೆ ತಜ್ಞರು.


    ಪಾದವು 26 ಮೂಳೆಗಳು ಮತ್ತು 35 ಕೀಲುಗಳನ್ನು ಹೊಂದಿದೆ. ಇದು ಅಸ್ಥಿರಜ್ಜುಗಳಿಂದ ಒಟ್ಟಿಗೆ ಹಿಡಿದಿದೆ. ಶಿಶುಗಳು ನಡೆಯಲು ಪ್ರಾರಂಭಿಸಿದಾಗ, ಅವರ ಪಾದಗಳು ಚಪ್ಪಟೆ ಆಕಾರದಲ್ಲಿರುತ್ತವೆ. ಯಾಕಂದ್ರೆ ಮಗುವಿನ ಪಾದಗಳ ಸ್ನಾಯುಗಳು, ಮೂಳೆಗಳು ಮತ್ತು ಅಸ್ಥಿರಜ್ಜುಗಳು ಸಂಪೂರ್ಣವಾಗಿ ಅಭಿವೃದ್ಧಿ ಆಗಿರುವುದಿಲ್ಲ.




    ಮಗುವಿನ ಪಾದವು ಕೊಬ್ಬಿನಿಂದ ತುಂಬಿರುತ್ತದೆ. ಮತ್ತು ತುಂಬಾ ಮೃದುವಾಗಿರುತ್ತದೆ. ಬರಿಗಾಲಿನಲ್ಲಿ ನೆಲದ ಮೇಲೆ ನಡೆಯುವುದು ಸಾಕಷ್ಟು ಪ್ರಯೋಜನಕಾರಿ. ಇನ್ನು ಮಗುವು ಕಾರ್ಪೆಟ್, ಗಟ್ಟಿಯಾದ ನೆಲ ಮತ್ತು ಹುಲ್ಲಿನ ಮೇಲೆ ನಡೆಯುವುದಕ್ಕಿಂತ, ಬರಿಗಾಲಿನಲ್ಲಿ, ನೆಲದ ಮೇಲೆ ನಡೆಯುವುದು ಭಿನ್ನವಾಗಿದೆ.


    ಹಾಗಾದ್ರೆ ಮಗು ಬರಿಗಾಲಿನಲ್ಲಿ ನೆಲದ ಮೇಲೆ ನಡೆದರೆ ಯಾವೆಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತವೆ ಎಂಬುದನ್ನು ಇಲ್ಲಿ ತಿಳಿಯೋಣ. ಬರಿಗಾಲಿನಲ್ಲಿ ನಡೆದರೆ ಏನಾಗುತ್ತದೆ?


    ಡಾ. ಅಚ್ಚಾರ ವೆಂಕಟರಾಮನ್ ಹೇಳುವ ಪ್ರಕಾರ, ನಿಮ್ಮ ಮಗುವಿನ ಪಾದದ ಬೆಳವಣಿಗೆಯಲ್ಲಿ ಯಾವುದೇ ಸಮಸ್ಯೆ ಇರದೇ ಹೋದರೆ ಮಗುವನ್ನು ಬರಿಗಾಲಿನಲ್ಲಿ ನಡೆಯಲು ಬಿಡುವುದು ಉತ್ತಮ ಅಂತಾರೆ. ಮಗುವಿನ ಪಾದಗಳು ಭೂಮಿಯನ್ನು ಸ್ಪರ್ಶಿಸಿದಾಗ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೆಂಪು ರಕ್ತ ಕಣಗಳ ಹೆಚ್ಚಳವಾಗುತ್ತದೆ.


    ಸ್ನಾಯುಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ


    ಮಕ್ಕಳು ಬರಿಗಾಲಿನಲ್ಲಿ ನಡೆದರೆ ಅವರ ಕಾಲಿನ ಸ್ನಾಯುಗಳು ಬಲಿಷ್ಠವಾಗುತ್ತವೆ. ಬರಿಗಾಲಿನಲ್ಲಿ ನಡೆಯುವುದು ಸರಿಯಾದ ಭಂಗಿಗೆ ಸಹಕಾರಿ. ಮಗುವಿನ ಪಾದಗಳು ಜನನದ ಸಮಯದಲ್ಲಿ ತುಂಬಾ ಸೂಕ್ಷ್ಮವಾಗಿರುತ್ತವೆ. ಹಾಗೂ ಬೆಳವಣಿಗೆಯ ಸಮಯದಲ್ಲಿ ಮೂಳೆಗಳು ಮತ್ತು ಕೀಲುಗಳು ಬಲಿಷ್ಠವಾಗುತ್ತವೆ.


    ಕೆಲವೊಮ್ಮೆ ಬರಿಗಾಲಿನಲ್ಲಿ ನಡೆದಾಗ ಮಗುವಿನ ಸ್ನಾಯುಗಳು ಅಭಿವೃದ್ಧಿಯಾಗುವ ಅವಕಾಶ ಇರುತ್ತದೆ. ಪಾದಗಳು ನೇರವಾಗಿ ನೆಲದೊಂದಿಗೆ ಸಂಪರ್ಕಕ್ಕೆ ಬಂದರೆ ಆರೋಗ್ಯ ಚೆನ್ನಾಗಿರುತ್ತದೆ.


    ಸಾಂದರ್ಭಿಕ ಚಿತ್ರ


    ದೇಹದ ಸಮತೋಲನ ಪ್ರಕ್ರಿಯೆ ಸರಿಯಾಗುತ್ತದೆ


    ಪಾದಗಳು ನೇರವಾಗಿ ನೆಲದೊಂದಿಗೆ ಸಂಪರ್ಕಕ್ಕೆ ಬಂದ ಕೂಡಲೇ ಮಗುವಿನ ಮೆದುಳು ನರ ತುದಿಗಳ ಮೂಲಕ ಮಾಹಿತಿ ಪಡೆಯುತ್ತದೆ. ಮತ್ತು ಅವನ ದೇಹವು ಹೇಗೆ ಸಮತೋಲನ ಆಗಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತದೆ. ಮಗುವಿಗೆ ಯಾವಾಗಲೂ ಚಪ್ಪಲಿ ಧರಿಸಿ ನಡೆಸಿದರೆ ಮಗುವಿನ ಪಾದಗಳಿಗೆ ರಕ್ಷಣೆಯ ಪದರ ಸೃಷ್ಟಿಯಾಗುತ್ತದೆ. ಆಗ ಮೆದುಳಿಗೆ ಮಾಹಿತಿ ಸಮತೋಲನಗೊಳಿಸಲು ಕಷ್ಟವಾಗುತ್ತದೆ.


    ಬರಿಗಾಲಿನಲ್ಲಿ ನಡೆಯುವುದು ಮಗು ಹುಲ್ಲು, ಮಣ್ಣು, ಮುಂತಾದ ವಿವಿಧ ರೀತಿಯ ಮೇಲ್ಮೈಗಳಲ್ಲಿ ನಡೆಯುವಂತೆ ಮಾಡಿ. ಇದು ಮಗುವನ್ನು ವಿವಿಧ ರೀತಿಯ ಆರೋಗ್ಯ ಪ್ರಯೋಜನ ನೀಡುತ್ತದೆ. ಇದು ಮಗುವಿನ ಆರೋಗ್ಯ ಮತ್ತು ದೇಹಕ್ಕೆ ಹೆಚ್ಚು ಪ್ರಯೋಜನ ನೀಡುತ್ತದೆ. ಮಗುವಿನ ಆರೋಗ್ಯಕರ ಬೆಳವಣಿಗೆಗೆ ಸಹ ಸಹಾಯ ಮಾಡುತ್ತದೆ.


    ಇದನ್ನೂ ಓದಿ: ದಿನಾ 2 ಸೇಬು ತಿಂದ್ರೆ ಕೊಲೆಸ್ಟ್ರಾಲ್ ಸಮಸ್ಯೆ ಬರೋದೇ ಇಲ್ಲ


    ಪಾದದೊಳಗೆ 200,000 ನರ ತುದಿಗಳಿವೆ. ಮಗು ಬರಿಗಾಲಿನಲ್ಲಿ ನಡೆದಾಗ ನೆಲದ ಅನುಭವವಾಗುತ್ತದೆ. ಮಗುವಿನ ಸಂವೇದನೆ ಕೌಶಲ್ಯಗಳು ಅಭಿವೃದ್ಧಿಯಾಗುತ್ತದೆ. ಮಗುವಿಗೆ ಹಗಲು ಸ್ವಲ್ಪ ಸಮಯ ಬರಿಗಾಲಿನಲ್ಲಿ ನಡೆಯಲು ಬಿಡಿ. ಇದು ಮಗುವಿನ ಆರೋಗ್ಯಕ್ಕೆ ಒಳ್ಳೆಯದು.

    Published by:renukadariyannavar
    First published: