ಮೊದಲ ಹೆರಿಗೆ (First Delivery) ತುಂಬಾ ವಿಶೇಷ ಅನುಭವ (Special Feel) ನೀಡುತ್ತದೆ. ಮೊದಲ ಮಗು (Baby) ಹೊಂದಿದ ನಂತರ ತಾಯಿ ಸಾಕಷ್ಟು ಉತ್ತಮ ಭಾವನೆ ಹೊಂದಿರುತ್ತಾಳೆ. ಜೊತೆಗೆ ಮೊದಲ ಮಗುವಿನ ಆರೈಕೆ (Baby Care) ವಿಚಾರದಲ್ಲಿ ಹಾಗೂ ತಮ್ಮ ಆರೋಗ್ಯ ಸಮಸ್ಯೆಯಿಂದ (Health Problem) ದೂರವಿಡಲು ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಮೊದಲ ಬಾಣಂತನದಲ್ಲಿ ಎಲ್ಲವೂ ಹೊಸತು. ಹೀಗಾಗಿ ಹಿರಿಯರ ಮಾರ್ಗದರ್ಶನವಿದ್ದರೆ ಉತ್ತಮ. ಹಾಗೆಯೇ ಮೊದಲ ಹೆರಿಗೆ ನಂತರ ತಾಯಿಯು ಹಲವು ಆರೋಗ್ಯ ಸಮಸ್ಯೆ ಎದುರಿಸುತ್ತಾಳೆ. ಅಷ್ಟೇ ಅಲ್ಲದೇ ತನ್ನ ಆರೋಗ್ಯದ ಜೊತೆಗೆ ಮಗುವಿನ ಆರೋಗ್ಯ ಕೆಡದಂತೆ ಜಾಗ್ರತೆ ವಹಿಸಬೇಕಾಗುತ್ತದೆ. ತಾಯಿಯು ತನ್ನ ಮಗುವಿಗೆ ಹಾಲುಣಿಸುವುದು, ಆಹಾರ ತಿನ್ನಿಸುವುದು ಜೊತೆಗೆ ತನ್ನ ಆರೋಗ್ಯ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ.
ನವಜಾತ ಶಿಶುವಿಗೆ ಜ್ವರ ಬಂದಾಗ ಹಾಲುಣ್ಣಿಸಬೇಕೋ, ಬೇಡವೋ?
ನವಜಾತ ಶಿಶುವಿಗೆ ಜ್ವರ ಬಂದಾಗ ಸಾಮಾನ್ಯವಾಗಿ ತಾಯಿ ಹಾಲುಣಿಸಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು. ಯಾಕಂದ್ರೆ ಅದು ಮಗುವಿಗೆ ಜ್ವರ ಉಂಟು ಮಾಡುವ ಸಾಧ್ಯತೆ ಇರುತ್ತದೆ.
ನವಜಾತ ಶಿಶುವಿಗೆ ಜ್ವರ ಬಂದಾಗ ಸ್ತನ್ಯಪಾನ ಮಾಡಿಸುವುದೋ, ಬೇಡವೋ ಎಂಬ ಗೊಂದಲದಲ್ಲಿ ನೀವೂ ಇದ್ದರೆ, ಈ ವಿಷಯ ನಿಜವೋ ಅಥವಾ ಕೇವಲ ಮಿಥ್ಯವೋ ಅಂತಾ ಇಲ್ಲಿ ತಿಳಿಯಿರಿ.
ಈ ಬಗ್ಗೆ ತಜ್ಞರು ಏನ್ ಹೇಳಿದ್ದಾರೆ ನೋಡೋಣ. ನವಜಾತ ಶಿಶುವಿಗೆ ಜ್ವರ ಬಂದಾಗ ಹಾಲುಣಿಸುವ ಬಗ್ಗೆ ತಜ್ಞರು ಹೀಗೆ ಹೇಳಿದ್ದಾರೆ. ಮಗುವಿಗೆ ಜ್ವರ ಬಂದಾಗ ಸ್ತನ್ಯಪಾನ ಮಾಡಿಸುವುದು ಸುರಕ್ಷಿತ. ಇದರಿಂದ ಯಾವುದೇ ತೊಂದರೆಯಿಲ್ಲ ಅಂತಾರೆ ತಜ್ಞರು. ನವಜಾತ ಶಿಶುವಿಗೆ ಹಾಲುಣಿಸಿದರೆ ಮಗುವಿಗೆ ಜ್ವರ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.
ಎದೆ ಹಾಲುಣಿಸಿದರೆ ಸಹ ಪ್ರತಿಕಾಯಗಳು, ಶಿಶುವಿನ ಅನಾರೋಗ್ಯ ಮತ್ತು ಮಗುವಿನ ದೇಹದಲ್ಲಿನ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈ ಪ್ರತಿಕಾಯಗಳು ಮಗುವಿನ ಆರೋಗ್ಯ ಕಾಪಾಡುತ್ತವೆ. ಮಗುವಿಗೆ ಎದೆ ಹಾಲುಣಿಸಿದರೆ ಸೋಂಕಿನ ಅಪಾಯ ಕಡಿಮೆ ಆಗುತ್ತದೆ ಎನ್ನುತ್ತಾರೆ ತಜ್ಞರು.
ತಾಯಿಗೆ ಜ್ವರ ಇದ್ದಾಗ ಸ್ತನ್ಯಪಾನ ಮಾಡುವುದು ಯಾಕೆ ಸುರಕ್ಷಿತ?
ತಾಯಿಯು ಅನಾರೋಗ್ಯ ಹೊಂದಿದ್ದು, ರೋಗ ಲಕ್ಷಣ ಇದ್ದು, ಆಂಟಿವೈರಲ್ ಔಷಧಿ ಸೇವನೆ ಮಾಡುತ್ತಾ ಇದ್ದರೂ ಸಹ ಮಗುವಿಗೆ ಹಾಲುಣಿಸಬಹುದು ಅಂತಾರೆ ತಜ್ಞರು. ಎದೆ ಹಾಲು ಮಗುವಿಗೆ ಸೋಂಕಿನ ವಿರುದ್ಧ ಹೋರಾಡಲು ಪ್ರತಿಕಾಯ ಒದಗಿಸುತ್ತದೆ.
ತಾಯಿಗೆ ಶೀತ ಅಥವಾ ಜ್ವರ ಇದ್ದಾಗಲೂ ಮಗುವಿಗೆ ಹಾಲುಣಿಸಬಹುದು. ಹಾಲುಣಿಸುವಿಕೆ ಹಠಾತ್ತನೇ ನಿಲ್ಲಿಸಿದ್ರೆ ತಾಯಿಯು ಎದೆಗೂಡಿನ, ಮಾಸ್ಟಿಟಿಸ್ ಅಪಾಯ ಆಗುತ್ತದೆ ಅಂತಾರೆ ತಜ್ಞರು.
ಎದೆ ಹಾಲುಣಿಸಿದರೆ ಮಗುವಿನ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಎದೆ ಹಾಲಿನಲ್ಲಿರುವ ಪ್ರತಿಕಾಯಗಳು ಮತ್ತು ಇತರೆ ರೋಗ ನಿರೋಧಕ ಅಂಶಗಳು ಮಗುವನ್ನು ಶಾಖದ ಹೊಡೆತದಿಂದ ರಕ್ಷಿಸುತ್ತದೆ. ತಾಯಿ ಅನಾರೋಗ್ಯ ಇದ್ದಾಗಲೂ ಎದೆಹಾಲು ಮಗುವಿಗೆ ಪೌಷ್ಟಿಕಾಂಶ ಒದಗಿಸುತ್ತಲೇ ಇರುತ್ತದೆ. ಮಗುವಿಗೆ ಎದೆಹಾಲು ರೋಗ ನಿರೋಧಕ ಶಕ್ತಿ ನೀಡುತ್ತದೆ.
ತಾಯಿ ಯಾವಾಗ ಸ್ತನ್ಯಪಾನ ಮಾಡಿಸಬಾರದು?
ತಾಯಿ ಅನಾರೋಗ್ಯದಿಂದ ಬಳಲುತ್ತಿರುವಾಗಲೂ ಹಾಲುಣಿಸಬಹುದು. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ಪ್ರಕಾರ, ಮಗುವಿಗೆ ಕ್ಲಾಸಿಕ್ ಗ್ಯಾಲಕ್ಟೋಸೆಮಿಯಾ ಇದ್ದರೆ, ತಾಯಿಯು ಮಾನವ ಟಿ-ಸೆಲ್ ಲಿಂಫೋಟ್ರೋಪಿಕ್ ವೈರಸ್ ಟೈಪ್ 1 ಅಥವಾ ಟೈಪ್ 2 ಹೊಂದಿದ್ದರೆ, ಎಬೋಲಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ನವಜಾತ ಶಿಶುವಿಗೆ ಹಾಲುಣಿಸಬಾರದು.
ಇದನ್ನೂ ಓದಿ: ವ್ಯಾಯಾಮದ ವೇಳೆ ಮಾಡುವ ತಪ್ಪುಗಳು ಅನೇಕ ಸಮಸ್ಯೆಗೆ ಕಾರಣವಂತೆ
ತಾಯಿಯು ಜ್ವರ ಅಥವಾ ಕಾಯಿಲೆ ಹೊಂದಿದಾಗ ವೈದ್ಯರನ್ನು ಸಂಪರ್ಕಿಸಿ, ಮಾಹಿತಿ ಪಡೆಯಬೇಕು. ವೈದ್ಯರ ಸಲಹೆ ಮೇರೆಗೆ ಮಾತ್ರ ಹಾಲುಣಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ