• Home
  • »
  • News
  • »
  • lifestyle
  • »
  • Birth Weight: ನವಜಾತ ಶಿಶುಗಳ ತೂಕದಲ್ಲಿ ಈ ವ್ಯತ್ಯಾಸ ಆದ್ರೆ ಅಪಾಯ ಗ್ಯಾರಂಟಿಯಂತೆ

Birth Weight: ನವಜಾತ ಶಿಶುಗಳ ತೂಕದಲ್ಲಿ ಈ ವ್ಯತ್ಯಾಸ ಆದ್ರೆ ಅಪಾಯ ಗ್ಯಾರಂಟಿಯಂತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುವ ಹಾಗೂ ದೊಡ್ಡದಾಗಿರುವ ಶಿಶುಗಳು ದುರ್ಬಲ ಜನನ ಫಲಿತಾಂಶಗಳು ಹಾಗೂ ಬಾಲ್ಯದ ಬೆಳವಣಿಗೆಗೆ ಸಂಬಂಧಿಸಿದ ಅಪಾಯಗಳಿಗೆ ಸಿಲುಕುವುದು ಹೆಚ್ಚು ಎಂಬುದು ಅಧ್ಯಯನದಿಂದ ತಿಳಿದು ಬಂದಿರುವುದಾಗಿ ಅಬಿಯೊಡನ್ ತಿಳಿಸಿದ್ದಾರೆ. ಅಕಾಲಿಕವಾಗಿ ಜನಿಸಿದ ಶಿಶುಗಳ ವಿಷಯದಲ್ಲಿ ಇದು ಎಷ್ಟು ಸರಿ ಎಂಬುದನ್ನು ಅಧ್ಯಯನ ನಡೆಸಲು ಸಂಶೋಧಕರು ಸ್ಟಾಟ್ಲೆಂಡ್‌ನಲ್ಲಿ 37 ವಾರಗಳ ಗರ್ಭಾವಸ್ಥೆಯ ನಂತರ ಜನಿಸಿದ 600,000 ಕ್ಕಿಂತ ಹೆಚ್ಚು ಶಿಶುಗಳ ಬೆಳವಣಿಗೆಯನ್ನು ಅಧ್ಯಯನ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಜನನ ಸಹಜ ತೂಕದ 25% ಕ್ಕಿಂತ ಕಡಿಮೆ ಜನನ ತೂಕವನ್ನು (Birth weight) ಹೊಂದಿರುವ ಶಿಶುಗಳು ಬೆಳವಣಿಗೆಯ (Growth) ಅಪಾಯಗಳಿಗೆ ಸಿಲುಕಿಕೊಳ್ಳುವ ಸಂಭವ ಹೆಚ್ಚು ಎಂದು ಇಂಗ್ಲೆಂಡ್‌ನ ಕೊವೆಂಟ್ರಿ ವಿಶ್ವವಿದ್ಯಾಲಯದ ಸಂಶೋಧಕ ಅಬಿಯೊಡನ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುವ ಹಾಗೂ ದೊಡ್ಡದಾಗಿರುವ ಶಿಶುಗಳು ದುರ್ಬಲ ಜನನ ಫಲಿತಾಂಶಗಳು ಹಾಗೂ ಬಾಲ್ಯದ ಬೆಳವಣಿಗೆಗೆ ಸಂಬಂಧಿಸಿದ ಅಪಾಯಗಳಿಗೆ ಸಿಲುಕುವುದು ಹೆಚ್ಚು ಎಂಬುದು ಅಧ್ಯಯನದಿಂದ ತಿಳಿದು ಬಂದಿರುವುದಾಗಿ ಅಬಿಯೊಡನ್ ತಿಳಿಸಿದ್ದಾರೆ. ಅಕಾಲಿಕವಾಗಿ ಜನಿಸಿದ ಶಿಶುಗಳ ವಿಷಯದಲ್ಲಿ ಇದು ಎಷ್ಟು ಸರಿ ಎಂಬುದನ್ನು ಅಧ್ಯಯನ ನಡೆಸಲು ಸಂಶೋಧಕರು (Researchers) ಸ್ಟಾಟ್ಲೆಂಡ್‌ನಲ್ಲಿ 37 ವಾರಗಳ ಗರ್ಭಾವಸ್ಥೆಯ ನಂತರ ಜನಿಸಿದ 600,000 ಕ್ಕಿಂತ ಹೆಚ್ಚು ಶಿಶುಗಳ ಬೆಳವಣಿಗೆಯನ್ನು ಅಧ್ಯಯನ (Study) ಮಾಡಿದ್ದಾರೆ.


ದುರ್ಬಲ ಜನನ ಫಲಿತಾಂಶಗಳು ಹಾಗೂ ಬಾಲ್ಯದ ಬೆಳವಣಿಗೆಗೆ ಸಂಬಂಧಿಸಿದ ಅಪಾಯಗಳು
ಎರಡು ಹಾಗೂ ಮೂರು ವರ್ಷಗಳ ವಯಸ್ಸಿನಲ್ಲಿ ಮಕ್ಕಳನ್ನು ಸಾಮಾಜಿಕ ಅಭಿವೃದ್ಧಿ ಹಾಗೂ ಸಂವಹನ ಕೌಶಲ್ಯ ಮೌಲ್ಯಮಾಪನಕ್ಕೆ ಒಳಪಡಿಸಲಾಯಿತು. ಮಗುವಿನ ಲಿಂಗ ಮತ್ತು ಹೆರಿಗೆಯಲ್ಲಿ ಗರ್ಭಾವಸ್ಥೆಯ ವಯಸ್ಸು, ಹಾಗೆಯೇ ತಾಯಿಯ ಆರೋಗ್ಯ, ಜನಾಂಗೀಯತೆ ಮತ್ತು ಸಾಮಾಜಿಕ-ಆರ್ಥಿಕ ಸ್ಥಿತಿಯಂತಹ ಸಂಕೀರ್ಣ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ಜನನ ತೂಕ ಮತ್ತು ಬಾಲ್ಯದ ಬೆಳವಣಿಗೆಯ ಕಾಳಜಿಗಳ ನಡುವಿನ ಸಂಬಂಧಗಳನ್ನು ಸಂಶೋಧಕರು ಮೌಲ್ಯಮಾಪನ ಮಾಡಿದ್ದಾರೆ.


ಜನನ ತೂಕ ಕಡಿಮೆ ಇದ್ದಷ್ಟು ಅಪಾಯ ಹೆಚ್ಚು
ಜನನ ತೂಕ 25% ಹಾಗೂ 75% ಗಳ ನಡುವೆ ಜನಿಸಿದ ಮಕ್ಕಳಿಗೆ ಹೋಲಿಸಿದಾಗ ಜನನ ತೂಕ 25 ಶೇಕಡಾಕ್ಕಿಂತ ಕಡಿಮೆ ಇರುವ ಚಿಕ್ಕ ಶಿಶುಗಳು ಬೆಳವಣಿಗೆಯ ಅಪಾಯಕ್ಕೆ ಒಳಗಾಗುವ ಪರಿಸ್ಥಿತಿ ಹೆಚ್ಚು ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದೆ.


ಇದನ್ನೂ ಓದಿ: Potassium Foods: ದೇಹಕ್ಕೆ ಪೊಟ್ಯಾಸಿಯಂ ಯಾಕೆ ಮುಖ್ಯ? ಯಾವ ಪದಾರ್ಥಗಳ ಸೇವನೆ ಮಾಡಬೇಕು?


ಮಧ್ಯಮ ಶ್ರೇಣಿಯಲ್ಲಿ ಜನಿಸಿದ ಶಿಶುಗಳಿಗೆ ಹೋಲಿಸಿದರೆ 75% ಕ್ಕಿಂತ ಹೆಚ್ಚಿನ ತೂಕವಿರುವ ಶಿಶುಗಳು ಬೆಳವಣಿಗೆಯ ಅಪಾಯಕ್ಕೆ ಹೆಚ್ಚು ಒಳಗಾಗದೇ ಇರುವುದು ಕಂಡುಬಂದಿದೆ. ಕಡಿಮೆ ಜನನ ತೂಕವನ್ನು ಹೊಂದಿರುವುದು ಬಾಲ್ಯದ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದೆ ಎಂಬುದಾಗಿ ಸಂಶೋಧಕರು ತೀರ್ಮಾನಿಸಿದ್ದಾರೆ.


ಜನನ ತೂಕ ಸಮಸ್ಯೆಗೆ ಒಳಗಾಗುವ ಶಿಶುಗಳು
ಜನನ ತೂಕ 10% ಕ್ಕಿಂತ ಕಡಿಮೆ ಇರುವ ಶಿಶುಗಳು ಬೆಳವಣಿಗೆಯ ಅಪಾಯಕ್ಕೆ ಹೆಚ್ಚು ಸಿಲುಕಿರುವುದಾಗಿ ಅಧ್ಯಯನ ತಿಳಿಸಿದೆ. ಹೊಸ ಅಧ್ಯಯನದ ಪ್ರಕಾರ ಬೆಳವಣಿಗೆ ಸಮಸ್ಯೆಗಳಿರುವ ಜನನ ತೂಕ 10% ರಿಂದ 24% ವ್ಯಾಪ್ತಿಯೊಳಗಿನ ಹೆಚ್ಚಿನ ಶಿಶುಗಳನ್ನು ಪತ್ತೆಹಚ್ಚಿದೆ.


ಶಿಶುವಿನ ಆರೋಗ್ಯವಂತ ತೂಕದ ಮೇಲ್ವಿಚಾರಣೆ, ಪೋಷಕರೊಂದಿಗೆ ಸಮಾಲೋಚನೆ ನಡೆಸುವುದು ಹಾಗೂ ಬಾಲ್ಯದಲ್ಲಿ ಹೆಚ್ಚಿನ ಬೆಂಬಲ ನೀಡುವುದು ಕಡಿಮೆ ಜನನ ತೂಕದೊಂದಿಗೆ ಜನಿಸಿದ ಶಿಶುಗಳಿಗೆ ಸಂಬಂಧಿಸಿದ ಅಪಾಯಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.


ಇಂತಹ ಬೆಳವಣಿಗೆಯ ಅಪಾಯಗಳು ಆರಂಭದಲ್ಲಿ ಗುರುತಿಸಲಾಗದೇ ಇದ್ದರೂ ಜನನ ಸಮಯದಲ್ಲಿ ಮಧ್ಯಮ ಗಾತ್ರದ ಸಣ್ಣ ಗಾತ್ರದ ಶಿಶುಗಳು ಬಾಲ್ಯದ ಬೆಳವಣಿಗೆಯ ಸಮಸ್ಯೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಇದನ್ನು ಆರಂಭದಲ್ಲಿಯೇ ಗುರುತಿಸಿದಾಗ ಅದರ ನಿವಾರಣೆ ಕೂಡ ಸುಲಭ ಎಂಬುದು ಅಬಿಯೊಡನ್ ಮಾತಾಗಿದೆ.


ಶಿಶುಗಳ ಆರೈಕೆ ಹೇಗೆ ಮಾಡಬೇಕು?
ಶಿಶುಗಳು ಜನಿಸಿದ ಸಮಯದಲ್ಲಿ ಗಾತ್ರದಲ್ಲಿ ತುಂಬಾ ಸಣ್ಣದು ಹಾಗೂ ದೊಡ್ಡದಾಗಿದ್ದಾಗ ಅದನ್ನು ಅಸಡ್ಡೆಮಾಡಬಾರದು ಎಂಬುದು ಅಬಿಯೊಡನ್ ಮಾತಾಗಿದೆ. ಸೂಕ್ತ ಹಾಗೂ ನುರಿತ ಮಕ್ಕಳ ತಜ್ಞರಲ್ಲಿ ಅವರನ್ನು ಪರಿಶೀಲನೆಗೊಳಪಡಿಸಬೇಕು ಇಲ್ಲದಿದ್ದರೆ ಇದು ಕಾಯಿಲೆಯಾಗಿ ಮಾರ್ಪಡುತ್ತದೆ ಎಂಬುದು ಅಬಿಯೊಡನ್ ಕಿವಿಮಾತಾಗಿದೆ.


ಇದನ್ನೂ ಓದಿ:  Life Lesson: ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಹೀಗೆ ಹೇಳಿಕೊಡಿ


ಬೆಳವಣಿಗೆಯ ಸಮಯದಲ್ಲಿ ಕಂಡುಬರುವ ಅಪಾಯಗಳನ್ನು ತಗ್ಗಿಸಲು ಮಕ್ಕಳನ್ನು ನಿಕಟ ಮೇಲ್ವಿಚಾರಣೆಗೆ ಒಳಪಡಿಸಬೇಕು ಹಾಗೂ ಅವರಿಗೆ ಹೆಚ್ಚಿನ ಬೆಂಬಲವನ್ನು ನೀಡಬೇಕು ಮತ್ತು ಪೋಷಕರಿಗೂ ಈ ಕುರಿತು ಸಲಹೆಯನ್ನು ನೀಡಬೇಕು ಎಂದು ತಿಳಿಸಿದ್ದಾರೆ.

Published by:Ashwini Prabhu
First published: