Infertility: ಬಂಜೆತನಕ್ಕೆ ಆಯುರ್ವೇದದಲ್ಲಿ ಪರಿಹಾರ ಇದೆಯಾ? ತಜ್ಞರು ವಿವರಿಸಿದ್ದಾರೆ ನೋಡಿ...

Ayurvedic Solution For Infertility: . ಈ ಬಂಜೆತನ ನಿವಾರಣೆಗೆ ಆಯುರ್ವೇದ(Ayurveda) ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಹಾಗೂ ಬಂಜೆತನದ ಬಗ್ಗೆ ಕೆಲ ಮಾಹಿತಿಯನ್ನು ಆಯುರ್ವೇದ ತಜ್ಞೆ ವೈದ್ಯೆ ರೇಷ್ಮಾ ಎಂ. ಎ ನ್ಯೂಸ್​ 18 ಕನ್ನಡ ಜೊತೆ ಹಂಚಿಕೊಂಡಿದ್ದಾರೆ.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತಾಯಿಯಾಗುವುದು ಒಂದು ಸುಂದರ ಅನುಭವ. ತಾಯ್ತನ(Motherhood) ಎನ್ನುವ ಪದದಲ್ಲಿಯೇ ಒಂದು ಹಿತವಿದೆ. ಈ ಅನುಭವದ ಬಗಗ್ಗೆ ವರ್ಣಿಸಲು ಯಾವುದೇ ಪದಗಳು ಸಾಕಾಗುವುದಿಲ್ಲ. ಆದರೆ ಕೆಲವೊಮ್ಮೆ ಕೆಲವೊಂದು ಕಾರಣಗಳಿಂದ ತಾಯಿಯಾಗಲು(Infertility) ಸಾಧ್ಯವಾಗುವುದಿಲ್ಲ. ಇದು ನಿಜಕ್ಕೂ ಬೇಸರದ ವಿಚಾರ. ಈ ಬಂಜೆತ(Infertility)ನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವ ರೀತಿಯಾಗಿದೆ. ಈ ಸಮಸ್ಯೆಗೆ ಪರಿಹಾರ ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಹೆಚ್ಚಿನ ಜನರಿಗೆ ಆಯುರ್ವೇದದಲ್ಲಿ ಸಹ ಬಂಜೆತನ ಪರಿಹಾರಕ್ಕೆ ಮಾರ್ಗಗಳಿದೆ ಎಂದು ತಿಳಿದಿಲ್ಲ. ಈ ಬಂಜೆತನ ನಿವಾರಣೆಗೆ ಆಯುರ್ವೇದ(Ayurveda) ಹೇಗೆ ಸಹಾಯ ಮಾಡುತ್ತದೆ ಎಂಬುದರ ಕುರಿತು ಹಾಗೂ ಬಂಜೆತನದ ಬಗ್ಗೆ ಕೆಲ ಮಾಹಿತಿಯನ್ನು  ಆಯುರ್ವೇದ ತಜ್ಞೆ ವೈದ್ಯೆ ರೇಷ್ಮಾ ಎಂ. ಎ ನ್ಯೂಸ್​ 18 ಕನ್ನಡ ಜೊತೆ ಹಂಚಿಕೊಂಡಿದ್ದಾರೆ.  

ಬಂಜೆತನ ಎಂದರೇನು?

ದೀರ್ಘಕಾಲದಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ ಮತ್ತು ಅದೆಷ್ಟು ಬಾರಿ ಪ್ರಯತ್ನಿಸಿದರೂ ಸಹ ಗರ್ಭಿಣಿ ಅಥವಾ ಪದೇ ಪದೇ ಗರ್ಭಪಾತವಾಗುತ್ತಿದ್ದರೆ, ಈ ಸ್ಥಿತಿಯನ್ನು ಬಂಜೆತನದ ಸಮಸ್ಯೆ ಎನ್ನಲಾಗುತ್ತದೆ.

ಬಂಜೆತನಕ್ಕೆ ಕಾರಣಗಳೇನು?

ಬಂಜೆತನದ ಸಮಸ್ಯೆಗೆ ಕಾರಣಗಳು ಹಲವಾರಿದೆ.ಬಂಜೆತನಕ್ಕೆ ಒಂದೇ ಕಾರಣವಿಲ್ಲ, ಆದರೆ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಅಂದರೆ PCOD ಸಹ  ಬಂಜೆತನದ ಸಮಸ್ಯೆಗೆ ಕಾರಣವಾಗುತ್ತದೆ. ಮಹಿಳೆಯರಲ್ಲಿ ಹಾರ್ಮೋನ್ ಏರಿಳಿತಗಳು ಸಹ ಸಾಕಷ್ಟು ಸಾಮಾನ್ಯವಾಗಿದ್ದು, ಇದು ಮತ್ತೊಂದು ಕಾರಣ. ಎಂಡೊಮೆಟ್ರಿಯಾಸಿಸ್ ಅಥವಾ ಫೈಬ್ರಾಯ್ಡ್ ಸಮಸ್ಯೆ ಸೇರಿದಂತೆ ಇಂದಿನ ಜೀವನಶೈಲಿ ಸಹ ಕಾರಣವಾಗಬಹುದು.

ಇದನ್ನೂ ಓದಿ: ಇನ್ಮೇಲೆ ಸೇಬುಹಣ್ಣಿನ ಸಿಪ್ಪೆ ಬಿಸಾಡುವುದು ಬೇಡ ಅದರಿಂದ ಏನೆಲ್ಲಾ ಮಾಡ್ಬಹುದು ನೋಡಿ

ಬಂಜೆತನಕ್ಕೆ ವಯಸ್ಸು ಕಾರಣವಾಗುತ್ತದೆಯಾ?

ಬಂಜೆತನಕ್ಕೆ ಪ್ರತಿಬಾರಿಯೂ ವಯಸ್ಸು ಕಾರಣವಾಗುವುದಿಲ್ಲ. ಉದಾಹರಣೆಗೆ ಬಾಲಿವುಡ್​ ನಟಿ ಕರೀನಾ ಕಪೂರ್ ನೋಡಿ 41 ನೇ ವಯಸ್ಸಿನಲ್ಲಿ ಸಹ ತಾಯಿಯಾಗಿದ್ದಾರೆ. ಹಾಗಾಗಿ ಬಂಜೆತನಕ್ಕೆ ವಯಸ್ಸು ಕಾರಣವಲ್ಲ.

 ಬಂಜೆತನಕ್ಕೆ ಆಯುರ್ವೇದಲ್ಲಿ ಏನಿದೆ ಪರಿಹಾರ?  

ಯಾಂತ್ರಿಕ ಜೀವನ,ಒತ್ತಡ, ಐಷಾರಾಮಿ ಮತ್ತು ಜಡ ಜೀವನಶೈಲಿಗಳಿಂದಾಗುವ ಬಂಜೆತನದಂತಹ ತೊಂದರೆಗಳಿಗೆ ಉತ್ತಮ ಆಹಾರ, ಆಚಾರ ಹಾಗೂ ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ. ಹಾಗೆಯೇ ಆಯುರ್ವೇದ ಸಹ ದೇಹದಲ್ಲಿ ವಾತ, ಪಿತ್ತ, ಕಫವನ್ನು ಸಮತೋಲನದಲ್ಲಿಡಲು ಸಲಹೆ ನೀಡಿ ಈ ಮೂಲಕ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಆಯುರ್ವೇದಲ್ಲಿ ಗಿಡಮೂಲಿಕೆಗಳ ಮತ್ತು ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಔಷಧಿಗಳನ್ನು ನೀಡಲಾಗುತ್ತದೆ. ಈ ಔಷಧಗಳ ಮೂಲಕವೇ ಬಂಜೆತನ ನಿವಾರಿಸಲಾಗುತ್ತದೆ.  ಯಾವುದೇ ರಾಸಾಯನಿಕಯುಕ್ತ ಔಷಧಿಗಳಿಲ್ಲದೇ ಆಯುರ್ವೇದ ನಿಮಗೆ ಪರಿಹಾರ ನೀಡುತ್ತದೆ. ಯಾವುದೇ ಮಾತ್ರೆ ಔಷಧಗಳು ಕಾರ್ಯನಿರ್ವಹಿಸದಿದ್ದಲ್ಲಿ ಪಂಚಕರ್ಮ ಚಿಕಿತ್ಸೆಯನ್ನು ಸಹ ನೀಡಲಾಗುತ್ತದೆ.

ಶೋಧನ, ಪಂಚಕರ್ಮ, ನಶ್ಯ, ಶಿರೋಧಾರ, ಬಸ್ತಿ, ಅಭ್ಯಂಗ ಮುಂತಾದ ಚಿಕಿತ್ಸೆಗಳು ಹಾಗೂ ಅಶ್ವಗಂಧ, ಮುಸಲಿ, ಬಲಾ, ಕಪೀಕಚು ಇತ್ಯಾದಿ ಔಷಧಗಳಿಂದ ಉತ್ತಮ ಪರಿಹಾರ ಲಭಿಸುತ್ತದೆ.  

ಈ ಸಮಸ್ಯೆಗೆ ಆಯುರ್ವೇದ ಏಕೆ ಬೆಸ್ಟ್ ?

ವಿಜ್ಞಾನ ಎಷ್ಟೊಂದು ಮುಂದುವರಿದಿದ್ದರೂ ಎಷ್ಟೋ ದಂಪತಿಗಳ ಪಾಲಿಗೆ ಮಗು ಪಡೆಯುವುದು ಕಷ್ಟಕರವಾಗಿದೆ.ವೈದ್ಯಕೀಯ ಚಿಕಿತ್ಸೆಗೆ ಸಂಪೂರ್ಣವಾಗಿ ವಿಜ್ಞಾನವನ್ನ ಅಳವಡಿಸಿಕೊಂಡಿರುವ ಈ ದಿನಗಳಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇಲ್ಲದಂತೆ ಪರಿಹಾರ ನೀಡುವುದು ಆಯುರ್ವೇದ ಎಂಬುದು ಸತ್ಯ.

ಸಾಮಾನ್ಯವಾಗಿ ಬಂಜೆತನ ಸಮಸ್ಯೆ ಕಾಡುತ್ತಿದೆ ಅನಿಸಿದಾಗ ಆಯುರ್ವೇದ ಚಿಕಿತ್ಸೆ ಪಡೆಯುವುದಿಲ್ಲ, ಬೇರೆ ಪದ್ದತಿ ಅನುಸರಿಸುತ್ತಾರೆ. ಆ ಪದ್ಧತಿಯಲ್ಲಿ ಬಳಸುವ ವಿಧಾನ ಅಡ್ಡ ಪರಿಣಾಮಗಳಿರುತ್ತದೆ.

IVF ಮಾಡಿಸಲಾಗುತ್ತದೆ. ಇದು ಸಹ ಒಂದು ರೀತಿಯ ಪ್ರೊಸೀಜರ್. ಅಲ್ಲದೇ ಬಂಜೆತನ ನಿವಾರಿಸಲು ಹಾರ್ಮೋನ್ ಥೆರಪಿ ಮಾಡಲಾಗುತ್ತದೆ. ಅದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಆ ಹಾರ್ಮೋನ್​ಗಳು ಕೊನೆಯ ತನಕ ದೇಹದಲ್ಲಿರುತ್ತದೆ, ಅದು ಅಪಾಯಕಾರಿ.

ಇದನ್ನೂ ಓದಿ: ತೂಕ ಕಡಿಮೆ ಆಗ್ಬೇಕು ಅಂದ್ರೆ ಇಷ್ಟು ಮಾಡಿ ಸಾಕು

ಆಯುರ್ವೇದದಲ್ಲಿ ಯಾವುದೇ ಸರ್ಜರಿ ಮಾಡಲಾಗುವುದಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇದು ಆರ್ಥಿಕವಾಗಿ ಹೊರೆಯಾಗುವುದಿಲ್ಲ. ಬೇರೆ ಸರ್ಜರಿ ಮತ್ತು ಚಿಕಿತ್ಸೆಗೆ ಲಕ್ಷ ಲಕ್ಷ ಹಣದ ಅವಶ್ಯಕತೆ ಇರುತ್ತದೆ. ಆದರೆ ಆಯುರ್ವೇದ ಔಷಧಿಗಳಿಗೆ ಹೆಚ್ಚು ಹಣ ಬೇಕಾಗುವುದಿಲ್ಲ. ಕೇವಲ ಕಡಿಮೆ ಹಣದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
Published by:Sandhya M
First published: