Monsoon Tea: ಮಳೆಗಾಲದಲ್ಲಿ ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಚಹಾ ಮಾಡಿ ಕುಡಿಯಿರಿ

ಮಳೆಗಾಲದಲ್ಲಿ ಹೊಸದಾಗಿ ಬೇಯಿಸಿದ ಆಹಾರ ಸೇವನೆ ಮಾಡಬೇಕು. ಒಣಗಿದ ಶುಂಠಿಯಲ್ಲಿ ಅನೇಕ ರೀತಿಯ ಔಷಧೀಯ ಗುಣಗಳು ಇವೆ. ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಕೆಲವು ಪಾನೀಯಗಳ ಪಾಕ ವಿಧಾನ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಳೆಗಾಲದಲ್ಲಿ (Monsoon) ಮಲೇರಿಯಾ, ಡೆಂಗ್ಯೂ, ಹೊಟ್ಟೆಯ ಸೋಂಕು, ಜ್ವರ, ಟೈಫಾಯಿಡ್ ಮತ್ತು ನ್ಯುಮೋನಿಯಾ ಆಗುವುದು ತುಂಬಾ ಸಾಮಾನ್ಯ. ಈ ಎಲ್ಲಾ ಸೋಂಕುಗಳ (Virus) ಅಪಾಯದ ಹಿನ್ನೆಲೆ ತಜ್ಞರು (Experts) ಯಾವಾಗಲೂ ಸರಳ, ಸಮತೋಲಿತ ಮತ್ತು ಬಿಸಿ ಬಿಸಿಯಾದ ತಾಜಾ ಬೇಯಿಸಿದ ಆಹಾರ (Food) ತಿನ್ನಲು ಜನರಿಗೆ ಸಲಹೆ ನೀಡುತ್ತಾರೆ. ಅಲ್ಲದೆ, ಔಷಧೀಯ ಗುಣಗಳಲ್ಲಿ ಸಮೃದ್ಧವಾಗಿರುವ ಇಂತಹ ಪಾನೀಯಗಳನ್ನು ಕುಡಿಯಲು ಕೆಲವರು ಶಿಫಾರಸು ಮಾಡುತ್ತಾರೆ. ಆಯುರ್ವೇದ ವೈದ್ಯೆ ಐಶ್ವರ್ಯ ಸಂತೋಷ್ ಅವರು, ಮಳೆಗಾಲದಲ್ಲಿ ಸೋಂಕು ಮತ್ತು ಗಂಭೀರ ಕಾಯಿಲೆ ತಪ್ಪಿಸಲು ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಕೆಲವು ಪಾನೀಯಗಳ ಪಾಕ ವಿಧಾನ ಹಂಚಿಕೊಂಡಿದ್ದಾರೆ.

    ಮಳೆಗಾಲದಲ್ಲಿ ಹೊಸದಾಗಿ ಬೇಯಿಸಿದ ಆಹಾರ ಸೇವನೆ ಮಾಡಬೇಕು. ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಕೆಲವು ಪಾನೀಯಗಳ ಪಾಕ ವಿಧಾನ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

    ಯಾವ ತಪ್ಪುಗಳನ್ನು ಆಹಾರ ಸೇವನೆ ವೇಳೆ ಮಾಡಬಾರದು?

    ಹಸಿರು ಎಲೆಗಳ ತರಕಾರಿಗಳನ್ನು ಸರಿಯಾಗಿ ತೊಳೆಯದೇ ತಿನ್ನುವುದು

    ಮಾಂಸ ಮತ್ತು ಸಮುದ್ರಾಹಾರ ಹೆಚ್ಚು ಸೇವನೆ

    ಹೊರಗಿನ ಕರಿದ, ಹುರಿದ ಆಹಾರ

    ಇದನ್ನೂ ಓದಿ: ಕಣ್ಣುಗಳಲ್ಲಿ ಉಂಟಾಗುವ ಈ ಸಮಸ್ಯೆಗಳು ಗಂಭೀರ ತೊಂದರೆಗೆ ಕಾರಣವಾಗುತ್ತವೆ

    ಒಣಗಿದ ಶುಂಠಿ ಕೊತ್ತಂಬರಿ ಚಹಾ  

    ಒಣಗಿದ ಶುಂಠಿಯಲ್ಲಿ ಅನೇಕ ರೀತಿಯ ಔಷಧೀಯ ಗುಣಗಳು ಇವೆ. ಇದು ನಿಮ್ಮ ದೇಹವನ್ನು ಅನೇಕ ಗಂಭೀರ ಕಾಯಿಲೆಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ. ಒಣಗಿದ ಶುಂಠಿಯಿಂದ ತಯಾರಿಸಿದ ಚಹಾವು ಔಷಧೀಯ ಕಷಾಯ ಆಗಿದೆ. ಮಳೆಗಾಲದ ದಿನಗಳಲ್ಲಿ ನಿಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಶುಂಠಿ ಚಹಾ ಪ್ರಯೋಜನಕಾರಿ ಆಗಿದೆ ಎಂದು ಆಯುರ್ವೇದ ವೈದ್ಯರು ಹೇಳುತ್ತಾರೆ.

    ಇದು ಶೀತ, ಜೀರ್ಣಕ್ರಿಯೆ ತೊಂದರೆ, ದುರ್ಬಲ ರೋಗ ನಿರೋಧಕ ಶಕ್ತಿ, ಲೋಳೆಯ ಮತ್ತು ಎದೆಯಲ್ಲಿ ಭಾರದ ಸಮಸ್ಯೆ ತೊಡೆದು ಹಾಕುತ್ತದೆ.

    ಶುಂಠಿ ಚಹಾ ಮಾಡಲು ಬೇಕಾಗುವ ಸಾಮಗ್ರಿಗಳು

    ಒಣಗಿದ ಶುಂಠಿ ಪುಡಿ - 1 ಟೀಸ್ಪೂನ್

    ಕೊತ್ತಂಬರಿ ಬೀಜಗಳು - 1 ಟೀಸ್ಪೂನ್

    ಕಪ್ಪು ಮೆಣಸು - 1 ಟೀಸ್ಪೂನ್

    ಜೀರಿಗೆ ಪುಡಿ - 2 ಟೀಸ್ಪೂನ್

    ರುಚಿಗೆ ತಕ್ಕಷ್ಟು ಬೆಲ್ಲ

    ನೀರು - 3 ಕಪ್

    ಶುಂಠಿ ಚಹಾ ಮಾಡುವ ವಿಧಾನ

    ಚಹಾ ತಯಾರಿಸಲು, ಈ ಎಲ್ಲಾ ಪದಾರ್ಥಗಳನ್ನು ಒಟ್ಟಿಗೆ 15 ನಿಮಿಷಗಳ ಕಾಲ ನೀರಿನಲ್ಲಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ತಕ್ಷಣ ಸೇವಿಸಿ.

    ತುಳಸಿ ಮತ್ತು ನಿಂಬೆ ಚಹಾ

    ತುಳಸಿ ಮತ್ತು ನಿಂಬೆಯ ಮಿಶ್ರಣವು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಮಳೆಗಾಲದ ದಿನಗಳಲ್ಲಿ ಇದರ ಸೇವನೆ ತುಂಬಾ ಪ್ರಯೋಜನಕಾರಿ. ಈ ಮಿಶ್ರಣವು ಮೂಗು ಸೋರುವಿಕೆ, ಶೀತ, ಸೋಂಕನ್ನು ಹೋಗಲಾಡಿಸುವ ಜೊತೆಗೆ ಕಫವನ್ನು ಕರಗಿಸುತ್ತದೆ.

    ತುಳಸಿ ಮತ್ತು ನಿಂಬೆ ಚಹಾ ಮಾಡಲು ಬೇಕಾಗುವ ಸಾಮಗ್ರಿಗಳು

    ನೀರು - 3 ಕಪ್

    ತುಳಸಿ ಎಲೆಗಳು - 1/2 ಕಪ್

    ನಿಂಬೆ ರಸ - 4 ಟೀಸ್ಪೂನ್

    ತುಳಸಿ ಮತ್ತು ನಿಂಬೆ ಚಹಾ ಮಾಡುವ ವಿಧಾನ

    ಈ ಮಿಶ್ರಣ ತಯಾರಿಸಲು, ತುಳಸಿ ಎಲೆಗಳನ್ನು 3 ಕಪ್ ನೀರಿನಲ್ಲಿ 10 ನಿಮಿಷಗಳ ಕಾಲ ಕುದಿಸಿ. ಇದನ್ನು ಶೋಧಿಸಿ ಅದಕ್ಕೆ ನಿಂಬೆರಸ ಬೆರೆಸಿ ಕುಡಿದರೆ ತುಂಬಾ ಪ್ರಯೋಜನಕಾರಿ.

    ಲೈಕೋರೈಸ್ ಮತ್ತು ಸಕ್ಕರೆ ಕ್ಯಾಂಡಿ ಚಹಾ

    ಆಯುರ್ವೇದ ವೈದ್ಯೆ ಐಶ್ವರ್ಯ ಹೇಳುವ ಪ್ರಕಾರ, ಲೈ ಕೋರಸ ಮತ್ತು ಸಕ್ಕರೆ ಮಿಠಾಯಿಯಿಂದ ತಯಾರಿಸಿದ ಕ್ಯಾಂಡಿ ಮಿಶ್ರಣ ಗಂಟಲು ನೋವಿಗೆ ರಾಮಬಾಣ. ಇದರೊಂದಿಗೆ ಗಂಟಲಿಗೆ ಸಂಬಂಧಿಸಿದ ಎಲ್ಲಾ ರೀತಿಯ ಸಮಸ್ಯೆ ಹೋಗಲಾಡಿಸುವುದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

    ಲೈಕೋರೈಸ್ ಮತ್ತು ಸಕ್ಕರೆ ಕ್ಯಾಂಡಿ ಚಹಾ ಮಾಡಲು ಬೇಕಾದ ಸಾಮಗ್ರಿಗಳು

    ಲೈಕೋರೈಸ್ ಪುಡಿ - 3 ಟೀಸ್ಪೂನ್

    ಮಿಶ್ರಿ - ಒಂದೂವರೆ ಟೀಚಮಚ

    ನೀರು - 3 ಕಪ್ಗಳು

    ಇದನ್ನೂ ಓದಿ: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?

    ಲೈಕೋರೈಸ್ ಮತ್ತು ಸಕ್ಕರೆ ಕ್ಯಾಂಡಿ ಚಹಾ ಮಾಡುವ ವಿಧಾನ

    ಸಕ್ಕರೆ ಕ್ಯಾಂಡಿ ಚೆನ್ನಾಗಿ ಕರಗುವ ತನಕ ನೀರಿನಲ್ಲಿ ಕುದಿಸಿ. ಲೈಕೋರೈಸ್ ಪುಡಿಯನ್ನು ಸೇರಿಸಿ ಮತ್ತು ಅದನ್ನು 10 ನಿಮಿಷ ಕುದಿಸಿ. ಫಿಲ್ಟರ್ ಮಾಡಿ. ಈಗ ಅದು ನಿಮ್ಮ ಬಳಕೆಗೆ ಸಂಪೂರ್ಣವಾಗಿ ಸಿದ್ಧವಾಗಿದೆ.
    Published by:renukadariyannavar
    First published: